ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ತಂಡದಿಂದ ಡಾಗ್ ಸತೀಶ್​ಗೆ ಮೋಸ?

Dog satish Bigg Boss: ದೊಡ್ಮನೆಯಿಂದ ಹೊರಬಂದ ಬಳಿಕ ಎಲ್ಲ ಮಾಧ್ಯಮಕ್ಕೆ ಸಂದರ್ಶನ ನೀಡುತ್ತಿರುವ ಸತೀಶ್ ಇದೀಗ ಕೆಲ ಅಚ್ಚರಿ ವಿಚಾರ ಬಹಿರಂಗ ಪಡಿಸಿದ್ದಾರೆ. ಇದನ್ನ ಕೇಳಿ ಬಿಗ್ ಬಾಸ್ ತಂಡದಿಂದ ಸತೀಶ್ ಅವರಿಗೆ ಮೋಸ ಆಗಿದೆಯಾ? ಎಂಬ ಅನುಮಾನ ಮೂಡಿದೆ.

ಬಿಗ್ ಬಾಸ್ ತಂಡದಿಂದ ಡಾಗ್ ಸತೀಶ್​ಗೆ ಮೋಸ?

Dog Satish Bigg Boss -

Profile Vinay Bhat Oct 28, 2025 12:06 PM

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss Kannada 12) ಡಾಗ್ ಸತೀಶ್ ವಿಶೇಷ ಸ್ಪರ್ಧಿಯಾಗಿದ್ದರು. ಇವರ ಪರಿಚಯ ಕರ್ನಾಟಕ ಜನತೆಗೆ ಅಷ್ಟೊಂದು ಇರಲಿಲ್ಲ. ಹೀಗಾಗಿ ದೊಡ್ಮನೆಯಲ್ಲಿ ಹೆಚ್ಚು ದಿನ ಕೂಡ ಇರಲು ಸಾಧ್ಯವಾಗಲಿಲ್ಲ. ಮೂರನೇ ವಾರದ ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಇವರು ಮನೆಯಿಂದ ಆಚೆ ಬಂದರು. ಸತೀಶ್‌ ಓರ್ವ ಡಾಗ್‌ ಬ್ರೀಡರ್‌ ಆಗಿದ್ದಾರೆ. ಬೀದಿ ನಾಯಿಗಳು, ಕ್ರಾಸ್‌ ಬ್ರೀಡ್‌ ಎಂದು ವಿವಿಧ ರೀತಿಯ ನಾಯಿಯನ್ನು ಖರೀದಿ ಮಾಡುತ್ತಾರೆ. ಒಂದು ನಾಯಿ ಖರೀದಿ ಮಾಡೋದು, ಆಮೇಲೆ ಅದನ್ನು ಮಾರೋದು, ಅದರಿಂದ ಇನ್ನೊಂದು ನಾಯಿ ತಗೊಳೋದು.. ಹೀಗೆ ಡುದ್ದು ಮಾಡುತ್ತಾರೆ.

ಸತೀಶ್ ಅವರು ಕ್ಯಾಡಬೊಮ್‌ ಕೆನ್ನೆಲ್ಸ್‌ ಎಂಬ ಕೆನ್ನೆಲ್‌ ಕೂಡ ನಡೆಸುತ್ತಾರೆ. ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವ ಸತೀಶ್‌, ತಮ್ಮನ್ನ ವಿಶ್ವದ ನಂ.1 ಸೆಲೆಬ್ರಿಟಿ ಡ್ರಾಗ್‌ ಬ್ರೀಡರ್‌, ಗ್ಲೋಬಲ್‌ ಸೂಪರ್‌ಸ್ಟಾರ್‌ ಎಂದು ಕರೆದುಕೊಳ್ಳುತ್ತಾರೆ. ಸತೀಶ್‌ ಅವರ ಬಳಿ ನೂರು ಕೋಟಿ ರೂಪಾಯಿ ನಾಯಿ ಇದೆಯಂತೆ. ಕತ್ತೆಯಷ್ಟು ಸೈಜ್‌ ಇದೆ ಎಂದು ಆ ನಾಯಿಗೆ 100 ಕೋಟಿ ರೂಪಾಯಿ ಬೆಲೆ ಕಟ್ಟಲಾಗಿದೆಯಂತೆ. ಇವರು ಬಿಗ್‌ ಬಾಸ್‌ಗಾಗಿ 25 ಲಕ್ಷ ರೂಪಾಯಿಗಳಿಗೆ ಬಟ್ಟೆಗಳನ್ನ ಖರೀದಿ ಮಾಡಿದ್ದರು, ಆದರೆ ಮೂರೇ ವಾರಕ್ಕೆ ಮನೆ ತೊರೆಯಬೇಕಾಯಿತು.

ಡಾಗ್ ಸತೀಶ್ ಎಲಿಮಿನೇಟ್ ಆಗಲು ಮುಖ್ಯ ಕಾರಣ ಅವರಿಗೆ ದೊಡ್ಡ ಅಭಿಮಾನಿ ಬಳಗವಿಲ್ಲ. ಅವರು ಮನೋರಂಜನೆ ಕ್ಷೇತ್ರದಿಂದ ಬಂದವರಲ್ಲ. ಅಷ್ಟೇ ಅಲ್ಲದೆ ಸತೀಶ್ ಅವರು ಬಿಗ್ ಬಾಸ್ ಕೊಟ್ಟಿದ್ದ ಸೀಕ್ರೆಟ್ ಟಾಸ್ಕ್‌ ಅನ್ನು ಅಚ್ಚುಕಟ್ಟಾಗಿ ಮಾಡಿದ್ದು ಬಿಟ್ಟರೆ, ಉಳಿದ ಟಾಸ್ಕ್‌ಗಳಲ್ಲಿ ಹಿಂದೆ ಬಿದ್ದಿದ್ದರು. ಎಪಿಸೋಡ್‌ಗಳಲ್ಲೂ ಡಾಗ್ ಸತೀಶ್‌ ಹೆಚ್ಚು ಫೋಕಸ್ ಆಗುತ್ತಿರಲಿಲ್ಲ. ಹೀಗಾಗಿ ಇವರು ಬೇಗನೆ ಎಲಿಮಿನೇಟ್ ಆದರು.

ದೊಡ್ಮನೆಯಿಂದ ಹೊರಬಂದ ಬಳಿಕ ಎಲ್ಲ ಮಾಧ್ಯಮಕ್ಕೆ ಸಂದರ್ಶನ ನೀಡುತ್ತಿರುವ ಸತೀಶ್ ಇದೀಗ ಕೆಲ ಅಚ್ಚರಿ ವಿಚಾರ ಬಹಿರಂಗ ಪಡಿಸಿದ್ದಾರೆ. ಇದನ್ನ ಕೇಳಿ ಬಿಗ್ ಬಾಸ್ ತಂಡದಿಂದ ಸತೀಶ್ ಅವರಿಗೆ ಮೋಸ ಆಗಿದೆಯಾ? ಎಂಬ ಅನುಮಾನ ಮೂಡಿದೆ. ‘‘ಬೇರೆಯವರೆಲ್ಲ ಹಣ ಕೊಟ್ಟು ಪಬ್ಲಿಸಿಟಿ ಆಗಲಿ ಅಂತ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಕೊಡುತ್ತಾರೆ. ಆದ್ರೆ ನಾನು ಯಾವುದೇ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಕೊಡಲಿಲ್ಲ. ನನ್ನ ಮಗ ನನ್ನ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡ್ತಿದ್ದ, ಆದ್ರೆ ಅವನು ಎಲ್ ಬೋರ್ಡ್.. ಕೆಲ ಪೋಸ್ಟ್ ಹಾಕೋಕೆ ಹೇಳಿದ್ದೀನಿ. ಒಂದು ಡಾಗ್ ವಿಡಿಯೋ ಇತ್ತು.. ಅದನ್ನು ಪ್ರೋಮೋ ಶೂಟ್ ಕೂಡ ಮಾಡಿಸಿದ್ರು.. ನನ್ನ ಪ್ರೋಮೋ ಟಿವಿಯಲ್ಲಿ ಪ್ರಸಾರವಾದ ಬೆನ್ನಲ್ಲೇ ಆ ಡಾಗ್ ವಿಡಿಯೋ ಕೂಡ ಹಾಕು ಅಂತ ಹೇಳಿದ್ದೆ. ಅದು ವರ್ಲ್ಡ್ ನ್ಯೂಸ್ ಆಗುತ್ತಿತ್ತು. ಆದ್ರೆ ಪ್ರೋಮೋದಲ್ಲಿ ಅದನ್ನ ಕಟ್ ಮಾಡಿದ್ದಾರೆ’’ ಎಂದು ಹೇಳಿದ್ದಾರೆ.

BBK 12: ಬಿಗ್ ಬಾಸ್ ಸ್ಪರ್ಧಿಗಳಿಗೆ ಮನೆಯಿಂದ ಬಂತು ಕಾಲ್: ರಿಸಿವ್ ಮಾಡಿದ್ದು ಮಾತ್ರ ಕ್ಯಾಪ್ಟನ್ ರಘು

ಪ್ರೋಮೋ ಶೂಟ್​ಗೆ ಎರಡು ಮುನ್ನ ನನ್ನ ಕರೆದು ಹೇಗೆ ನೀನು ವರ್ಲ್ಡ್ ನ್ಯೂಸ್ ಮಾಡ್ತೀಯ ಅಂತೆಲ್ಲ ಕೇಳಿದ್ರು ನನ್ಗೆ ಹೇಳೋಕೆ ಇಷ್ಟ ಇರಲಿಲ್ಲ.. ಫೋರ್ಸ್ ಮಾಡಿದ್ರು, ನಮ್ಮ ಕಡೆಯಿಂದ ಏನಾದ್ರು ಹೆಲ್ಪ್ ಆದ್ರೆ ಮಾಡ್ತೀವಿ ಅಂತಾರೆ. ನಾನು ಪೆದ್ದು ಥರ ಎಲ್ಲ ಹೇಳಿಬಿಟ್ಟೆ.. ಆದ್ರೆ ನಂತರ ಅದನ್ನೆಲ್ಲ ಕಟ್ ಮಾಡಿದ್ದಾರೆ. ನಾಯಿ ಪೋಷನ್ ಅನ್ನೇ ಕಟ್ ಮಾಡಿದ್ದಾರೆ, ಅದು ಇರ್ತಿದ್ರೆ ವರ್ಲ್ಡ್ ನ್ಯೂಸ್ ಆಗ್ತಿತ್ತು ಎಂದಿದ್ದಾರೆ.

ಇಷ್ಟೇ ಅಲ್ಲದೆ, ‘‘ವರ್ಲ್ಡ್​ ನ್ಯೂಸ್​ ಮಾಡ್ತಾ ಇದ್ದೆ ಎಂದೋರು ಮೂರನೇ ವಾರಕ್ಕೇ ಹೊರಕ್ಕೆ ಹೋಗ್ತಾ ಇದ್ದೀರಿ ಎಂದು ಕಂಡೆಮ್​ ರೀತಿಯಲ್ಲಿ ಸುದೀಪ್​ ಅವರು ನನಗೆ ಹೇಳಿದ್ರು. ಅದಕ್ಕೆ ನಾನು ಒಂದೇ ನೈಟ್​ನಲ್ಲಿ ವರ್ಲ್ಡ್​ ನ್ಯೂಸ್​ ಮಾಡ್ತಾ ಇದ್ದೆ ಸರ್​ ಎಂದು ಹೇಳಿದೆ. ಅದಕ್ಕೆ ಸುದೀಪ್​ ಅವರು, ಹಾಗಿದ್ರೆ ನಮ್ಮ ಬಿಗ್​ ಬಾಸ್​ ವೇಸ್ಟಾ, ನೀನೇನು ಕಿಲಾಡಿನಾ ಎನ್ನೋ ಅರ್ಥದಲ್ಲಿ ಕೇಳಿದ್ರು ಎಂದಿದ್ದಾರೆ.’’