ತಮ್ಮ ಅದ್ಭುತ ಕಂಠದಿಂದ ದೇಶದ ಉದ್ದಗಲಕ್ಕೂ ಖ್ಯಾತಿ ಪಡೆದಿರುವ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಿಟ್ ಹಾಡುಗಳನ್ನು ಕೊಟ್ಟವರು ಬಾಲಿವುಡ್ ಗಾಯಕ ಸೋನು ನಿಗಮ್ (sonu nigam) . ಖ್ಯಾತ ಗಾಯಕ ಸೋನು ನಿಗಮ್ ಸೋಮವಾರ ಹುಬ್ಬಳ್ಳಿಯಲ್ಲಿ (Hubballi) ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಜನಪ್ರಿಯ ಗೀತೆ 'ಅನಿಸುತಿದೆ ಯಾಕೋ ಇಂದು' ಹಾಡನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಗುಂಪಿನಲ್ಲಿ ಕಳೆದುಹೋಗಿದ್ದ ಬಾಲಕ
ಸೋಮವಾರ ಹುಬ್ಬಳ್ಳಿಯಲ್ಲಿ ನಡೆದ ಕ್ರಾರ್ಯಕ್ರಮದಲ್ಲಿ ಬಾಲಕನೊಬ್ಬ ತನ್ನ ಪೋಷಕರಿಂದ ತಪ್ಪಿಸಿಕೊಂಡಿದ್ದನು. ಆಗ ಸೋನ್ ನಿಗಮ್ ಬಾಲಕನಿಗೆ ಪೋಷಕರನ್ನು ಹುಡುಕಲು ಸಹಾಯ ಮಾಡಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: Vijay Devarakonda: ಮಾಜಿ ಗೆಳತಿ ಜೊತೆಗಿನ ವಿಜಯ್ ದೇವರಕೊಂಡ ಫೋಟೋ ವೈರಲ್!
ಈ ವಿಡಿಯೊವನ್ನು ಸೋನು ನಿಗಮ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಶ್ರೀ ಸಾಯಿ ಎಂಬ ಯುವಕ ಕಾರ್ಯಕ್ರಮಕ್ಕೆ ಬರುತ್ತಿದ್ದ ವೇಳೆ ತನ್ನ ಕುಟುಂಬದಿಂದ ಬೇರ್ಪಟ್ಟಿದ್ದ. ಇದನ್ನು ಗಮನಿಸಿದ ಸೋನು ನಿಗಮ್ ಬಾಲಕನನ್ನು ಸಮಾಧಾನ ಮಾಡುತ್ತ ವೇದಿಕೆಯ ಮುಂಭಾಗಕ್ಕೆ ಕರೆದುಕೊಂಡು ಬಂದರು. ನಂತರ ಬಾಲಕನಿಗಾಗಿ ಒಂದು ಹಾಡನ್ನೂ ಹಾಡಿದ್ದಾರೆ. ಜತೆಗೆ ಬಾಲಕನೊಂದಿಗೆ ನೃತ್ಯವನ್ನು ಮಾಡಿದ್ದಾರೆ.
ಸೋನು ನಿಗಮ್ ಪೋಸ್ಟ್!
'ಹುಬ್ಬಳ್ಳಿಯಲ್ಲಿ 30,000 ಜನರ ಗುಂಪಿನಲ್ಲಿ ಶ್ರೀ ಸಾಯಿ ಪೋಷಕರಿಂದ ತಪ್ಪಿಸಿಕೊಂಡು ಭಯಗೊಂಡಿದ್ದ. ನನ್ನನ್ನು ಕಂಡ ನಂತರ ಅವನಿಗೆ ಭಯ ಹೋಯಿತು. ಮತ್ತೆ ಅವನು ಕಳೆದುಹೋಗಿಲ್ಲ ಎಂದು ಭಾವಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಸೋನು ನಿಗಮ್ ಪ್ರಸ್ತುತ ತಮ್ಮ "ದೀವಾನಾ ತೇರಾ" ಸಂಗೀತ ಕಾರ್ಯಕ್ರಮದೊಂದಿಗೆ ಭಾರತ ಪ್ರವಾಸ ಮಾಡುತ್ತಿದ್ದಾರೆ ಮತ್ತು 2026 ರ ಆರಂಭದಲ್ಲಿ ಹೆಚ್ಚಿನ ನೇರ ಪ್ರದರ್ಶನಗಳನ್ನು ನಿಗದಿಪಡಿಸಲಾಗಿದೆ.
ಶ್ರೀ ಸಾಯಿ ಆ ಜಾವೋ, ಮಮ್ಮಿಪಾಪಾ ಇಸ್ಕೋ ಲೇ ಜಾವೋ... ಇಸ್ತೆ ಮಮ್ಮಿಪಾಪಾ ಖೋ ಗಯೇ, ಜಲ್ಲಿ ಆಕೇ ಇಸ್ಕೊ ಲೇ ಜಾವೋ' ಎಂದು ಸೋನು ನಿಗಮ್ ಹಾಡಿದ್ದಾರೆ. ಫೆಬ್ರುವರಿ 14ರಂದು ಲಖನೌನಲ್ಲಿ ಮುಂದಿನ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ: Ikkis OTT Release: ಧರ್ಮೇಂದ್ರ ಕೊನೆ ಸಿನಿಮಾ 'ಇಕ್ಕಿಸ್' ಒಟಿಟಿಗೆ ಎಂಟ್ರಿ!
ತಮ್ಮ ಅದ್ಭುತ ಕಂಠದಿಂದ ದೇಶದ ಉದ್ದಗಲಕ್ಕೂ ಖ್ಯಾತಿ ಪಡೆದಿರುವ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಿಟ್ ಹಾಡುಗಳನ್ನು ಕೊಟ್ಟವರು ಬಾಲಿವುಡ್ ಗಾಯಕ ಸೋನು ನಿಗಮ್. ಮುಂಗಾರು ಮಳೆ ಸಿನಿಮಾಕ್ಕೆ ಅವರ ಕಂಠದಿಂದ ಮೂಡಿ ಬಂದ ಹಾಡುಗಳು ಇಂದಿಗೂ ಸೂಪರ್ ಹಿಟ್.