ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Neha Gowda: ನೇಹಾ ಗೌಡ ತನ್ನ ಮಗಳಿಗೆ ಶಾರದ ಅಂತ ಹೆಸರಿಟ್ಟಿದ್ದೇಕೆ?: ಇಲ್ಲಿದೆ ಕಾರಣ

ತಮ್ಮ ಪುತ್ರಿಗೆ ಶಾರದ ಅಂತ ನಾಮಕರಣ ಮಾಡಿರುವ ನೇಹಾ ಗೌಡ - ಚಂದನ್ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಎಲ್ಲರೂ ಫ್ಯಾನ್ಸಿ ಹೆಸರಿನ ಹಿಂದೆ ಓಡುತ್ತಿದ್ದಾರೆ. ಆದರೆ, ನೀವು ಮಾತ್ರ ಈ ರೀತಿಯ ಒಳ್ಳೆಯ ಹೆಸರನ್ನು ಇಟ್ಟಿದ್ದೀರಿ. ಇದು ನಿಜಕ್ಕೂ ಖುಷಿಯ ವಿಚಾರ ಎಂದು ಕೆಲವರು ಹೇಳಿದ್ದರು.

ನೇಹಾ ಗೌಡ ತನ್ನ ಮಗಳಿಗೆ ಶಾರದ ಅಂತ ಹೆಸರಿಟ್ಟಿದ್ದೇಕೆ?: ಇಲ್ಲಿದೆ ಕಾರಣ

Neha Gowda and Chandan daughter

Profile Vinay Bhat Mar 28, 2025 7:28 AM

ಕೆಲ ದಿನಗಳ ಹಿಂದೆಯಷ್ಟೆ ಕನ್ನಡ ಕಿರುತೆರೆಯ ಗೊಂಬೆ, ಬಿಗ್ ​ಬಾಸ್​ ಬೆಡಗಿ ನೇಹಾ ಗೌಡ (Neha Gowda) ತನ್ನ ಮಗಳಿಗೆ ವಿಶೇಷವಾದ ಸಾಂಪ್ರದಾಯಿಕವಾದ ಹೆಸರನ್ನು ಇಟ್ಟು ಸುದ್ದಿಯಾಗಿದ್ದರು. ಇಂದು ತಮ್ಮ ಮಗುವಿಗೆ ನಾಮಕರಣ ಮಾಡುವಾಗ ಫ್ಯಾನ್ಸಿ ಹೆಸರನ್ನು ಇಡುತ್ತಾರೆ. ಈ ಹೆಸರನ್ನು ಯಾರೂ ಈವರೆಗೆ ಇಟ್ಟಿರಬಾರದು ಎಂದು ಗೂಗಲ್​ನಲ್ಲೋ ಅಥವಾ ಇನ್ಯಾವುದೊ ಮೂಲದಿಂದ ಹುಡುಕಿ ನಾಮಕರಣ ಮಾಡುತ್ತಾರೆ. ಎಲ್ಲೂ ಕೇಳಿರದ ಹೆಸರುಗಳನ್ನು ಇಡುವುದು ಈಗ ಟ್ರೆಂಡಿಂಗ್. ಆದರೆ, ಇವೆಲ್ಲದಕ್ಕೆ ವಿರುದ್ಧ ಎಂಬಂತೆ ನೇಹಾ ಗೌಡ-ಚಂದನ್ ತಮ್ಮ ಮಗಳಿಗೆ ಶಾರದ ಎಂಬ ಹೆಸರನ್ನಿಟ್ಟಿದ್ದರು.

ನೇಹಾ ಗೌಡ ಹಾಗೂ ಚಂದನ್ ಈಗಿನ ಟ್ರೆಂಡ್‌ನ್ನೆಲ್ಲಾ ಪಕ್ಕಕ್ಕಿಟ್ಟು ಮಗಳಿಗೆ ಅರ್ಥಪೂರ್ಣವಾದ ಶಾರದ ಎಂಬ ಹೆಸರಿನ್ನಿಟ್ಟರು. ಜ್ಞಾನ, ಸಂಗೀತ, ಬೌದ್ಧಿಕ ವಿಚಾರಗಳನ್ನು ಪೋಷಿಸುವ ಸಾಕ್ಷಾತ್ ಶಾರದ ಮಾತೆಯ ಹೆಸರನ್ನೇ ಮಗಳಿಗೆ ನಾಮಕರಣ ಮಾಡಿದ್ದಾರೆ. ನಟಿ ನೇಹಾ ಗೌಡ ಕುಟುಂಬಸ್ಥರು ಬೆಂಗಳೂರಿನ ಖಾಸಗಿ ಹಾಲ್​ವೊಂದರಲ್ಲಿ ​ನಾಮಕರಣ ಶಾಸ್ತ್ರ ಮಾಡಿದ್ದಾರೆ. ಈ ನಾಮಕರಣ ಶಾಸ್ತ್ರದಲ್ಲಿ ಕಿರುತೆರೆಯ ಕಲಾವಿದರು, ಕುಟುಂಬಸ್ಥರು, ಆತ್ಮೀಯರು ಹಾಗೂ ಸ್ನೇಹಿತರು ಭಾಗವಹಿಸಿದ್ದರು.

ತಮ್ಮ ಪುತ್ರಿಗೆ ಶಾರದ ಅಂತ ನಾಮಕರಣ ಮಾಡಿರುವ ನೇಹಾ ಗೌಡ - ಚಂದನ್ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಎಲ್ಲರೂ ಫ್ಯಾನ್ಸಿ ಹೆಸರಿನ ಹಿಂದೆ ಓಡುತ್ತಿದ್ದಾರೆ. ಆದರೆ, ನೀವು ಮಾತ್ರ ಈ ರೀತಿಯ ಒಳ್ಳೆಯ ಹೆಸರನ್ನು ಇಟ್ಟಿದ್ದೀರಿ. ಇದು ನಿಜಕ್ಕೂ ಖುಷಿಯ ವಿಚಾರ ಎಂದು ಕೆಲವರು ಹೇಳಿದ್ದರು. ಇದೀಗ ಮಗುವಿಗೆ ಇಷ್ಟು ಚೆಂದದ ಹೆಸರು ಇಟ್ಟಿದ್ದೇಕೆ ಎಂಬುದನ್ನು ನೇಹಾ ಅವರ ತಂದೆ ರಾಮಕೃಷ್ಣ ಅವರು ಹೇಳಿದ್ದಾರೆ.

‘‘ಈಗಂತೂ ಹೊಸ ಹೊಸ ಹೆಸರುಗಳನ್ನು ಜನ ಇಡುತ್ತಿದ್ದಾರೆ. ಅದರಲ್ಲೂ ಇಂಗ್ಲೀಷ್ ಟೋನ್​ ಇರುವಂತ ಹೆಸರು ಬರುತ್ತಿವೆ. ಆದರಿಂದ ಮೊಮ್ಮಗಳಿಗೆ ನಮ್ಮ ಪರಂಪರೆಯ, ನಮ್ಮ ಸಂಸ್ಕೃತಿ ಇದೆಲ್ಲಾ ಬಿಂಬಿತವಾಗುವಂತ ಹೆಸರನ್ನು ಇಡಬೇಕು ಅಂತ ಅನಿಸಿತು. ಹೀಗಾಗಿ ಶಾರದ ಅಂತ ಹೆಸರನ್ನು ಇಟ್ಟಿದ್ದೇವೆ. ಈ ಹೆಸರನ್ನು ಕೇಳಿದ ಎಲ್ಲರಿಗೂ ಖುಷಿ ಕೊಟ್ಟಿದೆ. ಅದರಿಂದ ನಮ್ಮೆಲ್ಲರಿಗೂ ಖುಷಿಯಾಗಿದೆ’’ ಎಂದು ಹೇಳಿದ್ದಾರೆ.

ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ಕನ್ನಡಿಗರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿರುವ ನೇಹಾ ಗೌಡ ಕಳೆದ ವರ್ಷದ ಅಕ್ಟೋಬರ್‌ ತಿಂಗಳಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು.

Gauthami Jadav: ಗೌತಮಿ ಜೊತೆ ವನದುರ್ಗಾ ಸಾನಿಧ್ಯಕ್ಕೆ ಭೇಟಿ ಕೊಟ್ಟ ಉಗ್ರಂ ಮಂಜು ಕುಟುಂಬ