ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Drone Prathap: ಬಂದ ಹಣವನ್ನೆಲ್ಲ ಡ್ರೋನ್ ಪ್ರತಾಪ್ ಏನು ಮಾಡಿದ್ರಂತೆ ಗೊತ್ತಾ?: ತಂದೆ ಹೇಳಿದ್ರು ಅಚ್ಚರಿ ವಿಚಾರ

ಡ್ರೋನ್ ಪ್ರತಾಪ್ ಝೀ ಕನ್ನಡದಲ್ಲಿ ನಡೆಯುತ್ತಿರುವ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನಲ್ಲಿ ಕಾಣಿಸಿಕೊಂಡಿದ್ದು ಇಲ್ಲಿ ಇವರ ಹವಾ ಭರ್ಜರಿ ಆಗಿದೆ. ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ ಶೋನಲ್ಲಿ ಅಮ್ಮ ಐ ಲವ್ ಯೂ ಸ್ಪೆಷಲ್‌ ಸಂಚಿಕೆ ಪ್ರಸಾರವಾಗುತ್ತಿದ್ದು, ಇಲ್ಲಿ ಪ್ರತಾಪ್ ಕುಟುಂಬದವರು ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಬಂದ ಹಣವನ್ನೆಲ್ಲ ಡ್ರೋನ್ ಪ್ರತಾಪ್ ಏನು ಮಾಡಿದ್ರಂತೆ ಗೊತ್ತಾ?

Drone Prathap

Profile Vinay Bhat May 7, 2025 7:38 AM

ಬಿಗ್ ​ಬಾಸ್ ಕನ್ನಡ​ ಸೀಸನ್​ 10ರ ರನ್ನರ್​ ಅಪ್​ ಡ್ರೋನ್​ ಪ್ರತಾಪ್​ (Drone Prathap) ಇತ್ತೀಚಿನ ದಿನಗಳಲ್ಲಿ ಸದಾ ​ಸುದ್ದಿಯಲ್ಲಿರುತ್ತಾರೆ. ದೊಡ್ಮನೆಯೊಳಗೆ ಪ್ರತಾಪ್ ತುಂಬಾನೇ ಡಿಫರೆಂಟ್ ಆಗಿ ಇಡೀ ಕರ್ನಾಟಕದ ಜನತೆಯ ಮನ ಗೆದ್ದರು. ಬಿಗ್ ಬಾಸ್​ನಲ್ಲಿ ಸದಾ ಜಗಳವಾಡುತ್ತಿದ್ದ ಕಂಟೆಸ್ಟೆಂಟ್‌ಗಳ ಮಧ್ಯೆ ಇವರು ಸೈಲೆಂಟ್ ಆಗಿ ಕಾಣಿಸಿಕೊಂಡು ಕೊನೆವರೆಗೂ ಇದ್ದು, ರನ್ನರ್ ಅಪ್ ಕೂಡ ಆಗಿದ್ದರು. ಆನಂತರ ಗಿಚ್ಚಿ ಗಿಲಿಗಿಲಿ ಸೀಸನ್ 3 ರಲ್ಲೂ ಪ್ರೇಕ್ಷಕರನ್ನು ರಂಜಿಸಿ ತಮ್ಮಲ್ಲಿರುವ ಕಾಮಿಡಿ ಆ್ಯಂಗಲ್ ಅನ್ನು ಪ್ರೇಕ್ಷಕರಿಗೆ ತೋರಿಸಿದ್ದರು.

ಇದಾದ ಬಳಿಕ ಸದ್ಯ ಡ್ರೋನ್ ಪ್ರತಾಪ್ ಝೀ ಕನ್ನಡದಲ್ಲಿ ನಡೆಯುತ್ತಿರುವ ಭರ್ಜರಿ ಬ್ಯಾಚುಲರ್ಸ್​ ಸೀಸನ್ 2 ನಲ್ಲಿ ಕಾಣಿಸಿಕೊಂಡಿದ್ದು ಇಲ್ಲಿ ಇವರ ಹವಾ ಭರ್ಜರಿ ಆಗಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್​ 2 ಪ್ರಸಾರವಾಗುತ್ತಿದೆ. ಈ ಶೋಗೆ ಅಮೋಘ ರೆಸ್ಪಾನ್ಸ್ ಕೇಳಿಬರುತ್ತಿದೆ. ಹತ್ತು ಬ್ಯಾಚುಲರ್ಸ್​ಗೆ ಹತ್ತು ಸುಂದರಿಯರು ಮೆಂಟರ್ಸ್ ಆಗಿದ್ದಾರೆ. ಗಗನಾ ಜೊತೆಗೆ ಜೋಡಿಯಾಗಿರುವ ಡ್ರೋನ್​ ಪ್ರತಾಪ್ ಎಲ್ಲರ ಕಣ್ಣುಕುಕ್ಕುವಂತೆ ಮಾಡುತ್ತಿದ್ದಾರೆ.

ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್​ ಶೋನಲ್ಲಿ ಅಮ್ಮ ಐ ಲವ್ ಯೂ ಸ್ಪೆಷಲ್‌ ಸಂಚಿಕೆ ಪ್ರಸಾರವಾಗುತ್ತಿದ್ದು, ಇಲ್ಲಿ ಪ್ರತಾಪ್ ಕುಟುಂಬದವರು ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್​ನಲ್ಲಿ ಗೆದ್ದ ಹಣವನ್ನು ಅವರು ಒಳ್ಳೆಯ ಕೆಲಸಕ್ಕೆ ಬಳಕೆ ಮಾಡಿಕೊಂಡಿದ್ದರು. ಈಗ ಈ ಬಗ್ಗೆ ಅವರ ತಂದೆ ಮಾತನಾಡಿದ್ದಾರೆ.

Puttakkana Makkalu: ಪುಟ್ಟಕ್ಕನ ಮಕ್ಕಳು ಶೂಟಿಂಗ್ ನಡೆಯುವ ಮನೆಯ ತಿಂಗಳ ಬಾಡಿಗೆ ಎಷ್ಟು ಗೊತ್ತೇ?

‘ಶೋನಿಂದ ಬಂದ ಹಣವನ್ನು ಬಡವರ ಸಹಾಯಕ್ಕೆ ಬಳಕೆ ಮಾಡಿಕೊಳ್ಳುತ್ತೇನೆ ಎಂದ. ನೀನು ಗಳಿಸಿದ ಹಣ, ಹೇಗೇ ಬೇಕಿದ್ದರೂ ಬಳಸಿಕೋ ಎಂದೆ. ಜೇಬಲ್ಲಿ ಹಣ ಇಲ್ಲದೆ ಇದ್ದರೂ ಬೇರೆಯವರಿಗೆ ಸಹಾಯ ಮಾಡುವ ಮನೋಭವಾ ಅವನದ್ದು’ ಎಂದು ಪ್ರತಾಪ್ ತಂದೆ ಹೇಳಿದ್ದಾರೆ. "ಮಗನ ಬಗ್ಗೆ ಎಲ್ಲರ ಒಳ್ಳೆಯ ಮಾತುಗಳನ್ನಾಡಿದಾಗ ಬಹಳ ಖುಷಿ ಆಯ್ತು ಸರ್.. ಇದಕ್ಕೆಲ್ಲಾ ಸುದೀಪ್ ಸರ್ ಕಾರಣ. ನಾನು ಅವರನ್ನು ಯಾವಾಗಲೂ ಮರೆಯೋದಿಲ್ಲ. ನಮ್ಮ ಮಗ ಈ ಹಂತಕ್ಕೆ ಬರೋದಕ್ಕೆ ಸುದೀಪ್ ಅವರೇ ಕಾರಣ. ಈ ಶೋಗೆ ಬಂದಮೇಲೆ ರಚಿತಾ ರಾಮ್ ಅವರು, ರವಿಚಂದ್ರನ್ ಅವರು ಕೂಡ ಗುರುಗಳಾಗಿ ಪ್ರತಾಪ್‌ಗೆ ಮಾರ್ಗದರ್ಶನ ಮಾಡ್ತಾ ಇದ್ದಾರೆ. ಅವರಿಗೂ ನಾನು ಧನ್ಯವಾದಗಳನ್ನ ಹೇಳೋದಕ್ಕೆ ಇಷ್ಟಪಡ್ತಿನಿ" ಎಂದು ಹೇಳಿದರು.