Star Movie: ಫೆ.13ಕ್ಕೆ `ಸ್ಟಾರ್' ಸಿನಿಮಾ ರಿಲೀಸ್! ಮುಖ್ಯ ಪಾತ್ರವೊಂದರಲ್ಲಿ ಪತ್ರಕರ್ತ ವಾಸುದೇವ್
Star Kannada Movie: ಕಿರುತೆರೆಯಲ್ಲಿ ಫೇಮಸ್ ಆಗಿದ್ದ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ರಿಯಾಲಿಟಿ ಶೋನ 2ನೇ ಸೀಸನ್ನಲ್ಲಿ ಶರತ್ ಪ್ರಕಾಶ್ ಅವರು ಸ್ಪರ್ಧಿಸಿದ್ದರು. ಈಗ ದೊಡ್ಡ ಗ್ಯಾಪ್ ಬಳಿಕ ಅವರು ಹೊಸ ಸಿನಿಮಾ ಮಾಡಿದ್ದಾರೆ. ಇದೇ ಫೆಬ್ರವರಿ 13ಕ್ಕೆ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸಂಪೂರ್ಣ ಹೊಸಬರೇ ಸೇರಿಕೊಂಡು ಕಟ್ಟಿರೋ ಸ್ಟಾರ್ ಸಿಂಬಲ್ ಇರೋ ಸಿನಿಮಾ ಅಬ್ಬರಿಸಲು ಬರ್ತಿದೆ. ಟೈಟಲ್‌ನಲ್ಲೇ ಸ್ಟಾರ್ ಸಿಂಬಲ್ ಇರೋ ಈ ಚಿತ್ರದ ಟ್ರೈಲರ್ ಈಗಾಗಲೇ ಎಲ್ಲಾ ಕಡೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.
ಸ್ಟಾರ್ ಸಿನಿಮಾ -
ಕಿರುತೆರೆಯಲ್ಲಿ ಫೇಮಸ್ ಆಗಿದ್ದ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ರಿಯಾಲಿಟಿ ಶೋನ 2ನೇ ಸೀಸನ್ನಲ್ಲಿ ಶರತ್ ಪ್ರಕಾಶ್ (Sharath Prakash) ಅವರು ಸ್ಪರ್ಧಿಸಿದ್ದರು. ಈಗ ದೊಡ್ಡ ಗ್ಯಾಪ್ ಬಳಿಕ ಅವರು ಹೊಸ ಸಿನಿಮಾ (Kannada Cinema) ಮಾಡಿದ್ದಾರೆ. ಇದೇ ಫೆಬ್ರವರಿ 13ಕ್ಕೆ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸಂಪೂರ್ಣ ಹೊಸಬರೇ ಸೇರಿಕೊಂಡು ಕಟ್ಟಿರೋ ಸ್ಟಾರ್ ಸಿಂಬಲ್ ಇರೋ ಸಿನಿಮಾ ಅಬ್ಬರಿಸಲು ಬರ್ತಿದೆ. ಟೈಟಲ್‌ನಲ್ಲೇ ಸ್ಟಾರ್ ಸಿಂಬಲ್ ಇರೋ ಈ ಚಿತ್ರದ ಟ್ರೈಲರ್ ಈಗಾಗಲೇ ಎಲ್ಲಾ ಕಡೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.
ರಿಯಾಲಿಟಿ ಸ್ಟಾರ್ ಮತ್ತು ಪತ್ರಕರ್ತನ ಜುಗಲ್ ಬಂದಿ!
ಚಿತ್ರದ ನಾಯಕನಾಗಿ 'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ರಿಯಾಲಿಟಿ ಶೋ ವಿನ್ನರ್ ಶರತ್ ಪ್ರಕಾಶ್ ಅಖಾಡಕ್ಕಿಳಿದಿದ್ದಾರೆ. ಜೊತೆಗೆ ಬಂಡವಾಳ ಕೂಡ ಶರತ್ ಪ್ರಕಾಶ್ ಹೂಡಿದ್ದಾರೆ. ನವ ಪ್ರತಿಭೆ ರಜತ ರಕ್ಷಾ ನಾಯಕಿಯಾಗಿ ಸಾಥ್ ನೀಡಿದ್ದಾರೆ. ವಿಶೇಷ ಅಂದ್ರೆ, ಪತ್ರಕರ್ತ ವಾಸುದೇವ್ ಅವರು 'ಧ್ರುವ' ಅನ್ನೋ ಪ್ರಮುಖ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ 9 ವರ್ಷಗಳಿಂದ ಪತ್ರಕರ್ತರಾಗಿರೋ ಇವರು ಈಗ ಬಣ್ಣ ಹಚ್ಚಿರೋದು ಕುತೂಹಲ ಮೂಡಿಸಿದೆ. ಪ್ರದೀಪ್ ಪರಾಕ್ರಮ ಮತ್ತು ಬಲರಾಮ್ ಸೇರಿ ಹಲವು ಹೊಸಬರೇ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಇದನ್ನೂ ಓದಿ: Kannada Film: ʻವಲವಾರʼ ನಮ್ಮ ಹೆಮ್ಮೆಯ ಸಿನಿಮಾ; ಕವಿರಾಜ್ ಮೆಚ್ಚುಗೆ
ಸ್ಮಶಾನ ಟು ರೌಡಿಸಂ ಕಥೆ!
ಸಾಮಾನ್ಯವಾಗಿ ರೌಡಿಸಂ ಮಾಡಿದವರು ಕೊನೆಗೆ ಸ್ಮಶಾನ ಸೇರ್ತಾರೆ. ಆದ್ರೆ ಇಲ್ಲಿ ಸ್ಮಶಾನದಿಂದಲೇ ರೌಡಿಸಂಗೆ ಬಂದವರ ಕಥೆಯನ್ನ ನಿರ್ದೇಶಕ ವಿಜಯಸೂರ್ಯ ಹೇಳಹೊರಟಿದ್ದಾರೆ. ವಿಕಾಸ್ ವಸಿಷ್ಠ ಅವರ ಮ್ಯೂಸಿಕ್ ಮತ್ತು ವಿನು ಮನಸ್ಸು ಅವರ ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್.
ಇದನ್ನೂ ಓದಿ: Salman Khan: ಮುಂಬೈನ RSS ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಭಾಗಿ
ಶಶಿಧರ್ ಪುಟ್ಟೇಗೌಡ ಅವರ ಎಡಿಟಿಂಗ್ ಕೆಲಸ ಕೂಡ ಟ್ರೈಲರ್‌ನಲ್ಲಿ ಎದ್ದು ಕಾಣ್ತಿದೆ. ನಾಯಕನಿಗೆ ಸ್ಟಾರ್ ಎಂದು ಹೆಸರು ಬರಲು ಕಾರಣವೇನು ಎಂಬುದು ಸಿನಿಮಾ ನೋಡಿದಾಗ ತಿಳಿಯುತ್ತದೆ. ಬೆಂಗಳೂರಿನ ಸ್ಲಮ್ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದಿದ್ದಾರೆ.