ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Sushma Raj: ʻಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫುʼ ಖ್ಯಾತಿಯ ಸುಷ್ಮಾ ರಾಜ್​ಗೆ ಗಂಡು ಮಗು: ತಂದೆ ನೆನೆದು ಭಾವುಕ!

sushma Raj : ಕರಾವಳಿಯ ʻಹೆಣ್ಣು ಹುಲಿʼ ಎಂದೇ ಫೇಮಸ್‌ ಆಗಿರುವ ಸುಷ್ಮಾ ರಾಜ್‌ಗೆ ಗಂಡು ಮಗುವಿನ ಜನನವಾಗಿದೆ.ಫೆಬ್ರವರಿಯಲ್ಲಿ ನಿಧನರಾದ ತಮ್ಮ ತಂದೆ ಅಶೋಕ್ ಅವರೇ ಮಗನಾಗಿ ಮರುಹುಟ್ಟು ಪಡೆದಿದ್ದಾರೆ ಎಂದು, 'ಅಶೋಕ್ ರಾಜ್ ಈಸ್ ಬ್ಯಾಕ್' ಎಂದು ಬರೆದುಕೊಂಡಿದ್ದಾರೆ. ಕನ್ನಡದ ಕೆಲ ಧಾರಾವಾಹಿ , ಸಿನಿಮಾಗಳಲ್ಲಿ ನಟಿಸಿರುವ, ಹುಲಿ ಕುಣಿತದಲ್ಲಿಯೇ ಜನಪ್ರಿಯತೆ ಪಡೆದಿದ್ದರು ನಟಿ ಸುಷ್ಮಾ ರಾಜ್ ಕಾಡಬೆಟ್ಟು.

ಸುಷ್ಮಾ ರಾಜ್

ಕರಾವಳಿಯ ʻಹೆಣ್ಣು ಹುಲಿʼ ಎಂದೇ ಫೇಮಸ್‌ ಆಗಿರುವ ಸುಷ್ಮಾ ರಾಜ್‌ಗೆ (sushma raj kadabettu) ಗಂಡು ಮಗುವಿನ ಜನನವಾಗಿದೆ (Birth).ಫೆಬ್ರವರಿಯಲ್ಲಿ ನಿಧನರಾದ ತಮ್ಮ ತಂದೆ ಅಶೋಕ್ ಅವರೇ ಮಗನಾಗಿ ಮರುಹುಟ್ಟು ಪಡೆದಿದ್ದಾರೆ ಎಂದು, 'ಅಶೋಕ್ ರಾಜ್ ಈಸ್ ಬ್ಯಾಕ್' ಎಂದು ಬರೆದುಕೊಂಡಿದ್ದಾರೆ. ಕನ್ನಡದ ಕೆಲ ಧಾರಾವಾಹಿ (Serial), ಸಿನಿಮಾಗಳಲ್ಲಿ ನಟಿಸಿರುವ, ಹುಲಿ ಕುಣಿತದಲ್ಲಿಯೇ ಜನಪ್ರಿಯತೆ ಪಡೆದಿದ್ದರು ನಟಿ ಸುಷ್ಮಾ ರಾಜ್ ಕಾಡಬೆಟ್ಟು.

ಹುಲಿಕುಣಿತ ತರಬೇತಿ

ಸುಷ್ಮಾ ರಾಜ್ ಅವರ ತಂದೆ ಸುಮಾರು 35 ವರ್ಷಗಳಿಂದ ಹುಲಿಕುಣಿತ ತರಬೇತಿ ನೀಡುತ್ತಿದ್ದರು. ತಂದೆಯಂತೆ ಮಗಳು ಸುಷ್ಮಾ ರಾಜ್ ಮಸ್ತ್​ ಆಗಿ ಹುಲಿ ಡ್ಯಾನ್ಸ್​ ಮಾಡುತ್ತಾರೆ. ನಟಿ ಸುಷ್ಮಾ ರಾಜ್‌ ಮೇ 2024ರಲ್ಲಿ ನಿಶಾನ್ ನರೇಂದ್ರ ಎಂಬುವವರನನ್ನು 10 ವರ್ಷಗಳಿಂದ ಪ್ರೀತಿಸಿದ ಮದುವೆ ಆಗಿದ್ದರು. ಸುಷ್ಮಾ ರಾಜ್ ಪತಿ ಜಿಮ್​ ಟ್ರೈನರ್ ಆಗಿದ್ದಾರೆ.

ಇದನ್ನೂ ಓದಿ: Kannada Movie: ಉತ್ತರ ಕರ್ನಾಟಕದ ಸೊಗಡಿನ ಕಥೆ; ʻಹುಬ್ಬಳ್ಳಿ ಹಂಟರ್ಸ್ʼ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

ಅಲ್ಲದೇ ಬಾಡಿ ಬಿಲ್ಡಿಂಗ್​ನಲ್ಲಿ ಹೆಸರು ಮಾಡಿದ್ದಾರೆ. ಸುಷ್ಮಾ ಅವರ ಅಪ್ಪ, ಹುಲಿವೇಷಧಾರಿಯಾಗಿದ್ದ ಅಶೋಕ್​ ಅವರು ತೀರಿಕೊಂಡದ್ದು ಕೂಡ ಫೆಬ್ರುವರಿಯಲ್ಲಿ ಆಗಿರುವ ಹಿನ್ನೆಲೆಯಲ್ಲಿ, ಅಪ್ಪನೇ ಮತ್ತೆ ಹುಟ್ಟಿ ಬಂದಿರುವುದಾಗಿ ಹೇಳಿರೋ ನಟಿ, ʻಅಶೋಕ್‌ ರಾಜ್‌ ಈಸ್‌ ಬ್ಯಾಕ್‌ʼ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.



ಹುಲಿ ಮತ್ತು ಮರಿ ಥೀಮ್ ನಲ್ಲಿ ಸೀಮಂತ ನಡೆದಿತ್ತು. ಸೀಮಂತ ನಡೆದ ಹಾಲ್ ನಲ್ಲಿ ಹುಲಿ, ಹುಲಿ ಮರಿ ಹಾಗೂ ಹುಲಿ ವೇಷದ ಚಿತ್ರಗಳು ಗಮನ ಸೆಳೆದಿದ್ದವು. ಈಟಿವಿ ವಾಹಿನಿಯ ‘ಇಂಡಿಯನ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಟಾಪ್ 4 ಸ್ಥಾನ ಪಡೆದುಕೊಂಡಿದ್ದರು.

ಇದನ್ನೂ ಓದಿ: Chaithra Kundapura: ಯಾರಿಗೆ ಎಷ್ಟು ಗಂಡಂದಿರು ಇದ್ದಾರೆ? ಮಹಿಳಾ ಸ್ಪರ್ಧಿ ಬಗ್ಗೆ ಚೈತ್ರಾ ಕುಂದಾಪುರ ಹೊಸ ಪೋಸ್ಟ್‌!

ಮಾಡೆಲ್ ಆಗಿಯೂ ಅವರು ಕೆಲ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫಿಟ್‌ನೆಸ್ ಟ್ರೇನಿಂಗ್ ಕೂಡ ನೀಡುತ್ತಾರೆ. ಅಷ್ಟೇ ಅಲ್ಲದೆ ಒಂದು ರಿಯಾಲಿಟಿ ಶೋ ನಿರೂಪಣೆ ಕೂಡ ಮಾಡಿದ್ದರು. ಸುಷ್ಮಾ ರಾಜ್ ಹುಬ್ಬಳ್ಳಿ ಹುಡುಗ, ಮಂಗಳೂರು ಹುಡುಗಿ ಸೀರಿಯಲ್, ಮಾಸ್ತಿಗುಡಿ ಸಿನಿಮಾದಲ್ಲಿ ನಟಿಸಿದ್ದಾರೆ.

Yashaswi Devadiga

View all posts by this author