ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

‌ʻಜನ ನಾಯಗನ್ʼ ಪೈಪೋಟಿ ಇಲ್ಲದೇ ಪೊಂಗಲ್‌ಗೆ ಸಿಂಗಲ್‌ ಆಗಿ ಅಖಾಡಕ್ಕಿಳಿದ ʻಪರಾಶಕ್ತಿʼ ಚಿತ್ರದ ಕಲೆಕ್ಷನ್‌ ಎಷ್ಟು? ದಾಖಲೆ ಬರೆಯುತ್ತಾರಾ ಶಿವಕಾರ್ತಿಕೇಯನ್?

Sivakarthikeyan: ದಳಪತಿ ವಿಜಯ್ ಅವರ 'ಜನ ನಾಯಗನ್' ಪೋಸ್ಟ್‌ಪೋನ್‌ ಆಗಿದ್ದರಿಂದ 'ಪರಾಶಕ್ತಿ' ಚಿತ್ರವು ಪೊಂಗಲ್‌ಗೆ ಸೋಲೋ ಆಗಿ ಬಿಡುಗಡೆಯಾಗಿದೆ. ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಮೊದಲ ದಿನ ಈ ಸಿನಿಮಾವು ಜಾಗತಿಕವಾಗಿ 27 ಕೋಟಿ ರೂ. ಗಳಿಸಿದೆ.

ಶಿವಕಾರ್ತಿಕೇಯನ್, ಶ್ರೀಲೀಲಾ, ರವಿ ಮೋಹನ್‌, ಅಥರ್ವ ಅಭಿನಯದ 'ಪರಾಶಕ್ತಿ' ಚಿತ್ರವು ಶನಿವಾರದಂದು (ಜ.10) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಳಪತಿ ವಿಜಯ್‌ ಅವರ ಜನ ನಾಯಗನ್‌ ಜೊತೆ ಪೈಪೋಟಿಯಲ್ಲಿ ಅಖಾಡಕ್ಕೆ ಇಳಿಯಬೇಕಿದ್ದ ಪರಾಶಕ್ತಿ, ಸದ್ಯ ಪೊಂಗಲ್‌ಗೆ ಸಿಂಗಲ್‌ ಆಗಿ ಬಂದಿದೆ. ಹಾಗಾದರೆ, ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದೆಷ್ಟು ಕೋಟಿ?

ವಿಶ್ವಾದ್ಯಂತ 27 ಕೋಟಿ ರೂ. ಕಮಾಯಿ

ಬಾಕ್ಸ್ ಆಫೀಸ್ ಟ್ರ್ಯಾಕರ್ Sacnilk ವರದಿಯ ಪ್ರಕಾರ, ಪರಾಶಕ್ತಿ ಸಿನಿಮಾವು ಮೊದಲ ದಿನ ಭಾರತದಲ್ಲಿ ಅಂದಾಜು 14.70 ಕೋಟಿ ರೂ. ಗಳಿಸಿದೆ. ಜಾಗತಿಕವಾಗಿ ಈ ಮೊತ್ತವು ಸುಮಾರು 27 ಕೋಟಿ ರೂ. ದಾಟಿದೆ ಎಂದು ವರದಿಗಳು ತಿಳಿಸಿವೆ. ಈ ಚಿತ್ರದ ಬಿಡುಗಡೆಯ ಬಗ್ಗೆ ಕೊನೆಯ ಕ್ಷಣದವರೆಗೂ ಅನಿಶ್ಚಿತತೆ ಇತ್ತು. ಸೆನ್ಸಾರ್ ಮಂಡಳಿಯಿಂದ (CBFC) ಪ್ರಮಾಣಪತ್ರ ಪಡೆಯುವುದು ವಿಳಂಬವಾಗಿದ್ದು, ಅಂತಿಮವಾಗಿ ಶುಕ್ರವಾರವಷ್ಟೇ (ಜ.9) ಚಿತ್ರಕ್ಕೆ 'U/A' ಪ್ರಮಾಣಪತ್ರ ಸಿಕ್ಕಿತ್ತು. ಈ ವಿಳಂಬವು ಚಿತ್ರದ ಮುಂಗಡ ಬುಕ್ಕಿಂಗ್ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮ ಬೀರಿದೆ.

Parasakthi Twitter Review: ಶಿವಕಾರ್ತಿಕೇಯನ್-ಶ್ರೀಲೀಲಾ ಚಿತ್ರ ನೋಡಿ ಪ್ರೇಕ್ಷಕರು ಏನಂದ್ರು? ವಿಲನ್ ಪಾತ್ರದಲ್ಲಿ ʻಜಯಂʼ ರವಿ ಮಿಂಚಿದ್ರಾ?

ಪರಾಶಕ್ತಿಗೆ ಇದ್ದ ಸವಾಲು

'ಪರಾಶಕ್ತಿ' ಚಿತ್ರಕ್ಕೆ ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಚಿತ್ರದಿಂದ ಭಾರಿ ಪೈಪೋಟಿ ಎದುರಾಗಿದೆ. ಶುಕ್ರವಾರ ಬಿಡುಗಡೆಯಾದ 'ದಿ ರಾಜಾ ಸಾಬ್' ಮೊದಲ ದಿನವೇ ಭಾರತದಲ್ಲಿ 63.30 ಕೋಟಿ ರೂ. ಗಳಿಸಿ ಅಬ್ಬರಿಸಿತ್ತು. ಇನ್ನು ಹಿಂದಿ ಮಾರುಕಟ್ಟೆಯಲ್ಲಿ ರಣವೀರ್ ಸಿಂಗ್ ಅಭಿನಯದ 'ಧುರಂಧರ್' (Dhurandhar) ಚಿತ್ರವು ತನ್ನ 6ನೇ ವಾರದಲ್ಲೂ ಭದ್ರವಾಗಿ ನೆಲೆ ನಿಂತಿದ್ದು, ಶುಕ್ರವಾರದಂದು 3 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಹೊಸ ಚಿತ್ರಗಳಿಗೆ ಸ್ಕ್ರೀನ್ ಸಿಗುವುದನ್ನು ಕಷ್ಟವಾಗಿಸಿದೆ. ಹಾಗಾಗಿ, ತಮಿಳುನಾಡು ಹೊರತುಪಡಿಸಿ, ಮಿಕ್ಕ ಕಡೆ ಪರಾಶಕ್ತಿ ಫೈಟ್‌ ಮಾಡಬೇಕಿದೆ.

ಬಹುತಾರಾಗಣದ ಸಿನಿಮಾ ಇದು

ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ 'ಜನ ನಾಯಕನ್' ಜನವರಿ 9 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಸಮಸ್ಯೆಯಿಂದಾಗಿ ಈ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ. ಈ ಬೆಳವಣಿಗೆಯು 'ಪರಾಶಕ್ತಿ' ಚಿತ್ರಕ್ಕೆ ತಮಿಳುನಾಡಿನಲ್ಲಿ ಹೆಚ್ಚಿನ ಸ್ಕ್ರೀನ್‌ಗಳು ಸಿಗಲು ಮತ್ತು ಸೋಲೋ ರಿಲೀಸ್ ಲಾಭ ಪಡೆಯಲು ಸಹಕಾರಿಯಾಗಿದೆ. ಸುಮಾರು 140 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಪರಾಶಕ್ತಿ ಚಿತ್ರವನ್ನು ಸುಧಾ ಕೊಂಗರಾ ನಿರ್ದೇಶಿಸಿದ್ದಾರೆ. ‌

Daali Dhananjaya: ನಟ ಧನಂಜಯ-ಧನ್ಯತಾ ಮದುವೆಗೆ ವಿಶೇಷ ಸ್ಟ್ಯಾಂಪ್ ನೀಡಿ ಶುಭ ಕೋರಿದ ಅಂಚೆ ಇಲಾಖೆ

ಈ ಸಿನಿಮಾ ಮೂಲಕ ನಟಿ ಶ್ರೀಲೀಲಾ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ಜಯಂ ರವಿ (ರವಿ ಮೋಹನ್) ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. ಶಿವಕಾರ್ತಿಕೇಯನ್‌ ಸಹೋದರನಾಗಿ ಅಥರ್ವ ನಟಿಸಿದ್ದಾರೆ. ರಾಣಾ ದಗ್ಗುಬಾಟಿ, ಡಾಲಿ ಧನಂಜಯ್ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದಾರೆ.