ಹೊಸ ರೂಪದಲ್ಲಿ ಬರ್ತಿದೆ ʻಸುವರ್ಣ ಗೃಹಮಂತ್ರಿʼ ಸೀಸನ್ 2; ಈ ಬಾರಿ ರವಿಶಂಕರ್ ಗೌಡ ಜೊತೆ ಸಾಥ್ ನೀಡಲಿದ್ದಾರೆ ನಟಿಯರು
ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಸುವರ್ಣ ಗೃಹಮಂತ್ರಿ' ಈಗ ಹೊಸ ರೂಪದಲ್ಲಿ ಬರುತ್ತಿದೆ. ನಟ ರವಿಶಂಕರ್ ಗೌಡ ನಿರೂಪಣೆಯಲ್ಲಿ ಮೂಡಿಬರುವ ಈ ಸೀಸನ್ 3ರಲ್ಲಿ ಇನ್ಮುಂದೆ ಸಾಮಾನ್ಯ ಗೃಹಿಣಿಯರ ಜೊತೆ ವಾಹಿನಿಯ ತಾರೆಯರೂ ಭಾಗವಹಿಸಲಿದ್ದಾರೆ.
-
ಕರ್ನಾಟಕದ ಗೃಹಿಣಿಯರ ಮನಗೆದ್ದು, ಮನೆಮಾತಾಗಿರೋ ಶೋ "ಸುವರ್ಣ ಗೃಹಮಂತ್ರಿ". ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಈ ಜನಪ್ರಿಯ ಕಾರ್ಯಕ್ರಮವನ್ನು ಖ್ಯಾತ ನಟ ರವಿಶಂಕರ್ ಗೌಡ ನಿರೂಪಣೆ ಮಾಡುತ್ತಿದ್ದಾರೆ. ಇದನ್ನು ಕನ್ನಡ ಕಿರುತೆರೆಯಲ್ಲಿ ಮೂಡಿಬರುವ ಜನ ಸಾಮಾನ್ಯರ (ಕಾಮನ್ ಮ್ಯಾನ್) ರಿಯಾಲಿಟಿ ಶೋ ಅಂತಲೇ ಕರೆಯುತ್ತಾರೆ. ಇದೀಗ "ಸುವರ್ಣ ಗೃಹಮಂತ್ರಿ" ಶೋ ತನ್ನ ಮೂರನೇ ಸೀಸಸ್‌ನೊಂದಿಗೆ ವೀಕ್ಷಕರ ಮುಂದೆ ಬರಲಿದೆ, ಅದು ಕೂಡ ಹೊಸ ರೂಪದಲ್ಲಿ ಎಂಬುದು ವಿಶೇಷ.
ಶೋಗೆ ಬಂದ 'ಆಸೆ' ಧಾರಾವಾಹಿ ಖ್ಯಾತಿಯ ಮೀನಾ
ಈಗಾಗಲೇ ʻಸುವರ್ಣ ಗೃಹಮಂತ್ರಿʼ ಶೋನ ಎರಡು ಸೀಸನ್ ಗಳನ್ನು ಯಶಸ್ವಿಯಾಗಿ ಪ್ರಸಾ ಕಂಡಿದ್ದು, 700 ಸಂಚಿಕೆಗಳ ಹೊಸ್ತಿಲಲ್ಲಿದೆ. ಇನ್ನು, ಈ ಹೊಸ ಸೀಸಸ್‌ನ ಪ್ರಮುಖ ಆಕರ್ಷಣೆ ಎಂದರೆ, ಪ್ರತೀ ಸಂಚಿಕೆಯಲ್ಲೂ ಇನ್ನುಮುಂದೆ 'ಸುವರ್ಣ ಪರಿವಾರ'ದ ತಾರೆಯರು ಭಾಗಿಯಾಗಲಿದ್ದಾರೆ. ಸುವರ್ಣ ಸ್ಟಾರ್‌ಗಳ ಜೊತೆ ಜನಸಾಮಾನ್ಯರ ಭರ್ಜರಿ ಜಟಾಪಟಿಯೇ ನಡೆಯಲಿದೆ. ಮೊದಲ ಸಂಚಿಕೆಯಲ್ಲಿ 'ಆಸೆ' ಧಾರಾವಾಹಿ ಖ್ಯಾತಿಯ 'ಮೀನಾ' ಪಾಲ್ಗೊಂಡಿದ್ದು ವೀಕ್ಷಕರಿಗೆ ಭರ್ಜರಿ ಮನರಂಜನೆ ಗ್ಯಾರಂಟಿ ಎಂದು ವಾಹಿನಿ ಹೇಳಿಕೊಂಡಿದೆ.
Photos: 'ಸುವರ್ಣ ಸಂಕ್ರಾಂತಿ' ಸಂಭ್ರಮದಲ್ಲಿ ಸ್ಟಾರ್ ಸುವರ್ಣ ತಾರೆಯರ ಸಮಾಗಮ; ಯಾರೆಲ್ಲಾ ಇದ್ದಾರೆ ನೋಡಿ
ಗೃಹಿಣಿಯರನ್ನು ಗೌರವಿಸುವ ಕಾರ್ಯಕ್ರಮ
ತನಗಾಗಿ ಏನನ್ನೂ ಬಯಸದೇ ತನ್ನವರ ಖುಷಿಗಾಗಿ ನಿರಂತರವಾಗಿ ಹಂಬಲಿಸುವ ಗೃಹಿಣಿಯರನ್ನು ಗೌರವಿಸುವ ನಿಟ್ಟಿನಲ್ಲಿ ಕರ್ನಾಟಕದ ಮನೆ ಮನೆಗೆ ಹೋಗಿ ದಿನಕ್ಕೊಂದು ಕುಟುಂಬವನ್ನು ಭೇಟಿ ಮಾಡಿ, ಗಂಡ-ಹೆಂಡತಿಯನ್ನು ಆಟ ಆಡಿಸಿ , ಮಾತನಾಡಿಸಿ, ಆಕೆಯ ಕುಟುಂಬದವರ ಪರಿಚಯ ಮಾಡಿಕೊಂಡು, ಅವರಿಗಾಗಿ ಆ ದಿನವನ್ನು ಮೀಸಲಿಟ್ಟು ರಾಣಿ ಸೀಟ್‌ನಲ್ಲಿ ಅವರನ್ನ ಕೂರಿಸಿ, ಗೌರವಿಸುತ್ತಾ ಥ್ಯಾಂಕ್ಸ್ ಹೇಳುವ ಕಾರ್ಯಕ್ರಮವೇ ಈ "ಸುವರ್ಣ ಗೃಹಮಂತ್ರಿ".
Suvarna Sakhi: ಮಹಿಳಾ ಆಟೋ ಡ್ರೈವರ್ಸ್ ಗೌರವಿಸಿದ ಸ್ಟಾರ್ ಸುವರ್ಣ ; ಏನಿದು ʻಸುವರ್ಣಮಹಿಳಾ ಸಖಿʼ?
ಅಣ್ಣನ ಸ್ಥಾನದಲ್ಲಿ ರವಿಶಂಕರ್ ಗೌಡ
ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ನಟ ರವಿಶಂಕರ್ ಗೌಡ ರವರು ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆಯ ಉಡುಗೊರೆಯಾಗಿ ಬಾಗಿನ ನೀಡಿ ಗೌರವಿಸಿ, ಇಡೀ ಕುಟುಂಬವನ್ನು ಒಗ್ಗೂಡಿಸಿ ಸಂಭ್ರಮಿಸುವುದೇ ಈ ಕಾರ್ಯಕ್ರಮದ ವಿಶೇಷತೆ ಆಗಿದೆ.
ಮಾರ್ಚ್ 25ರಿಂದ ಹೊಸ ಸೀಸನ್ ಆರಂಭ
ಹೊಸ ಸೀಸನ್, ಹೊಸ ಆರಂಭ, ಆಟ-ತುಂಟಾಟದ ಜೊತೆ ಮಸ್ತ್ ಮನರಂಜನೆಯನ್ನು ಒಳಗೊಂಡಿರುವ ʻಸುವರ್ಣ ಗೃಹಮಂತ್ರಿʼ ಸೀಸನ್ 3 ಇದೇ ಬುಧವಾರದಿಂದ (ಮಾರ್ಚ್ 25) ಪ್ರತಿದಿನ ಸಂಜೆ 5 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ