SSMB29: ರಾಜಮೌಳಿ - ಮಹೇಶ್ ಬಾಬು ಸಿನಿಮಾಕ್ಕೆ ಟೈಟಲ್ ಫಿಕ್ಸ್; ಫಸ್ಟ್ ಲುಕ್ ಹೇಗಿದೆ? ಈ ಚಿತ್ರ ರಿಲೀಸ್ ಆಗೋದ್ಯಾವಾಗ?
SSMB29: ಮಹೇಶ್ ಬಾಬು ಅವರ ಮುಂದಿನ ಸಿನಿಮಾದ ಟೈಟಲ್ ʻವಾರಣಾಸಿʼ ಎಂದು ಹೈದರಾಬಾದ್‌ನ ʻಗ್ಲೋಬ್ ಟ್ರೋಟರ್ʼ ಈವೆಂಟ್‌ನಲ್ಲಿ ಘೋಷಣೆಯಾಗಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರಕ್ಕೆ ಮಹೇಶ್ ಬಾಬು ನಾಯಕ, ಪ್ರಿಯಾಂಕಾ ಚೋಪ್ರಾ ನಾಯಕಿ. ಪೃಥ್ವಿರಾಜ್ ಸುಕುಮಾರನ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
-
ಭಾರಿ ನಿರೀಕ್ಷೆ ಹುಟ್ಟಿಸಿರುವ SSMB29 ಸಿನಿಮಾದ ಅಧಿಕೃತ ಟೈಟಲ್ ಘೋಷಣೆ ಆಗಿದೆ. ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನ ಈ ಚಿತ್ರಕ್ಕೆ ʻವಾರಣಾಸಿʼ ಎಂದು ಟೈಟಲ್ ಇಡಲಾಗಿದೆ. ಟೈಟಲ್ ಲಾಂಚ್ ಮಾಡಲೆಂದೇ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಾವಿರಾರು ಅಭಿಮಾನಿಗಳ ನಡುವೆ #GlobeTrotter ಇವೆಂಟ್ ನಡೆದಿದ್ದು, ಇಲ್ಲಿ ಟಾಲಿವುಡ್ ಮಾತ್ರ ಅಲ್ಲ ಭಾರತೀಯ ಸಿನಿಮಾ ಜಗತ್ತು ನಿರೀಕ್ಷೆಯಿಂದ ಕಾಯುತ್ತಿದ್ದ ಮಹೇಶ್ ಬಾಬು & ಎಸ್ ಎಸ್ ರಾಜಮೌಳಿ ಕಾಂಬಿನೇಷನ್‌ನ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ.
ಮೊದಲೇ ಲೀಕ್ ಆಗಿತ್ತು ಟೈಟಲ್
ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನ ಸಿನಿಮಾಕ್ಕೆ ʻವಾರಣಾಸಿʼ ಎಂದು ಹೆಸರಿಡಲಾಗುತ್ತಿದೆ ಎಂದು ಈ ಮೊದಲೇ ಮಾಹಿತಿ ಹರಿದಾಡಿತ್ತು. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಚಿತ್ರದ ಟೈಟಲ್ ʻವಾರಣಾಸಿʼ ಎಂದು ಅಧಿಕೃತವಾಗಿ ಘೋಷಣೆ ಆಗಿದೆ. ರಾಮೋಜಿ ಫಿಲ್ಮ್‌ಸಿಟಿಯಲ್ಲಿ ನಡೆಯುತ್ತಿರುವ ‘ಗ್ಲೋಬ್ ಟ್ರೋಟರ್’ ಈವೆಂಟ್‌ನಲ್ಲಿ ಪ್ರದರ್ಶಿಸಲಾದ ವಿಡಿಯೋದಲ್ಲಿ ಮಹೇಶ್ ಬಾಬು ಅವರ ಫಸ್ಟ್ ಲುಕ್ ಜೊತೆಗೆ ಶೀರ್ಷಿಕೆಯನ್ನು ಸಹ ರಿವೀಲ್ ಮಾಡಲಾಗಿದೆ.
ಈ ಚಿತ್ರದ ಫಸ್ಟ್ ಲುಕ್‌ನಲ್ಲಿ ನಂದಿಯನ್ನು ಏರಿ, ತ್ರಿಶೂಲ ಹಿಡಿದು ಮಹೇಶ್ ಬಾಬು ಕಾಣಿಸಿಕೊಂಡಿದ್ದಾರೆ. ಫಸ್ಟ್ ಲುಕ್ ನೋಡಿದವರು ಥ್ರಿಲ್ ಆಗಿದ್ದಾರೆ. 2027ರ ಮಾರ್ಚ್‌ನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರ ಕೂಡ ʻಬಾಹುಬಲಿʼ ಸಿನಿಮಾದ ರೀತಿಯಲ್ಲಿ ಎರಡು ಪಾರ್ಟ್‌ಗಳಲ್ಲಿ ತೆರೆಗೆ ಬರಲಿದೆಯಾ? ಕಾದು ನೋಡಬೇಕಿದೆ.
ನಿರ್ಮಾಪಕರು ಯಾರು?
ಸಾಮಾನ್ಯವಾಗಿ ರಾಜಮೌಳಿ ಸಿನಿಮಾ ಘೋಷಣೆಯಾದರೆ, ಅದರ ನಿರ್ಮಾಪಕರು ಯಾರು ಎಂಬ ಪ್ರಶ್ನೆ ಮೂಡುತ್ತದೆ. ಕಾರಣ, ಅಷ್ಟೊಂದು ದೊಡ್ಡ ಮೊತ್ತವನ್ನು ಚಿತ್ರಕ್ಕೆ ಹೂಡಿಕೆ ಮಾಡಬೇಕಿರುತ್ತದೆ. ಇದೀಗ ʻವಾರಣಾಸಿʼ ಚಿತ್ರಕ್ಕೆ ನಿರ್ಮಾಪಕರು ಯಾರು ಎಂಬುದಕ್ಕೂ ಉತ್ತರ ಸಿಕ್ಕಿದೆ. ಈ ಹಿಂದೆ ಟಾಲಿವುಡ್‌ನಲ್ಲಿ ಹಲೋ ಬ್ರದರ್, ಕ್ಷಣಕ್ಷಣಂ, ಸಂತೋಷಂ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಿ, ʻರಾಕಿʼ ಚಿತ್ರದ ಬಳಿಕ ನಿರ್ಮಾಣದಿಂದ ದೂರವಾಗಿದ್ದ ಕೆ ಎಲ್ ನಾರಾಯಣ ಅವರು ʻವಾರಣಾಸಿʼ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. ಅವರ ಜೊತೆಗೆ ರಾಜಮೌಳಿ ಪುತ್ರ ಎಸ್ ಎಸ್ ಕಾರ್ತಿಕೇಯ ಅವರು ಕೂಡ ಈ ಚಿತ್ರದ ನಿರ್ಮಾಪಕರಾಗಿದ್ದಾರೆ.
ಈ ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ?
ಮಹೇಶ್ ಬಾಬು ಅವರು ಹೀರೋ ಆಗಿದ್ದು, ಅವರ ನಾಯಕಿಯಾಗಿ ಮಂದಾಕಿನಿ ಪಾತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳಲಿದ್ದಾರೆ. ಕುಂಭ ಎಂಬ ವಿಲನ್ ಪಾತ್ರದಲ್ಲಿ ನಟ ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿದ್ದಾರೆ. ಸಂಗೀತ ನಿರ್ದೇಶನವನ್ನು ಎಂ ಎಂ ಕೀರವಾಣಿ ನೀಡುತ್ತಿದ್ದಾರೆ. ವಿಜಯೇಂದ್ರ ಪ್ರಸಾದ್ ಅವರು ಈ ಚಿತ್ರದ ಸ್ಕ್ರಿಪ್ಟ್ ಬರೆದಿದ್ದಾರೆ.
ಈ ಸಿನಿಮಾದ ಕಥೆ ಏನು?
'ವಾರಣಾಸಿ' ಶೀರ್ಷಿಕೆಯನ್ನು ಗಮನಿಸಿದರೆ, ಈ ಬಾರಿ ಭಾರತೀಯ ಸಂಸ್ಕೃತಿ, ಪುರಾಣ, ಆಧ್ಯಾತ್ಮಿಕತೆ ಮತ್ತು ಪ್ರಾಚೀನ ನಗರಗಳ ಪ್ರಾಮುಖ್ಯತೆಯನ್ನು ಪ್ರಮುಖವಾಗಿ ಸೆರೆ ಹಿಡಿಯುತ್ತಿದ್ದಾರೆ ಎಂದು ಕಾಣಿಸುತ್ತಿದೆ. ವಿಶ್ವದ ಅತ್ಯಂತ ಹಳೆಯ ನಗರವೆಂದು ಗುರುತಿಸಲ್ಪಟ್ಟ ವಾರಣಾಸಿ ಕಥೆಯ ಮುಖ್ಯ ಆಧಾರವಾಗಲಿದ್ದು, ನಾಯಕನ ಪ್ರಯಾಣವು ಅಲ್ಲಿಂದ ಪ್ರಾರಂಭವಾಗುತ್ತದೆ ಎಂದು ವರದಿಯಾಗಿದೆ. ಶೀರ್ಷಿಕೆಯು ಕಥೆಯ ಆತ್ಮವನ್ನು ಪ್ರತಿಬಿಂಬಿಸುತ್ತದೆ ಎಂಬ ಚರ್ಚೆ ಉದ್ಯಮದಲ್ಲಿ ನಡೆಯುತ್ತಿದೆ. ಈ ಚಿತ್ರಕ್ಕಾಗಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ವಾರಣಾಸಿ ಸೆಟ್ ಹಾಕಲಾಗಿರುವ ಬಗ್ಗೆ ಮಾಹಿತಿ ಇದೆ.