ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup: ಭಾರತ ತಂಡದಲ್ಲಿ ಓಪನಿಂಗ್‌ ಸ್ಥಾನ ಕಿತ್ತುಕೊಂಡ ಬಗ್ಗೆ ಸಂಜು ಸ್ಯಾಮ್ಸನ್‌ ಪ್ರತಿಕ್ರಿಯೆ!

ಕಳೆದ 2025ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ತಂಡದಲ್ಲಿನ ತಮ್ಮ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ತಮಗೆ ಯಾವುದೇ ಕ್ರಮಾಂಕ ನೀಡಿದರೂ ಬ್ಯಾಟ್‌ ಮಾಡಲು ಸಿದ್ದ ಎಂದು ಅವರು ಹೇಳಿಕೊಂಡಿದ್ದಾರೆ.

ತಮ್ಮ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಸಂಜು ಸ್ಯಾಮ್ಸನ್‌ ಪ್ರತಿಕ್ರಿಯೆ!

ಭಾರತ ಟಿ20ಐ ತಂಡದಲ್ಲಿನ ತಮ್ಮ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಸಂಜು ಸ್ಯಾಮ್ಸನ್‌ ಪ್ರತಿಕ್ರಿಯೆ ನೀಡಿದ್ದಾರೆ. -

Profile Ramesh Kote Oct 8, 2025 3:49 PM

ನವದೆಹಲಿ: ಕಳೆದ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ತಮಗೆ ನೀಡಿದ್ದ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಭಾರತ ತಂಡದ (Indian Cricket Team) ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ (Sanju Samson) ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ತಂಡದ ಜೆರ್ಸಿ ಹಾಕಲು ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿದ್ದೇನೆ. ಭಾರತ ತಂಡದ ಡ್ರೆಸ್ಸಿಂಗ್‌ ರೂಂನಲ್ಲಿ ಇರುವುದೇ ಒಂದು ಭಾಗ್ಯ. ಹಾಗಾಗಿ ನನಗೆ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಕೊಟ್ಟರೂ ಆಡಲು ಸಿದ್ದ ಎಂದು ಅವರು ಹೇಳಿಕೊಂಡಿದ್ದಾರೆ. ಏಷ್ಯಾ ಕಪ್‌ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್‌ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದರು. ಆ ಮೂಲಕ ಭಾರತ ತಂಡದ ಏಷ್ಯಾ ಗೆಲುವಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು.

ಏಷ್ಯಾ ಕಪ್‌ ಟೂರ್ನಿಗೂ ಮುನ್ನ ಸಂಜು ಸ್ಯಾಮ್ಸನ್‌ ಭಾರತ ಟಿ20ಐ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡುವ ಮೂಲಕ ಭರ್ಜರಿ ಪ್ರದರ್ಶನವನ್ನು ತೋರಿದ್ದರು. ಆ ಮೂಲಕ ಅವರು ಕಳೆದ 10 ಇನಿಂಗ್ಸ್‌ಗಳಲ್ಲಿ ಮೂರು ಟಿ20ಐ ಶತಕಗಳನ್ನು ಬಾರಿಸಿದ್ದರು. ಇದರ ಹೊರತಾಗಿಯೂ ಏಷ್ಯಾ ಕಪ್‌ ಟೂರ್ನಿಯಲ್ಲಿ ಶುಭಮನ್‌ ಗಿಲ್‌ಗೆ ಉಪ ನಾಯಕತ್ವ ನೀಡಿದ್ದರಿಂದ ಸಂಜು ಅನಿರೀಕ್ಷಿತವಾಗಿ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾಗಿತ್ತು. ಸಂಜು ಏಷ್ಯಾ ಕಪ್‌ ಟೂರ್ನಿಯಲ್ಲಿ ಆಡಿದ 4 ಇನಿಂಗ್ಸ್‌ಗಳಲ್ಲಿ 132 ರನ್‌ಗಳನ್ನು ಕಲೆ ಹಾಕಿದ್ದರು.

ಆರಂಭಿಕ ಬ್ಯಾಟಿಂಗ್‌ ಸ್ಥಾನದಿಂದ ನೇರವಾಗಿ ಮಧ್ಯಮ ಕ್ರಮಾಂಕದಲ್ಲಿ ಆಡಿಸಿದ್ದರಿಂದ ಸಂಜು ಸ್ಯಾಮ್ಸನ್‌ ಅವರ ಪ್ರದರ್ಶನದಲ್ಲಿ ಕುಸಿತ ಕಂಡಿತು. ಆದರೂ ಅವರು ಮೊದಲನೇ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಆಗಿ ಆಡಿದ್ದರು. ಆ ಮೂಲಕ ಜಿತೇಶ್‌ ಶರ್ಮಾಗೆ ಒಂದೇ ಒಂದು ಪಂದ್ಯದಲ್ಲಿಯೂ ಆಡಲು ಅವಕಾಶ ಸಿಕ್ಕಿರಲಿಲ್ಲ.

IND vs AUS: ಕುಮಾರ ಸಂಗಕ್ಕಾರ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್‌ ಕೊಹ್ಲಿ!

ಸಿಯೇಟ್‌ ರೇಟಿಂಗ್‌ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಸಂಜು ಸ್ಯಾಮ್ಸನ್‌ಗೆ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, "ನೀವು ಭಾರತ ತಂಡದ ಜೆರ್ಸಿಯನ್ನು ಧರಿಸಿದ ಬಳಿಕ, ನೀವು ಯಾವುದಕ್ಕೂ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ಭಾರತ ತಂಡದ ಜೆರ್ಸಿಯನ್ನು ಧರಿಸಿ, ತಂಡದ ಡ್ರೆಸ್ಸಿಂಗ್‌ ರೂಂನಲ್ಲಿ ಇರಲು ನಾನು ತುಂಬಾ ಕಷ್ಟಪಟ್ಟಿದ್ದೇನೆ. ರಾಷ್ಟ್ರೀಯ ತಂಡದ ಪರ ಆಡಲು ನಾನು ತುಂಬಾ ಖುಷಿಪಡುತ್ತೇನೆ," ಎಂದು ಹೇಳಿದ್ದಾರೆ.

"ನೀವು ನನ್ನನ್ನು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಕಳುಹಿಸಿದರೂ ಹಾಗೂ ಬೇಕಿದ್ದರೆ ಎಡಗೈನಲ್ಲಿ ಸ್ಪಿನ್‌ ಅನ್ನು ಕೂಡ ಮಾಡಲು ಸಿದ್ದ. ದೇಶದ ಪರ ಯಾವುದೇ ಕೆಲಸವನ್ನು ಮಾಡಲು ನಾನು ಸಿದ್ದ," ಎಂದು ಸಂಜು ಸ್ಯಾಮ್ಸನ್‌ ತಿಳಿಸಿದ್ದಾರೆ.

IND vs AUS: ಯಶಸ್ವಿ ಜೈಸ್ವಾಲ್‌ ಔಟ್‌, ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತದ ಬಲಿಷ್ಠ ಪ್ಲೇಯಿಂಗ್‌ XI

ಸಂಜು ಸ್ಯಾಮ್ಸನ್‌ಗೆ ಭಾರತ ತಂಡದಲ್ಲಿ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ. ಆದರೆ, ಅವರು ಇದರಲ್ಲಿ ಬಹತೇಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಗೂ ಸಂಜು ಸ್ಯಾಮ್ಸನ್‌ ಇದ್ದಾರೆ. ಆದರೆ, ಬಹುಶಃ ಅವರಿಗೆ ಪ್ಲೇಯಿಂಗ್‌ xiನಲ್ಲಿ ಅವಕಾಶ ಸಿಗುವುದರ ಬಗ್ಗೆ ಖಚಿತತೆ ಇಲ್ಲ. ಏಕೆಂದರೆ, ಏಷ್ಯಾ ಕಪ್‌ ಟೂರ್ನಿಯಲ್ಲಿ ಬೆಂಚ್‌ ಕಾದಿದ್ದ ಜಿತೇಶ್‌ಶರ್ಮಾಗೆ ಟೀಮ್‌ ಮ್ಯಾನೇಜ್‌ಮೆಂಟ್‌ ಮಣೆ ಹಾಕಬಹುದು. ಆ ಮೂಲಕ 2026ರ ಟಿ20 ವಿಶ್ವಕಪ್‌ ಟೂರ್ನಿಯ ನಿಮಿತ್ತ ಆಟಗಾರರಿಗೆ ಅವಕಾಶಗಳನ್ನು ನೀಡಬಹುದು.

ಅಂದ ಹಾಗೆ ಆಸ್ಟ್ರೇಲಿಯಾ ವಿರುದ್ಧ ಆರಂಭಿಕ ಎರಡು ಪಂದ್ಯಗಳಲ್ಲಿ ಸಂಜುಗೆ ಅವಕಾಶ ನೀಡಬಹುದು. ಇದರಲ್ಲಿ ಅವರು ಉತ್ತಮ ಪ್ರದರ್ಶನವನ್ನು ತೋರಿದರೆ, ಇನ್ನುಳಿದ ಪಂದ್ಯಗಳಲ್ಲಿಯೂ ಆಡಬಹುದು ಹಾಗೂ ಟಿ20 ವಿಶ್ವಕಪ್‌ ಟೂರ್ನಿಗೆ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲಿದ್ದಾರೆ.