ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಸ್ಪರ್ಧಿಗಳಿಗೆ ಮನೆಯಿಂದ ಬಂತು ಕಾಲ್: ರಿಸಿವ್ ಮಾಡಿದ್ದು ಮಾತ್ರ ಕ್ಯಾಪ್ಟನ್ ರಘು

ದೊಡ್ಮನೆಯಲ್ಲಿ ಸ್ಪರ್ಧಿಗಳು ತಮ್ಮ ಆಟವನ್ನು ಮರೆತು ತಮ್ಮದೇ ಲೋಕದಲ್ಲಿ ಮುಳುಗಿದಂತಿದೆ. ಹೀಗಾಗಿ ಎಚ್ಚರಿಕೆ ಕೊಡಲು ಮನೆಯಿಂದ ಕಾಲಿಂಗ್ ಸೆಷನ್ ಏರ್ಪಡಿಸಲಾಗಿದೆ. ಕನ್ಫೆಷನ್ ರೂಮ್ಗೆ ರಘು ಅವರನ್ನು ಕರೆದಿದ್ದು, ಅಲ್ಲಿ ಅವರು ಪ್ರತಿಯೊಬ್ಬ ಸ್ಪರ್ಧಿಯ ಕಾಲ್ ಅಟೆಂಡ್ ಮಾಡಿದ್ದಾರೆ.

Raghu Rashika and Dhanush

ಬಿಗ್ ಬಾಸ್ (Bigg Boss Kannada 12) ಮನೆ ಸದ್ಯ ಬಿಗ್ ಬಾಸ್ ಕ್ಯಾಂಪಸ್ ಆಗಿ ಬದಲಾಗಿದೆ. ಈ ವಾರ ಪೂರ್ತಿ ಸ್ಪರ್ಧಿಗಳು ತಮ್ಮ ಕಾಲೇಜ್ ದಿನವನ್ನು ಮರು ಸೃಷ್ಟಿಸಲಿದ್ದಾರೆ. ಈ ಕಾಲೇಜ್​ಗೆ ಕ್ಯಾಪ್ಟನ್ ರಘು ಪ್ರಿನ್ಸಿ ಆಗಿದ್ದಾರೆ. ಸದ್ಯ ರೆಡ್ ಮತ್ತು ಬ್ಲೂ ಎಂಬ ಎರಡು ತಂಡಗಳಾಗಿ ವಿಂಗಡನೆ ಮಾಡಲಾಗಿದ್ದು, ಕಾಲಕಾಲಕ್ಕೆ ಈ ಎರಡೂ ತಂಡಗಳ ಮಧ್ಯೆ ಟಾಸ್ಕ್ ನಡೆಯಲಿದೆ. ಇದರಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡ ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆಯುತ್ತದೆ. ಇದರ ಮಧ್ಯೆ ಸ್ಪರ್ಧಿಗಳಿಗೆ ತಮ್ಮ ಮನೆಯಿಂದ ಕಾಲ್ ಬಂದಿದೆ. ಆದ್ರೆ ಕಾಲ್ ರಿಸಿವ್ ಮಾಡಿ ಮಾತನಾಡಿದ್ದು ಮಾತ್ರ ಕ್ಯಾಪ್ಟನ್ ರಘು.

ಹೌದು, ದೊಡ್ಮನೆಯಲ್ಲಿ ಸ್ಪರ್ಧಿಗಳು ತಮ್ಮ ಆಟವನ್ನು ಮರೆತು ತಮ್ಮದೇ ಲೋಕದಲ್ಲಿ ಮುಳುಗಿದಂತಿದೆ. ಹೀಗಾಗಿ ಎಚ್ಚರಿಕೆ ಕೊಡಲು ಮನೆಯಿಂದ ಕಾಲಿಂಗ್ ಸೆಷನ್ ಏರ್ಪಡಿಸಲಾಗಿದೆ. ಕನ್ಫೆಷನ್ ರೂಮ್​ಗೆ ರಘು ಅವರನ್ನು ಕರೆದಿದ್ದು, ಅಲ್ಲಿ ಅವರು ಪ್ರತಿಯೊಬ್ಬ ಸ್ಪರ್ಧಿಯ ಕಾಲ್ ಅಟೆಂಡ್ ಮಾಡಿದ್ದಾರೆ. ಹೀಗೆ ಇತರೆ ಸ್ಪರ್ಧಿಗಳ ಮನೆಯವರ ಹಾಗೂ ರಘು ನಡುವಣ ಫೋನ್ ಕಾಲ್ ಸಂಭಾಷಣೆ ಮನೆಯೊಳಗಿನ ಟಿವಿಯಲ್ಲೂ ಪ್ರಸಾರ ಮಾಡಲಾಗಿದೆ.



ಸದ್ಯ ಬಿಡುಗಡೆ ಆಗಿರುವ ಪ್ರೋಮೋದಲ್ಲಿ ರಘು ಅವರು ಮೊದಲಿಗೆ ಧನುಷ್ ಅವರ ಮನೆಯಿಂದ ಬಂದ ಕಾಲ್ ರಿಸಿವ್ ಮಾಡಿದ್ದಾರೆ. ಈ ಸಂದರ್ಭ ಧನುಷ್ ತಾಯಿ, ನೀನು ಎಲ್ಲರ ಜೊತೆಗೂ ಚೆನ್ನಾಗಿ ಆಟ ಆಡಬೇಕು ಎಂದಿದ್ದಾರೆ. ಆಗ ರಘು ಅವರು ನಿಮ್ಮ ಮಗ ನಾಮಿನೇಟ್ ಆಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನ ಕೇಳಿ ಧನುಷ್ ಕಣ್ಣೀರಿಟ್ಟಿದ್ದಾರೆ. ಬಳಿಕ ರಾಶಿಕಾ ಅವರ ತಮ್ಮನ ಕರೆ ಬಂದಿದೆ. ಇವರ ಜೊತೆ ರಘು ಮಾತನಾಡುತ್ತ, ರಾಶಿಕಾ ಅವರು ತುಂಬಾ ಲಾಸ್ಟ್ ಆಗಿ ಬಿಟ್ಟಿದ್ದಾರೆ ಬಿಗ್ ಬಾಸ್ ಮನೆಯಲ್ಲಿ ಎಂದು ಹೇಳಿದ್ದಾರೆ.

ರಘು ಅವರ ಮಾತು ಕೇಳಿ ರಾಶಿಕಾಗೆ ಕೋಪ ಬಂದಿದೆ. ರಘು ಅವರು ಕನ್ಫೆಷನ್ ರೂಮ್​ನಿಂದ ಹೊರಬಂದ ಬಳಿಕ ಈ ಬಗ್ಗೆ ಇಬ್ಬರ ನಡುವೆ ದೊಡ್ಡ ಜಗಳ ನಡೆದಿದೆ. ನಾನು ಲಾಸ್ಟ್ ಅಂತ ಕೊಟ್ಟಿರೋದಕ್ಕೆ ನನಗೆ ರೀಸನ್ ಬೇಕು.. ಇದು ಫೇವರಿಸಂ ಎಂದು ಹೇಳಿದ್ದಾರೆ. ಪದೇಪದೇ ಕೇಳಿದ್ದಕ್ಕೆ ಕೋಪಗೊಂಡ ರಘು, ನಾನು ಏನು ಅನಿಸ್ತು ಅದೇ ಹೇಳಿದ್ದು.. ಫೇವರಿಸಂ ಅಂತ ನಿಮ್ಗೆ ಅನಿಸಿದ್ರೆ ನಾನು ಏನು ಮಾಡ್ಲಿ ಎಂದು ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

BBK 12 TRP: ಬಿಗ್ ಬಾಸ್ ಟಿಆರ್​ಪಿ ಔಟ್: ಕಿಚ್ಚನ ರುಬ್ಬಿಂಗ್ ಸೆಷನ್​ಗೆ ಎಷ್ಟು ರೇಟಿಂಗ್?