BBK 11: ವೇದಿಕೆ ಮೇಲೆ ಬಂದ್ರು ಕಿಚ್ಚ: ಶಾಕಿಂಗ್ ಎಲಿಮಿನೇಷನ್ಗೆ ಕ್ಷಣಗಣನೆ
ಇದೀಗ ಕಿಚ್ಚ ಸುದೀಪ್ ವಾರದ ಕೊನೆಯ ಪಂಚಾಯಿತಿ ನಡೆಸಲು ಬಂದಿದ್ದಾರೆ. ವೇದಿಕೆ ಮೇಲೆ ಬರುತ್ತಿದ್ದಂತೆ, ಇಲ್ಲಿವರೆಗೂ ಬಿಗ್ ಬಾಸ್ ಹೇಳಿದ್ದನ್ನೇ ಮಾಡುತ್ತಿದ್ದರು. ಆದರೆ ಈ ವಾರ ಬಿಗ್ ಬಾಸ್ ಇತಿಹಾಸದಲ್ಲೇ ಬಹು ದೊಡ್ಡ ಬದಲಾವಣೆ ಆಗಿದೆ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಅಂತಿಮ ಘಟ್ಟದಲ್ಲಿದೆ. ಇಂದಿಗೆ ಸರಿಯಾಗಿ 8 ದಿನಗಳಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಹೀಗಿರುವಾಗ ಇಂದು ಈ ಸೀಸನ್ನ ಕೊನೆಯ ಪಂಚಾಯಿತಿಗೆ ಕ್ಷಣಗಣನೆ ಶುರುವಾಗಿದೆ. ಮುಂದಿನ ವಾರ ಫಿನಾಲೆ ಆಗಿರುವ ಕಾರಣ ಇದು ಸೀಸನ್ 11ರ ಕೊನೆಯ ಪಂಚಾಯಿತಿ ಆಗಿದೆ. ಅಲ್ಲದೆ ಇಂದು ಎಲ್ಲ ಸ್ಪರ್ಧಿಗಳಿಗೆ ಮಹತ್ವದ ದಿನವಾಗಿದೆ. ಯಾಕೆಂದರೆ ಈ ವೀಕೆಂಡ್ ಡಬಲ್ ಎಲಿಮಿನೇಷನ್ ನಡೆಯಲಿದೆ.
ಇದೀಗ ಕಿಚ್ಚ ಸುದೀಪ್ ವಾರದ ಕೊನೆಯ ಪಂಚಾಯಿತಿ ನಡೆಸಲು ಬಂದಿದ್ದಾರೆ. ವೇದಿಕೆ ಮೇಲೆ ಬರುತ್ತಿದ್ದಂತೆ, ಇಲ್ಲಿವರೆಗೂ ಬಿಗ್ ಬಾಸ್ ಹೇಳಿದ್ದನ್ನೇ ಮಾಡುತ್ತಿದ್ದರು. ಆದರೆ ಈ ವಾರ ಬಿಗ್ ಬಾಸ್ ಇತಿಹಾಸದಲ್ಲೇ ಬಹು ದೊಡ್ಡ ಬದಲಾವಣೆ ಆಗಿದೆ. ಈ ವಾರದ ಮಧ್ಯೆಯೇ ಮುಖ್ಯದ್ವಾರ ತೆರೆದಿದ್ದರೂ ಯಾರನ್ನೂ ಎಲಿಮಿನೇಷನ್ ಮಾಡಿಲ್ಲ. ಮಿಡ್ ವೀಕ್ ಎಲಿಮಿನೇಷನ್ ಅನ್ನು ದಿಢೀರ್ ತಡೆ ಹಿಡಿಯಲು ಕಾರಣವೇನು? ಅಸಲಿಗೆ ಆಗಿದ್ದೇನು?. ಎಲ್ಲವನ್ನೂ ಈ ಸೀಸನ್ನ ಕೊನೆಯ ಪಂಚಾಯಿತಿಯಲ್ಲಿ ಮಾತಾಡೋಣ ಎಂದು ಸುದೀಪ್ ಹೇಳಿದ್ದಾರೆ.
ಸದ್ಯ ಮನೆಯಲ್ಲಿರುವ ಏಳು ಸ್ಪರ್ಧಿಗಳ ಪೈಕಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಆಚೆ ಬರಲಿದ್ದಾರೆ. ಒಬ್ಬರು ಇಂದು ಮತ್ತೊಬ್ಬರು ನಾಳೆ ಎಲಿಮಿನೇಟ್ ಆಗಲಿದ್ದಾರೆ ಎನ್ನಲಾಗಿದೆ. ಉಳಿದ ಐದು ಸ್ಪರ್ಧಿಗಳು ಫಿನಾಲೆ ವಾರಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಕಿಚ್ಚನ ಸಾರಥ್ಯದಲ್ಲಿ ಇಂದು ಮಹತ್ವದ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಈ ವಾರ ಮನೆಯಿಂದ ಆಚೆ ಹೋಗಲು ಉಗ್ರಂ ಮಂಜು, ಗೌತಮಿ ಜಾಧವ್, ಧನರಾಜ್ ಆಚಾರ್, ರಜತ್ ಕಿಶನ್, ಭವ್ಯಾ ಗೌಡ ನಾಮಿನೇಟ್ ಆಗಿದ್ದಾರೆ.
ನಾಮಿನೇಷನ್ ಪ್ರಕ್ರಿಯೆಯಲ್ಲಿ ಭವ್ಯಾ ಅವರನ್ನು ಹೊರತುಪಡಿಸಿ ಇನ್ಯಾರೂ ಕೂಡ ತ್ರಿವಿಕ್ರಮ್ ಅವರ ಹೆಸರನ್ನು ತೆಗೆದುಕೊಂಡೇ ಇಲ್ಲ. ನಾಮಿನೇಟ್ ಆಗಬೇಕು ಎಂದರೆ ಕನಿಷ್ಠ ಎರಡು ವೋಟ್ ಬೀಳಬೇಕು. ಹೀಗಾಗಿ, ಅವರು ನಾಮಿನೇಷನ್ನಿಂದ ಪಾರಾಗಿ ಫಿನಾಲೆ ವಾರ ತಲುಪಿದರು. ಇನ್ನು ಅಲ್ಟಿಮೇಟ್ ಕ್ಯಾಪ್ಟನ್ ಹನುಮಂತು ಅವರಿಗೆ ಬಿಗ್ ಬಾಸ್ ವಿಶೇಷ ಅಧಿಕಾರ ಕೊಟ್ಟರು.
ಹನುಮಂತುಗೆ ಬಿಗ್ ಬಾಸ್ ಈ ಸೀಸನ್ನ ಉತ್ತಮ ಸ್ಪರ್ಧಿಯನ್ನು ನೀವು ನಾಮಿನೇಷನ್ನಿಂದ ಪಾರು ಮಾಡಬೇಕು. ನಿಮ್ಮ ಆಯ್ಕೆಯನ್ನು ಯೋಚಿಸಿ ಘೋಷಿಸಿ ಎನ್ನಲಾಗಿತ್ತು. ಆಗ ಅಲ್ಟಿಮೇಟ್ ಕ್ಯಾಪ್ಟನ್ ಹನುಮಂತ ಅವರು ಮೋಕ್ಷಿತಾ ಹೆಸರು ತೆಗೆದುಕೊಂಡರು. ಹೀಗಾಗಿ ಮೋಕ್ಷಿತಾ ನಾಮಿನೇಷನ್ನಿಂದ ಪಾರಾಗಿ ಫಿನಾಲೆ ವಾರ ತಲುಪಿದ್ದಾರೆ.
BBK 11: 5 ಮಂದಿ ನಾಮಿನೇಟ್: ಕುತೂಹಲ ಕೆರಳಿಸಿದ ವಾರದ ಕತೆ ಕಿಚ್ಚನ ಜೊತೆ