BBK 12: ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ಕಾಂತಾರ ನಟ: ಮೊದಲ ದಿನವೇ ದೊಡ್ಮನೆ ಶೇಕ್
Bigg Boss Kananda Season 12: ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಮತ್ತೊಂದು ಸರ್ಪ್ರೈಸ್ ಇರಲಿದೆ ಎಂಬ ಮಾತು ಕೇಳಿಬರುತ್ತಿದೆ. ದೊಡ್ಮನೆಗೆ ಕಾಂತಾರ ನಟನ ಎಂಟ್ರಿ ಆಗಲಿದೆಯಂತೆ. ಆದರೆ, ಇವರು ಬರುತ್ತಿರುವುದು ಸ್ಪರ್ಧಿಯಾಗಿ ಅಲ್ಲ ಅತಿಥಿಯಾಗಿ.

Bigg Boss Kannada 12 -

ಭಾನುವಾರ ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಗ್ರ್ಯಾಂಡ್ ಓಪನಿಂಗ್ ನಡೆದಿದ್ದು 19 ಸ್ಪರ್ಧಿಗಳು ಮನೆಯೊಳಗೆ ಸೇರಿದ್ದಾರೆ. ಕೆಲವರು ಒಂಟಿಯಾಗಿ ತೆರಳಿದರೆ ಇನ್ನೂ ಕೆಲವರು ಜಂಟಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಇಂದಿನಿಂದ ಅಸಲಿ ಆಟ ಶುರುವಾಗಲಿದೆ. ಈಗಾಗಲೇ ಮೊದಲ ದಿನ ಪ್ರೋಮೋವನ್ನು ಕಲರ್ಸ್ ಕನ್ನಡ ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ಪರ್ಧಿಗಳಿಗೆ ನಡುಕ ಹುಟ್ಟಿಸುವ ಟ್ವಿಸ್ಟ್ ಕೊಟ್ಟಿದ್ದಾರೆ ಬಿಗ್ ಬಾಸ್. ‘‘ನಾನು ಬಂದಿರೊ ಉದ್ದೇಶ ಸ್ವಾಗತ ಮಾಡೋಕೆ ಅಲ್ಲ.. ನಿಮ್ಮಲ್ಲಿ ಒಬ್ಬರಿಗೆ ವಿದಾಯ ಹೇಳೋದಕ್ಕೆ ಪರಸ್ಪರ ಚರ್ಚಿಸಿ ಒಬ್ಬರಿಗೆ ಮುಖ್ಯ ದ್ವಾರ ತೋರಿಸಿ’’ ಎಂದು ಬಿಗ್ ಬಾಸ್ ಮೊದಲ ದಿನವೇ ಹೇಳಿದ್ದಾರೆ.
ಈ ಟ್ವಿಸ್ಟ್ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಸರ್ಪ್ರೈಸ್ ಇರಲಿದೆ ಎಂಬ ಮಾತು ಕೇಳಿಬರುತ್ತಿದೆ. ದೊಡ್ಮನೆಗೆ ಕಾಂತಾರ ನಟನ ಎಂಟ್ರಿ ಆಗಲಿದೆಯಂತೆ. ಆದರೆ, ಇವರು ಬರುತ್ತಿರುವುದು ಸ್ಪರ್ಧಿಯಾಗಿ ಅಲ್ಲ ಅತಿಥಿಯಾಗಿ. ಇದೇ ಅಕ್ಟೋಬರ್ 2 ರಂದು ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಪ್ರಚಾರದ ಹಿನ್ನೆಲೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಬಿಗ್‌ಬಾಸ್‌ಗೆ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಹೊಸ ಸಿನಿಮಾ ಅಥವಾ ಧಾರಾವಾಹಿ ಬರುತ್ತಿದೆ ಎಂದರೆ ಅದರ ಪ್ರಚಾರಕ್ಕೆ ಕಲಾವಿದರು ಮತ್ತು ಚಿತ್ರತಂಡ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಬರುತ್ತಾರೆ. ಸ್ಪರ್ಧಿಗಳೊಂದಿಗೆ ಕ್ವಾಲಿಟಿ ಸಮಯ ಕಳೆದು, ಬಿಗ್ ಬಾಸ್ ಸೂಚನೆಯಂತೆಯೇ ಕೆಲವು ಚಟುವಟಿಕೆಯನ್ನು ನಡೆಸಿಯೂ ಕೊಡುತ್ತಾರೆ. ಅದರಂತೆ ಕಾಂತಾರ ಬಿಡುಗಡೆ ಆಗುತ್ತಿರುವ ಹಿನ್ನಲೆಯಲ್ಲಿ ಶೆಟ್ರು ದೊಡ್ಮನೆಗೆ ಬರಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಕಲರ್ಸ್ ಕನ್ನಡ ಇದುವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.
ಮೊದಲ ದಿನವೇ ಸ್ಪರ್ಧಿಗಳಿಗೆ ಶಾಕ್
ಬಿಗ್ ಬಾಸ್ ಮನೆಗೆ ಬಂದು ಸ್ವಲ್ಪ ಹೊತ್ತು ಎಂಜಾಯ್ ಮಾಡೋಣ ಎಂಬ ಪ್ಲ್ಯಾನ್ನಲ್ಲಿದ್ದ ಸ್ಪರ್ಧಿಗಳಿಗೆ ಮೊದಲ ದಿನವೇ ಶಾಕ್ ಕೊಡಲಾಗಿದೆ. ಈ ಹಿಂದೆ ವಾರಾಂತ್ಯದಲ್ಲಿ ಸದ್ದು ಮಾಡುತ್ತಿದ್ದ ಎಲಿಮಿನೇಷನ್ ಈಗ ಮೊದಲ ದಿನವೇ ನಡುಕ ಹುಟ್ಟಿಸುವಂತೆ ಮಾಡಿದೆ. ಹಾಯ್ ಹೇಳೋಕು ಮುನ್ನವೇ ಟಾಟಾ-ಬಾಯ್ ಹೇಳೋರು ಯಾರು? ಎಂಬ ಶೀರ್ಷಿಕೆಯೊಂದಿಗೆ ಕಲರ್ಸ್ ಕನ್ನಡ ಮೊದಲ ದಿನದ ಎಪಿಸೋಡ್ನ ಪ್ರೋಮೋ ಬಿಡುಗಡೆ ಮಾಡಿದೆ. ಇದರಲ್ಲಿ ಬಿಗ್ ಬಾಸ್, ಇದು ಬಿಗ್ ಬಾಸ್.. ನಾನು ಬಂದಿರೊ ಉದ್ದೇಶ ಸ್ವಾಗತ ಮಾಡೋಕೆ ಅಲ್ಲ.. ನಿಮ್ಮಲ್ಲಿ ಒಬ್ಬರಿಗೆ ವಿದಾಯ ಹೇಳೋದಕ್ಕೆ ಪರಸ್ಪರ ಚರ್ಚಿಸಿ ಒಬ್ಬರಿಗೆ ಮುಖ್ಯ ದ್ವಾರ ತೋರಿಸಿ ಎಂದು ಬಿಗ್ ಬಾಸ್ ಆದೇಶಿಸಿದ್ದಾರೆ.
ಅದರಂತೆ ಮನೆಯಲ್ಲಿ ಬಿಗ್ ಚರ್ಚೆ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ತಪ್ಪು-ತಪ್ಪು ಮಾತಾಡಿ ಫೇಮಸ್ ಆಗೋದು ಒಂದಿ ಇರುತ್ತೆ ಎಂದು ರಕ್ಷಿತಾ ಶೆಟ್ಟಿ ಬಗ್ಗೆ ಜಾಹ್ಮವಿ ಕಾರಣ ನೀಡಿದ್ದಾರೆ. ಮತ್ತೊಂದೆಡೆ ಅಶ್ವಿನಿ ಅವರು ಸ್ಪಂದನಾ ಬಗ್ಗೆ, ಸ್ಪಂದನಾ ಅವರಿಗೆ ಹೊರಗಡೆ ಸಾಕಷ್ಟು ಅವಕಾಶ ಸಿಗಬಹುದು.. ಹೀಗಾಗಿ ಅವರು ಬಿಗ್ ಬಾಸ್ನಿಂದ ಹೊರಹೋಗಲಿ ಎಂದು ಹೇಳಿದ್ದಾರೆ.
BBK 12: ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಒಟ್ಟು 19 ಸ್ಪರ್ಧಿಗಳು: ಯಾರೆಲ್ಲ?, ಇಲ್ಲಿದೆ ಪಟ್ಟಿ