ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bro Gowda Marriage: ಶಮಂತ್ ಮದುವೆ ಡೇಟ್ ಅನೌನ್ಸ್: ಮೇ 21ಕ್ಕೆ ಬ್ರೋ ಗೌಡ ಮ್ಯಾರೇಜ್

Shamanth Gowda marriage: ಬ್ರೋ ಗೌಡ ಅವರು ಪ್ರೇಮಿಗಳ ದಿನದಂದೇ ನಿಶ್ಚಿತಾರ್ಥ ಆಗಿರುವ ಕುರಿತ ವಿಡಿಯೋ ಹಂಚಿಕೊಂಡು ಎಲ್ಲರಿಗೂ ಶಾಕ್ ಕೊಟ್ಟರು. ಮೇಘನಾ ಎನ್ನುವವರ ಜತೆ ಶಮಂತ್‌ ನಿಶ್ಚಿತಾರ್ಥ ಮಾಡಿಕೊಂಡರು. ಇದೀಗ ಮೇ 21 ರಂದು ಬ್ರೋ ಗೌಡ ಹಸೆಮಣೆ ಏರಲಿದ್ದಾರೆ.

Bro Gowda Marriage: ಶಮಂತ್ ಮದುವೆ ಡೇಟ್ ಅನೌನ್ಸ್

Shamanth Gowda marriage

Profile Vinay Bhat May 16, 2025 7:44 AM

ಬ್ರೋ ಗೌಡ (Bro Gowda) ಎಂದೇ ಖ್ಯಾತಿಯಾಗಿರುವ ಕಿರುತೆರೆ ನಟ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿ ಶಮಂತ್ ಇತ್ತೀಚೆಗಷ್ಟೆ ಫೆಬ್ರವರಿ 14 ರಂದು ತಮ್ಮ ಅಭಿಮಾನಿಗಳಿಗೆ ಬಿಗ್ ಸರ್​ಪ್ರೈಸ್ ಕೊಟ್ಟರು. ಇಷ್ಟು ದಿನ ಸಿಂಗರ್ ಆಗಿ, ಲವ್ವರ್ ಬಾಯ್ ಆಗಿ, ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಪಕ್ಕ ಫ್ಯಾಮಿಲಿ ಮ್ಯಾನ್ ಆಗಿ ಎಲ್ಲರ ಮನಸ್ಸನ್ನು ಗೆದ್ದಿರುವ ಶಮಂತ್ ಇದೀಗ ರಿಯಲ್ ಲೈಫ್ ನಲ್ಲೂ ಹೊಸ ಬಾಳಿನ ಕಡೆಗೆ ಹೆಜ್ಜೆ ಹಾಕಲು ತಯಾರಾಗಿದ್ದಾರೆ. ಮೇ 21 ರಂದು ಬ್ರೋ ಗೌಡ ಹಸೆಮಣೆ ಏರಲಿದ್ದಾರೆ.

ಬ್ರೋ ಗೌಡ ಅವರು ಪ್ರೇಮಿಗಳ ದಿನದಂದೇ ನಿಶ್ಚಿತಾರ್ಥ ಆಗಿರುವ ಕುರಿತ ವಿಡಿಯೋ ಹಂಚಿಕೊಂಡು ಎಲ್ಲರಿಗೂ ಶಾಕ್ ಕೊಟ್ಟರು. ಮೇಘನಾ ಎನ್ನುವವರ ಜತೆ ಶಮಂತ್‌ ನಿಶ್ಚಿತಾರ್ಥ ಮಾಡಿಕೊಂಡರು. ಇವರು ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಇಬ್ಬರ ಪ್ರೀತಿ ವಿಚಾರವನ್ನು ಹೇಳುವುದಕ್ಕೆಂದೆ ಒಂದು ಬ್ಯೂಟಿಫುಲ್ ವಿಡಿಯೋ ಮಾಡಿದ್ದರು.

ಸದ್ಯ ಶಮಂತ್​ ಬ್ರೋ ಗೌಡ ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದಿದ್ದಾರೆ. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೊನ್ನೆಯಷ್ಟೇ ನಟ ಶಮಂತ್ ಭಾವಿ ಪತ್ನಿ ತಮ್ಮ ಬ್ಯಾಚುಲರ್ ಪಾರ್ಟಿ ಕೂಡ ಮಾಡಿಕೊಂಡಿದ್ದರು. ಮೇಘನಾ ಅವರ ಸ್ನೇಹಿತರು ರೆಸಾರ್ಟ್​ವೊಂದಲ್ಲಿ ಬ್ಯಾಚುಲರ್ ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ಮೇಘನಾ ಅವರು ಮಸ್ತ್​ ಎಂಜಾಯ್ ಮಾಡಿ ಈ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಪಾತ್ರದ ಮೂಲಕ ಶಮಂತ್ ಕನ್ನಡಿಗರ ಮನೆ ಮನಗಳಿಗೆ ಹತ್ತಿರವಾದರು. ಸುಮಾರು 2 ವರ್ಷಗಳ ಕಾಲ ವೈಷ್ಣವ್ ಪಾತ್ರಕ್ಕೆ ಜೀವ ತುಂಬಿದ್ದಾರೆ ಶಮಂತ್‌. ಯೂಟ್ಯೂಬರ್ ಆಗಿ ಗುರುತಿಸಿಕೊಂಡಿದ್ದ ಬ್ರೋ ಗೌಡ, ಕನ್ನಡಿಗರಿಗೆ ಪರಿಚಿತರಾಗಿದ್ದು, ಬಿಗ್ ಬಾಸ್ ಸೀಸನ್ 8ರ ಮೂಲಕ. ಬಿಗ್ ಬಾಸ್ ನಲ್ಲಿ ತನ್ನ ಹಾಡು, ಸ್ಪರ್ಧೆಯ ಮೂಲಕ ಜನಮನ ಗೆದ್ದು, ಲಕ್ಷ್ಮೀ ಬಾರಮ್ಮ ಮೂಲಕ ಜನಪ್ರಿಯತೆ ಪಡೆದರು.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಬ್ರೋ ಗೌಡ ಅವರ ಚೊಚ್ಚಲ ಧಾರಾವಾಹಿಯಾಗಿತ್ತು. ಮೊದಲ ಧಾರಾವಾಹಿಯಲ್ಲೇ ಅದ್ಭುತವಾಗಿ ನಟಿಸುವ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದರು ಶಮಂತ್‌. ಮದುವೆ ಜೊತೆಗೆ ಶಮಂತ್​ಗೆ ಇತ್ತೀಚೆಗಷ್ಟೆ ಮತ್ತೊಂದು ಬಂಪರ್ ಆಫರ್ ಕೂಡ ಬಂದಿದೆಯಂತೆ. ಮೊದಲ ಧಾರಾವಾಹಿ ಮುಕ್ತಾಯವಾದ ಬೆನ್ನಲ್ಲೇ ಅವರ ಅದೃಷ್ಟ ಬದಲಾಗಿದ್ದು ತೆಲುಗಿಗೆ ಪದಾರ್ಪಣೆ ಮಾಡಲಿದ್ದಾರೆ. ತೆಲುಗಿನ ಹೊಸ ಧಾರಾವಾಹಿಯೊಂದಕ್ಕೆ ನಾಯಕನಾಗಿ ಬ್ರೋ ಗೌಡ ಆಯ್ಕೆಯಾಗಿದ್ದಾರೆ.

Chaithra Kundapura: ‘ಕುಡುಕ ತಂದೆ’: ತಂದೆಯ ಆರೋಪಕ್ಕೆ ಚೈತ್ರಾ ಕುಂದಾಪುರ ತಿರುಗೇಟು, ವೈರಲ್ ಆಗ್ತಿದೆ ಪೋಸ್ಟ್