Sunil Shetty: ಮೊಮ್ಮಗಳ ಬಗ್ಗೆ ಸುನೀಲ್ ಶೆಟ್ಟಿ ಪೋಸ್ಟ್ ಫುಲ್ ವೈರಲ್; ಅಂತಹದ್ದೇನಿದೆ?
Sunil Shetty Post on Grand Daughter: ಸುನೀಲ್ ಶೆಟ್ಟಿ ತಾನು ತಾತನಾಗಿದ್ದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ತಂದೆಯಿಂದ ತಾತನ ಸ್ಥಾನಕ್ಕೆ ಭಡ್ತಿಯಾಗಿದ್ದರ ಬಗ್ಗೆ ಮನದಾಳದ ಭಾವುಕತೆಯನ್ನು ಹಂಚಿಕೊಂಡಿದ್ದು ಇದಕ್ಕೆ ವಿಶೇಷವಾಗಿ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.


ನವದೆಹಲಿ: ಖ್ಯಾತ ಕ್ರಿಕೆಟಿಗ ಕೆ. ಎಲ್. ರಾಹುಲ್ (KL Rahul) ಮತ್ತು ಬಾಲಿವುಡ್ ಖ್ಯಾತ ನಟಿ ಅಥಿಯಾ ಶೆಟ್ಟಿಗೆ (Athiya Shetty) ಮಾರ್ಚ್ 24 ರಂದು ಮುದ್ದಾದ ಹೆಣ್ಣು ಮಗು ಜನಿಸಿದೆ. ಹೀಗಾಗಿ ಬಾಲಿವುಡ್ ನಟ ನಟಿಯರು ಈಗಾಗಲೇ ಈ ದಂಪತಿಗೆ ಶುಭ ಕೋರಿದ್ದಾರೆ. ಈ ನಡುವೆ ನಟ ಸುನೀಲ್ ಶೆಟ್ಟಿ ತಾವು ತಾತನಾಗಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ತಂದೆಯಿಂದ ತಾತನ ಸ್ಥಾನಕ್ಕೆ ಭಡ್ತಿಯಾಗಿರುವ ಬಗ್ಗೆ ಮನದಾಳದ ಮಾತನ್ನು ಹಂಚಿಕೊಂಡಿದ್ದು, ಇದಕ್ಕೆ ವಿಶೇಷವಾಗಿ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ (Viral Post)ಆಗುತ್ತಿದೆ.
ಕೆಲ ವರ್ಷಗಳ ಹಿಂದೆ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ. ಎಲ್. ರಾಹುಲ್ ಗುಟ್ಟಾಗಿ ಡೇಟ್ ಮಾಡುತ್ತಿದ್ದರೂ ಎಂಬ ಕೆಲವು ಗಾಸಿಪ್ ಗಳು ಹರಿದಾಡಿತ್ತು. ಆದ್ರೆ ಇವರಿಬ್ಬರು ಮಾತ್ರ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರಲಿಲ್ಲ. ಕೆ ಎಲ್ ರಾಹುಲ್ ಸೋಶಿಯಲ್ ಮೀಡಿಯಾದಲ್ಲಿ ನಟಿ ಅಥಿಯಾ ಶೆಟ್ಟಿಗೆ ರೊಮ್ಯಾಂಟಿಕ್ ಆಗಿ ಜನ್ಮದಿನದ ಶುಭಾಶಯ ತಿಳಿಸುವವರೆಗೂ ಇವರಿಬ್ಬರ ಸಂಬಂಧದ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಬಳಿಕ ಮದುವೆ ನಿಶ್ಚಯವಾಗಿ2023ರ ಜನವರಿಯಲ್ಲಿ ಸುನೀಲ್ ಶೆಟ್ಟಿ ಅವರ ಪುತ್ರಿಯನ್ನು ಕೆ. ಎಲ್.ರಾಹುಲ್ ಮದುವೆಯಾಗಿದ್ದರು. ಇದೀಗ ಈ ದಂಪತಿಯ ಬಾಳಲ್ಲಿ ಮುದ್ದಾದ ಮಗುವಿನ ಆಗಮನವಾಗಿದ್ದು ನಟ ಸುನೀಲ್ ಶೆಟ್ಟಿ ತಾನು ತಾತನ ಸ್ಥಾನಕ್ಕೆ ಭಡ್ತಿ ಹೊಂದಿದ್ದ ವಿಚಾರವಾಗಿ ಪೋಸ್ಟ್ ಹಂಚಿಕೊಂಡಿದ್ದು ತಾನು ತಾತನಾಗಲು ವರ್ಷದಿಂದ ಕಾಯುತ್ತಿರುವುದಾಗಿ ಭಾವನಾತ್ಮಕವಾಗಿ ಕ್ಯಾಪ್ಶನ್ ನೊಂದಿಗೆ ಪೋಸ್ಟ್ ಮಾಡಿದ್ದಾರೆ.
ತಾತನಾಗುತ್ತಿರುವ ತನ್ನ ಭಾವನೆಯೂ ವರ್ಣಿಸಲು ಅಸಾಧ್ಯವಾಗಿದೆ. ನಾನು ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ಶ್ರಮಿಸಿರುವ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ಮೊಮ್ಮಗಳನ್ನು ಎತ್ತಿಕೊಂಡೊಡನೆ ಆ ಸಾಧನೆಗಳೆಲ್ಲವೂ ಶೂನ್ಯವೆಂದು ಭಾವಿಸಿ ಬಿಡುತ್ತದೆ. ನಮ್ಮ ಜೀವನದಲ್ಲಿ ನಿಜವಾಗಿಯೂ ಮುಖ್ಯವಾದದ್ದು ಯಾವುದು ಎಂದು ನಮ್ಮನ್ನು ನಾವೇ ಪ್ರಶ್ನಿಸಿ ಕೊಂಡಾಗ ಹಣ ಸಂಪಾದನೆ, ಉದ್ಯೋಗ, ಮನೆ, ಆಸ್ತಿ ಎಂಬೆಲ್ಲ ವಿಚಾರಗಳೇ ನಮ್ಮನ್ನು ಹೆಚ್ಚಾಗಿ ಕಾಡಲಿದೆ. ಆದರೆ ಸರಳ ಜೀವನದಲ್ಲಿ ಆಗುವ ಕೆಲವು ವಿಚಾರಗಳನ್ನು ನಾವು ಮರೆತ್ತಿರುತ್ತೇವೆ. ನಾವು ದೊಡ್ಡ ಖುಷಿಗಳ ಹಿಂದೆ ಸಾಗುತ್ತ ಸಿಗುವ ಚಿಕ್ಕ ಪುಟ್ಟ ಖುಷಿ ಯನ್ನು ಕಡೆಗಣಿಸಬಾರದು. ಮುದ್ದು ಮೊಮ್ಮಗಳಿಗಾಗಿ ವರ್ಷದಿಂದ ಕಾದಿದ್ದು ಈಗ ಸಂಭ್ರಮಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿ:Alia Bhatt: ಪೆಟ್ ಡೇ ಆಚರಿಸಿದ ಆಲಿಯಾ; ಫೋಟೊ ಕ್ರೆಡಿಟ್ ಯಾರದ್ದು ಗೊತ್ತ?
ಮಂಗಳೂರು ಮೂಲದವರಾದ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮೊಮ್ಮಗಳು ಬಂದ ನಂತರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಮಗುವನ್ನು ಮುದ್ದಾಡುವಾಗ ಸುನೀಲ್ ಶೆಟ್ಟಿಗೆ ತಮ್ಮ ಬಾಲ್ಯದ ದಿನಗಳೇ ಜ್ಞಾಪಕವಾಗುತ್ತದಂತೆ. ಮಂಗಳೂರಿನಲ್ಲಿ ತಾವು ಕಳೆದ ಬಾಲ್ಯದ ಕ್ಷಣಗಳು ಸ್ವಾದಿಷ್ಟವಾದ ಮಂಗಳೂರು ಶೈಲಿಯ ಆಹಾರ ಪದಾರ್ಥಗಳು ಎಲ್ಲವೂ ನೆನಪಾಗುವುದಾಗಿ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ನಟ ಸುನೀಲ್ ಶೆಟ್ಟಿ ಇತ್ತೀಚೆಗಷ್ಟೇ ನಾದಾನಿಯನ್ ಸಿನಿಮಾದಲ್ಲಿ ಖುಷಿ ಕಪೂರ್ ಅವರ ತಂದೆಯಾಗಿ ನಟಿಸಿದ್ದರು. ಈ ಸಿನೆಮಾ ಬಳಿಕ ಅಹ್ಮದ್ ಖಾನ್ ನಿರ್ದೇಶನದ ವೆಲ್ಕಮ್ ಟು ದಿ ಜಂಗಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಈ ಸಿನೆಮಾ ತೆರೆಕಾಣಲಿದ್ದು ಅಕ್ಷಯ್ ಕುಮಾರ್, ಪರೇಶ್ ರಾವಲ್, ಸಂಜಯ್ ದತ್, ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಇನ್ನೂ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ.