ಸರಿಗಮಪ ಕನ್ನಡ ಸೀಸನ್ 21ರ ಶೋನ ಸ್ಪರ್ಧಿಯಾಗಿದ್ದ ಗಾಯಕಿ ಲಹರಿ ಮಹೇಶ್ (Lahari Mahesh) ಸೆಮಿ ಫೈನಲ್ನಲ್ಲಿ ಹೊರಬಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು, ಇದು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಲಹರಿ ತಮ್ಮ ಗಾಯನದಿಂದಲೇ ಎಲ್ಲರ ಮನೆಮಾತಾಗಿದ್ದರು. ಇವರ ಕಂಠಸಿರಿಯನ್ನು ಕೇಳಿದವರು, ಈ ಹುಡುಗಿ ಜೂನಿಯರ್ ಶ್ರೇಯಾ ಘೋಷಲ್ ಅಂತ ಕರೆದಿದ್ದರು. ಇವರು ಫೈನಲ್ ಪ್ರವೇಶಿಸಿಲು ಇವರು ಅರ್ಹರು ಎಂಬ ಮಾತು ಕೇಳಿಬಂದಿತ್ತು.
14 ವರ್ಷದ ಲಹರಿ ಮಹೇಶ್ ಮೈಸೂರಿನ ಪ್ರತಿಭೆ. ನಾಗಾರಾಜ್ ಟೀಮ್ಗೆ ಆಯ್ಕೆ ಆಗಿದ್ರು. ಸರಿಗಮಪ ಸೀಸನ್ಗೆ ಗೆಸ್ಟ್ ಆಗಿ ಬಂದಿರೋ ಇಂಡಸ್ಟ್ರಿಯ ದಿಗ್ಗಜರು ಲಹರಿಯನ್ನ ಹಾಡಿ ಹೊಗಳಿದ್ದರು. ಅಷ್ಟೇ ಅಲ್ಲದೇ ಸೆಮಿ ಫಿನಾಲೆಯಲ್ಲಿ ಅರ್ಜುನ್ ಜನ್ಯ ಅವರು ನಿಮಗೆ ಸಿನಿಮಾದಲ್ಲಿ ಹಾಡಲು ಅವಕಾಶ ಕೊಡುತ್ತೇನೆ ಎಂದು ಹೇಳಿ ದೊಡ್ಡ ಆಫರ್ ಕೊಟ್ಟಿದ್ದರು. ಅದರಂತೆ ಇದೀಗ ಡಾರ್ಲಿಂಗ್ ಕೃಷ್ಣ ಅಭಿನಯನದ ಹಾಗೂ ಅರ್ಜುನ್ ಜನ್ಯ ಮ್ಯೂಸಿಕ್ ಇರುವ ಹೊಸ ಸಿನಿಮಾಕ್ಕೆ ಲಹರಿ ಧ್ವನಿಯಾಗಿದ್ದಾರೆ.
ಡಾರ್ಲಿಂಗ್ ಕೃಷ್ಣ ಅಭಿನಯದ ಬ್ರ್ಯಾಟ್ ಸಿನಿಮಾದ ಒಂದು ಹಾಡನ್ನು ಲಹರಿ ಮಹೇಶ್ ಹಾಡಿದ್ದಾರೆ. ಅದರಲ್ಲೂ ಸ್ಟಾರ್ ಸಿಂಗರ್ ಸಿದ್ ಶ್ರೀರಾಮ್ ಜೊತೆಯಲ್ಲಿ ಲಹರಿ ಮಹೇಶ್ ಹಾಡಿದ್ದು ಹೆಮ್ಮೆಯ ವಿಚಾರ. ಮತ್ತೊಂದು ವಿಶೇಷ ಏನೆಂದರೆ ಈ ಹಾಡನ್ನು ಶ್ರೇಯಾ ಘೋಷಾಲ್ ಅವರಿಂದ ಹಾಡಿಸಬೇಕು ಎಂದು ಚಿತ್ರತಂಡ ನಿರ್ಧರಿಸಿತ್ತಂತೆ. ಆದರೆ ಅರ್ಜುನ್ ಜನ್ಯ ಅವರ ಸಲಹೆ ಮೇರೆಗೆ ಸರಿಗಮಪ ಖ್ಯಾತಿಯ ಗಾಯಕಿ ಲಹರಿ ಮಹೇಶ್ ಅವರಿಗೆ ಈ ಅವಕಾಶ ಸಿಕ್ಕಿದೆ.
ಈ ಬಗ್ಗೆ ಲಹರಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ದಿನವನ್ನು ಕನಸಿನಲ್ಲಿಯೂ ಯೋಚಿಸಿರಲಿಲ್ಲ ಎಂದು ಹೇಳಿದ್ದಾರೆ. ನಿಮ್ಮ ಜೊತೆ ಕೆಲಸ ಮಾಡಿದ್ದಕ್ಕೆ ತುಂಬಾ ಕೃತಜ್ಞಳಾಗಿದ್ದೇನೆ ಎಂದು ಅರ್ಜುನ್ ಜನ್ಯ ಅವರಿಗೆ ಹೇಳಿದ್ದಾರೆ, ಡಾರ್ಲಿಂಗ್ ಕೃಷ್ಣ ಅವರಿಗೂ ಧನ್ಯವಾದ ಹೇಳಿದ್ದಾರೆ.
Bhagya Lakshmi Serial: ಪೂಜಾಳಿಗೆ ಚಿತ್ರಹಿಂಸೆ ನೀಡುತ್ತಿರುವ ಮೀನಾಕ್ಷಿ-ಕನ್ನಿಕಾ: ಬಂದೇ ಬಿಟ್ಟಳು ಭಾಗ್ಯ