ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ದೊಡ್ಡ ತಿರುವು: ಎಂಟ್ರಿಕೊಟ್ಟ ಬಿಗ್ ಬಾಸ್ ಸ್ಪರ್ಧಿ

ಕಿಶನ್ ತಂದೆ ಭಾಗ್ಯ ಮನೆಗೆ ಬಂದು ಮದುವೆ ಮಾತುಕತೆ ನಡೆಸಿದ್ದಾರೆ. ಇದರ ಮಧ್ಯೆ ಧಾರಾವಾಹಿಯಲ್ಲಿ ಮತ್ತೊಂದು ದೊಡ್ಡ ಟ್ವಿಸ್ಟ್ ನೀಡಲಾಗಿದ್ದು, ಕನ್ನಿಕಾಳ ದೊಡ್ಡ ಅಣ್ಣನ ಎಂಟ್ರಿ ಆಗಿದೆ. ಇವರು ಮತ್ಯಾರು ಅಲ್ಲ ಮಾಜಿ ಬಿಗ್ ಬಾಸ್ ಸ್ಪರ್ಧಿ ಹಾಗೂ ಸ್ಯಾಂಡಲ್ವುಡ್ ನಟ ಹರೀಶ್ ರಾಜ್.

ಭಾಗ್ಯಲಕ್ಷ್ಮೀಯಲ್ಲಿ ದೊಡ್ಡ ತಿರುವು: ಬಿಗ್ ಬಾಸ್ ಸ್ಪರ್ಧಿ ಎಂಟ್ರಿ

Bhagya Lakshmi Serial

Profile Vinay Bhat May 27, 2025 11:47 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ಕಳೆದ ಕೆಲವು ವಾರಗಳಿದ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡಲಾಗುತ್ತಿದೆ. ಭಾಗ್ಯಾಳ ತಂಗಿ ಪೂಜಾಳ ಮದುವೆ ಹೊಸ ತಿರುವನ್ನೇ ಪಡೆದುಕೊಂಡಿದೆ. ಪೂಜಾ ಮದುವೆ ಆಗುವ ಹುಡುಗ ಕಿಶನ್ ಭಾಗ್ಯಾಳ ಬದ್ಧವೈರಿ ಕನ್ನಿಕಾಳ ಸ್ವಂತ ಅಣ್ಣ ಎಂದು ತಿಳಿದು ಭಾಗ್ಯ ಮನೆಯವರಿಗೆ ಶಾಕ್ ಆಗಿದೆ. ಆದರೆ, ಕಿಶನ್ ತಂದೆ ಭಾಗ್ಯ ಮನೆಗೆ ಬಂದು ಮದುವೆ ಮಾತುಕತೆ ನಡೆಸಿದ್ದಾರೆ. ಇದರ ಮಧ್ಯೆ ಧಾರಾವಾಹಿಯಲ್ಲಿ ಮತ್ತೊಂದು ದೊಡ್ಡ ಟ್ವಿಸ್ಟ್ ನೀಡಲಾಗಿದ್ದು, ಕನ್ನಿಕಾಳ ದೊಡ್ಡ ಅಣ್ಣನ ಎಂಟ್ರಿ ಆಗಿದೆ. ಇವರು ಮತ್ಯಾರು ಅಲ್ಲ ಮಾಜಿ ಬಿಗ್ ಬಾಸ್ ಸ್ಪರ್ಧಿ ಹಾಗೂ ಸ್ಯಾಂಡಲ್​ವುಡ್ ನಟ ಹರೀಶ್ ರಾಜ್.

ಕನ್ನಿಕಾ ಮನೆಗೆ ಮದುವೆಯ ಮಾತುಕತೆ ಮಾಡಲು ಭಾಗ್ಯ ಮತ್ತು ಅವರ ಕುಟುಂಬಸ್ಥರು ಹೋದಾಗ, ಕನ್ನಿಕಾ ಅವರಿಗೆ ಅವಮಾನ ಮಾಡುತ್ತಾಳೆ. ನಿನ್ನ ತಂಗಿ ಈ ಮನೆ ಸೊಸೆಯಾಗಿ ಬರೋಕೆ ನಾನು ಯಾವುದೇ ಕಾರಣಕ್ಕೂ ಬಿಡಲ್ಲ ಎನ್ನುತ್ತಾಳೆ. ಕನ್ನಿಕಾ ಮಾತುಗಳಿಂದ ಕೆರಳುವ ಪೂಜಾ, ನೀನೇನು ಹೇಳುವುದು ನನ್ನ ಕಾಲಿನ ಧೂಳು ಕೂಡ ಈ ಮನೆಯನ್ನು ಸೋಕಲ್ಲ ಎಂದು ಹೇಳುತ್ತಾಳೆ. ನಿನ್ನಂತ ಮನೆಹಾಳಿ ಇರುವ ಮನೆಗೆ ನಾನು ಬರಲ್ಲ ಎನ್ನುತ್ತಾಳೆ. ಪೂಜಾ ಮಾತುಗಳಿಂದ ಇನ್ನಷ್ಟು ಕೋಪ ಮಾಡಿಕೊಳ್ಳುವ ಕನ್ನಿಕಾ, ಎಲ್ಲರನ್ನು ಮನೆಯಿಂದ ಆಚೆ ಹಾಕುವಂತೆ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಹೇಳುತ್ತಾಳೆ.

ಆಗ ಕುಸುಮಾ, ಇಲ್ಲೀತನಕ ಬಂದೋರಿಗೆ ಹೊರಗೆ ಹೇಗೆ ಹೋಗಬೇಕೆನ್ನುವುದು ಕೂಡ ಚೆನ್ನಾಗಿ ಗೊತ್ತಿದೆ. ನೀವು ಯಾರು ನಮಗೆ ದಾರಿ ತೋರಿಸಬೇಕಿಲ್ಲ ಎಂದು ಹೇಳಿದ್ದಾಳೆ. ಈ ಮೂಲಕ ಎಲ್ಲರ ತಮ್ಮ ಮನೆಗೆ ಬಂದಿದ್ದಾರೆ. ಬಳಿಕ ಕನ್ನಿಕಾ ತಂದೆ ರಾಮ್‌ದಾಸ್ ಕಾಮತ್ ಈ ಗಲಾಟೆಯಲ್ಲಿ ಮಧ್ಯ ಪ್ರವೇಶಿಸಿದ್ದಾರೆ. ನೇರವಾಗಿ ಕಿಶನ್ ಜೊತೆ ರಾಮ್​ದಾಸ್ ಭಾಗ್ಯ ಮನೆಗೆ ಬಂದಿದ್ದಾರೆ. ನಮ್ಮ ಮನೆಯಲ್ಲಿ ನಿಮಗೆ ಅವಮಾನವಾಗಿದೆ. ಅದಕ್ಕೆ ನಾನು ಕ್ಷಮೆ ಕೇಳುತ್ತಿದ್ದೇನೆ. ನಮ್ಮಿಂದ ತಪ್ಪಾಗಿದೆ. ಕ್ಷಮಿಸಿ. ಇವತ್ತು ಆಗಿರುವ ವಿಷಯವನ್ನೆಲ್ಲ ಮರೆತು ಬಿಡಿ ಆ ಮನೆಯಲ್ಲಿ ನಿನ್ನ ತಂಗಿ ಪೂಜಾ ನೆಮ್ಮದಿಯಿಂದ ಸುಖವಾಗಿ ಆರಾಮಾಗಿ ಇರುತ್ತಾಳೆ. ಅವಳಿಗೆ ಯಾವುದೇ ಸಮಸ್ಯೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆಯನ್ನು ಕೂಡ ಕೊಡುತ್ತಾರೆ. ಇದರಿಂದ ಭಾಗ್ಯ ಮನೆಯಲ್ಲಿ ಮತ್ತೆ ಮದುವೆ ಸಂಭ್ರಮ ಶುರುವಾಗಿದೆ.



ಆದರೆ, ಇನ್ನೊಂದು ಕಡೆ ಇದೇ ಮದುವೆ ನಿಲ್ಲಿಸಲು ಆದೀಶ್ವರ್‌ ಎಂಟ್ರಿಯಾಗಿದ್ದಾನೆ. ರಾಮ್‌ದಾಸ್‌ ಭಾಗ್ಯಾ ಮನೆಗೇ ಹೋಗಿರುವ ವಿಚಾರ ಕನ್ನಿಕಾಗೆ ಗೊತ್ತಾಗಿದೆ. ಈ ಮದುವೆ ನಿಲ್ಲಿಸಲು ಮಾಸ್ಟರ್ ಪ್ಲ್ಯಾನ್ ಮಾಡಿರುವ ಕನ್ನಿಕಾ, ಆದಿ ಬ್ರೋ ಹೇಳಿದ್ರೆ ಪಕ್ಕಾ ಅಪ್ಪ ಕೇಳೇ ಕೇಳ್ತಾರೆ ಅಂತ ನೇರವಾಗಿ ಅಣ್ಣ ಆದೀಶ್ವರ್‌ ಕಾಮತ್‌ಗೆ ಫೋನ್‌ ಮಾಡಿದ್ದಾಳೆ. ಈ ಮೂಲಕ ಭಾಗ್ಯಾ ಎದುರು ಇನ್ನೊಬ್ಬ ಖಳನಾಯಕನ ಎಂಟ್ರಿಯಾಗಿದೆ.



ಕನ್ನಿಕಾ ಇಲ್ಲಸಲ್ಲದ ಸುಳ್ಳಿನ ಕಥೆ ಕಟ್ಟಿ ಆದೀಶ್ವರ್​ಗೆ ಹೇಳಿದ್ದಾಳೆ. ಎಲ್ಲಿ ನಮ್ಮ ಫ್ಯಾಮಿಲಿ ಒಡೆದೋಗುತ್ತೋ ಅನ್ನೋ ಭಯದಿಂದ ತುಂಬಾ ವರ್ಷದಿಂದ ವಿದೇಶದಲ್ಲಿದ್ದ ಆದೀಶ್ವರ್‌ ದಿಢೀರ್ ಎಂದು ಮನೆಗೆ ಬರುತ್ತಾನೆ. ಆದೀಶ್ವರ್‌ ಬರೋ ವಿಚಾರ ತಿಳಿದು, ಆತನನ್ನು ಸ್ವಾಗತಿಸಿಲು ಆರತಿ ತಟ್ಟೆ ಎಲ್ಲ ರೆಡಿಯಾಗಿದೆ. ಸದ್ಯ ಇಲ್ಲಿಂದ ಭಾಗ್ಯ ಲಕ್ಷ್ಮೀ ಧಾರಾವಾಹಿ ಹೊಸ ತಿರುವು ಪಡೆದುಕೊಂಡಿದೆ. ಆದೀಶ್ವರ್‌ ಪಾತ್ರದಲ್ಲಿ ಹರೀಶ್ ರಾಜ್​ ಕಾಣಿಸಿಕೊಂಡಿದ್ದು, ಭಾಗ್ಯಾಗೆ ಮುಂದೆ ಏನೆಲ್ಲ ಸಂಕಷ್ಟ ಎದುರಾಗಲಿದೆ ಎಂಬುದು ನೋಡಬೇಕಿದೆ.

Rakesh Poojary: ರಾಕೇಶ್ ಪೂಜಾರಿ ನಿಧನದಿಂದ ಡಿಪ್ರೆಶನ್​ಗೆ ಜಾರಿದ್ದ ಕಲರ್ಸ್ ಕನ್ನಡದ ಖ್ಯಾತ ಹಾಸ್ಯ ನಟ