ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Sanjana Burli: ಸದ್ದಿಲ್ಲದೇ ಎಂಗೇಜ್ ಆದ ಸಂಜನಾ ಬುರ್ಲಿ; ಹುಡುಗ ಯಾರು ಗೊತ್ತಾ?

Sanjana: ಸಂಜನಾ ಬುರ್ಲಿ ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅವರು ಈಗ ಕಲರ್ಸ್ ಕನ್ನಡದ ‘ಶ್ರೀ ಗಂಧದ ಗುಡಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸಂಜನಾ ಅವರು ‘ಶ್ರೀಗಂಧದ ಗುಡಿ ಧಾರಾವಾಹಿಯಲ್ಲಿ ಚಂದನಾ ಹೆಸರಿನ ಪಾತ್ರ ಮಾಡಿದ್ದಾರೆ. ಇದರ ಬೆನ್ನಲ್ಲೇ ನಟಿ ಸದ್ದಿಲ್ಲದೇ ಎಂಗೇಜ್‌ ಆಗಿದ್ದಾರೆ. ಮದುವೆ ಆಗುತ್ತಿರುವ ಸಿಹಿ ಸುದ್ದಿಯನ್ನ ಫ್ಯಾನ್ಸ್‌ಗೆ ನೀಡಿದ್ದಾರೆ ನಟಿ.

ಸದ್ದಿಲ್ಲದೇ ಎಂಗೇಜ್ ಆದ ಸಂಜನಾ ಬುರ್ಲಿ; ಹುಡುಗ ಯಾರು ಗೊತ್ತಾ?

ಸಂಜನಾ ಬುರ್ಲಿ -

Yashaswi Devadiga
Yashaswi Devadiga Jan 26, 2026 8:27 AM

ಸಂಜನಾ ಬುರ್ಲಿ (Sanjana Burli) ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅವರು ಈಗ ಕಲರ್ಸ್ ಕನ್ನಡದ ‘ಶ್ರೀ ಗಂಧದ ಗುಡಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸಂಜನಾ ಅವರು ‘ಶ್ರೀಗಂಧದ ಗುಡಿ ಧಾರಾವಾಹಿಯಲ್ಲಿ ಚಂದನಾ ಹೆಸರಿನ ಪಾತ್ರ ಮಾಡಿದ್ದಾರೆ. ಇದರ ಬೆನ್ನಲ್ಲೇ ನಟಿ ಸದ್ದಿಲ್ಲದೇ ಎಂಗೇಜ್‌ ಆಗಿದ್ದಾರೆ. ಮದುವೆ (Marriage) ಆಗುತ್ತಿರುವ ಸಿಹಿ ಸುದ್ದಿಯನ್ನ ಫ್ಯಾನ್ಸ್‌ಗೆ ನೀಡಿದ್ದಾರೆ ನಟಿ.

ಎಂಗೇಜ್‌ ಆದ ನಟಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಮೊದಲು ಸ್ನೇಹಾ ಪಾತ್ರಕ್ಕೆ ಬಣ್ಣ ಹಚ್ಚಿದವರು ಸಂಜನಾ ಬುರ್ಲಿ. ಸ್ನೇಹಾ ಪಾತ್ರದ ಮೂಲಕ ಸಂಜನಾ ಬುರ್ಲಿ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಖ್ಯಾತಿ ಪಡೆದರು. ಮನೆ ಮನೆ ಮಾತಾದರು. ಆದರೆ, ಕೆಲ ಕಾಲದ ನಂತರ ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್‌ನಿಂದ ಸಂಜನಾ ಬುರ್ಲಿ ಹೊರಬಂದರು. ‘ಶ್ರೀ ಗಂಧದ ಗುಡಿ’ಗೆ ನಾಯಕಿ ಆಗಿ ಸಂಜನಾ ಬುರ್ಲಿ ಆಯ್ಕೆ ಆಗಿ ಬಂದರು.

ಇದನ್ನೂ ಓದಿ: Kannada New Movie: `ಘಾರ್ಗಾ' ಚಿತ್ರದ ಟ್ರೈಲರ್ ರಿಲೀಸ್‌; ಸಿನಿಪ್ರಿಯರು ಫುಲ್‌ ಖುಷ್‌

ಇದೀಗ ತಾವು ಎಂಗೇಜ್‌ ಆಗಿರೋ ಸುದ್ದಿಯನ್ನ ಶೇರ್‌ ಮಾಡಿದ್ದಾರೆ. ಇನ್‌ಸ್ಟಾ ಪ್ರೊಪೈಲ್‌ ಮಾಹಿತಿ ಪ್ರಕಾರ ಸಿದ್ದಾರ್ಥ್‌ ಎಂಬುವರನ್ನ ನಟಿ ಮದುವೆ ಆಗಲಿದ್ದಾರೆ. ಅವರು MBBS ಓದಿದ್ದಾರೆ.

ನಮ್ಮ ಜೀವನದ ಈ ಹೊಸ ಹೆಜ್ಜೆಗೆ ನನ್ನ ಎಲ್ಲಾ ಅಭಿಮಾನಿಗಳು ಮತ್ತು followers ಆಶೀರ್ವಾದ ಮತ್ತು ಶುಭಾಶಯಗಳನ್ನು ಕೋರುತ್ತಿದ್ದೇನೆ ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ.

ಶ್ರೀ ಗಂಧದ ಗುಡಿಯಲ್ಲಿ ಮಿಂಚುತ್ತಿರುವ ಸಂಜನಾ

ಶ್ರೀ ಗಂಧದ ಗುಡಿ’ ಸೀರಿಯಲ್‌ನಲ್ಲಿ ಶಿಶಿರ್‌ ಶಾಸ್ತ್ರಿ ಹೀರೋ ಆಗಿ ನಟಿಸುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ಬಳಿಕ ಶಿಶಿರ್ ಶಾಸ್ತ್ರಿಗೆ ಬಿಗ್ ಚಾನ್ಸ್ ಸಿಕ್ಕಿದೆ. ಗಂಧದ ಗುಡಿ ಧಾರಾವಾಹಿ, ಇದು ನಾಲ್ಕು ಜನ ಅಣ್ಣ -ತಮ್ಮಂದಿರ ಕಥೆಯಾಗಿದ್ದು, ಆ ಮನೆಯಲ್ಲಿ ಹೆಣ್ಣು ದಿಕ್ಕೇ ಇರೋದಿಲ್ಲ.

ಇದನ್ನೂ ಓದಿ: Padma Awards 2026: ಮಮ್ಮುಟ್ಟಿ, ಅಲ್ಕಾ ಯಾಗ್ನಿಕ್‌ಗೆ ಪದ್ಮಭೂಷಣ ಗೌರವ; ಆರ್ ಮಾಧವನ್‌ಗೆ ಪದ್ಮಶ್ರೀ! ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

ಅಂತಹ ಮನೆಗೆ ಸೊಸೆಯಾಗಿ ಎಂಟ್ರಿ ಕೊಡುವ ಚಂದನಾ ಆಗಿ ಸಂಜನಾ ಬುರ್ಲಿ ನಟಿಸುತ್ತಿದ್ದಾರೆ. ಗಂಡಸರೇ ಇಲ್ಲದ ಮನೆಗೆ ಹೆಣ್ಣೊಬ್ಬರು ಎಂಟ್ರಿ ಕೊಟ್ಟಾಗ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದೇ ಕಥೆ.