Gauthami Jadav: ಗೌತಮಿ ಜೊತೆ ವನದುರ್ಗಾ ಸಾನಿಧ್ಯಕ್ಕೆ ಭೇಟಿ ಕೊಟ್ಟ ಉಗ್ರಂ ಮಂಜು ಕುಟುಂಬ
ಇದೀಗ ಗೌತಮಿ ಅವರು ಇಡೀ ಉಗ್ರಂ ಮಂಜು ಕುಟುಂಬವನ್ನು ವನದುರ್ಗೆ ಸಾನಿಧ್ಯಕ್ಕೆ ಕರೆದುಕೊಂಡು ಬಂದಿದ್ದಾರೆ. ಮಂಜು ಫ್ಯಾಮಿಲಿಗೆ ಗೌತಮಿ ಜಾಧವ್ ಅವರ ಪತಿ ಅಭಿಷೇಕ್ ಕಾಸರಗೋಡು ಕೂಡ ಸಾಥ್ ನೀಡಿದ್ದಾರೆ. ಉಗ್ರಂ ಮಂಜು ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Ugramm Manju vanadurgha

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಕ್ತಾಯವಾದ ಬಳಿಕ ಸ್ಪರ್ಧಿಗಳು ತಮ್ಮ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೆಲ ಸ್ಪರ್ಧಿಗಳಿಗೆ ಸಿನಿಮಾ, ಸೀರಿಯಲ್ಗಳಿಂದ ಆಕರ್ಷಕ ಆಫರ್ ಬರುತ್ತಿದ್ದರೆ ಇನ್ನೂ ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿನ್ನರ್ ಹನುಮಂತ, ಧನರಾಜ್, ರಜತ್, ಚೈತ್ರ ಸೇರಿದಂತೆ ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ನಲ್ಲಿ ಭಾಗವಹಿಸುತ್ತಿದ್ದಾರೆ. ರನ್ನರ್-ಅಪ್ ತ್ರಿವಿಕ್ರಮ್ ಮುದ್ದು ಸೊಸೆ ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ. ಉಗ್ರಂ ಮಂಜು ಕೂಡ ಹೊಸ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
ಆದರೆ, ಗೌತಮಿ ಜಾಧವ್ ಅವರು ಬಿಗ್ ಬಾಸ್ ಶೋ ಮುಗಿದ ಬಳಿಕ ಹೆಚ್ಚಿನ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಯಾವುದೇ ಸೀರಿಯಲ್ ಅಥವಾ ಸಿನಿಮಾ ಆಫರ್ ಬಗ್ಗೆಯೂ ಸುಳಿವು ನೀಡಿಲ್ಲ. ಹೆಚ್ಚು ಕರಾವಳಿಯಲ್ಲಿ ಬೀಡುಬಿಟ್ಟಿದ್ದರು. ಅನೇಕ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಟೆಂಪಲ್ ರನ್ ನಡೆಸಿದರು. ಇದೇ ಸಂದರ್ಭ ತನ್ನ ಆತ್ಮೀಯ ಮಂಜು ಅವರನ್ನು ವನದುರ್ಗೆ ದೇವಸ್ಥಾನಕ್ಕೆ ಕೂಡ ಕರೆದುಕೊಂಡು ಹೋಗಿದ್ದರು.
ಇದೀಗ ಗೌತಮಿ ಅವರು ಇಡೀ ಉಗ್ರಂ ಮಂಜು ಕುಟುಂಬವನ್ನು ವನದುರ್ಗೆ ಸಾನಿಧ್ಯಕ್ಕೆ ಕರೆದುಕೊಂಡು ಬಂದಿದ್ದಾರೆ. ಮಂಜು ಫ್ಯಾಮಿಲಿಗೆ ಗೌತಮಿ ಜಾಧವ್ ಅವರ ಪತಿ ಅಭಿಷೇಕ್ ಕಾಸರಗೋಡು ಕೂಡ ಸಾಥ್ ನೀಡಿದ್ದಾರೆ. ಉಗ್ರಂ ಮಂಜು ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕುಟುಂಬ ಸಮೇತವಾಗಿ ವನದುರ್ಗ ತಾಯಿ ಆಶೀರ್ವಾದ ಪಡೆದ ಕ್ಷಣ ಎಂಬ ಕ್ಯಾಪ್ಶನ್ ನೀಡಿದ್ದು ಗಮನ ಸೆಳೆದಿದೆ. ಈ ಮೂಲಕ ಶ್ರೀವನದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿ, ತಾಯಿಯ ಆಶೀರ್ವಾದ ಪಡೆದುಕೊಂಡ ಮಂಜು ಕುಟುಂಬ.
"ಗೌತಮಿ ಮೇಡಂ ಮತ್ತು ಮಂಜು ಅಣ್ಣನ ಸ್ನೇಹ ನಿಶ್ಕಲ್ಮಶವಾದದ್ದು.. ಒಳ್ಳೆಯವರಿಗೆ ಒಳ್ಳೆಯದೆ ಆಗಲಿ, ಕೆಟ್ಟದ್ದು ಬಯಸುವವರಿಗೂ ಒಳ್ಳೆಯದನ್ನೇ ಮಾಡಲಿ ವನದುರ್ಗಮ್ಮ" ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ವನದುರ್ಗಾ ದೇವಸ್ಥಾನ ಮಂಗಳೂರಿನಿಂದ 30 ಕಿಲೋಮೀಟರ್ ದೂರದಲ್ಲಿದೆ. ಬಂಟ್ವಾಳದ ಬಿ. ಸಿ ರೋಡ್ ನಲ್ಲಿ ವನದುರ್ಗಾ ದೇವಸ್ಥಾನವಿದೆ. ಶ್ರೀ ವನದುರ್ಗಾ ತಥಾ ಜಲಾಂತರ್ಗತ ನಾಗ ಸಾನಿಧ್ಯ ದೇವಸ್ಥಾನದ ಹೆಸರು. ಶಕ್ತಿಯುತ ದೇವತೆ ಇಲ್ಲಿ ನೆಲೆಸಿದ್ದಾಳೆ ಎಂಬ ನಂಬಿಕೆ ಭಕ್ತರಲ್ಲಿದೆ. ಪ್ರತಿ ನಿತ್ಯ ನೂರಾರು ಮಂದಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ.
Bhagya Lakshmi Serial: ಕೈ ತುತ್ತಿಗೆ ಬಂದಿಲ್ಲ ಆರ್ಡರ್: ಬೀದಿಗಳಲ್ಲಿ ಫ್ರೀ ಆಗಿ ಊಟ ಬಡಿಸಿದ ಭಾಗ್ಯ