ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sanjana Burli: ನಟಿಯಾಗಿ ನನ್ನ ಹೊಸ ಪ್ರಯಾಣ: ಗಂಧದ ಗುಡಿ ಧಾರಾವಾಹಿ ಬಗ್ಗೆ ಸಂಜನಾ ಬುರ್ಲಿ ಮಾತು

ಸಂಜನಾ ಬುರ್ಲಿ ಅಭಿಮಾನಿಗಳಿಗೆ ಹೊಸ ಧಾರಾವಾಹಿ ಮೂಲಕ ಮತ್ತೆ ರಂಚಿಸಲು ಬರಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರಲಿರುವ ನೂತನ ಸೀರಿಯಲ್‌ ಗಂಧದ ಗುಡಿಯಲ್ಲಿ ಸಂಜನಾ ಬುರ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸಂಜನಾ ಅವರ ಪ್ರೊಮೋ ಕೂಡ ಬಿಡುಗಡೆ ಆಗಿದೆ. ಈ ಸೀರಿಯಲ್‌ನಲ್ಲಿ ಶಿಶಿರ್‌ ಶಾಸ್ತ್ರಿ ಹೀರೋ ಆಗಿ ನಟಿಸುತ್ತಿದ್ದಾರೆ.

Sanjana Burli

ಕನ್ನಡ ಕಿರುತೆರೆಯ ಜನಪ್ರಿಯ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಮಗಳು ಸ್ನೇಹಾ ಆಗಿ ಮಿಂಚಿದ ನಟಿ ಸಂಜನಾ ಬುರ್ಲಿ (Sanjana Burli) ಸೀರಿಯಲ್ ನಿಂದ ಆಚೆ ಬಂದು ಸುಮಾರು ಒಂದು ವರ್ಷ ಆಗಿದೆ. ಇವರು ಡಿಸಿ ಸ್ನೇಹಾ ಪಾತ್ರಕ್ಕೆ ಗುಡ್ ಬೈ ಹೇಳಿದ್ದು ಫ್ಯಾನ್ಸ್‌ಗೆ ಸಾಕಷ್ಟು ಬೇಸರ ಮೂಡಿಸಿತು. ಆದರೆ ಸೀರಿಯಲ್‌ನಲ್ಲಿ ಅವರ ಪಾತ್ರವನ್ನು ಸಾವಿನ ಮೂಲಕ ಅಂತ್ಯಮಾಡಲಾಯಿತು. ಸಂಜನಾ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಧಾರಾವಾಹಿಯಿಂದ ಹೊರ ಬರೋದಾಗಿ ತಿಳಿಸಿದ್ದರು. ಆದರೆ ಸೀರಿಯಲ್ ನಿಂದ ಹೊರ ಬಂದ ಮೇಲೆ ನಟಿ ದೇಶ ವಿದೇಶ ಸುತ್ತೋದ್ರಲ್ಲೇ ಬ್ಯುಸಿಯಾಗಿದ್ದರು.

ಇದೀಗ ಸಂಜನಾ ಬುರ್ಲಿ ಅಭಿಮಾನಿಗಳಿಗೆ ಹೊಸ ಧಾರಾವಾಹಿ ಮೂಲಕ ಮತ್ತೆ ರಂಚಿಸಲು ಬರಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರಲಿರುವ ನೂತನ ಸೀರಿಯಲ್‌ ಗಂಧದ ಗುಡಿಯಲ್ಲಿ ಸಂಜನಾ ಬುರ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸಂಜನಾ ಅವರ ಪ್ರೊಮೋ ಕೂಡ ಬಿಡುಗಡೆ ಆಗಿದೆ. ಈ ಸೀರಿಯಲ್‌ನಲ್ಲಿ ಶಿಶಿರ್‌ ಶಾಸ್ತ್ರಿ ಹೀರೋ ಆಗಿ ನಟಿಸುತ್ತಿದ್ದಾರೆ.

ಆದರೆ, ಇಲ್ಲಿ ಸಂಜನಾ ನಾಯಕಿ ಆಗಿರುವುದು ಶಿಶಿರ್​ಗೆ ಅಲ್ಲ. ಎರಡನೇ ನಾಯಕನಾಗಿರುವ ಭವಿಷ್ ಗೌಡಗೆ ನಾಯಕಿಯಾಗಿ ಸಂಜನಾ ಬುರ್ಲಿ ನಟಿಸುತ್ತಿದ್ದಾರೆ. ತಮ್ಮ ಪಾತ್ರದ ಕುರಿತು ನಟಿ ಸೋಶಿಯಲ್ ಮೀಡಿಯಾದಲ್ಲಿ ಫೊಟೊಗಳ ಜೊತೆಗೆ ಸಂತಸವನ್ನು ಹಂಚಿಕೊಂಡಿದ್ದಾರೆ. ‘‘ಚಂದನಾಳನ್ನು ಭೇಟಿ ಮಾಡಿ ಆದಷ್ಟು ಬೇಗ ನಿಮ್ಮ ಗಂಧದಗುಡಿ ಅಲ್ಲಿ, ಶೀಘ್ರದಲ್ಲಿ. ಇದು ನಟಿಯಾಗಿ ನನ್ನ ಮತ್ತೊಂದು ಹೊಸ ಪ್ರಯಾಣವನ್ನು ಸೂಚಿಸುತ್ತದೆ. ಮತ್ತೊಂದು ವಿಶಿಷ್ಟ ಪಾತ್ರ. ವಿಭಿನ್ನ ಪರಿಕಲ್ಪನೆ. ಕಲಾವಿದ ಪುನರ್ಜನ್ಮ. ನನ್ನ ಪ್ರೀತಿಯ ಅಭಿಮಾನಿಗಳು, ಹಿತೈಷಿಗಳು ಮತ್ತು ಅನುಯಾಯಿಗಳಿಂದ ಯಾವಾಗಲೂ ಎಲ್ಲಾ ಸಕಾರಾತ್ಮಕತೆ, ಆಶೀರ್ವಾದ ಮತ್ತು ಶುಭಾಶಯಗಳು ಬೇಕು!’’ ಎಂದು ಬರೆದುಕೊಂಡಿದ್ದಾರೆ.



ಗಂಧದ ಗುಡಿ ಧಾರಾವಾಹಿ, ಇದು ನಾಲ್ಕು ಜನ ಅಣ್ಣ -ತಮ್ಮಂದಿರ ಕಥೆಯಾಗಿದ್ದು, ಆ ಮನೆಯಲ್ಲಿ ಹೆಣ್ಣು ದಿಕ್ಕೇ ಇರೋದಿಲ್ಲ. ಅಂತಹ ಮನೆಗೆ ಸೊಸೆಯಾಗಿ ಎಂಟ್ರಿ ಕೊಡುವ ಚಂದನಾ ಆಗಿ ಸಂಜನಾ ಬುರ್ಲಿ ನಟಿಸುತ್ತಿದ್ದಾರೆ. ಗಂಡಸರೇ ಇಲ್ಲದ ಮನೆಗೆ ಹೆಣ್ಣೊಬ್ಬರು ಎಂಟ್ರಿ ಕೊಟ್ಟಾಗ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅನ್ನೋದನ್ನು ಪ್ರೊಮೋದಲ್ಲಿ ತೋರಿಸಲಾಗಿದೆ.

Vaishnavi Gowda: ಗಂಡನ ಬರ್ತ್ ಡೇಗೆ ವೈಶು ವಿಶ್ ಮಾಡಿದ್ದೇಗೆ ನೋಡಿ