Chaithra Kundapura: ಯಾರಿಗೆ ಎಷ್ಟು ಗಂಡಂದಿರು ಇದ್ದಾರೆ? ಮಹಿಳಾ ಸ್ಪರ್ಧಿ ಬಗ್ಗೆ ಚೈತ್ರಾ ಕುಂದಾಪುರ ಹೊಸ ಪೋಸ್ಟ್!
Chaithra Kundapura: ಬಿಗ್ ಬಾಸ್ ಗುಂಗಿನಿಂದ ಜನ ಹೊರಗೆ ಬಂದಿದ್ರೂ, ಸ್ಪರ್ಧಿಗಳು ಮಾತ್ರ ಇದುವೆರೆಗೆ ಅದೇ ಗುಂಗಿನಲ್ಲಿ ಇರುವಂತಿದೆ. ಬಿಗ್ ಬಾಸ್ ಸೀಸನ್ 12ರ ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಜತ್ ಹಾಗೂ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಗೆ ಬಂದಿದ್ರು. ಆಗ ಚೈತ್ರಾ ಹಾಗೂ ಅಶ್ವಿನಿ ನಡುವೆ ವಾರ್ ಜೋರಾಗಿತ್ತು. ಇದೀಗ ಅಶ್ವಿನಿ ಪೋಸ್ಟ್ ಒಂದನ್ನ ಶೇರ್ ಮಾಡಿದ್ದು, ಚೈತ್ರಾ ಕುಂದಾಪುರ ಅವರನ್ನು ಕೆರಳುವಂತೆ ಮಾಡಿದೆ. ಆದರೆ ಈ ಶೀತಲಸಮರ ಬಿಗ್ ಬಾಸ್ ಮನೆಯಿಂದ ಆಚೆ ಬಂದಮೇಲೂ ನಿಲ್ಲುವಂತೆ ಕಾಣುತ್ತಿಲ್ಲ.
ಚೈತ್ರಾ ಕುಂದಾಪುರ -
ಬಿಗ್ ಬಾಸ್ (Bigg Boss Kannada 12) ಗುಂಗಿನಿಂದ ಜನ ಹೊರಗೆ ಬಂದಿದ್ರೂ, ಸ್ಪರ್ಧಿಗಳು ಮಾತ್ರ ಇದುವೆರೆಗೆ ಅದೇ ಗುಂಗಿನಲ್ಲಿ ಇರುವಂತಿದೆ. ಬಿಗ್ ಬಾಸ್ (Bigg Boss) ಸೀಸನ್ 12ರ ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಜತ್ (Rajath) ಹಾಗೂ ಚೈತ್ರಾ ಕುಂದಾಪುರ (Chaithra Kundapura) ಬಿಗ್ ಬಾಸ್ ಮನೆಗೆ ಬಂದಿದ್ರು. ಆಗ ಚೈತ್ರಾ ಹಾಗೂ ಅಶ್ವಿನಿ ನಡುವೆ ವಾರ್ ಜೋರಾಗಿತ್ತು. ಇದೀಗ ಅಶ್ವಿನಿ ಪೋಸ್ಟ್ ಒಂದನ್ನ ಶೇರ್ ಮಾಡಿದ್ದು, ಚೈತ್ರಾ ಕುಂದಾಪುರ ಅವರನ್ನು ಕೆರಳುವಂತೆ ಮಾಡಿದೆ. ಆದರೆ ಈ ಶೀತಲಸಮರ ಬಿಗ್ ಬಾಸ್ ಮನೆಯಿಂದ ಆಚೆ ಬಂದಮೇಲೂ ನಿಲ್ಲುವಂತೆ ಕಾಣುತ್ತಿಲ್ಲ.
ಈಗ ಚೈತ್ರಾ ಕುಂದಾಪುರ ಅವರು ಮೂರು ಮದುವೆಯಾದ ಬಿಗ್ ಬಾಸ್ ಸ್ಪರ್ಧಿ ಬಗ್ಗೆ ಇನ್‌ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡಿದ್ದಾರೆ.
ಚೈತ್ರಾ ಪೋಸ್ಟ್ ಏನು?
“ವೈಯಕ್ತಿಕ ದಾಳಿಗೆ ಇಳಿಯೋದೆ ಆದರೆ ನಾನು ಇಳಿಯಬಲ್ಲೆ. ಆದರೆ ನನಗೂ ನಿಮಗೂ ವ್ಯತ್ಯಾಸ ಇದೆ. ನನಗೂ ಗೊತ್ತು, ಯಾರು ಮೇಲೆ ಎಷ್ಟು ಚೆಕ್‌ಬೌನ್ಸ್ ಕೇಸ್‌ಇದೆ, ಯಾರಿಗೆ ಎಷ್ಟು ಗಂಡಂದಿರು ಇದ್ದಾರೆ? ಯಾಕೆ ತನ್ನ ಪ್ರೀತಿಯ ಬಗ್ಗೆ ಎರಡು ನಿಮಿಷ ಮಾತನಾಡುವ ಧೈರ್ಯ ಕೂಡ ಬಗ್ ಬಾಸ್ ಮನೆಯ ಒಳಗಡೆ ತೋರಿಸಲಿಲ್ಲ. ಎಲ್ಲವನ್ನು ಮಾತನಾಡಬಲ್ಲೆ, ಆದರೆ ನಾನು ಇವರಷ್ಟು ಚೀಪ್‌ಅಲ್ಲ, ನನಗೆ ಇನ್ನೊಬ್ಬತ ಮೇಲೆ ವೈಯಕ್ತಿಕ ದಾಳಿ ಮಾಡಿ ಪ್ರಚಾರ ಪಡೆಯುವ ಹುಚ್ಚು ಇಲ್ಲ. ಅಂದಹಾಗೆ ಚೆಕ್ ಬೌನ್ಸ್‌ಕೇಸ್ ಕೂಡ ವಂಚನೆ ಕೇಸ್ ಅಡಿಯಲ್ಲೇ ಬರುತ್ತದೆ.
ಇದನ್ನೂ ಓದಿ: Allu Arjun: ಖ್ಯಾತ ಬಾಲಿವುಡ್ನ ನಿರ್ದೇಶಕನ ಜೊತೆ ಅಲ್ಲು ಅರ್ಜುನ್ ಮೂವಿ?
ಮೂರು ಗಂಡಂದಿರು.. ಕ್ಷಮಿಸಿ ಈಗ ಹೆಗಲು ಮುಟ್ಟಿ ನೋಡಿಕೊಳ್ಳಬೇಕು” ಎಂದು ಚೈತ್ರಾ ಕುಂದಾಪುರ ಅವರು ಪೋಸ್ಟ್ ಹಾಕಿದ್ದಾರೆ. ಚೈತ್ರಾ ಕುಂದಾಪುರ ಅವರು ಯಾವ ಬಿಗ್ ಬಾಸ್ ಸ್ಪರ್ಧಿಗೆ ಹೇಳಿದ್ದಾರೆ ಎಂಬುದನ್ನು ಅವರೇ ಹೇಳಬೇಕಿದೆ.
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಚೈತ್ರಾ ಕುಂದಾಪುರ ಆಟ ಆಡುವಾಗ ಅವರ ಮೈಮೇಲೆ ಗಾಯಗಳು ಆಗಿತ್ತು. ಅಶ್ವಿನಿ ಗೌಡ ಕೈಮೇಲೆ ಪರಚಿದ ಗಾಯಗಳ ಗುರುತು ಇತ್ತು. ಈ ಫೋಟೋಗಳು ಈಗ ವೈರಲ್ ಆಗುತ್ತಿದ್ದವು.

ಇನ್‌ಸ್ಟಾಗ್ರಾಮ್‌ನಲ್ಲಿ ಕಿಡಿಕಾರಿದ ಚೈತ್ರಾ ಕುಂದಾಪುರ
"ನನ್ನ ತೂಕಕ್ಕಿಂತ ಎರಡು ಪಟ್ಟು ಹೆಚ್ಚು ತೂಕವಿರುವ ವ್ಯಕ್ತಿಯೊಬ್ಬರು ನಾನು ಮುಟ್ಟಿನ ಸಮಯದಲ್ಲಿ ನನ್ನ ಹೊಟ್ಟೆಯ ಮೇಲೆ ಕುಳಿತು ಕುತ್ತಿಗೆ ತಿರುಗಿಸಿದ್ದಾರೆ. ನನ್ನ ದೇಹದ ಮೇಲೂ ಉಗುರುಗಳ ಗುರುತುಗಳಿವೆ.. ಟಿಂಚರ್ ಹಚ್ಚಿದ ನಂತರವೂ ನೋವು ಕಡಿಮೆಯಾಗಲಿಲ್ಲ. ಆದರೆ ಕ್ಷಮಿಸಿ, ಇದನ್ನೆಲ್ಲ ಪ್ರದರ್ಶಿಸಲು ಮತ್ತು ಸಹಾನುಭೂತಿ ಪಡೆಯಲು ನನ್ನ ಬಳಿ ದುಡ್ಡು ನೀಡಿ ಇರಿಸಿಕೊಂಡಿರುವ ಪಿಆರ್ ತಂಡವಿಲ್ಲ" ಎಂದು ಸ್ಟೋರಿ ಹಾಕಿಕೊಂಡಿದ್ದಾರೆ ಚೈತ್ರಾ ಕುಂದಾಪುರ.
ಇದನ್ನೂ ಓದಿ: Ram Charan: ನಟ ರಾಮ್ ಚರಣ್, ಉಪಾಸನಾ ಬಾಳಲ್ಲಿ ಅವಳಿ ಮಕ್ಕಳು; ಸಂಭ್ರಮಿಸಿದ್ದು ಹೀಗೆ
ʻಬಿಗ್ ಬಾಸ್ʼ ಅನ್ನೋದು ಒಂದು ರಿಯಾಲಿಟಿ ಶೋ. ಅಲ್ಲಿ ವಾಕ್ಸಮರ, ಜಗಳ, ಒಮ್ಮೊಮ್ಮೆ ಕೈಕೈ ಮಿಲಾಯಿಸುವಂತಹ ಸಂದರ್ಭಗಳು ಬರುತ್ತವೆ. ಆದರೆ ಅದೆಲ್ಲವೂ ಅಲ್ಲಿರುವ ತನಕ ಮಾತ್ರ ಇರುತ್ತದೆ. ಎಷ್ಟೋ ಸ್ಪರ್ಧಿಗಳು ಒಳಗೆ ಕಿತ್ತಾಡಿ, ಹೊರಗೆ ಬಂದಮೇಲೆ ಉತ್ತಮವಾದ ಸ್ನೇಹ ಸಂಬಂಧವನ್ನು ಹೊಂದಿರುವವರನ್ನು ನಾವು ನೋಡಿದ್ದೇವೆ. ಆದರೆ ಅಶ್ವಿನಿ ಗೌಡ ಮತ್ತು ಚೈತ್ರಾ ಕುಂದಾಪುರ ಅವರ ನಡುವಿನ ಈ ಜಗಳವು ಬಿಗ್ ಬಾಸ್‌ನಿಂದ ಹೊರಬಂದ ಮೇಲೂ ಮುಂದುವರಿದಿದೆ.