ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

JaiLalitha Serial: ರಾಕಿಂಗ್ ಸ್ಟಾರ್‌ ಯಶ್​ನ ಮದುವೆ ಆಗೋ ಕನಸು: ಬರುತ್ತಿದೆ ಹೊಸ ಸೀರಿಯಲ್ ಜೈಲಲಿತಾ

ಸ್ಟಾರ್ ಸುವರ್ಣದಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಹೊಸ ಧಾರಾವಾಹಿ ಶುರುವಾಗುತ್ತಿದೆ. ಈಗಾಗಲೇ ಭಾರೀ ನಿರೀಕ್ಷೆ ಹುಟ್ಟಿಸಿರುವ ಅವಿನಾಶ್ ಮುಖ್ಯ ಭೂಮಿಕೆಯಲ್ಲಿರುವ ವಸುದೇವ ಕುಟುಂಬ ಇದೇ ಸೆಪ್ಟೆಂಬರ್ 15 ರಿಂದ ಶುರುವಾಗಲಿದೆ. ಹೀಗಿರುವಾಗ ಮತ್ತೊಂದು ವಿಶೇಷ ಕಥಾಹಂದರ ಹೊಂದಿರುವ ಜೈಲಲಿತಾ ಧಾರಾವಾಹಿ ಕುರಿತು ಪ್ರೋಮೋ ಹಂಚಿಕೊಂಡಿದೆ.

ಯಶ್​ನ ಮದುವೆ ಆಗೋ ಕನಸು: ಬರುತ್ತಿದೆ ಹೊಸ ಸೀರಿಯಲ್ ಜೈಲಲಿತಾ

JaiLalitha Kannada Serial -

Profile Vinay Bhat Sep 6, 2025 3:39 PM

ಸ್ಟಾರ್ ಸುವರ್ಣದಲ್ಲಿ (Star Suvarna) ಪ್ರಸಾರ ಆಗುವ ಧಾರಾವಾಹಿಗಳಿಗೆ ವಿಶೇಷ ಅಭಿಮಾನಿ ಬಳಗವಿದೆ. ಇತರೆ ಚಾನೆಲ್​ಗಳಿಗೆ ಹೋಲಿಸಿದರೆ ಇದರಲ್ಲಿ ಪ್ರಸಾರ ಆಗುವ ಸೀರಿಯಲ್​ಗಳ ಸಂಖ್ಯೆ ಕಡಿಮೆ.. ಆದರೆ, ಟೆಲಿಕಾಸ್ಟ್ ಕಾಣುವ ಧಾರಾವಾಹಿಗಳಿಗೆ ಉತ್ತಮ ವೀಕ್ಷಕರಿದ್ದಾರೆ. ಟಿಆರ್​ಪಿಯಲ್ಲಿ ಕೂಡ ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿಗಳು ಈಗೀಗ ಮೇಲೇರುತ್ತಿದೆ. ಇದೀಗ ಜನರಿಗೆ ಮತ್ತಷ್ಟು ಹತ್ತಿರವಾಗಲು ವಾಹಿನಿ ಹೊಸ ಹೊಸ ಸೀರಿಯನ್ ಅನ್ನು ತರುತ್ತಿದೆ. ಇದೀಗ ಸ್ಟಾರ್ ಸುವರ್ಣ ಮತ್ತೊಂದು ಹೊಸ ವಿಶೇಷ ಧಾರಾವಾಹಿಯ ಕುರಿತು ಅಪ್ಡೇಟ್ ನೀಡಿದೆ.

ಹೌದು ಸ್ಟಾರ್ ಸುವರ್ಣದಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಹೊಸ ಧಾರಾವಾಹಿ ಶುರುವಾಗುತ್ತಿದೆ. ಈಗಾಗಲೇ ಭಾರೀ ನಿರೀಕ್ಷೆ ಹುಟ್ಟಿಸಿರುವ ಅವಿನಾಶ್ ಮುಖ್ಯ ಭೂಮಿಕೆಯಲ್ಲಿರುವ ವಸುದೇವ ಕುಟುಂಬ ಇದೇ ಸೆಪ್ಟೆಂಬರ್ 15 ರಿಂದ ಶುರುವಾಗಲಿದೆ. ಹೀಗಿರುವಾಗ ಮತ್ತೊಂದು ವಿಶೇಷ ಕಥಾಹಂದರ ಹೊಂದಿರುವ ಜೈಲಲಿತಾ ಧಾರಾವಾಹಿ ಕುರಿತು ಪ್ರೋಮೋ ಹಂಚಿಕೊಂಡಿದೆ.

ಈ ಧಾರಾವಾಹಿಯ ವಿಶೇಷತೆ ಎಂದರೆ, ಲಲಿತಾ ರಾಕಿಂಗ್ ಸ್ಟಾರ್ ಯಶ್ ಅವರ ದೊಡ್ಡ ಅಭಿಮಾನಿ. ಎಷ್ಟು ದೊಡ್ಡ ಅಭಿಮಾನಿ ಎಂದರೆ ಚಿಕ್ಕಂದಿನಿಂದಲೇ ಇವರಿಗೆ ಯಶ್ ಎಂದರೆ ತುಂಬಾ ಇಷ್ಟ. ಅವರನ್ನೇ ಮದುವೆ ಆಗೋದು ಎಂದು ಕನಸು ಕಾಣುತ್ತಿರುವ ಹುಡುಗಿ. ಲಲಿತಾ ಪಾತ್ರವನ್ನು ಮನಸ್ವಿ ಮಾಡುತ್ತಿದ್ದಾರೆ. ಇವರು ಈ ಹಿಂದೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನಾತೀಚರಾಮಿ ಧಾರಾವಾಹಿಯಲ್ಲಿ ಲೀಡ್ ರೋಲ್​ನಲ್ಲಿ ಕಾಣಿಸಿಕೊಂಡಿದ್ದರು.



ಈ ಧಾರಾವಾಹಿಯಲ್ಲಿ ಲಲಿತಾ ಕ್ಯಾರೆಕ್ಟರ್ ತುಂಬಾ ವಿಶೇಷವಾಗಿದೆಯಂತೆ. ಆಕೆಯದ್ದು ಬೋಲ್ಡ್, ತರ್ಲೆ ಕ್ಯಾರೆಕ್ಟರ್, ಯಾರಿಗೂ ನೋವು ಮಾಡದಂತೆ ಸದಾ ಕಾಮಿಡಿ ಮಾಡುತ್ತ ಇರುವಂತಹ ಕ್ಯಾರೆಕ್ಟರ್. ನೋಡುಗರಿಗೆ ಈ ಧಾರಾವಾಹಿ ಕಚಗುಳಿ ನೀಡುವುದು ಖಚಿತ. ಧರ್ಶಿತ್ ಭಟ್ ಈ ಧಾರಾವಾಹಿಯಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ಗೆದ್ದ ಡೊಳ್ಳು ಚಿತ್ರಕ್ಕೆ ಚಿತ್ರಕತೆ ಬರೆದ ಶ್ರೀನಿಧಿ ಡಿಎಸ್ ಅವರ ನಿರ್ಮಾಣದಲ್ಲಿ ಜೈಲಲಿತಾ ಧಾರಾವಾಹಿ ಮೂಡಿಬರುತ್ತಿದೆ.

Bhagya Lakshmi Serial: ಎಲ್ಲ ಸತ್ಯ ಬಯಲು: ಭಾಗ್ಯ ಮನೆಗೆ ಆದೀಯನ್ನು ಹುಡುಕಿ ಬಂತು ಇಡೀ ರಾಮ್​ದಾಸ್ ಫ್ಯಾಮಿಲಿ