Sikandar Song: 'ಬಮ್ ಬಮ್ ಭೋಲೆ ಶಂಭೂ': 'ಸಿಕಂದರ್' ಸಿನಿಮಾದ ಹೋಳಿ ಹಾಡಿನ ಟೀಸರ್ ರಿಲೀಸ್
Sikandar Song: ಸಲ್ಮಾನ್ ಖಾನ್-ರಶ್ಮಿಕಾ ಮಂದಣ್ಣ-ಎ.ಆರ್.ಮುರುಗದಾಸ್ ಕಾಂಬಿನೇಷನ್‌ನ ಬಹು ನಿರೀಕ್ಷಿತ ʼಸಿಕಂದರ್ʼ ಚಿತ್ರದ ʼಬಮ್ ಬಮ್ ಬೋಲೆ ಶಂಭೂʼ ಹಾಡಿನ ಟೀಸರ್ ರಿಲೀಸ್ ಆಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇದು ಹೋಳಿ ಹಬ್ಬದ ವಿಶೇಷ ಟ್ರ್ಯಾಕ್ ಆಗಿದ್ದು ಮಾ. 11ರಂದು ಮಧ್ಯಾಹ್ನ 1:11ಕ್ಕೆ ಬಿಡುಗಡೆಯಾಗಲಿದೆ.

Salman Khan's Holi Song

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಹಾಗೂ ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ 'ಸಿಕಂದರ್' (Sikandar) ಸಿನಿಮಾದ ಟೀಸರ್ ಹಾಗೂ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದೀಗ ʼಸಿಕಂದರ್ʼ ಚಿತ್ರದ ʼಬಮ್ ಬಮ್ ಬೋಲೆ ಶಂಭೂʼ ಹಾಡಿನ ಟೀಸರ್ ರಿಲೀಸ್ ಆಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ (Sikandar Song). ಇದು ಹೋಳಿಯ ವಿಶೇಷ ಟ್ರ್ಯಾಕ್ ಆಗಿದ್ದು, ಹಬ್ಬದ ಸಂಭ್ರಮ ಹೆಚ್ಚಿಸಲು ʼಸಿಕಂದರ್ʼ ಚಿತ್ರತಂಡ ರೆಡಿಯಾಗಿದೆ. ಪೂರ್ಣ ಹಾಡು ಮಾ. 11ರಂದು ಮಧ್ಯಾಹ್ನ 1:11ಕ್ಕೆ ಬಿಡುಗಡೆಯಾಗಲಿದೆ.
ಪ್ರೀತಮ್ ಸಂಗೀತ ಸಂಯೋಜನೆ ಮತ್ತು ಸಮೀರ್ ಸಾಹಿತ್ಯ ಬರೆದಿರುವ ಈ ಹಾಡನ್ನು ಶಾನ್, ದೇವ್ ನೇಗಿ ಮತ್ತು ಅಂತರ ಮಿತ್ರ ಹಾಡಿದ್ದಾರೆ. ಆಕರ್ಷಕ ಟ್ಯೂನ್‌ನೊಂದಿಗೆ ಈ ರ್‍ಯಾಪ್ ಹಾಡು ಸಿನಿಪ್ರಿಯರನ್ನು ಮತ್ತಷ್ಟು ರಂಜಿಸಿದೆ. ಹೋಳಿ ಹಬ್ಬದ ಸಂಭ್ರಮದಲ್ಲಿ ಇರುವ ಅಭಿಮಾನಿಗಳಿಗೆ ಈ ಹಾಡು ಮತ್ತಷ್ಟು ಹುಚ್ಚೆಬ್ಬಿಸಿದೆ. ಈಗಾಗಲೇ ಅನಾವರಣಗೊಂಡಿರುವ ಪೋಸ್ಟರ್, ಟೀಸರ್ಗಳು ಅಭಿಮಾನಿಗಳಲ್ಲಿ ಸಿನಿಮಾ ನೋಡುವ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ʼಬಮ್ ಬಮ್ ಬೋಲೆ ಶಂಭೂʼ ಹೋಳಿ ಹಬ್ಬದ ಸಂಭ್ರಮದ ಥೀಮ್ ಸಾಂಗ್ ಆಗಿದ್ದು, ಸಂಪೂರ್ಣ ಹಾಡಿಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಎ.ಆರ್. ಮುರುಗದಾಸ್ ನಿರ್ದೇಶನದ ಮತ್ತು ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ ʼಸಿಕಂದರ್ʼ ಬಿಗ್ ಬಜೆಟ್ನಲ್ಲಿ ತಯಾರಾಗಿದೆ. ಈದ್ ಹಬ್ಬದ ಪ್ರಯುಕ್ತ ಮಾರ್ಚ್ ಕೊನೇ ವಾರದಲ್ಲಿ ‘ಸಿಕಂದರ್’ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ನಟಿಸಿದ್ದಾರೆ. ಸದ್ಯ ಟೀಸರ್, ಹಾಡಿನ ಮೂಲಕವೇ ಸಿನಿಮಾದ ನಿರೀಕ್ಷೆ ಹೆಚ್ಚಿಸಿರುವುದಂತೂ ನಿಜ.
ಇದನ್ನು ಓದಿ: Sikandar Teaser Out: ಸಲ್ಮಾನ್-ರಶ್ಮಿಕಾ ನಟನೆಯ ಬಹು ನಿರೀಕ್ಷಿತ ʼಸಿಕಂದರ್ʼ ಚಿತ್ರದ ಟೀಸರ್ ಔಟ್
ʼಸಿಕಂದರ್' ರಿಮೇಕ್ ಸಿನಿಮಾವೇ?
ʼಸಿಕಂದರ್ʼ ಸಿನಿಮಾ ಮೂಲ ಚಿತ್ರವಲ್ಲ, ಬದಲಿಗೆ ದಕ್ಷಿಣದ ಸಿನಿಮಾದ ರಿಮೇಕ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವು ದಿನಗಳಿಂದ ಗುಲ್ಲೆದ್ದಿತ್ತು. ಇದೀಗ ಸ್ವತಃ ಚಿತ್ರದ ನಿರ್ದೇಶಕ ಎ.ಆರ್. ಮುರುಗದಾಸ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ರಿಮೇಕ್ ಅಲ್ಲ ಎಂದು ತಿಳಿಸಿದ್ದಾರೆ. ಇದೊಂದು ಒರಿಜಿನಲ್ ಕಥೆ ಇರುವ ಸಿನಿಮಾ. ಇದರಲ್ಲಿ ಬರುವ ಪ್ರತಿ ಸೀನ್, ಪ್ರತಿ ಫ್ರೇಮ್ ಕೂಡ ನೈಜತೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಟೀಸರ್ ನೋಡಿದ ಪ್ರೇಕ್ಷಕರು ಇದು ತಮಿಳಿನ ʼಸರ್ಕಾರ್ʼ ಚಿತ್ರ ರಿಮೇಕ್ ಎಂದು ಊಹಿಸಿದ್ದರು.