ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Suraj Singh: ಗಿಲ್ಲಿ-ಅಶ್ವಿನಿ ಫೈಟ್ ಬಗ್ಗೆ ಸೂರಜ್ ನೇರ ಮಾತು!

Ashwini Gowda Gilli Nata: ಬಿಗ್ ಬಾಸ್ ಮೂಲಕ ಮಿಂಚಿದ ಸೂರಜ್ , ಈಗ 'ಪವಿತ್ರ ಬಂಧನ' ಧಾರಾವಾಹಿಯ ನಾಯಕರಾಗಿದ್ದಾರೆ. ಬಾಣಸಿಗರಾಗಿದ್ದ ಅವರು ಮಾಡೆಲಿಂಗ್ ನಂತರ ಬಿಗ್ ಬಾಸ್ ಪ್ರವೇಶಿಸಿ ಜನಪ್ರಿಯತೆ ಗಳಿಸಿದರು. ಸೂರಜ್ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ಹೈಲೈಟ್ ಆದರು. `ಪವಿತ್ರ ಬಂಧನ’ ಧಾರಾವಾಹಿಯಲ್ಲಿ ಸೂರಜ್ ಅವರು ದೇವದತ್ ದೇಶ್​ಮುಖ್ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ತಿಲಕ್ ಗೌಡ ಪಾತ್ರದಲ್ಲಿ ಯಶಸ್ ಗೌಡ ಕಾಣಿಸಿಕೊಂಡಿದ್ದಾರೆ.

ಸೂರಜ್‌ ಸಿಂಗ್‌

ಬಿಗ್ ಬಾಸ್ (Bigg Boss Kannada 12) ಮೂಲಕ ಮಿಂಚಿದ ಸೂರಜ್ (Suraj Singh), ಈಗ 'ಪವಿತ್ರ ಬಂಧನ' ಧಾರಾವಾಹಿಯ ನಾಯಕರಾಗಿದ್ದಾರೆ. ಬಾಣಸಿಗರಾಗಿದ್ದ ಅವರು ಮಾಡೆಲಿಂಗ್ ನಂತರ ಬಿಗ್ ಬಾಸ್ ಪ್ರವೇಶಿಸಿ ಜನಪ್ರಿಯತೆ ಗಳಿಸಿದರು. ಸೂರಜ್ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ಹೈಲೈಟ್ ಆದರು. `ಪವಿತ್ರ ಬಂಧನ’ (Pavithra Bandhana) ಧಾರಾವಾಹಿಯಲ್ಲಿ ಸೂರಜ್ ಅವರು ದೇವದತ್ ದೇಶ್​ಮುಖ್ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ತಿಲಕ್ ಗೌಡ ಪಾತ್ರದಲ್ಲಿ ಯಶಸ್ ಗೌಡ ಕಾಣಿಸಿಕೊಂಡಿದ್ದಾರೆ. ಇದೀಗ ವಿಶ್ವವಾಣಿ ಜೊತೆ ಸದ್ಯ ಅಶ್ವಿನಿ ಹಾಗೂ ಗಿಲ್ಲಿ ನಡುವೆ ಆಗೋ ಗಲಾಟೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ನಟನೆ ಬಗ್ಗೆಯೇ ಗೊತ್ತಿರಲಿಲ್ಲ

ಸೂರಜ್‌ ಮಾತನಾಡಿ, ಜನರ ಪ್ರೀತಿ ತುಂಬಾ ಖುಷಿ ಆಗ್ತಿದೆ. ಧಾರಾವಾಹಿ ಸಿಗುತ್ತೆ ಅಂತ ಅಂದುಕೊಂಡಿರಲಿಲ್ಲ. ಹೊರಗಡೆ ಕೂಡ ಜನ ತುಂಬಾ ನೋಡಿ ಖುಷಿ ಪಡ್ತಾರೆ. ನನ್ನಕ್ಕಿಂತ ನನ್ನ ಅಮ್ಮ ಅಕ್ಕ ತುಂಬಾ ಖುಷಿ ಪಟ್ಟರು. ನನಗೆ ಎಲ್ಲೋ ಬಿಗ್‌ ಬಾಸ್‌ ಆಗಲ್ವೇನೋ ಅಂತ ಅನ್ನಿಸಿತ್ತು. ಆಮೇಲೆ ಇಷ್ಟ ಪಡ್ತಾರೆ ಅಂತ ಗೊತ್ತಾದಾಗ ಇಷ್ಟ ಆಯ್ತು. ಕಾಮನ್‌ ಮ್ಯಾನ್‌ ಆಗಿ ಬಂದು ಇಷ್ಟು ಜನ ಗಳಿಸ್ತೀಯಾ ಅಂದ್ರೆ ಯಾವ ರಿಯಾಲಿಟಿ ಶೋನಲ್ಲೂ ಸಿಗಲ್ಲ. ನನಗೆ ನಟನೆ ಬಗ್ಗೆಯೇ ಗೊತ್ತಿರಲಿಲ್ಲ ಎಂದರು.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ನಿಜವಾದ ಬಡವ ಅಲ್ಲ ಎಂದಿದ್ದ ಅಶ್ವಿನಿ; ಧನುಷ್ ತಿರುಗೇಟು!

ಬಿದ್ದು ಬದ್ದು ನಕ್ಕಿದ್ದೀನಿ

ಗಿಲ್ಲಿ ಡೇ 1 ನಿಂದ ಹೇಗೆಇದ್ದರು ಹಾಗೇ ಕೊನೆ ತನಕ ಇದ್ದರು. ಹೊರಗಡೆ ಬಂದಾಗ ಗೊತ್ತಾಯ್ತು. ಗಿಲ್ಲಿ ಬಗ್ಗೆ ಇರೋ ಕ್ರೇಜ್‌ ಇರೋದು ನೋಡಿ ಹೇಗೆ ಸಾಧ್ಯ ಅಂತ ಪ್ರಶ್ನೆ ಬಂತು. ಮನೆಯಲ್ಲಿ ಇದ್ದಾಗ ಇರಿಟೇಶನ್‌ ಅನ್ಸತ್ತೆ. ನಾನು ಆಮೇಲೆ ವಿಡಿಯೋ ನೋಡಿ ಬಿದ್ದು ಬದ್ದು ನಕ್ಕಿದ್ದೀನಿ. ತುಂಬಾ ಖುಷಿ ಆಯ್ತು ಗಿಲ್ಲಿ ಬಗ್ಗೆ.

ಟ್ಯಾಲೆಂಟ್‌ನಿಂದ ಗೆದ್ದಿದ್ದಾನೆ

ಅಲ್ಲಿ ಕೂಡ ಯಾರು ಗೆಲ್ತಾರೆ ಅಂದಾಗ ಗಿಲ್ಲಿ ಅಂತ ಹೇಳ್ತಿದ್ದೆ. ಅಲ್ಲಿ ಅಶ್ವಿನಿ ಅವರು ಅಂದೆ. ನಂಗೆ ಐಡಿಯಾನೂ ಇರಲಿಲ್. ಗಿಲ್ಲಿ ಬಡವ ಶ್ರೀಮಂತ ಅಂತ. ಅವನು ಟ್ಯಾಲೆಂಟ್‌ನಿಂದ ಗೆದ್ದಿದ್ದಾನೆ. ಜನ ಇಷ್ಟ ಪಟ್ಟಿದ್ದಾರೆ. ಆಟ ಗೆಲ್ಲದಕ್ಕೂ ಬಡವ ಅನ್ನೋದಕ್ಕೂ ವ್ಯತ್ಯಾಸ ಇದೆ. ಎಲ್ಲೋ ಗಿಲ್ಲಿ ಹಾಕಿದ ಬಟ್ಟೆಯನ್ನು ನೋಡಿ ಅನ್ನಿಸರಬೇಕು. ಆದರೆ ಅವನು ದುಬಾರಿ ಬನಿಯನ್ನೇ ಹಾಕ್ತಿದ್ದ. ಅಶ್ವಿನಿ ಅವರು ರನ್ನರ್‌ ಅಪ್‌ ಆಗಬೇಕಿತ್ತು ಅನ್ನಿಸಿತ್ತು. ಅದು ಅವರಿಗೆ ನೋವಾಗಿರಬೇಕು ಎಂದರು.



ನಂದು ಮೊದಲ ರಿಯಾಲಿಟಿ ಶೋ. ನನಗೆ ಕೂಡ ಒಂದು ಮೆಮೊರಿ ಬೇಕು. ಫೋಟೋ ಹಾಕಿದೆ. ಗಿಲ್ಲಿ ಜೊತೆ ಇರೋ ಫೋಟೋ ಸಿಕ್ಕಿದ್ದೇ ಲೇಟ್‌ ಆಯ್ತು. ಆಮೇಲೆ ಪೋಸ್ಟ್‌ ಮಾಡಿದೆ. ಗಿಲ್ಲಿ ಜೊತೆಗಿರೋ ಜನ ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಅವನಿಗೆ ಸಿಗೋ ಅವಕಾಶಗಳು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಾನೆ ಎಂದರು.

ಇದನ್ನೂ ಓದಿ: Rakshitha Shetty: ಬಂಗುಡೆ ಮೀನು ಹಿಡಿದು ಸಂಭ್ರಮಿಸಿದ ರಕ್ಷಿತಾ ಶೆಟ್ಟಿ; ಹುಟ್ಟೂರಿನಲ್ಲಿ ಭರ್ಜರಿ ಸ್ವಾಗತ

ಪವಿತ್ರ ಬಂಧನ ಕಥೆ ಏನು?

ತಿಲಕ್ ಹಾಗೂ ಕಥಾ ನಾಯಕಿ ಪವಿತ್ರಾ ಪ್ರೀತಿಸುತ್ತಿರುತ್ತಾರೆ. ಆದರೆ, ಆಕೆ ದೇವದತ್​​ನ ಮದುವೆ ಆಗೋ ಪರಿಸ್ಥಿತಿ ಬರುತ್ತದೆ. ಇಬ್ಬರಿಗೂ ಒಬ್ಬರನ್ನೊಬ್ಬರನ್ನು ಕಂಡರೇ ಆಗೋದಿಲ್ಲ. ಆದಾರೂ ಮದುವೆ ಆಗುತ್ತಾರೆ. ಇದು ಧಾರಾವಾಹಿಯ ಕಥೆ.

Yashaswi Devadiga

View all posts by this author