BBK 12: ಕಿರುತೆರೆ ಪ್ರೇಕ್ಷಕರಿಗೆ ಸಿಹಿ-ಕಹಿ: ಬಿಗ್ ಬಾಸ್ಗೆ ದಾರಿ ಮಾಡಿಕೊಡಲು ಸದ್ಯದಲ್ಲಿ ಕಲರ್ಸ್ನಲ್ಲಿ ಮತ್ತೊಂದು ಧಾರಾವಾಹಿ ಮುಕ್ತಾಯ
ಕಿರುತೆರೆ ವೀಕ್ಷಕರಿಗೆ ರಾಮಾಚಾರಿ ಮುಗಿಯುವ ಬೇಸರ ಒಂದುಕಡೆಯಾದರೆ ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗುತ್ತಿರುವುದು ಸಿಹಿ ಸುದ್ದಿ. ಸೆಪ್ಟೆಂಬರ್ ಎಂಡ್ನಲ್ಲಿ ಬಿಬಿಕೆ 12 ಶುರುವಾಗಲಿದೆ. ಅದೇ ಸಮಯದಲ್ಲಿ ರಾಮಾಚಾರಿ ಧಾರಾವಾಹಿ ಕೂಡ ಕೊನೆಯಾಗಲಿದೆ ಎಂದು ಹೇಳಲಾಗಿದೆ.

BBK 12 and Ramachari

ಕಿರುತೆರೆ ಅಭಿಮಾನಿಗಳಿಗೆ ಕಳೆದ ಕೆಲವು ತಿಂಗಳುಗಳಿಂದ ಒಂದಲ್ಲ ಒಂದು ಆಘಾತ ಆಗುತ್ತಲೇ ಇದೆ. ಒಂದರ ಹಿಂದೆ ಒಂದರಂತೆ ಧಾರಾವಾಹಿಗಳು (Kannada Serial) ದಿಢೀರ್ ಮುಕ್ತಾಯವಾಗುತ್ತಿದೆ. ಈ ಪೈಕಿ ಕಲರ್ಸ್ ಕನ್ನಡದ ವಾಹಿನಿಯಲ್ಲಿ ದೊಡ್ಡ ಬದಲಾವಣೆ ಆಗುತ್ತಿದ್ದು, ಟಿಆರ್ಪಿ ಇಲ್ಲದ ಧಾರಾವಾಹಿಗೆ ಗೇಟ್ಪಾಸ್ ನೀಡಲಾಗುತ್ತಿದೆ. ಈ ವರ್ಷ ಮೊದಲಿಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಅಂತ್ಯಕಂಡಿತು. ಬಳಿಕ ಇತ್ತೀಚೆಗಷ್ಟೆ ವಧು ಧಾರಾವಾಹಿಯನ್ನು ಕೂಡ ಅರ್ಧಕ್ಕೆ ಕೊನೆಗೊಳಿಸಲಾಯಿತು. ಇದು ಸರಿಯಾಗಿ 100 ಸಂಚಿಕೆಗಳನ್ನೂ ಮುಟ್ಟಿರಲಿಲ್ಲ.
ಈ ಆಘಾತದಿಂದ ಹೊರಬರುವ ಮುನ್ನವೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮತ್ತಂದು ಧಾರಾವಾಹಿ ನೂರು ಜನ್ಮಕೂ ಸೀರಿಯಲ್ ಮುಕ್ತಾಯಕಂಡಿತು. ಹಾರರ್ - ಥ್ರಿಲ್ಲರ್ ಕಥಾಹಂದರ ಹೊಂದಿದ್ದ ನೂರು ಜನ್ಮಕೂ ಎಂಡ್ ಆಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು. ಇದೀಗ ಕಲರ್ಸ್ ಮತ್ತೊಂದು ಧಾರಾವಾಹಿಯನ್ನು ಹೊರಗಟ್ಟಲು ತಯಾರು ಮಾಡಿದೆ ಎನ್ನಲಾಗಿದೆ. ಈ ಸಾಲಿನಲ್ಲಿ ಈ ಬಾರಿ ಇರುವುದು ರಾಮಾಚಾರಿ.
ಹೌದು, ರಾಮಾಚಾರಿ ಧಾರಾವಾಹಿಯು ಕಳೆದ ಮೂರು ವಾರಗಳಿಂದ ಕ್ರಮವಾಗಿ 2.3, 2.5, 2,3 TVR ಪಡೆಯುತ್ತಲಿದೆ. ರಿತ್ವಿಕ್ ಕೃಪಾಕರ್, ಮೌನ ಗುಡ್ಡೇಮನೆ ಅವರು ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡ ಈ ಧಾರಾವಾಹಿಯು ಆರಂಭವಾಗಿ ಮೂರು ವರ್ಷಗಳಾಯ್ತು. ಆದರೆ, ಬರಬರುತ್ತ ಕಥೆ ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ. ಜನಪ್ರಿಯತೆ ಪಡೆದುಕೊಂಡಿರುವಷ್ಟು ಮಟ್ಟಿಗೆ ಈ ಧಾರಾವಾಹಿ ಕಮಾಲ್ ಮಾಡುತ್ತಿಲ್ಲ.
Prithwi Bhat: ನಾವು ಓಡಿ ಹೋಗಿ ಮದುವೆ ಆಗಲಿಲ್ಲ: ಕ್ಲಾರಿಟಿ ಕೊಟ್ಟ ಪೃಥ್ವಿ ಭಟ್
ರಾಮಾಚಾರಿ ಕೊನೆ-ಬಿಗ್ ಬಾಸ್ ಆರಂಭ:
ಕಿರುತೆರೆ ವೀಕ್ಷಕರಿಗೆ ರಾಮಾಚಾರಿ ಮುಗಿಯುವ ಬೇಸರ ಒಂದುಕಡೆಯಾದರೆ ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗುತ್ತಿರುವುದು ಸಿಹಿ ಸುದ್ದಿ. ಸೆಪ್ಟೆಂಬರ್ ಎಂಡ್ನಲ್ಲಿ ಬಿಬಿಕೆ 12 ಶುರುವಾಗಲಿದೆ. ಅದೇ ಸಮಯದಲ್ಲಿ ರಾಮಾಚಾರಿ ಧಾರಾವಾಹಿ ಕೂಡ ಕೊನೆಯಾಗಲಿದೆ ಎಂದು ಹೇಳಲಾಗಿದೆ. ಈಗಾಗಲೇ ಬಿಗ್ ಬಾಸ್ ಸ್ಪರ್ಧಿಗಳ ಆಯ್ಕೆಯ ತಯಾರಿ ನಡೆಯುತ್ತಿದೆ. ಬಿಗ್ ಬಾಸ್ ಶೋ ಪ್ರಸಾರ ಆಗಬೇಕು ಎಂದರೆ ಕನಿಷ್ಠ ಎರಡು ಧಾರಾವಾಹಿಗಳು ಅಂತ್ಯ ಆಗಬೇಕಿದೆ. ಈ ಪೈಕಿ ಒಂದು ರಾಮಾಚಾರಿ ಎಂದು ಹೇಳಲಾಗಿದೆ. ಇನ್ನೊಂದು ಧಾರಾವಾಹಿ ಯಾವುದು ಎಂದು ತಿಳಿದುಬಂದಿಲ್ಲ. ಆದರೆ, ಕರಿಮಣಿ ಅಥವಾ ದೃಷ್ಟಿಬೊಟ್ಟು ಇರಬಹುದು ಎಂಬ ಗಾಸಿಪ್ ಹರಿದಾಡುತ್ತಿದೆ.