ತಮಿಳು ನಟ ಅಜಿತ್ ಕುಮಾರ್ ಹತ್ತಿರಕ್ಕೂ ಸುಳಿಯುತ್ತಿಲ್ಲವೇ ನಿರ್ಮಾಪಕರು? ಹೊಸ ಪ್ರಾಜೆಕ್ಟ್‌ಗೆ ಸಿಕ್ಕಿಲ್ಲ ಗ್ರೀನ್ ಸಿಗ್ನಲ್! ಅಷ್ಟಕ್ಕೂ ಅಂಥದ್ದೇನಾಯ್ತು?
ತಮಿಳು ನಟ ಅಜಿತ್ ಕುಮಾರ್ ಸದ್ಯ ಸಿನಿಮಾಗಳಿಗಿಂತ ರೇಸಿಂಗ್‌ನಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಅವರ ಹೊಸ ಸಿನಿಮಾಗಳ ಬಗ್ಗೆ ಯಾವುದೇ ಘೋಷಣೆ ಹೊರಬಿದ್ದಿಲ್ಲ. ಇದಕ್ಕೆ ಮುಖ್ಯ ಕಾರಣ ಅವರ ದುಬಾರಿ ಸಂಭಾವನೆ ಎನ್ನಲಾಗಿದೆ. ಸತತ ಸೋಲುಗಳ ಹೊರತಾಗಿಯೂ ಅಜಿತ್ ತಮ್ಮ ಸಂಭಾವನೆ ಇಳಿಸಲು ಸಿದ್ಧರಿಲ್ಲವಂತೆ!
-
ತಮಿಳು ನಟ ಅಜಿತ್ ಕುಮಾರ್ ಅವರು ಈಚೆಗೆ ಸಿನಿಮಾಗಳಿಗಿಂತ ರೇಸಿಂಗ್ ಮೇಲೆಯೇ ಜಾಸ್ತಿ ಗಮನ ಇಟ್ಟಂತೆ ಕಾಣುತ್ತಿದೆ. ಏಕೆಂದರೆ, ಅವರು ಸೆಟ್‌ನಲ್ಲಿ ಇರುವುದಕ್ಕಿಂತ ಹೆಚ್ಚಾಗಿ ರೇಸ್ ಟ್ರ್ಯಾಕ್‌ನಲ್ಲಿಯೇ ಜಾಸ್ತಿ ಸಮಯ ಕಳೆಯುತ್ತಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಅಜಿತ್ ಯಾವಾಗ ಹೊಸ ಸಿನಿಮಾ ಮಾಡಲಿದ್ದಾರೋ ಎಂದು ಕಾದುಕುಳಿತಿದ್ದಾರೆ. ಅವರ ಸಿನಿಮಾಗಳು ತೆರೆಕಂಡು ವರ್ಷ ಕಳೆಯುತ್ತಿದ್ದರೂ, ಅಜಿತ್ ಮಾತ್ರ ಹೊಸ ಸಿನಿಮಾ ಘೋಷಣೆಮಾಡಿಲ್ಲ. ಇದರ ಹಿಂದಿರುವ ರಹಸ್ಯವೇನು?
ದುಬಾರಿ ಸಂಭಾವನೆ ಕೇಳುತ್ತಿರುವ ಅಜಿತ್!
ಹೌದು, ಅಜಿತ್ ಕುಮಾರ್ ಅವರು ಸದ್ಯ ದುಬಾರಿ ಸಂಭಾವನೆಗೆ ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಅದು ಕೂಡ ಎಷ್ಟು ಗೊತ್ತಾ? 160-200 ಕೋಟಿ ರೂ.! ಪ್ರಸ್ತುತ ಅವರ ಸಕ್ಸಸ್ ರೇಟ್ ಅಷ್ಟೇನೂ ಪಾಸಿಟಿವ್ ಆಗಿಲ್ಲ. ಕಳೆದ ವರ್ಷ ಬಂದ ʻವಿಡಾಮುಯಾರ್ಚಿʼ ಅಟ್ಟರ್ ಫ್ಲಾಪ್ ಆಗಿದ್ದರೆ, ʻಗುಡ್ ಬ್ಯಾಡ್ ಅಗ್ಲಿʼ ಸಿನಿಮಾದ ಅಲ್ಲಿಂದಲ್ಲಿಗೆ ಎನಿಸಿಕೊಂಡಿದೆ. ಆದರೂ ಅಜಿತ್ ಮಾತ್ರ ಸಂಭಾವನೆ ವಿಚಾರದಲ್ಲಿ ಕೊಂಚವೂ ರಾಜೀ ಆಗುತ್ತಿಲ್ಲ ಎನ್ನಲಾಗಿದೆ.
Ajith Kumar: ಸ್ವಲ್ಪ ಶಾಂತವಾಗಿರಿ.... ಫ್ಯಾನ್ಸ್‌ಗೆ ನಟ ಅಜಿತ್ ಕುಮಾರ್ ರಿಕ್ವೆಸ್ಟ್!
ಅಸಲಿಗೆ, ಗುಡ್ ಬ್ಯಾಡ್ ಅಗ್ಲಿ ಸಿನಿಮಾ ನಿರ್ಮಾಣ ಮಾಡಿದ್ದ ಮೈತ್ರಿ ಮೂವೀ ಮೇಕರ್ಸ್‌ಗೆ ಮತ್ತೊಮ್ಮೆ ಅಜಿತ್ ಜೊತೆ ಕೈಜೋಡಿಸುವ ಆಸೆ ಇತ್ತು. ಗುಡ್ ಬ್ಯಾಡ್ ಅಗ್ಲಿ ಲಾಭ ತಂದುಕೊಡದೇ ಇದ್ದರೂ, ಅಜಿತ್ ಜೊತೆ ಸಿನಿಮಾ ಮಾಡುವುದು ಅವರಿಗೆ ಮುಖ್ಯವಾಗಿತ್ತು. ಆದರೆ ಅವರಿಗೂ ಕೂಡ ಅಜಿತ್ ದುಬಾರಿ ಸಂಭಾವನೆಯ ಶಾಕ್ ನೀಡಿದ್ದಾರೆ. ಹಾಗಾಗಿ, ಅಜಿತ್ ಸಹವಾಸವೇ ಬೇಡ ಎಂದು ಮೈತ್ರಿ ಮೂವೀ ಮೇಕರ್ಸ್ ಹೆಜ್ಜೆ ಹಿಂದೆ ಇಟ್ಟಿದ್ದಾರೆ. ತಮಿಳು ನಿರ್ಮಾಪಕರಿಗೂ ಅಜಿತ್ ಕಡೆಯಿಂದ ಉತ್ತರ ಸಿಕ್ಕಿದೆಯಂತೆ.
ಬಾಕ್ಸ್ ಆಫೀಸ್‌ನಲ್ಲಿ ಹಣ ಗಳಿಸುವುದು ಸುಲಭವಿಲ್ಲ
ಸದ್ಯ ಚಿತ್ರರಂಗದ ಪರಿಸ್ಥಿತಿ ಅಸ್ಥಿರವಾಗಿದೆ. ಸಿನಿಮಾ ಭಾರೀ ಹಿಟ್ ಆಗದ ಹೊರತು ದೊಡ್ಡ ಲಾಭ ಗಳಿಸುವುದು ಕಷ್ಟ ಎಂಬ ಭಯ ನಿರ್ಮಾಪಕರನ್ನು ಕಾಡುತ್ತಿದೆ. ಇಷ್ಟು ದೊಡ್ಡ ಮೊತ್ತವನ್ನು ಬರೀ ಹೀರೋಗೆ ನೀಡುವುದು ಅಪಾಯಕಾರಿ ಅನ್ನೋ ಭಾವನೆಯಲ್ಲಿ ನಿರ್ಮಾಪಕರು ಇದ್ದಾರೆ. ಈ ಹಿಂದೆ ನಿರ್ಮಾಪಕರು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು ಟಿವಿ ಚಾನೆಲ್‌ಗಳಿಗೆ ಸಿನಿಮಾದ ಹಕ್ಕುಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ಆದರೆ ಈಗ ಅಲ್ಲಿಂದಲೂ ಸರಿಯಾದ ಬೇಡಿಕೆ ಮತ್ತು ಹಣ ಸಿಗದೇ ಇರುವುದರಿಂದ ಸ್ಟಾರ್ ನಟರಿಗೆ ದುಬಾರಿ ಸಂಭಾವನೆ ಕೊಟ್ಟು ಸಿನಿಮಾ ಮಾಡುವುದು ನಿರ್ಮಾಪಕರಿಗೆ ತ್ರಾಸು ಎನಿಸುತ್ತಿದೆ.
ಅಜಿತ್ ಸಂಭಾವನೆ ಬಗ್ಗೆ ಹರಿದಾಡುತ್ತಿರುವ ಟ್ವೀಟ್
What happened to Ajith Kumar after Good Bad Ugly ?? Why his movies are not take off After Good Bad Ugly ??
— Let's X OTT GLOBAL (@LetsXOtt) March 23, 2026
Reasons —
Ajith is reportedly asking for a very high fee, between ₹160 crore and ₹200 crore per movie.
A top production house (Mythri Movie Makers) worked with him on… pic.twitter.com/LeKodHy6VE
ಇನ್ನು, ಈ ಎಲ್ಲಾ ಕಾರಣಗಳಿಂದಾಗಿ ತೆಲುಗು ಮತ್ತು ತಮಿಳು ನಿರ್ಮಾಪಕರೊಂದಿಗೆ ಅಜಿತ್ ಮಾಡಬೇಕಿದ್ದ ಕೆಲವು ಸಿನಿಮಾಗಳು ಸದ್ಯಕ್ಕೆ ಸ್ಥಗಿತಗೊಂಡಿವೆ ಎನ್ನಲಾಗುತ್ತಿದೆ. ಇದಕ್ಕೆ ಅಜಿತ್ ಕಡೆಯಿಂದಲೇ ಪರಿಹಾರ ಸಿಗಬೇಕಿದೆ.