ಭಾರತದ ಅತಿ ದೊಡ್ಡ ಹಾಗೂ ಜನಪ್ರಿಯ ಮಾಧ್ಯಮ ಸಂಸ್ಥೆಗಳಲ್ಲೊಂದಾದ ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ನ ಕರ್ನಾಟಕ ವಾಹಿನಿ ಝೀ ಕನ್ನಡ ಕೇವಲ ಒಂದು ವಾಹಿನಿ ಆಗಿರದೇ ಪ್ರತೀ ಮನೆಯ ಮನರಂಜನೆಯ ಮೊದಲ ಆಯ್ಕೆ ಯಾಗಿದೆ. ಝೀ ಕನ್ನಡದ ಅಭೂತಪೂರ್ಣ ಯಶಸ್ಸಿನ ನಂತರ ಈಗ ತನ್ನ ಅತ್ಯಂತ ಮಹತ್ವಾ ಕಾಂಕ್ಷೆಯ ವಾಹಿನಿ ಝೀ ಪವರ್ (Zee Power) ಮೂಲಕ ಕನ್ನಡ ಮನರಂಜನೆ ಜಗತ್ತಿನಲ್ಲಿ ಮತ್ತೊಂದು ಅಲೆ ಸೃಷ್ಟಿಸಲು ಸಜ್ಜಾಗಿದೆ. ಝೀ ಪವರ್ ಇದೇ ಆಗಸ್ಟ್ 23, 2025 ರಂದು ಮನರಂಜನೆಯಲ್ಲಿ ಹೊಸ ಯುಗವನ್ನು ಆರಂಭಿಸಲಿದೆ.
ಈ ಚಾನೆಲ್‌ಗೆ ಝೀ ಪವರ್ ಎಂದು ಹೆಸರಿಡಲು ಒಂದು ವಿಶೇಷ ಕಾರಣವಿದೆ. ಇದಕ್ಕೆ ನಟ ಪುನೀತ್ ರಾಜ್‌ಕುಮಾರ್ ಅವರು ಸ್ಫೂರ್ತಿಯಂತೆ. ಈ ಬಗ್ಗೆ ವಾಹಿನಿ ಹೇಳಿಕೊಂಡಿದ್ದು, "ಝೀ ಪವರ್ ಮೂಲಕ ಮೊದಲ ಹೆಜ್ಜೆ ಇಡುತ್ತಿದ್ದೇವೆ. ಕನ್ನಡಿಗರಿಗೆ ಪವರ್ ಅನ್ನೋದು ಮನಸ್ಸಿಗೆ ಹತ್ತಿರ ಇರುವ ವಿಷಯ. ಅದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾರಣ. ಅದೇ ನಮ್ಮ ಝೀ ಪವರ್‌ಗೆ ಸ್ಫೂರ್ತಿ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಕರ್ನಾಟಕದಲ್ಲಿ ಇವತ್ತು ಮನರಂಜನೆ ಅಂತಂದ್ರೆ ಮೊದಲು ಬರುವ ಹೆಸರು ಅಪ್ಪು ಅವರದ್ದು. ಝೀ ಪವರ್ ಅನ್ನೋ ಹೆಸರನ್ನು ಮಕ್ಕಳಿಂದಿಡಿದು ವಯೋವೃದ್ಧವರೆಗೂ ಎಲ್ಲರೂ ಇಷ್ಟಪಟ್ಟರು. ಕಾರಣ, ಪುನೀತ್ ರಾಜ್‌ಕುಮಾರ್’’ ಎಂದು ಹೇಳಿದೆ.
ಇದು ಕೇವಲ ವಾಹಿನಿಯಲ್ಲ ಕಲ್ಪನೆ, ನಿಜಜೀವನ, ಮತ್ತು ಕರು ನಾಡಿನ ಸಂಸ್ಕೃತಿಯನ್ನು ಒಳಗೊಂಡ ವಾಹಿನಿಯಾಗಿರಲಿದೆ. ಕಥಾ ನಾಯಕಿಯರು ಮತ್ತು ಕಥಾ ನಾಯಕರಿರುವ ಧಾರಾವಾಹಿಗಳು, ಸಮಾಜವನ್ನು ತಲುಪುವ ವಾಸ್ತವ ಕಾರ್ಯಕ್ರಮ ಗಳು, ಮಹಿಳಾ ಪ್ರಧಾನ ಧಾರಾವಾಹಿಗಳು, ಬ್ಲಾಕ್‌ಬಸ್ಟರ್ ಚಲನ ಚಿತ್ರಗಳು, ಹಬ್ಬದ ಮತ್ತು ವಿಶೇಷ ಕಾರ್ಯಕ್ರಮ ಗಳೊಂದಿಗೆ ಝೀ ಪವರ್ ಆಧುನಿಕ ಕನ್ನಡಿಗರ ನೆಚ್ಚಿನ ವಾಹಿನಿಯಾಗಲಿದೆ.
Bhagya Lakshmi Serial: ಮನೆಯಲ್ಲಿ ಸುಳ್ಳು ಹೇಳಿ ಲಗೇಜ್ ಹಿಡ್ಕೊಂಡು ಭಾಗ್ಯ ಮನೆಗೆ ಬಂದ ಆದೀ
ಇದರಲ್ಲಿ ರಾಜ ಕುಮಾರಿ, ಶುಭಸ್ಯ ಶೀಘ್ರಂ, ಜೋಡಿ ಹಕ್ಕಿ ಮತ್ತು ಗೌರಿ ಎಂಬ ನಾಲ್ಕು ಧಾರಾವಾಹಿ ಹಾಗೂ ಒಂದು ರಿಯಾಲಿಟಿ ಶೋ - ಹಳ್ಳಿ ಪವರ್ ಮತ್ತು ಭಕ್ತಿ ಕಾರ್ಯಕ್ರಮ-ಭವಿಷ್ಯ ದರ್ಶನ ಸೇರಿದಂತೆ ಅತ್ಯಾಕರ್ಷಕ ಕಾರ್ಯಕ್ರಮ ಗಳು ಇರಲಿವೆ. ಈ ವಾಹಿನಿಯಲ್ಲಿ ಎಲ್ಲಾ ವಯಸ್ಸಿನ ಗುಂಪುಗಳನ್ನು ಸೆಳೆಯುವ ಕಥೆಗಳಿ ರಲಿದ್ದು ಕುಟುಂಬದವರು ಒಟ್ಟಾಗಿ ಕುಳಿತು ನೋಡುತ್ತಾ ಮತ್ತೆ ಹಳೆಯ ಕಳೆದುಹೋದ ಫ್ಯಾಮಿಲಿ ಕ್ಷಣಗಳು ಮರುಕಳಿಸುವಂತೆ ಮಾಡುತ್ತದೆ. ಈ ಎಲ್ಲ ಧಾರಾವಾಹಿಗಳು ಆಗಸ್ಟ್ 25 ರಿಂದ ಶುರು ಆಗಲಿದ್ದು, ಗ್ರಾಂಡ್ ಲಾಂಚ್ ಇವೆಂಟ್ 23 ರಿಂದ ಪ್ರಸಾರ ಆಗಲಿದೆ.