ಯುದ್ಧಪೀಡಿತ ಇರಾನ್‌ಗೆ ಕಾಶ್ಮೀರಿಗಳಿಂದ ನೆರವು; ಪತಿ ಉಡುಗೊರೆಯಾಗಿ ನೀಡಿದ ಚಿನ್ನ ದಾನ ಮಾಡಿದ ವಿಧವೆ
Kashmir donations: ಈದ್-ಉಲ್-ಫಿತರ್ ಆಚರಣೆಗಳ ನಂತರ, ಶಿಯಾ ಪ್ರಾಬಲ್ಯದ ಜಮ್ಮು ಕಾಶ್ಮೀರದ ಪ್ರದೇಶಗಳಲ್ಲಿ ಸ್ವಯಂಸೇವಕರು ಮಿಲಿಟರಿ ದಾಳಿಯಿಂದ ಹಾನಿಗೊಳಗಾದವರಿಗೆ ಪರಿಹಾರವನ್ನು ನೀಡಲು ಮನೆ-ಮನೆಯಿಂದ ಹಣ, ವಸ್ತು ಸಂಗ್ರಹಿಸತೊಡಗಿದರು. ಜನರು ಹಣವನ್ನು ಮಾತ್ರವಲ್ಲದೆ ಚಿನ್ನ ಮತ್ತು ಬೆಳ್ಳಿ ಆಭರಣಗಳು, ಜಾನುವಾರುಗಳು ಮತ್ತು ಸಾಂಪ್ರದಾಯಿಕ ತಾಮ್ರದ ವಸ್ತುಗಳನ್ನು ಸಹ ಕೊಡುಗೆಯಾಗಿ ನೀಡಿದರು.
ಯುದ್ಧಪೀಡಿತ ಇರಾನ್‌ಗೆ ಕಾಶ್ಮೀರಿಗಳಿಂದ ನೆರವು -
ಶ್ರೀನಗರ, ಮಾ. 23: ಕಾಶ್ಮೀರದ ನಿವಾಸಿಗಳು, ವಿಶೇಷವಾಗಿ ಬುಡ್ಗಮ್ ಮತ್ತು ಬಾರಾಮುಲ್ಲಾ ಜಿಲ್ಲೆಗಳ ಜನರು, ಪಶ್ಚಿಮ ಏಷ್ಯಾ ಸಂಘರ್ಷದಿಂದ (middle east crisis) ಜರ್ಝರಿತವಾಗಿರುವ ಇರಾನ್‌ನ ಜನರನ್ನು ಬೆಂಬಲಿಸಲು ಮಾನವೀಯ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈದ್-ಉಲ್-ಫಿತರ್ ಆಚರಣೆಗಳ ನಂತರ, ಶಿಯಾ ಪ್ರಾಬಲ್ಯದ ಪ್ರದೇಶಗಳಲ್ಲಿ ಸ್ವಯಂಸೇವಕರು ಇತ್ತೀಚಿನ ಮಿಲಿಟರಿ ದಾಳಿಯಿಂದ ಹಾನಿಗೊಳಗಾದವರಿಗೆ ಪರಿಹಾರವನ್ನುಒದಗಿಸಲು ಮನೆ-ಮನೆಗೆ ಸಂಗ್ರಹಗಳನ್ನು ಆಯೋಜಿಸಿದ್ದಾರೆ.
ಜನರು ಹಣವನ್ನು ಮಾತ್ರವಲ್ಲದೆ ಚಿನ್ನ ಮತ್ತು ಬೆಳ್ಳಿ ಆಭರಣ, ಜಾನುವಾರುಗಳು ಮತ್ತು ಸಾಂಪ್ರದಾಯಿಕ ತಾಮ್ರದ ವಸ್ತುಗಳನ್ನು ಸಹ ಕೊಡುಗೆಯಾಗಿ ನೀಡಿದರು. ಕಾಶ್ಮೀರಿ ವಿಧವೆಯೊಬ್ಬರು ತಮ್ಮ ದಿವಂಗತ ಪತಿಯ ನೆನಪಿಗಾಗಿ 28 ವರ್ಷಗಳಿಂದ ಸಂರಕ್ಷಿಸಿದ್ದ ಚಿನ್ನವನ್ನು ದಾನ ಮಾಡುವ ಮೂಲಕ ಮಾನವೀಯತೆಯೇ ಮೊದಲು ಎನ್ನುವ ಸಂದೇಶ ಸಾರಿದರು. ಈ ಭಾವನಾತ್ಮಕ ಕ್ಷಣ ಹಲವರ ಕಣ್ಣಂಚು ಒದ್ದೆ ಮಾಡಿತು.
ವಿಡಿಯೊ ವೀಕ್ಷಿಸಿ:
A respected sister from Kashmir, donated the gold kept as a memento of her husband who passed away 28 years ago with a heart full of love and solidarity for the people of #Iran.
— Iran in India (@Iran_in_India) March 22, 2026
Your tears and pure emotions are the greatest source of comfort for the people of Iran and will never… pic.twitter.com/0zFcJwGhj0
With hearts full of gratitude, we sincerely thank the kind people of Kashmir for standing with the people of Iran through their humanitarian support and heartfelt solidarity; this kindness will never be forgotten.
— Iran in India (@Iran_in_India) March 22, 2026
Thank you, India. https://t.co/6rEyYEfjHu
ವಸ್ತುಗಳನ್ನು ದಾನ ಮಾಡುತ್ತಿರುವುದು ಒಂದು ಹೃದಯಸ್ಪರ್ಶಿ ಒಗ್ಗಟ್ಟಿನ ಪ್ರದರ್ಶನ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ವೈಯಕ್ತಿಕ ತ್ಯಾಗದ ಕಥೆಗಳು ಈ ಸಂದರ್ಭದಲ್ಲಿ ಧಾರಾಳ ಕಂಡು ಬರುತ್ತಿದೆ. ಅಂತಹ ಒಂದು ಕಥೆ ಭಾವನಾತ್ಮಕವಾಗಿ ಮನಸ್ಸನ್ನು ತಟ್ಟಿದೆ. ಕಾಶ್ಮೀರದ ಮಹಿಳೆಯೊಬ್ಬರು ಸುಮಾರು ಮೂರು ದಶಕಗಳಿಂದ ಸಂರಕ್ಷಿಸಿಕೊಂಡು ಬಂದ ಚಿನ್ನವನ್ನು ಹೇಗೆ ದಾನ ಮಾಡಿದರು ಎಂಬುದನ್ನು ಭಾರತದಲ್ಲಿರುವ ಇರಾನಿನ ರಾಯಭಾರ ಕಚೇರಿ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ನಿಮ್ಮ ಕಣ್ಣೀರು ಮತ್ತು ಶುದ್ಧ ಭಾವನೆಗಳು ಸಾಂತ್ವನದ ದೊಡ್ಡ ಮೂಲ ಎಂದು ರಾಯಭಾರ ಕಚೇರಿ ಬರೆದಿದ್ದು, ಭಾರತದ ಜನರಿಗೆ ಧನ್ಯವಾದಗಳನ್ನು ತಿಳಿಸಿದೆ.
ಇಸ್ರೇಲ್‌ಗೆ ಸ್ಪೇನ್ ಅಧ್ಯಕ್ಷರ ಯುದ್ಧ ವಿರೋಧಿ ಬರಹವನ್ನೊಳಗೊಂಡ ಕ್ಷಿಪಣಿ ಕಳುಹಿಸಿದ ಇರಾನ್
ಭಾರತದಲ್ಲಿರುವ ಇರಾನಿನ ರಾಯಭಾರ ಕಚೇರಿಯು ಸಾಮಾಜಿಕ ಮಾಧ್ಯಮದಲ್ಲಿ ಫೋಟೊ ಮತ್ತು ವಿಡಿಯೊ ಹಂಚಿಕೊಂಡಿದ್ದು, ಇರಾನ್ ಪುನರ್ನಿರ್ಮಾಣಕ್ಕೆ ಹಣ ಮತ್ತು ಆಭರಣಗಳನ್ನು ದಾನ ಮಾಡಿದ್ದಕ್ಕಾಗಿ ಭಾರತೀಯರ ದಯೆ ಮತ್ತು ಮಾನವೀಯತೆಗೆ ಧನ್ಯವಾದಗಳನ್ನು ಅರ್ಪಿಸಿದೆ.
ಈ ಕಾರ್ಯವು ಕಣಿವೆಯಲ್ಲಿ ನಡೆಯುತ್ತಿರುವ ವ್ಯಾಪಕ ಮಾನವೀಯ ಅಭಿಯಾನದ ಭಾಗವಾಗಿದೆ. ಬುಡ್ಗಾಮ್ ಮತ್ತು ಇತರ ಶಿಯಾ ಪ್ರಾಬಲ್ಯದ ಪ್ರದೇಶಗಳಲ್ಲಿ, ಸ್ಥಳೀಯರು ಮಸೀದಿಗಳ ಹೊರಗೆ ದೇಣಿಗೆ ಮಳಿಗೆಗಳನ್ನು ಸ್ಥಾಪಿಸಿ, ಆಭರಣ ಮತ್ತು ನಗದು, ತಾಮ್ರದ ಪಾತ್ರೆಗಳು ಮತ್ತು ಜಾನುವಾರುಗಳನ್ನು ದೇಣಿಗೆಯಾಗಿ ಸಂಗ್ರಹಿಸಿದ್ದಾರೆ.
ಮಸ್ಜಿದ್ ಇಮಾಮ್ ಜಮಾನ್‌ನಲ್ಲಿ ನಾವು ದಾನ ಸಂಗ್ರಹಿಸಲು ಒಂದು ಸ್ಟಾಲ್ ಸ್ಥಾಪಿಸಿದ್ದೇವೆ ಎಂದು ಬುಡ್ಗಾಮ್‌ನ ಮೊಹ್ಸಿನ್ ಅಲಿ ಹೇಳಿದರು. ನಮ್ಮ ತಾಯಂದಿರು ಮತ್ತು ಸಹೋದರಿಯರು ಆಭರಣ, ತಾಮ್ರ ಮತ್ತು ನಗದು ರೂಪದಲ್ಲಿ ಕೊಡುಗೆ ನೀಡುತ್ತಿದ್ದಾರೆ. ಇದರಿಂದ ನಾವು ಇರಾನ್‌ಗೆ ಸಹಾಯ ಮಾಡಬಹುದು. ವಯಸ್ಸು ಮತ್ತು ಲಿಂಗವನ್ನು ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹಿಳೆಯರು ಚಿನ್ನಾಭರಣಗಳು ಮತ್ತು ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ದಾನ ಮಾಡುವಲ್ಲಿ ಮುಂಚೂಣಿಯಲ್ಲಿದ್ದರೆ, ಮಕ್ಕಳು ತಮ್ಮ ಉಳಿತಾಯ ಮತ್ತು ಪಾಕೆಟ್ ಮನಿ ದಾನ ಮಾಡಿದ್ದಾರೆ ಎಂದರು.
ಭಾರತ ಮತ್ತು ಇರಾನ್ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧಗಳ ದೀರ್ಘ ಇತಿಹಾಸವನ್ನು ಹೊಂದಿವೆ. ವ್ಯಾಪಾರ, ಇಂಧನ ಮತ್ತು ಪ್ರಾದೇಶಿಕ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿನ ಸಹಯೋಗದ ಎರಡೂ ದೇಶಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿದೆ.