ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಬಹಳ ರೋಚಕತೆ ಸೃಷ್ಟಿಸಿರುವ ಡಬಲ್ ಎಲಿಮಿನೇಷನ್ನ ಮೊದಲ ಹಂತ ಇಂದು ನಡೆಯಲಿದೆ ಎಂದು ಕಿಚ್ಚ ಸುದೀಪ್ ವೇದಿಕೆ ಮೇಲೆ ಘೋಷಣೆ ಮಾಡಿದ್ದಾರೆ. ಇಂದು ಸೀಸನ್ 11ರ ಕೊನೆಯ ಪಂಚಾಯಿತಿ ನಡೆಯಲಿದ್ದು, ಇದರಲ್ಲಿ ಓರ್ವ ಸ್ಪರ್ಧಿ ಮನೆಯಿಂದ ಆಚೆ ಬರಲಿದ್ದಾರೆ. ಇದಕ್ಕಾ ಇಡೀ ಕರ್ನಾಟಕವೇ ಕಾದು ಕುಳಿತಿದೆ. ಸದ್ಯ ಕಲರ್ಸ್ ಕನ್ನಡ ಹೊಸ ಪ್ರೊಮೊ ಒಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಸುದೀಪ್ ಅವರು ಬಿಗ್ ಬಾಸ್ ಟ್ರೋಫಿಯನ್ನೂ ರಿವೀಲ್ ಮಾಡಿದ್ದಾರೆ.
ಕಳೆದ ವಾರ ಬಿಗ್ ಬಾಸ್ ಹೇಳಿದಂತೆ ಮಿಡ್ ವೀಕ್ ಎಲಿಮಿನೇಷನ್ ನಡೆಯಬೇಕಿತ್ತು. ಆದರೆ, ಆಟದಲ್ಲಿ ಧನರಾಜ್ ಆಚಾರ್ ಮೋಸ ಮಾಡಿದ ಕಾರಣ ಮಿಡ್ ವೀಕ್ ಎಲಿಮಿನೇಷನ್ ಅನ್ನು ಬಿಗ್ ಬಾಸ್ ರದ್ದು ಮಾಡಿದ್ದರು. ಬಿಗ್ ಬಾಸ್ ಇತಿಹಾಸದಲ್ಲಿ ಈ ರೀತಿ ಆಗಿದ್ದು ಇದೇ ಮೊದಲ ಬಾರಿ. ಕಿಚ್ಚ ಸುದೀಪ್ ಅವರು ವೇದಿಕೆ ಮೇಲೆ ಬರುತ್ತಿದ್ದಂತೆ, ಇಲ್ಲಿವರೆಗೂ ಬಿಗ್ ಬಾಸ್ ಹೇಳಿದ್ದನ್ನೇ ಮಾಡುತ್ತಿದ್ದರು. ಆದರೆ ಈ ವಾರ ಬಿಗ್ ಬಾಸ್ ಇತಿಹಾಸದಲ್ಲೇ ಬಹು ದೊಡ್ಡ ಬದಲಾವಣೆ ಆಗಿದೆ ಎಂದರು.
ಈ ವಾರದ ಮಧ್ಯೆಯೇ ಮುಖ್ಯದ್ವಾರ ತೆರೆದಿದ್ದರೂ ಯಾರನ್ನೂ ಎಲಿಮಿನೇಷನ್ ಮಾಡಿಲ್ಲ. ಮಿಡ್ ವೀಕ್ ಎಲಿಮಿನೇಷನ್ ಅನ್ನು ದಿಢೀರ್ ತಡೆ ಹಿಡಿಯಲು ಕಾರಣವೇನು? ಅಸಲಿಗೆ ಆಗಿದ್ದೇನು?. ಎಲ್ಲವನ್ನೂ ಈ ಸೀಸನ್‌ನ ಕೊನೆಯ ಪಂಚಾಯಿತಿಯಲ್ಲಿ ಮಾತಾಡೋಣ ಎಂದು ಸುದೀಪ್ ಹೇಳಿದ್ದಾರೆ.
ಬಳಿಕ ಎಲಿಮಿನೇಷನ್ ಕುರಿತು ಸುದೀಪ್ ದೊಡ್ಡ ಘೋಷಣೆ ಮಾಡಿದ್ದಾರೆ. ಡಬಲ್ ಎಲಿಮಿನೇಷನ್ ಆಗೋದಂತು ಹೌದು, ಇದರಲ್ಲಿ ಇವತ್ತು ಒಬ್ರು ಆಚೆ ಬರಲಿದ್ದಾರೆ ಎಂದಿದ್ದಾರೆ. ನಾಮಿನೇಷನ್ನಲ್ಲಿರುವ ಕಂಟೆಸ್ಟೆಂಟ್ ಆ್ಯಕ್ಟಿವಿಟಿ ರೂಮ್ಗೆ ಬರಬೇಕು. ನಿಮ್ಮಲ್ಲಿ ಒಬ್ರು ಈ ಮನೆಗೆ ವಾಪಾಸ್ ಬರಲ್ಲ. ಸೂಟ್ ಕೇಸ್ ಒಳಗಡೆ ನಿಮ್ಮ ಭವಿಷ್ಯಾ ಇದೆ ಎಂದು ಹೇಳಿದ್ದಾರೆ. ನಾಮಿನೇಟ್ ಆದ ಸ್ಪರ್ಧಿಗಳ ಎದುರು ಸೂಟ್ ಕೇಸ್ ಇಡಲಾಗಿದೆ. ಇದರ ಒಳಗಡೆ ಯಾರು ಸೇಫ್.. ಯಾರು ಔಟ್ ಎಂದು ಬರೆಯಲಾಗಿದೆ. ಈ ಮೂಲಕ ಇಂದೇ ಒಬ್ಬರು ದೊಡ್ಮನೆಯಿಂದ ಹೊರಬೀಳಲಿದ್ದಾರೆ.
ನಾಮಿನೇಟ್ ಆದವರು ಯಾರು?:
ಮನೆಯೊಳಗಿರುವ ಏಳು ಸ್ಪರ್ಧಿಗಳ ಪೈಕಿ ಐದು ಮಂದಿ ನಾಮಿನೇಟ್ ಆಗಿದ್ದಾರೆ. ವಾರ ಮನೆಯಿಂದ ಆಚೆ ಹೋಗಲು ಉಗ್ರಂ ಮಂಜು, ಗೌತಮಿ ಜಾಧವ್, ಧನರಾಜ್ ಆಚಾರ್, ರಜತ್ ಕಿಶನ್, ಭವ್ಯಾ ಗೌಡ ನಾಮಿನೇಟ್ ಆಗಿದ್ದಾರೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಭವ್ಯಾ ಅವರನ್ನು ಹೊರತುಪಡಿಸಿ ಇನ್ಯಾರೂ ಕೂಡ ತ್ರಿವಿಕ್ರಮ್ ಅವರ ಹೆಸರನ್ನು ತೆಗೆದುಕೊಂಡೇ ಇಲ್ಲ. ನಾಮಿನೇಟ್ ಆಗಬೇಕು ಎಂದರೆ ಕನಿಷ್ಠ ಎರಡು ವೋಟ್ ಬೀಳಬೇಕು. ಒಂದು ವೋಟ್ ಬಿದ್ದರೆ ಬಿಗ್ ಬಾಸ್ ಅದನ್ನು ಪರಿಗಣಿಸುವುದಿಲ್ಲ. ಹೀಗಾಗಿ, ತ್ರಿವಿಕ್ರಮ್ ನಾಮಿನೇಷನ್‌ನಿಂದ ಪಾರಾಗಿ ಫಿನಾಲೆ ವಾರ ತಲುಪಿದರು.
ಇನ್ನು ಅಲ್ಟಿಮೇಟ್ ಕ್ಯಾಪ್ಟನ್ ಹನುಮಂತು ಅವರಿಗೆ ಬಿಗ್ ಬಾಸ್ ವಿಶೇಷ ಅಧಿಕಾರ ಕೊಟ್ಟರು. ಹನುಮಂತುಗೆ ಬಿಗ್ ಬಾಸ್ ಈ ಸೀಸನ್‌ನ ಉತ್ತಮ ಸ್ಪರ್ಧಿಯನ್ನು ನೀವು ನಾಮಿನೇಷನ್‌ನಿಂದ ಪಾರು ಮಾಡಬೇಕು. ನಿಮ್ಮ ಆಯ್ಕೆಯನ್ನು ಯೋಚಿಸಿ ಘೋಷಿಸಿ ಎನ್ನಲಾಗಿತ್ತು. ಆಗ ಅಲ್ಟಿಮೇಟ್ ಕ್ಯಾಪ್ಟನ್ ಹನುಮಂತ ಅವರು ಇಡೀ ಸೀಸನ್‌ನ ಪ್ರದರ್ಶನ ಕಂಡು ಮೋಕ್ಷಿತಾ ಹೆಸರು ತೆಗೆದುಕೊಂಡಿದ್ದಾರೆ. ಈ ಮೂಲಕ ಇವರು ಕೂಡ ಫಿನಾಲೆ ವಾರ ತಲುಪಿದ್ದಾರೆ.
BBK 11: ವೇದಿಕೆ ಮೇಲೆ ಬಂದ್ರು ಕಿಚ್ಚ: ಶಾಕಿಂಗ್ ಎಲಿಮಿನೇಷನ್ಗೆ ಕ್ಷಣಗಣನೆ