ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Sivakarthikeyan: ಶಿವಕಾರ್ತಿಕೇಯನ್‌ ಈಗ ʼಮದರಾಸಿʼ; ಮುರುಗದಾಸ್ ಚಿತ್ರದ ಮೂಲಕ ಕಾಲಿವುಡ್‌ಗೆ ಕಾಲಿಟ್ಟ ರುಕ್ಮಿಣಿ ವಸಂತ್‌

ಸದ್ಯ ಕುತೂಹಲ ಕೆರಳಿಸಿರುವ ಕಾಲಿವುಡ್‌ ಸ್ಟಾರ್‌ ಶಿವಕಾರ್ತಿಕೇಯನ್‌ ಅಭಿನಯದ ಮದರಾಸಿ ಚಿತ್ರದ ಟೀಸರ್‌ ರಿಲೀಸ್‌ ಆಗಿದೆ. ಎ.ಆರ್.ಮುರುಗದಾಸ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡತಿ ರುಕ್ಮಿಣಿ ವಸಂತ್‌ ನಟಿಸುತ್ತಿದ್ದಾರೆ. ಶಿವಕಾರ್ತಿಕೇಯನ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಟೀಸರ್‌ ರಿಲೀಸ್‌ ಮಾಡಿದೆ.

ಶಿವಕಾರ್ತಿಕೇಯನ್‌ ಚಿತ್ರ ʼಮದರಾಸಿ'ಯ ಟೀಸರ್‌ ಔಟ್‌

ʼಮದರಾಸಿʼ ಚಿತ್ರದ ಪೋಸ್ಟರ್‌.

Profile Ramesh B Feb 17, 2025 7:05 PM

ಚೆನ್ನೈ: ʼಅಮರನ್ʼ ಬ್ಲಾಕ್ ಬಸ್ಟರ್ ಸಕ್ಸಸ್ ಬಳಿಕ ಕಾಲಿವುಡ್‌ ನಟ ಶಿವಕಾರ್ತಿಕೇಯನ್ (Actor Sivakarthikeyan) ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ ಅವರ 'ಮದರಾಸಿ' (Madharasi) ಎಂಬ ಹೊಸ ಚಿತ್ರ ಘೋಷಣೆಯಾಗಿದೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ಶಿವಕಾರ್ತಿಕೇಯನ್ ಅವರು ಖ್ಯಾತ ನಿರ್ದೇಶಕ ಎ.ಆರ್.ಮುರುಗದಾಸ್ (A.R.Murugadoss) ಜತೆ ಕೈ ಜೋಡಿಸಿದ್ದಾರೆ. ವಿಶೇಷ ಎಂದರೆ ಸ್ಯಾಂಡಲ್‌ವುಡ್‌ ನಟಿ ರುಕ್ಮಿಣಿ ವಸಂತ್‌ (Rukmini Vasanth) ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇಂದು (ಫೆ. 17) ಶಿವಕಾರ್ತಿಕೇಯನ್ ಜನ್ಮದಿನ. ಅವರ ಹುಟ್ಟುಹಬ್ಬದ ಪ್ರಯುಕ್ತ ʼಮದರಾಸಿʼ ಸಿನಿಮಾದ ಆ್ಯಕ್ಷನ್‌ ಪ್ಯಾಕ್ಡ್ ಗ್ಲಿಂಪ್ಸ್ ರಿಲೀಸ್‌ ಆಗಿದ್ದು, ಗಮನ ಸೆಳೆಯುತ್ತಿದೆ.

ಮಾಸ್ ಅವತಾರದಲ್ಲಿ ಶಿವಕಾರ್ತಿಕೇಯನ್ ಅಬ್ಬರಿಸಿದ್ದು, ಟೀಸರ್ ಪ್ರಾಮಿಸಿಂಗ್ ಆಗಿದೆ. ಸುದೀಪ್ ಎಲಾಮನ್ ಕ್ಯಾಮೆರಾ ವರ್ಕ್, ರಾಕ್‌ಸ್ಟಾರ್ ಅನಿರುದ್ದ್ ರವಿಚಂದರ್ ಗ್ಲಿಂಪ್ಸ್ ಶ್ರೀಮಂತಿಕೆ ಹೆಚ್ಚಿಸಿದೆ.



ಶಿವಕಾರ್ತಿಕೇಯನ್‌ಗೆ ಜೋಡಿಯಾಗಿ ಸಾಥ್‌ ಕೊಟ್ಟಿರುವ ರುಕ್ಮಿಣಿ ವಸಂತ್ ಅವರ ಝಲಕ್‌ ಕೂಡ ಟೀಸರ್‌ನಲ್ಲಿ ಕಂಡು ಬಂದಿದೆ. ವಿದ್ಯುತ್ ಜಮ್ವಾಲ್, ಬಿಜು ಮೆನನ್, ಶಬೀರ್ ಮತ್ತು ವಿಕ್ರಾಂತ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಶ್ರೀಕರ್ ಪ್ರಸಾದ್ ಸಂಕಲನ, ಅರುಣ್ ವೆಂಜರಮೂಡು ಕಲಾ ನಿರ್ದೇಶನ, ಕೆವಿನ್ ಮಾಸ್ಟರ್ ಮತ್ತು ದಿಲೀಪ್ ಮಾಸ್ಟರ್ ಆ್ಯಕ್ಷನ್‌ ʼಮದರಾಸಿʼ ಚಿತ್ರಕ್ಕಿದೆ.

ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರ ತಯಾರಾಗಲಿದ್ದು, ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಇದೂ ಸ್ಥಾನ ಪಡೆದುಕೊಂಡಿದೆ. ವಿಶೇಷ ಎಂದರೆ ಎ.ಆರ್‌.ಮುರುಗದಾಸ್‌ ಮತ್ತು ಅನಿರುದ್ಧ್‌ ರವಿಚಂದರ್‌ ಕಾಂಬಿನೇಷನ್‌ನ 3ನೇ ಚಿತ್ರ ಇದಾಗಿದೆ. ಈ ಹಿಂದೆ ಇವರಿಬ್ಬರು 2014ರಲ್ಲಿ ತೆರೆಕಂಡ ʼಕತ್ತಿʼ ಮತ್ತು 2020ರಲ್ಲಿ ರಿಲೀಸ್‌ ಆದ ʼದರ್ಬಾರ್‌ʼ ಸಿನಿಮಾದಲ್ಲಿ ಜತೆಯಾಗಿ ಕೆಲಸ ಮಾಡಿದ್ದರು. ಈ ಎರಡೂ ಚಿತ್ರಗಳ ಹಾಡುಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು.

ರುಕ್ಮಿಣಿ ವಸಂತ್‌ಗೆ ಗೋಲ್ಡನ್‌ ಚಾನ್ಸ್‌

ಸ್ಯಾಂಡಲ್‌ವುಡ್‌ನಲ್ಲಿ ಭರವಸೆಯ ನಾಯಕಿಯಾಗಿ ಗುರುತಿಸಿಕೊಂಡಿರುವ ರುಕ್ಮಿಣಿ ವಸಂತ್‌ ಅವರಿಗೆ ಸದ್ಯ ವಿವಿಧ ಭಾಷೆಗಳಿಂದ ಉತ್ತಮ ಅವಕಾಶ ಅರಸಿ ಬರುತ್ತಿದೆ. ʼಮದರಾಸಿʼ ಚಿತ್ರದಲ್ಲಿ ಅವರ ಪಾತ್ರ ವಿಶೇಷವಾಗಿರಲಿದೆ ಎನ್ನಲಾಗಿದ್ದು, ಶಿವಕಾರ್ತಿಕೇಯನ್‌ ಜತೆಗೆ ಅವರೂ ಹೈಲೈಟ್‌ ಆಗಲಿದ್ದಾರಂತೆ. ಇದರ ಜತೆಗೆ ತಮಿಳಿನ ʼಏಸ್‌ʼ ಸಿನಿಮಾವನ್ನೂ ಅವರು ಒಪ್ಪಿಕೊಂಡಿದ್ದಾರೆ. ಇದರಲ್ಲಿ ಅವರು ವಿಜಯ್‌ ಸೇತುಪತಿಗೆ ಜೋಡಿಯಾಗಿದ್ದಾರೆ. ಇನ್ನು ತೆಲುಗಿನಲ್ಲಿ ತಯಾರಾಗಲಿರುವ ಜೂ.ಎನ್‌ಟಿಆರ್‌-ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ನ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ.

ಇತ್ತ ಎ.ಆರ್‌.ಮುರುಗದಾಸ್‌ ಬಾಲಿವುಡ್‌ ಚಿತ್ರ ʼಸಿಕಂದರ್‌ʼನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್‌ ಖಾನ್‌ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕೂಡ ಸದ್ಯ ಪ್ರೇಕ್ಷಕರ ಗಮನ ಸೆಳೆದಿದೆ.

ಈ ಸುದ್ದಿಯನ್ನೂ ಓದಿ: Rukmini Vasanth: ಸ್ಯಾಂಡಲ್‌ವುಡ್‌, ಟಾಲಿವುಡ್‌ ಬಳಿಕ ಕಾಲಿವುಡ್‌ನಲ್ಲಿ ಮಿಂಚಲು ರುಕ್ಮಿಣಿ ವಸಂತ್‌ ಸಜ್ಜು; 'ಏಸ್‌' ಚಿತ್ರದ ಟೀಸರ್‌ ಔಟ್‌

ಇನ್ನು ಶಿವಕಾರ್ತಿಕೇಯನ್‌ ʼಮದರಾಸಿʼ ಜತೆಗೆ ʼಪರಾಶಕ್ತಿʼ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಸುಧಾ ಕೊಂಗಾರ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರವಿ ಮೋಹನ್‌, ಅಥರ್ವ ಮತ್ತಿತರರು ನಾಯಕರಾಗಿ ನಟಿಸುತ್ತಿದ್ದು, ನಾಯಕಿಯಾಗಿ ಕನ್ನಡತಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ.