ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಾಕ್ಸ್‌ ಆಫೀಸ್‌ನಲ್ಲಿ ಏದುಸಿರು ಬಿಡುತ್ತಿರುವ ಸನ್ನಿ ಡಿಯೋಲ್‌ ನಟನೆಯ ʻಬಟ್ವಾರಾ 1947ʼ ಸಿನಿಮಾ; ನಟ ಆಮಿರ್‌ ಖಾನ್‌ಗೆ ಲಾಸ್‌ ಆಗಲಿದೆಯಾ?

ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಹಾಗೂ ಸನ್ನಿ ಡಿಯೋಲ್ ಕಾಂಬಿನೇಷನ್‌ನ ಬಹುನಿರೀಕ್ಷಿತ 'ಬಟ್ವಾರಾ 1947' ಚಿತ್ರ ಮೊದಲ ವಾರಾಂತ್ಯದಲ್ಲಿ ಜಾಗತಿಕವಾಗಿ ₹37.11 ಕೋಟಿ ಗಳಿಸಿ ಹಿನ್ನಡೆ ಅನುಭವಿಸಿದೆ. ₹70 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ನಿರ್ಮಾಪಕ ಆಮಿರ್ ಖಾನ್ ಅವರಿಗೆ ನಷ್ಟದ ಆತಂಕ ಎದುರಾಗಿದೆ.

Sunny Deol: ಮೂರು ದಿನಗಳಲ್ಲಿ ʻಬಟ್ವಾರಾ 1947ʼ‌ ಚಿತ್ರ ಗಳಸಿದ್ದೆಷ್ಟು?

-

Avinash GR
Avinash GR Aug 17, 2026 1:40 PM

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ತೆರೆಕಂಡ ಬಾಲಿವುಡ್‌ನ ಬಹುನಿರೀಕ್ಷಿತ ʻಬಟ್ವಾರಾ 1947ʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಾಣದೆ ಹಿನ್ನಡೆ ಅನುಭವಿಸಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಹಾಗೂ ನಟ ಸನ್ನಿ ಡಿಯೋಲ್ ಜೋಡಿ ಸುಮಾರು ಮೂರು ದಶಕಗಳ ಬಳಿಕ ಒಂದಾಗಿರುವುದು ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿತ್ತು.

ಈ ಹಿಂದೆ 'ಘಾಯಲ್', 'ದಾಮಿನಿ' ಮತ್ತು 'ಘಾತಕ್'ನಂತಹ ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ನೀಡಿದ್ದ ಈ ಕಾಂಬಿನೇಷನ್‌ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವರದಿಗಳ ಪ್ರಕಾರ, ಈ ಚಿತ್ರವು ಮೊದಲ ವಾರಾಂತ್ಯದಲ್ಲಿ ದೇಶಾದ್ಯಂತ ಒಟ್ಟು ₹31.61 ಕೋಟಿ ಗಳಿಕೆಯನ್ನಷ್ಟೇ ದಾಖಲಿಸಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಏದುಸಿರು ಬಿಡುತ್ತಿದೆ.

ಮೂರು ದಿನಕ್ಕೆ ವಿಶ್ವಾದ್ಯಂತ 37 ಕೋಟಿ ಗಳಿಕೆ

ಆಗಸ್ಟ್ 14ರಂದು ತೆರೆಕಂಡ ಚಿತ್ರ ಮೊದಲ ದಿನ ₹5.75 ಕೋಟಿ ಗಳಿಸುವ ಮೂಲಕ ಸಾಧಾರಣ ಆರಂಭ ಪಡೆಯಿತು. ಎರಡನೇ ದಿನವಾದ ಶನಿವಾರ ₹13.50 ಕೋಟಿ ಗಳಿಸಿ ಚೇತರಿಕೆ ಕಂಡಿತಾದರೂ, ಮೂರನೇ ದಿನದಂದು 7,239 ಪ್ರದರ್ಶನಗಳಿಂದ ಕೇವಲ ₹7.25 ಕೋಟಿ ಗಳಿಕೆ ದಾಖಲಿಸಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ಗ್ರಾಸ್ ಕಲೆಕ್ಷನ್ ₹31.61 ಕೋಟಿಗೆ ತಲುಪಿದೆ. ವಿದೇಶಿ ಮಾರುಕಟ್ಟೆಯಲ್ಲಿ ಒಟ್ಟು ₹5.50 ಕೋಟಿ ಸಂಗ್ರಹವಾಗಿದ್ದು, ಜಾಗತಿಕ ಮಟ್ಟದಲ್ಲಿ ಚಿತ್ರದ ಒಟ್ಟು ಗಳಿಕೆ ₹37.11 ಕೋಟಿ ಗ್ರಾಸ್ ಆಗಿದೆ.

ನಿರ್ಮಾಪಕ ಆಮಿರ್‌ ಖಾನ್‌ಗೆ ಸಿಗಲಿದೆಯಾ ಗೆಲುವು?

ಈ ಚಿತ್ರದ ಬಜೆಟ್ ₹70 ಕೋಟಿಗೂ ಅಧಿಕ ಎನ್ನಲಾಗಿದ್ದು, ಸದ್ಯದ ಕಲೆಕ್ಷನ್ ವೇಗವನ್ನು ಗಮನಿಸಿದರೆ ₹100 ಕೋಟಿ ಕ್ಲಬ್ ಸೇರುವುದೇ ಅನುಮಾನ ಎನ್ನಲಾಗಿದೆ. ಬಾಲಿವುಡ್‌ ನಟ ಆಮಿರ್ ಖಾನ್ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ದೊಡ್ಡ ಲಾಭ ಸಿಗಬಹುದು ಎಂಬ ಲೆಕ್ಕಾಚಾರವಿತ್ತು. ಏಕೆಂದರೆ, ಈ ಹಿಂದೆ ಸನ್ನಿ ಡಿಯೋಲ್ ನಟಿಸಿದ್ದ 'ಗದರ್ 2' ಹಾಗೂ 'ಜಾಟ್' ಸಿನಿಮಾಗಳು ಭರ್ಜರಿ ಯಶಸ್ಸು ಕಂಡಿದ್ದವು. ಹೀಗಾಗಿ, ಈ ಸಿನಿಮಾದಿಂದಲೂ ಉತ್ತಮ ಲಾಭ ಗಳಿಸಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಅದು ಸಾಧ್ಯವಾಗುವಂತೆ ಕಾಣುತ್ತಿಲ್ಲ.

Aamir Khan-Gauri Spratt: ಸಂಬಂಧ ದೃಢಪಡಿಸಿದ ಬಳಿಕ ಮೊದಲ ಬಾರಿ ಜತೆಯಾಗಿ ಕಾಣಿಸಿಕೊಂಡ ಆಮೀರ್‌ ಖಾನ್‌-ಗೌರಿ ಸ್ಪ್ರಾಟ್

ಕಲಾವಿದರ ಅಭಿನಯಕ್ಕೆ ಮೆಚ್ಚುಗೆ

ಇನ್ನು, ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾ ಮಂಕಾಗಿದ್ದರೂ ಕಲಾವಿದರ ಅಭಿನಯಕ್ಕೆ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸನ್ನಿ ಡಿಯೋಲ್ ತಮ್ಮ ಎಂದಿನ ಆ್ಯಕ್ಷನ್ ಶೈಲಿಯ ಜೊತೆಗೆ ಶಾಂತ ಹಾಗೂ ಭಾವನಾತ್ಮಕ ಸನ್ನಿವೇಶಗಳನ್ನು ಅತ್ಯಂತ ಪ್ರಬುದ್ಧವಾಗಿ ನಿಭಾಯಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರೀತಿ ಜಿಂಟಾ ಉತ್ತಮವಾಗಿ ಅಭಿನಯಿಸಿದ್ದರೆ, ಹಿರಿಯ ನಟಿ ಶಬಾನಾ ಅಜ್ಮಿ ತಮ್ಮ ಗಾಂಭೀರ್ಯ ತುಂಬಿದ ನಟನೆಯ ಮೂಲಕ ಇಡೀ ಚಿತ್ರದ ತೂಕವನ್ನು ಹೆಚ್ಚಿಸಿದ್ದಾರೆ ಎಂದು ವಿಮರ್ಶಕರು ಶ್ಲಾಘಿಸಿದ್ದಾರೆ.

ಈ ಚಿತ್ರಕ್ಕೆ ರೆಹಮಾನ್‌ ಸಂಗೀತ

ಆಮಿರ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆಮಿರ್ ಖಾನ್ ಹಾಗೂ ಅಪರ್ಣಾ ಪುರೋಹಿತ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಆಸ್ಕರ್ ಪುರಸ್ಕೃತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರ ಸಂಗೀತ ಸಂಯೋಜನೆ ಮತ್ತು ಹಿರಿಯ ಸಾಹಿತಿ ಜಾವೇದ್ ಅಖ್ತರ್ ಅವರ ಸಾಹಿತ್ಯ ಈ ಚಿತ್ರಕ್ಕಿದೆ.