ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ (Seetha Rama) ಧಾರಾವಾಹಿ ಇನ್ನೆರಡು ದಿನಗಳಲ್ಲಿ ಮುಕ್ತಾಯವಾಗಲಿದೆ. ಎಲ್ಲರಿಗೂ ಒಂದೊಂದೆ ಸತ್ಯ ಗೊತ್ತಾಗುತ್ತಿದ್ದು, ಭಾರ್ಗವಿಯ ಕೃತ್ಯಗಳು ಹೊರಬೀಳುತ್ತಿದೆ. ಸದ್ಯ ಸೀತಾಗೆ ಇಂದ್ರ- ವಾಣಿ ಸಾವಿನ ರಹಸ್ಯ ತಿಳಿದಿದೆ. ಇವರ ಕೊಲೆಯನ್ನು ಭಾರ್ಗವಿಯೇ ಮಾಡಿದ್ದು ಎಂದು ಗೊತ್ತಾಗಿ ಹೋಗಿದೆ. ಈ ವಿಷಯವನ್ನು ರಾಮ್ ಬಳಿ ಹೇಳಬೇಕೆಂದು ತಕ್ಷಣವೇ ಮನೆಗೆ ಬಾ ಎಂದು ಕರೆದಿದ್ದಾರೆ. ಎಲ್ಲರ ಮುಂದೆ ಭಾರ್ಗವಿಯ ನಾಟಕವನ್ನು ಸೀತಾ ಬಯಲು ಮಾಡಲು ಹೊರಟಿದ್ದಾಳೆ. ಆದರೆ, ಸೀತಾಗೆ ರಹಸ್ಯ ತಿಳಿದಿರುವ ವಿಚಾರ ಭಾರ್ಗವಿಗೆ ಗೊತ್ತಾಗಿದೆ.
ಇಂದ್ರ- ವಾಣಿ ಅವರನ್ನು ಚಿಕ್ಕ ಯಜಮಾನ್ರು ಕೊಂದಿಲ್ಲ ಎಂದು ಸತ್ಯವನ್ನು ಡ್ರೈವರ್ ಮನೆಯವರಿಗೆ ಹೇಳಿದ್ದಾನೆ. ಇಂದ್ರ- ವಾಣಿಯ ವಾರ್ಷಿಕ ಕಾರ್ಯದ ದಿನ ಡ್ರೈವರ್ ಮನೆಗೆ ಬಂದಿದ್ದಾನೆ. ಆತನನ್ನು ಕಂಡು ಮನೆಯವರೆಲ್ಲ ಖುಷಿ ಆಗುತ್ತಾರೆ. ಡ್ರೈವರ್ ಚಿಕ್ಕ ಯಜಮಾನರು ಸತ್ಯ ಎಲ್ಲಿದ್ದಾರೆ ಎಂದು ಕೇಳುತ್ತಾನೆ. ಆತ ಮುದ್ದಿನ ತಮ್ಮ ಅಲ್ಲ.. ಪಾಪಿ ಅಣ್ಣನನ್ನೇ ಕೊಂದ ಕೊಲೆಗಡುಕ, ಇಂದ್ರನ ವಾಣಿನ ಕೊಂದುಬಿಟ್ಟ ಎಂದು ತಾತಾ ಹೇಳುತ್ತಾರೆ.
ಇದನ್ನ ಕೇಳಿ ಡ್ರೈವರ್ಗೆ ಶಾಕ್ ಆಗುತ್ತದೆ. ಏನು ಯಜಮಾನ್ರನ್ನ ಇವರು ಕೊಲೆ ಮಾಡಿದ್ದಾರಾ?, ಇಲ್ಲ ಇವರು ಆ ಕೊಲೆ ಮಾಡಿಲ್ಲ ಎಂದು ಹೇಳಿದ್ದಾನೆ. ಇದನ್ನ ಕೇಳಿ ಎಲ್ಲರಿಗೂ ಶಾಕ್ ಆಗುತ್ತದೆ. ಹಾಗಾದರೆ ಕೊಲೆ ಮಾಡಿವರು ಯಾರು ಎಂಬ ಪ್ರಶ್ನೆ ಮೂಡುತ್ತದೆ. ಇದರ ಮಧ್ಯೆ ಸತ್ಯ ಸೀತಾಗೆ ಪೆನ್ಡ್ರೈವ್ ಕೊಟ್ಟಿರುತ್ತಾನೆ. ಅದರ ನೆಗೆಟಿವ್ ಈಗ ಬಂದಿದೆ. ಸ್ಟುಡಿಯೋದವರು ಮನೆಗೆ ಬಂದು ಸೀತಾ ಬಳಿ ಫಿಲ್ಮ್ ನೆಗೆಟಿವ್ ಕೊಟ್ಟಿದ್ದಾರೆ. ಇದರಲ್ಲಿ ಇಂದ್ರ- ವಾಣಿಯನ್ನು ಭಾರ್ಗವಿ ಕೊಲೆ ಮಾಡಿರುವ ಫೋಟೋ ಇದೆ.
ಆದರೆ, ನೆಗೆಟಿವ್ನಲ್ಲಿ ಅದು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಆದರೆ, ಸೀತಾಗೆ ಅಲ್ಲಿ ಯಾರೋ ಹೆಂಗಸು ಇರುವಂತೆ ಕಾಣುತ್ತದೆ. ಭಾರ್ಗವಿ ಹತ್ರ ಈ ಫೋಟೋ ತೋರಿಸಿ ಇದು ಯಾರಿರಬಹುದೆಂದು ಕೇಳೋಣ ಎಂದು ಸೀತಾ ಪ್ರಿಯ ಬಳಿ ಹೇಳುತ್ತಾಳೆ. ಆದರೆ, ಪ್ರೀತಿ ಅವರ ಬಳಿ ಬೇಡ ಸತ್ಯ ಚಿಕ್ಕಪ್ಪ ಬಳಿ ತೋರಿಸೋಣ ಎನ್ನುತ್ತಾಳೆ. ಅದರಂತೆ ಆ ನೆಗೆಟಿವ್ ಹಿಡಿದುಕೊಂಡು ಸತ್ಯನ ಬಳಿ ಹೋಗುತ್ತಾರೆ.
ಇದನ್ನ ಕಂಡು ಸತ್ಯಗೆ ಶಾಕ್ ಆಗುತ್ತದೆ. ಇದು ಭಾರ್ಗವಿ ಬೆಟ್ಟದ ಮೇಲೆ ನಿಂತರುವುದು ಆಕೆನೇ ಎಂವ ಸತ್ಯವನ್ನು ಹೇಳಿದ್ದಾನೆ. ಇದನ್ನ ಕೇಳಿ ಸೀತಾಗೂ ಶಾಕ್ ಆಗಿದೆ. ನಾನು ನೀರು ತೆಗೆದುಕೊಂಡು ಬೆಟ್ಟದ ಬಳಿ ಹೋಗುವಾಗ ಜೋರಾಗಿ ಕಿರುಚುವ ಶಬ್ದ ಕೇಳಿಸಿತು.. ಓಡಿ ಹೋಗಿ ನೋಡುವಾಗ ಅಲ್ಲಿ ಭಾರ್ಗವಿ ನಿಂತಿದ್ದಳು. ನನ್ನ ನೋಡಿದ ತಕ್ಷಣ ಭಾವ-ಅಕ್ಕನ ಯಾಕೋ ಕೊಂದೆ ಪಾಪಿ ಅಂತ ಕಿರುಚೋಕೆ ಶುರು ಮಾಡಿದಳು.. ನೀವೆಲ್ಲ ಇದನ್ನ ನಂಬುತ್ತಿರೊ ಗೊತ್ತಿಲ್ಲ ಆದ್ರೆ ದೇವರಂತ ನನ್ನ ಅಣ್ಣ-ಅತ್ತಿಗೆನೆ ಅವಳೆ ಕೊಂದು ಆ ಆರೋಪನ ನನ್ನ ಮೇಲೆ ಬರುವಂತೆ ಮಾಡಿದ್ದು ಎಂದು ಹೇಳುತ್ತಾನೆ.
ಸೀತಾ ತಕ್ಷಣ ರಾಮ್ಗೆ ಕಾಲ್ ಮಾಡಿ ತಕ್ಷಣ ಮನೆಗೆ ಬರುವಂತೆ ಹೇಳಿದ್ದಾಳೆ. ಆದರೆ, ಈ ಎಲ್ಲ ಘಟನೆಯನ್ನು ಭಾರ್ಗವಿ ಹೊರಗಡೆ ನಿಂತು ಕೇಳಿಸಿದ್ದಾಳೆ. ಸದ್ಯ ಭಾರ್ಗವಿಯ ಮುಂದಿನ ಪ್ಲ್ಯಾನ್ ಸೀತಾಳ ಕಿಡ್ನಾಪ್ ಮಾಡುವುದು ಆಗಿದೆ. ಇದು ನಾಳಿನ ಎಪಿಸೋಡ್ನಲ್ಲಿ ನಡೆಯಲಿದೆ.
Deepika Das: ಸೋಷಿಯಲ್ ಮೀಡಿಯಾಗೆ ದಿಢೀರ್ ಗುಡ್ ಬೈ ಹೇಳಿದ ದೀಪಿಕಾ ದಾಸ್: ಏನಾಯ್ತು?