ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ‘ಸ್ಪಂದನಾ ಜೊತೆ ಮಾತಾಡೋಕೆ ಕರಿಬಸಪ್ಪ ಮಲಗೋವರೆಗೆ ಕಾಯ್ತಾ ಇದ್ದೆ’ ಎಂದ ಆರ್​ಜೆ ಅಮಿತ್

ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ವಿಶ್ವವಾಣಿ ಟಿವಿ ಸ್ಪೆಷನ್ ಜೊತೆ ಮಾತನಾಡಿದ ಆರ್ಜೆ ಅಮಿತ್ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇವರು ಇದ್ದ ಒಂದು ವಾರ ದೊಡ್ಮನೆಯಲ್ಲಿ ಸಖತ್ ತರ್ಲೆ ಮಾಡಿದ್ದರಂತೆ. ಈ ಏರಿಯಾ ಹುಡುಗ್ರು ಇರೋರೀತಿ ಅಮಿತ್, ಕಾಕ್ರೋಚ್ ಸುಧಿ, ಸತೀಶ್ ಹಾಗೂ ಕರಿಬಸಪ್ಪ ಇದ್ದರಂತೆ.

ಸ್ಪಂದನಾ ಜೊತೆ ಮಾತಾಡೋಕೆ ಕಾಯ್ತಾ ಇದ್ದೆ: ಅಮಿತ್

RJ Amit interview -

Profile Vinay Bhat Oct 8, 2025 1:51 PM

ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಮೊದಲ ವಾರವೇ ಡಬಲ್ ಎಲಿಮಿನೇಷನ್ ನಡೆಯಿತು. ಜಂಟಿ ಆಗಿ ಮನೆಯೊಳಗೆ ಕಾಲಿಟ್ಟ ಆರ್​ಜೆ ಅಮಿತ್ ಹಾಗೂ ಬಾಡಿಬಿಲ್ಡರ್ ಕರಿಬಸಪ್ಪ ಅವರು ಅತಿ ಕಡಿಮೆ ವೋಟ್ ಪಡೆದು ಹೊರಬಂದರು. ಆರ್‌ಜೆ ಅಮಿತ್​ಗೆ ದೊಡ್ಡ ಅಭಿಮಾನಿ ಬಳಗ ಇರಲಿಲ್ಲ. ಅಲ್ಲದೆ ಇವರು ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಫ್ಯಾನ್ಸ್ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದರು. ಈ ಹಿಂದೆ ಅವರು "ಬಿಗ್‌ಬಾಸ್‌ ಒಂದು ಕ್ರಿಂಜ್‌ ಶೋ" ಎನ್ನುವ ಮೂಲಕ ಪ್ರೇಕ್ಷಕರ ಕೋಪಕ್ಕೆ ಗುರಿಯಾಗಿದ್ದರು.

ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ವಿಶ್ವವಾಣಿ ಟಿವಿ ಸ್ಪೆಷನ್ ಜೊತೆ ಮಾತನಾಡಿದ ಆರ್​ಜೆ ಅಮಿತ್ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇವರು ಇದ್ದ ಒಂದು ವಾರ ದೊಡ್ಮನೆಯಲ್ಲಿ ಸಖತ್ ತರ್ಲೆ ಮಾಡಿದ್ದರಂತೆ. ಈ ಏರಿಯಾ ಹುಡುಗ್ರು ಇರೋರೀತಿ ಅಮಿತ್, ಕಾಕ್ರೋಚ್ ಸುಧಿ, ಸತೀಶ್ ಹಾಗೂ ಕರಿಬಸಪ್ಪ ಇದ್ದರಂತೆ. ಎಲ್ಲರನ್ನೂ ರೇಗಿಸುತ್ತ, ತಮಾಷೆಯಾಗಿ ಇದ್ದೆ, ಆದ್ರೆ ಇದು ಯಾವುದೂ ಟೆಲಿಕಾಸ್ಟ್ ಆಗಿಲ್ಲ ಎಂದು ಹೇಳಿದ್ದಾರೆ.

ಅಲ್ಲಿ ಲವ್ವಲ್ಲಿ ಬೀಳೊ ಅಂತದ್ದು ಏನೂ ಆಗಲ್ಲ.. ಆದ್ರೆ ನಾನು ಫ್ಲರ್ಟ್ ಮಾಡ್ತಿದ್ದೆ.. ಒಂದು ಕ್ಲೋಸ್ ಆಗಿರುತ್ತಿದ್ದೆ.. ನಾನು ನ್ಯಾಚುರಲಿ ಆತರದ ವ್ಯಕ್ತಿ ನನಗೆ ಯಾರಾದ್ರು ಇಷ್ಟ ಆದ್ರೆ ಜೆನ್ಯೂನ್ ಆಗಿ ಅವರ ಜೊತೆ ಮಾತಾಡ್ತಾ ಇರುತ್ತೇನೆ.. ಸ್ಪಂದನಾ ನನ್ನ ಅರ್ಥ ಮಾಡಿಕೊಂಡಿದ್ದಳು. ಎರಡು-ಮೂರನೇ ದಿನ ನನ್ಗೆ ಅರ್ಥ ಆಗುತ್ತೆ ನಿನ್ನ ಕಷ್ಟ ಅಂತ ಕಣ್ಣು ನೋಡುಬಿಟ್ಟು ಹೇಳಿದ್ದಳು. ಆಮೇಲೆ ಬಾ ಮಾತಡೋಣ ಎಂದಿದ್ದಳು. ಸೋ ನನ್ನ ಜೊತೆ ಕರಿಬಸಪ್ಪ ಇದ್ದ ಕಾರಣ ಮಾತನಾಡಲು ಆಗುತ್ತಿರಲಿಲ್ಲ.. ಹೀಗಾಗಿ ಅವರು ಮಲಗುವ ತನಕ ಕಾದು ಮತ್ತೆ ಸ್ಪಂದನಾ ಜೊತೆ ಮಾತಾಡ್ತಾ ಇದ್ದೆ ಎಂದು ಅಮಿತ್ ಹೇಳಿದ್ದಾರೆ.



ಬಿಗ್ ಬಾಸ್ ಕ್ರಿಂಜ್ ಶೋ ಎಂದು ಹೇಳಿದ್ದ ಬಗ್ಗೆ ಮಾತನಾಡಿದ ಅಮಿತ್, ಕ್ರಿಂಜ್ ಎಂಬುದು ಕೆಟ್ಟ ಪದ ಅಲ್ಲ ಈಗಿನ ಜನರೇಷನ್​ನಲ್ಲಿ, ಇಂದು ಟ್ರೆಂಡಿಂಗ್​ನಲ್ಲಿ ಇರೋದೆ ಅದು.. ಹೂವಿನ ಬಾಣದಂತೆ ಹಾಡನ್ನು ಚೆನ್ನಾಗಿ ಹಾಡಿದ್ರೆ ಯಾರೂ ನೋಡಲ್ಲ, ಅದೇ ವಿಚಿತ್ರವಾಗಿ ಹಾಡಿದ್ರೆ ಎಲ್ಲರೂ ನೋಡ್ತಾರೆ.. ಜನರು ಇಷ್ಟ ಪಡುವುದೇ ಕ್ರಿಂಜ್ ಅನ್ನು. ನನಗೆ ಇದೊಂದು ಅದ್ಭುತ ವೇದಿಕೆ ಕಲ್ಪಿಸಿತು. ನನ್ನ ಫೀಚರ್​ಗೆ ಇದೊಂದು ಹೆಲ್ಪ್ ಆಗುತ್ತೆ ಅಂತ ಹೋದೆ ಎಂದಿದ್ದಾರೆ.

ಅಲ್ಲದೆ ವೀಕೆಂಡ್​ನಲ್ಲಿ ಕೂಡ ಸುದೀಪ್ 3-4 ಬಾರಿ ಕ್ರಿಂಜ್ ಎಂಬ ಪದ ಬಳಸಿ ಅಮಿತ್​ಗೆ ಟಾಂಗ್ ಕೊಟ್ಟಿದ್ದರು. ಈ ಕುರಿತು ಮಾತನಾಡಿದ ಅವರು, ಮೊದಲ ದಿನ ಸ್ಟೇಂಜ್​ನಿಂದ ಹೋಗುವಾಗ್ಲೆ ಅವರು ಹೇಳಿದ್ರು ನೀನು ಹೋಗು ವೀಕೆಂಡ್​ನಲ್ಲಿ ಸಿಕ್ತೀನಿ ಎಂದಿದ್ದರು. ನನ್ಗೆ ಅವಾಗ್ಲೆ ಗೊತ್ತಿತ್ತು ಏನೋ ಇರುತ್ತೆ ಅಂತ ಬಟ್ ನಾನು ಸುದೀಪ್ ಸರ್ ಜೊತೆ ಕಾಣಿಸಿಕೊಂಡೆ, ಮಾತನಾಡಿದೆ ಅಂತ ಖುಷಿ ಇದೆ. ಅವರು ಅರ್ಥ ಮಾಡಿಸೋ ರೀತಿ ತುಂಬಾ ಮೆಚ್ಯೂರ್ ಆಗಿದೆ. ಈ ಹಿಂದೆ ಕೆಲವು ಎಪಿಸೋಡ್ ನೋಡಿದಾಗ ಕ್ರಿಂಜ್ ಅನಿಸಿದ್ದು ನಿಜ.. ಅದು ಎಲ್ಲರಿಗೂ ಗೊತ್ತು.. ಬಟ್ ಅಲ್ಲಿ ಹೋಗಿ ಒಬ್ಬ ಆಟಗಾರನಾದಾಗ ಬೇರೆನೇ ಇರುತ್ತೆ ಎಂದು ಹೇಳಿದ್ದಾರೆ.



ತುಂಬಾ ಕ್ರಿಂಜ್ ವ್ಯಕ್ತಿಗಳ ಮಧ್ಯೆ ಒಬ್ಬ ಒಳ್ಳೆಯವನಿದ್ದರೆ ವರ್ಕ್ ಆಗಲ್ಲ.. ಅವನೂ ಅದೇರೀತಿ ವರ್ತಿಸಬೇಕು. ಕರಿಬಸಪ್ಪ ಬಗ್ಗೆ ಮಾತನಾಡಿದ ಅಮಿತ್, ಅವರಿಂದ ನನಗೆ ತುಂಬಾ ಪ್ರಾಬ್ಲಂ ಆಯಿತು.. ಹೊರಬೇಕಾದ್ರೆ ನನ್ ಹತ್ರ ಕೈಮುಗಿದು ಸ್ವಾರಿ ಬ್ರದರ್ ಎಲ್ಲ ಹೇಳಿದ್ರು.. ಬಟ್ ಕಾಲ ಮಿಂಚಿಹೋಗಿತ್ತು ಎಂದು ಹೇಳಿದ್ದಾರೆ.

BBK 12: ಬಿಗ್ ಬಾಸ್ ದಿಢೀರ್ ಸ್ಥಗಿತಕ್ಕೆ ಅಸಲಿ ಕಾರಣ ಏನು?: ಇಲ್ಲಿದೆ ನೋಡಿ ಪಟ್ಟಿ