ʻಹ್ಯಾಟ್ರಿಕ್ ಹೀರೋʼ ಶಿವರಾಜ್‌ಕುಮಾರ್, ʻರಿಯಲ್ ಸ್ಟಾರ್ʼ ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ ಮಲ್ಟಿಸ್ಟಾರರ್ ಸಿನಿಮಾ ʻ45ʼ ರಿಲೀಸ್‌ಗೆ ಕ್ಷಣಗಣನೆ ಆರಂಭವಾಗಿದೆ. ರಮೇಶ್ ರೆಡ್ಡಿ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಅರ್ಜುನ್ ಜನ್ಯ ಅವರು ನಿರ್ದೇಶನ ಮಾಡಿರುವುದು ವಿಶೇಷ. ಯಾಕೆಂದರೆ, ಇದು ಅವರ ನಿರ್ದೇಶನದ ಮೊದಲ ಸಿನಿಮಾ. ಅಂದಹಾಗೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣಗೊಂಡಿರುವ 45 ಚಿತ್ರಕ್ಕೆ ಖರ್ಚಾಗಿರುವ ಹಣವೆಷ್ಟು? ಮುಂದೆ ಓದಿ.
100 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ
ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಈ ಚಿತ್ರಕ್ಕೆ ಸುಮಾರು 100 ಕೋಟಿ ರೂ. ಹಣ ಖರ್ಚಾಗಿದೆಯಂತೆ. ಗಾಳಿಪಟ 2, 100, ಪಡ್ಡೆ ಹುಲಿ ಸೇರಿದಂತೆ ಹಲವು ಸಿನಿಮಾಗಳನ್ನು ರಮೇಶ್ ರೆಡ್ಡಿ ಅವರು ನಿರ್ಮಾಣ ಮಾಡಿದ್ದು, ಅದರಲ್ಲಿ ʻ45ʼ ಈಗ ಅತ್ಯಂತ ದುಬಾರಿ ಸಿನಿಮಾ ಎಂದೇ ಹೇಳಬಹುದು. ಅವರ ನಿರ್ಮಾಣ ಮಾಡಿರುವ ಚಿತ್ರಗಳಲ್ಲೇ ʻ45ʼ ಅತ್ಯಂತ ದುಬಾರಿ ಸಿನಿಮಾವಾಗಿದೆ. ಅಲ್ಲದೆ, ಅರ್ಜುನ್ ಜನ್ಯ ತಮ್ಮ ಮೊದಲ ಪ್ರಯತ್ನದಲ್ಲೇ ಇಷ್ಟೊಂದು ದುಬಾರಿ ಬಜೆಟ್‌ನ ಸಿನಿಮಾವನ್ನು ಮಾಡಿರುವುದು ವಿಶೇಷ.
Star Fashion 2025: ನಟ ಡಾ. ಶಿವರಾಜ್‌ಕುಮಾರ್ ಮಾಸ್ ಸ್ಟೈಲ್‌ಗೆ ಫ್ಯಾಷನ್ ದಿಗ್ಗಜರ ಫುಲ್ ಮಾರ್ಕ್ಸ್!
ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್
ʻ45ʼ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಡಿಸೆಂಬರ್ 25ರಂದು ʻ45ʼ ಸಿನಿಮಾವು ಕನ್ನಡದ ಜೊತೆಗೆ ತಮಿಳು, ಹಿಂದಿ, ತೆಲುಗು, ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ. ಈಗಾಗಲೇ ಆಫ್ರೋ ಟಪಾಂಗ್ ಎಂಬ ಪ್ರಮೋಷನಲ್ ಸಾಂಗ್ ಸಖತ್ ವೈರಲ್ ಆಗಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಇದೊಂದು ಫ್ಯಾಂಟಸಿ ಥ್ರಿಲ್ಲರ್ ಸಿನಿಮಾವಾಗಿದ್ದು, ವಿಎಫ್‌ಎಕ್ಸ್ ಕೆಲಸಗಳಿಗೆ ಸಿನಿಮಾದಲ್ಲಿ ಜಾಸ್ತಿ ಒತ್ತು ನೀಡಲಾಗಿದೆ.
ಬಹುತಾರಗಣವೇ ಇಲ್ಲಿ ಹೈಲೈಟ್
ಶಿವರಾಜ್‌ಕುಮಾರ್ ಮತ್ತು ಉಪೇಂದ್ರ ಬಹಳ ದಿನಗಳ ನಂತರ ಮುಖಾಮುಖಿ ಆಗಿರುವುದು ಈ ಚಿತ್ರದ ಪ್ರಮುಖ ಹೈಲೈಟ್. ʻ45ʼ ಚಿತ್ರಕ್ಕಾಗಿ ಇಬ್ಬರು ಕೂಡ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದು, ಇವರ ಪಾತ್ರಗಳ ಕುತೂಹಲವನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಅಲ್ಲದೆ, ರಾಜ್ ಬಿ ಶೆಟ್ಟಿ ಕೂಡ ಇಲ್ಲಿ ಮತ್ತೊಂದು ಇಂಪಾರ್ಟೆಂಟ್ ರೋಲ್ ಮಾಡಿದ್ದಾರೆ. ಈ ಎಲ್ಲಾ ಕುತೂಹಲಗಳಿಗೆ ತೆರೆ ಬೀಳುವುದಕ್ಕೆ ಇನ್ನೂ 22 ದಿನ ಬಾಕಿ ಇದೆ.
ಈ ವರ್ಷ ತೆರೆಕಂಡ ಕಾಂತಾರ ಚಾಪ್ಟರ್ 1 ಸಿನಿಮಾದ ಬಜೆಟ್ 100 ಕೋಟಿ ರೂಪಾಯಿ ಮೇಲಿತ್ತು ಎಂಬ ಮಾತು ಕೇಳಿಬಂದಿತ್ತು. ಅದು ಬಿಟ್ಟರೆ ಈಗ ʻ45ʼ ಸಿನಿಮಾಕ್ಕೆ ಅಷ್ಟೊಂದು ದೊಡ್ಡ ಬಜೆಟ್ ಅನ್ನು ಹೂಡಿಕೆ ಮಾಡಿರುವುದು ವಿಶೇಷ. ಸತ್ಯ ಹೆಗಡೆ ಛಾಯಾಗ್ರಹಣ ಮಾಡಿರುವ ಈ ಚಿತ್ರದ ವಿಎಫ್‌ಎಕ್ಸ್ ಕೆಲಸಗಳನ್ನು ವಿದೇಶಿ ಕಂಪನಿಯೊಂದು ಮಾಡುತ್ತಿದೆ. ಸದ್ಯ ಎಲ್ಲರ ಗಮನ ಡಿಸೆಂಬರ್ 25ರ ಮೇಲಿದೆ.