ಬಿಗ್ ಬಾಸ್ನ 19 ನೇ (bigg boss 19) ಸೀಸನ್ ಆಗಸ್ಟ್ 24 ರಿಂದ ಪ್ರಾರಂಭವಾಗಿದೆ. ಅದ್ಧೂರಿಯಾಗಿ ನಡೆದ ಗ್ರ್ಯಾಂಡ್ ಪ್ರೀಮಿಯರ್ ಸಂಚಿಕೆಯಲ್ಲಿ, ಸಲ್ಮಾನ್ ಖಾನ್ ಎಲ್ಲಾ ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಿದರು. ಈ ಬಾರಿಯ ಶೋನಲ್ಲಿ ಒಟ್ಟು 16 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಇವರ ನಡುವೆ ಪ್ರಶಸ್ತಿಯನ್ನು ಗೆಲ್ಲಲು ಹೋರಾಟ ನಡೆಯಲಿದೆ. ಈ ಬಾರಿಯ ಬಿಗ್ ಬಾಸ್ ಥೀಮ್ ರಾಜಕೀಯ. ಹೀಗಾಗಿ ಡೆಮಾಕ್ರಸಿ ಥೀಮ್ ತಕ್ಕಂತೆ ಈ ಬಾರಿಯ ಮನೆಯನ್ನು ಕೂಡ ವಿನ್ಯಾಸಗೊಳಿಸಲಾಗಿದೆ. ಸದ್ಯ ಈ ಬಾರಿ ದೊಡ್ಮನೆಯೊಳಗೆ ಕಾಲಿಟ್ಟ 16 ಸ್ಪರ್ಧಿಗಳು ಯಾರು ಎಂಬುದನ್ನು ನೋಡುವುದಾದರೆ..
ಫರ್ಹಾನ್ ಭಟ್
ಕಾಶ್ಮೀರ ಮೂಲದ ಚೆಲುವೆ ಮಾಡೆಲ್ ಆಗಿ ಗುರುತಿಸಿಕೊಂಡಿರುವ ಫರ್ಹಾನ್ ಭಟ್ ಈ ಬಾರಿ ಮನೆಗೆ ಬಂದಿದ್ದಾರೆ. ಇವರು ಲೈಲಾ ಮಜ್ನು, ಸಿಂಘಂ ಅಗೇನ್ ಮುಂತಾದ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.
ಅಶ್ನೂರ್ ಕೌರ್
21 ವರ್ಷದ ಕಿರುತೆರೆ ನಟಿ ಅಶ್ನೂರ್ ಕೌರ್ ಅವರು ಮನ್‌ಮರ್ಜಿಯಾ ಸಿನಮಾದಲ್ಲಿ ನಟಿಸಿದ್ದರು. ಬಾಲ ಕಲಾವಿದೆಯಾಗಿ ಕಿರುತೆರೆಯನ್ನು ಪ್ರವೇಶಿಸಿದ ಕೌರ್, ಆ ನಂತರ ಝಾನ್ಸಿ ಕೀ ರಾಣಿ.. ಯೇ ರಿಶ್ತಾ ಕ್ಯಾ ಕೆಹಲಾತಾ ಹೈ ಮತ್ತು ಪಟಿಯಾಲಾ ಬೇಬ್ಸ್‌ನಂತಹ ಧಾರಾವಾಹಿಗಳಲ್ಲಿ ಕೂಡ ಕಾಣಿಸಿಕೊಂಡರು.
ಗೌರವ್ ಖನ್ನಾ
ಅನುಪಮಾ ಧಾರಾವಾಹಿಯ ಮೂಲಕ ಪ್ರಸಿದ್ಧರಾದ ಗೌರವ್ ಖನ್ನಾ ಈ ಬಾರಿ ಬಿಗ್ ಬಾಸ್ ಮನೆಗೆ ಬರುತ್ತಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಚಾಲ್ತಿಯಲ್ಲಿತ್ತು. ಆ ಸುದ್ದಿ ನಿಜವಾಗಿದೆ. ಕಳೆದ 20 ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಗೌರವ್ ಖನ್ನಾ ಅವರು ಅನುಪಮಾ ಮತ್ತು ಸಿಐಡಿ ಸೀರಿಯಲ್‌ನಿಂದ ಹೆಚ್ಚು ಫೇಮಸ್ ಆದರು.
ತನ್ಯಾ ಮಿತ್ತಲ್
ಉದ್ಯಮಿಯಾಗಿ, ಭಾಷಣಗಾರ್ತಿಯಾಗಿ, ಮಾಡೆಲ್ ಆಗಿ ಗುರುತಿಸಿಕೊಂಡಿರುವ 2.5 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗಳನ್ನು ಹೊಂದಿರುವ ತನ್ಯಾ ಮಿತ್ತಲ್ ಈ ಬಾರಿಯ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ. ಮಿತ್ತಲ್ ಅವರು ಒಂದಷ್ಟು ವಿವಾದಗಳಿಂದಲೂ ಹೆಸರಾಗಿದ್ದಾರೆ.
ಅಮಾಲ್ ಮಲ್ಲಿಕ್
ಅರ್ಮಾನ್ ಮಲ್ಲಿಕ್ ಅವರ ಸಹೋದರ ಅಮಾಲ್ ಮಲ್ಲಿಕ್ ಕೂಡ ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ನೀಡಿದ್ದಾರೆ. ಸಂಗೀತ ನಿರ್ದೇಶಕನಾಗಿರುವ ಇವರು ದಬೂ ಮಲ್ಲಿಕ್ ಅವರ ಪುತ್ರನಾಗಿದ್ದಾರೆ.
ಕುನಿಕಾ ಸದಾನಂದ್
ಹಮ್ ಹೈ ರಾಹಿ ಪ್ಯಾರ್ ಕೇ ಸೇರಿ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ 90ರ ದಶಕದ ಖ್ಯಾತ ನಟಿ ಕುನಿಕಾ ಸದಾನಂದ್ ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇವರು ಶಾರುಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮುಂತಾದವರ ಜೊತೆಗೆ ಕೆಲಸ ಮಾಡಿದ್ದಾರೆ.
ನೀಲಂ ಗಿರಿ
ಭೋಜ್‌ಪುರಿ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ ನೀಲಂ ಗಿರಿಯವರಿಗೆ ಕೂಡ ಈ ಬಾರಿಯ ಬಿಗ್ ಬಾಸ್ ಟಿಕೆಟ್ ನೀಡಲಾಗಿದೆ. ಇವರಿಗೆ 28 ವರ್ಷ ವಯಸ್ಸು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಖ್ಯಾತಿಯನ್ನು ಇವರು ಪಡೆದುಕೊಂಡಿದ್ದಾರೆ.
ನಗ್ಮಾ ಮಿರಜ್ಕರ್ ಮತ್ತು ಆವೇಜ್ ದರ್ಬಾರ್
30 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿರುವ ಈ ಜೋಡಿ ದೊಡ್ಮನೆಯೊಳಗೆ ಬಂದಿದೆ. ಆವೇಜ್ ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿದ್ದು ನಗ್ಮಾ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ 19ರಲ್ಲಿ ಸ್ಪರ್ಧಿಯಾಗಿರುವ ಇವರು, ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.
Bhagya Lakshmi Serial: ಹಣ ಉಳಿಸಲು ತಾನೇ ಅಡುಗೆ ಮಾಡಲು ಮುಂದಾದ ಆದೀಶ್ವರ್
ನಟಾಲಿಯಾ ಜನೋಜೆಕ್
ಪೋಲೆಂಡ್‌ನಲ್ಲಿ ಹುಟ್ಟಿ ಸದ್ಯ ಭಾರತದಲ್ಲಿ ನಟಿಯಾಗಿ ಮತ್ತು ಮಾಡೆಲ್ ಆಗಿ ಗುರುತಿಸಿಕೊಂಡಿರುವ ಹಲವಾರು ಅಂತಾರಷ್ಟ್ರೀಯ ಸೌಂದರ್ಯ ಸ್ಫರ್ಧೆಗಳಲ್ಲಿ ಕೂಡ ಭಾಗವಹಿಸಿರುವ ನಟಾಲಿಯಾ ಜನೋಜೆಕ್ ಅವರನ್ನು ಕೂಡ ಬಿಗ್ ಬಾಸ್ ಮನೆಯೊಳಗೆ ಕಳುಹಿಸಲಾಗಿದೆ. ಹಿಂದಿ ಮಾತನಾಡಲು ಇವರಿಗೆ ಅಷ್ಟಾಗಿ ಬರುವುದಿಲ್ಲ.
ನೆಹಲ್ ಚುಡಾಸಮಾ
2018ರ ಮಿಸ್ ಯೂನಿವರ್ಸ್ ಸ್ಫರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ, ಫಿಟ್ನೆಸ್ ಸಲಹೆಗಾರರಾಗಿ ಕೂಡ ಕೆಲಸ ಮಾಡುತ್ತಿರುವ ನೆಹಲ್ ಚುಡಾಸಮಾ ಕೂಡ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ.
ಕೇವಲ ಇವರಷ್ಟೇ ಅಲ್ಲ ಇವರ ಜೊತೆ ಮೃದುಲ್ ತಿವಾರಿ, ಝೇಜಾನ್ ಖಾದ್ರಿ, ಪ್ರಣೀತ್ ಮೊರೆ, ಅಭಿಷೇಕ್ ಬಜಾಜ್, ಬೇಸಿರ್ ಅಲಿ ಕೂಡ ಈ ಬಾರಿ ಸ್ಫರ್ಧೆಯಲ್ಲಿ ಭಾಗವಹಿಸಿದ್ದಾರೆ. ಇವರಲ್ಲಿ ಯಾರು ಈ ಬಾರಿ ಟ್ರೋಫಿ ಎತ್ತಿ ಹಿಡಿಯುತ್ತಾರೆ ಎಂಬುದು ನೋಡಬೇಕಿದೆ.