ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sri Gandhada Gudi Serial: ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ʼಶ್ರೀ ಗಂಧದ ಗುಡಿ’

Sri Gandhada Gudi Serial: ಕಲರ್ಸ್ ಕನ್ನಡದಲ್ಲಿ ವಿನೂತನ ಧಾರಾವಾಹಿ ʼಶ್ರೀ ಗಂಧದ ಗುಡಿʼ ಅಕ್ಟೋಬರ್ 6 ರಿಂದ ಪ್ರತಿ ರಾತ್ರಿ 8ಕ್ಕೆ ನಿಮ್ಮ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ʼಕಥಾ ಕ್ರಿಯೇಷನ್ಸ್ʼ ಬ್ಯಾನರ್‌ನಲ್ಲಿ ಪರೀಕ್ಷಿತ್ ಎಂ.ಎಸ್. - ಪ್ರದೀಪ್ ಆಜ್ರಿ ನಿರ್ಮಾಣದಲ್ಲಿ ಕಿರುತೆರೆಗೆ ಬರುತ್ತಿರುವ ಈ ಧಾರಾವಾಹಿಯ ನಿರ್ದೇಶಕರು- ಪ್ರಕಾಶ್ ಮುಚ್ಚಳಗುಡ್ಡ. ತಾರಾಗಣದಲ್ಲಿ ಶಿಶಿರ್ ಶಾಸ್ತ್ರಿ, ಭವಿಷ್, ಸಂಜನಾ ಬುರ್ಲಿ, ಕರಿಸುಬ್ಬು, ಅಶ್ವಥ್ ನೀನಾಸಂ, ಜಯಂತ್, ಗಗನ್ ದೀಪ್ ಮುಂತಾದವರಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ʼಶ್ರೀ ಗಂಧದ ಗುಡಿ’

-

Profile Siddalinga Swamy Sep 29, 2025 7:34 PM

ಬೆಂಗಳೂರು: ಕರ್ನಾಟಕದಲ್ಲಿ ಸೌಂದರ್ಯವಿದೆ, ಸೌಕರ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಔದಾರ್ಯವಿದೆ. ಕರುನಾಡು ಎಲ್ಲರನ್ನ ಪ್ರೀತಿಯಿಂದ ಸ್ವೀಕಾರ ಮಾಡುತ್ತೆ. ಕರುನಾಡ ತಾಯಿ ಎಲ್ಲರನ್ನ ತನ್ನ ಮಕ್ಕಳಂತೆ ನೋಡ್ತಾಳೆ, ಕಾಪಾಡ್ತಾಳೆ. ಕರುಳ ಕುಡಿಗಳ ಸುಖಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳೋ ಮಿಡಿವ ತಾಯಿ ಅವಳು. ಅವಳು ಪ್ರೀತಿಯ ಕುಡಿ, ಅವಳು ನೆಲೆಸಿದ ನಾಡು ಶ್ರೀ ಗಂಧದ ಗುಡಿ.

ʼಶ್ರೀ ಗಂಧದ ಗುಡಿʼ ನಮ್ಮ ಕನ್ನಡ ಮಣ್ಣಿನ ಸುಗಂಧ ಹೊಂದಿದ ಅಂದದ ಚೆಂದದ ಪದ. ಅಪ್ಪಟ ಕನ್ನಡತನವನ್ನ ಹೊರ ಹೊಮ್ಮಿಸೋ ಪದ. ಇಂತಹ ಅಪ್ಪಟ ಕನ್ನಡತನದಿಂದ ಮನೆ ಮಾತಾಗಿರೋದು ಕಲರ್ಸ್ ಕನ್ನಡ ಚಾನೆಲ್. ಮನ ಮುಟ್ಟೋ ಕತೆಗಳನ್ನ ಕನ್ನಡಿಗರ ಮನೆ ಮನಗಳಿಗೆ ಮುಟ್ಟಿಸ್ತೀರೋ ಕಲರ್ಸ್ ಕನ್ನಡ ಚಾನೆಲ್ ಇದೀಗ ‘ಶ್ರೀ ಗಂಧದ ಗುಡಿ, ಪ್ರೀತಿಯ ಕುಡಿʼ ಅನ್ನೋ ವಿನೂತನ ಧಾರಾವಾಹಿಯನ್ನ (Sri Gandhada Gudi Serial) ಪ್ರೇಕ್ಷಕರಿಗೆ ತಲುಪಿಸ್ತಿದೆ. ‘ಶ್ರೀಗಂಧದ ಗುಡಿʼ ಅನ್ನೋದು ಹೆಣ್ಣು ದಿಕ್ಕಿಲ್ಲದ ಗಂಡಸರೇ ಒಟ್ಟಾಗಿ ಬದುಕ್ತಿರೋ ಮನೆ. ಆ ಮನೆಗೆ ಬರೋ ಸೊಸೆ, ಮನೆ ಸ್ಥಿತಿ ಮತ್ತು ಮನಸ್ಥಿತಿಯನ್ನು ಬದಲಾಯಿಸ್ತಾಳಾ?ʼ ಅನ್ನೋ ಕತೆ ಹೇಳೋ ಈ ಕೌಟುಂಬಿಕ ಧಾರಾವಾಹಿ ಅಕ್ಟೋಬರ್ 6 ರಿಂದ ಪ್ರತಿ ರಾತ್ರಿ 8ಕ್ಕೆ ನಿಮ್ಮ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.

ಅಪರೂಪದ ಕತೆ

ನಟ ಡಾ. ರಾಜಕುಮಾರ್ ಅವರ ದೊಡ್ಡ ಅಭಿಮಾನಿಯಾಗಿರೋ ಅಪ್ಪ ನಟರಾಜ ತನ್ನ ಮಕ್ಕಳಿಗೆ ಮುತ್ತುರಾಜ, ಸತ್ಯ ಹರಿಶ್ಚಂದ್ರ, ಕಂಠೀರವ, ಮಯೂರ ಎಂದು ಹೆಸರಿಟ್ಟಿದ್ದಾನೆ. ಈ ನಾಲ್ಕು ಗಂಡು ಮಕ್ಕಳೋ ನಾಲ್ಕು ದಿಕ್ಕುಗಳು. ಒಬ್ಬೊಬ್ರದ್ದು ಒಂದೊಂದು ಹಾದಿ. ತಂದೆ ನಟರಾಜ ಕುಡುಕ, ಗೊತ್ತು ಗುರಿಯಿಲ್ಲದ ಬೇಜವಾಬ್ದಾರಿಯ ಮನುಷ್ಯ. ಅವನು ಸಂಪಾದಿಸಿರೋದು ಕೆಟ್ಟ ಹೆಸರು ಮಾತ್ರ. ಅವನಿಂದ ಮನೆಯ ಮಕ್ಕಳಿಗೂ ಕೆಟ್ಟ ಹೆಸರು. ಇಂಥ ಮನೆಗೆ ಯಾವ ಹೆಣ್ಣೂ ಬರೋಕೆ ಸಾಧ್ಯವಿಲ್ಲ, ಬಂದರೂ ಬದುಕೋಕೆ ಅಸಾಧ್ಯ ಅಂತ ಊರಿನ ಜನ ಮಾತಾಡ್ಕೋತಾರೆ.

ಈ ಮನೆಗೆ ಹುಡುಗಿಯೊಬ್ಬಳು ಬರ್ತಾಳೆ. ಅವಳು ಯಾಕೆ ಬರ್ತಾಳೆ?ಯಾವ ಕಾರಣಕ್ಕೆ? ಬಂದ ಮೇಲೆ ಅದೇ ಮನೆಯಲ್ಲಿ ಯಾಕೆ ಉಳೀತಾಳೆ? ಉಳಿದ ಮೇಲೆ ಯಾವ ಕಾರಣಕ್ಕಾಗಿ ಆ ಮನೆಯನ್ನ ಸರಿ ಮಾಡ್ತಾಳೆ? ಹೇಗೆ ಸರಿ ಮಾಡ್ತಾಳೆ? ಅನ್ನೋ ಕತೆಯನ್ನ ಇದು ಹೇಳುತ್ತೆ. ಒಂದು ಹೆಣ್ಣು ಮನೆಗೆ ಬಂದಾಗ ಅಲ್ಲಿ ಆ ಮನೆಗೆ ತಾಯಿ, ತಂಗಿ, ಅಕ್ಕ, ಅತ್ತಿಗೆ, ಸೊಸೆ, ಮಡದಿಯೊಬ್ಬಳು ಸಿಗ್ತಾಳೆ. ಅವಳು ಇಡೀ ಮನೆಯನ್ನ ಮಮತೆಯ ಮಡಿಲಿನಲ್ಲಿ ತೂಗಿಸಿಕೊಂಡು ಹೋಗ್ತಾಳೆ; ನಮ್ಮ ಕನ್ನಡ ತಾಯಿ ತನ್ನ ಮಕ್ಕಳನ್ನು ಸಲಹೋ ಹಾಗೆ.

ʼಕಥಾ ಕ್ರಿಯೇಷನ್ಸ್ʼ ಬ್ಯಾನರ್‌ನಲ್ಲಿ ಪರೀಕ್ಷಿತ್ ಎಂ.ಎಸ್. - ಪ್ರದೀಪ್ ಆಜ್ರಿ ನಿರ್ಮಾಣದಲ್ಲಿ ಕಿರುತೆರೆಗೆ ಬರುತ್ತಿರುವ ಈ ಧಾರಾವಾಹಿಯ ನಿರ್ದೇಶಕರು- ಪ್ರಕಾಶ್ ಮುಚ್ಚಳಗುಡ್ಡ. ತಾರಾಗಣದಲ್ಲಿ ಶಿಶಿರ್ ಶಾಸ್ತ್ರಿ, ಭವಿಷ್, ಸಂಜನಾ ಬುರ್ಲಿ, ಕರಿಸುಬ್ಬು, ಅಶ್ವಥ್ ನೀನಾಸಂ, ಜಯಂತ್, ಗಗನ್ ದೀಪ್ ಮುಂತಾದವರಿದ್ದಾರೆ.

ಈ ಸುದ್ದಿಯನ್ನೂ ಓದಿ | Navaratri Nailart 2025: ಬ್ಯೂಟಿ ಲೋಕದಲ್ಲಿ ಟ್ರೆಂಡಿಯಾಯ್ತು ನವರಾತ್ರಿ ನೇಲ್ ಆರ್ಟ್