Shruthi Narayanan: ಖಾಸಗಿ ವಿಡಿಯೊ ಲೀಕ್ ಆದ ಬಳಿಕ ಮೊದಲ ಬಾರಿ ಪ್ರತಿಕ್ರಿಯಿಸಿದ ನಟಿ ಶ್ರುತಿ ನಾರಾಯಣನ್
Casting Couch Video: ತಮಿಳು ನಟಿ ಶ್ರುತಿ ನಾರಾಯಣನ್ ಅವರದ್ದೆನ್ನಲಾದ ಖಾಸಗಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದೀಗ ಅವರು ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ಫೋಟೊ ಶೂಟ್‌ನ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಶ್ರುತಿ ನಾರಾಯಣನ್.

ಚೆನ್ನೈ: ತಮಿಳು ನಟಿ ಶ್ರುತಿ ನಾರಾಯಣನ್ (Shruthi Narayanan) ಅವರದ್ದೆನ್ನಲಾದ ಖಾಸಗಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದೀಗ ಅವರು ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ಫೋಟೊ ಶೂಟ್‌ನ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅದಾಗ್ಯೂ ಅವರು ಕ್ಯಾಪ್ಶನ್‌ನಲ್ಲಿ ಏನನ್ನೂ ಬರೆದಿಲ್ಲ. ಜತೆಗೆ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಬಿಳಿ ಮತ್ತು ಬಂಗಾರ ವರ್ಣದ ಸೀರೆ ತೊಟ್ಟು, ಮದುಮಗಳಂತೆ ಸಿಂಗರಿಸಿಕೊಂಡಿರುವ ಫೋಟೊಗಳು ಇದಾಗಿದ್ದು, ಆ ಮೂಲಕ ವೈರಲ್ ಆಗುತ್ತಿರುವ ವಿಡಿಯೊ ಮತ್ತು ತಮಗೆ ಯಾವುದೇ ಸಂಬಂಧವಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ತಮಿಳು ಕಿರುತೆರೆ ಮತ್ತು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಶ್ರುತಿ ಅವರದ್ದೆನ್ನಲಾದ ಖಾಸಗಿ ವಿಡಿಯೊವೊಂದು ವೈರಲ್ (Casting Couch Video) ಆಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಖಾಸಗಿ ಅಡಿಷನ್ ಒಂದರ ವಿಡಿಯೊ ಇದು ಎನ್ನಲಾಗಿದೆ.
ಶ್ರುತಿ ನಾರಾಯಣನ್ ಅವರ ಇನ್‌ಸ್ಟಾಗ್ರಾಂ ಪೋಸ್ಟ್:
ಈ ಸುದ್ದಿಯನ್ನೂ ಓದಿ: Empuraan Movie: 'ಎಂಪುರಾನ್' ನೋಡಿದ ಪ್ರೇಕ್ಷಕ ಪ್ರಭುಗಳು ಹೇಳಿದ್ದೇನು ಗೊತ್ತಾ...?
ಮತ್ತೊಮ್ಮೆ ಮುನ್ನೆಲೆಗೆ ಬಂದ ಕಾಸ್ಟಿಂಗ್ ಕೌಚ್
ಶ್ರುತಿ ನಾರಾಯಣನ್ ಅವರದ್ದೆನ್ನಲಾದ ಈ ವಿಡಿಯೊ ಹೊರ ಬರುತ್ತಿದ್ದಂತೆ ಚಿತ್ರರಂಗದಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇದೀಗ ಲೀಕ್ ಆಗಿರುವುದು ಕಾಸ್ಟಿಂಗ್ ಕೌಚ್ ವಿಡಿಯೊ ಎನ್ನಲಾಗುತ್ತಿದೆ. ಪಾತ್ರವೊಂದನ್ನು ಪಡೆಯಲು ನಟಿ ಹೀಗೆಲ್ಲ ಮಾಡಿದ್ದು, ಅದನ್ನು ಯಾರೋ ರೆಕಾರ್ಡ್ ಮಾಡಿಕೊಂಡು ಇದೀಗ ವೈರಲ್ ಮಾಡಿದ್ದಾರೆ ಎಂಬ ವಾದ ಕೇಳಿ ಬರುತ್ತಿದೆ. ಹೀಗಾಗಿ ಚಿತ್ರರಂಗದಲ್ಲಿನ ನಟಿಯರ ಸುರಕ್ಷತೆ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ.
ಮನರಂಜನಾ ಕ್ಷೇತ್ರದಲ್ಲಿ ಅವಕಾಶ ಕೇಳಿ ಬರುವ ನಟ-ನಟಿಯರನ್ನು ತಮ್ಮ ಹಾಸಿಗೆಗೆ ಕರೆಯುವ ಪ್ರವೃತ್ತಿಯನ್ನು ಕಾಸ್ಟಿಂಗ್ ಕೌಚ್ ಎನ್ನಲಾಗುತ್ತದೆ. ಅಂದರೆ ಅವಕಾಶ ಸಿಗಲು ನಿರ್ಮಾಪಕ/ನಿರ್ದೇಶಕರು ಹೇಳಿದ್ದೆಲ್ಲ ಕೇಳಬೇಕಾಗುತ್ತದೆ. ಈ ರೀತಿಯ ಕರಾಳ ಅನುಭವವಾಗಿರುವ ಬಗ್ಗೆ ಹಲವರು ಮನಬಿಚ್ಚಿ ಮಾತನಾಡಿದ್ದಾರೆ. ಶ್ರುತಿ ನಾರಾಯಣನ್ ಕೂಡ ಇಂತಹದ್ದೇ ಬಲೆಗೆ ಬಿದ್ದಿರಬಹುದೇ ಎನ್ನುವ ಅನುಮಾನ ಕೆಲವರಲ್ಲಿ ಮೂಡಿದೆ. ಸದ್ಯ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ಪ್ರೈವೇಟ್ ಮಾಡಿಟ್ಟುಕೊಂಡಿದ್ದಾರೆ. ಅವರು ಈ ಬಗ್ಗೆ ಮನಬಿಚ್ಚಿ ಮಾತನಾಡಿ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಹಲವರು ಆಗ್ರಹಿಸಿದ್ದಾರೆ.
ಯಾರು ಈ ಶ್ರುತಿ ನಾರಾಯಣನ್?
ಶ್ರುತಿ ನಾರಾಯಣ್ ಕೆಲವು ಧಾರಾವಾಹಿ ಹಾಗೂ ಹಲವು ಜನಪ್ರಿಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 24 ವರ್ಷದ ಅವರು ತಮ್ಮ ವೃತ್ತಿ ಜೀವನವನ್ನು ತಮಿಳು ಧಾರಾವಾಹಿ ʼಸಿರಂಗದಿಕ್ಕ ಆಸೈʼ ಮೂಲಕ ಆರಂಭಿಸಿದರು. ಜತೆಗೆ ತಮಿಳಿನ ಸೂಪರ್ ಹಿಟ್ ಧಾರಾವಾಹಿ ‘ಕಾರ್ತಿಕ ದೀಪಂ’ನಲ್ಲಿಯೂ ಅಭಿನಯಿಸಿದ್ದಾರೆ. ಅಲ್ಲದೆ ಹಲವು ಸಿನಿಮಾ, ವೆಬ್ ಸೀರಿಸ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ. 2022ರಲ್ಲಿ ತೆರೆಕಂಡ ‘ಮಾರಿ’ ಸಿನಿಮಾ, ಸಮಂತಾ ಹಾಗೂ ವರುಣ್ ಧವನ್ ನಟಿಸಿರುವ ವೆಬ್ ಸರಣಿ ‘ಸಿಟಾಡೆಲ್: ಹನಿ ಬನಿ’ಯಲ್ಲಿ ಅಭಿನಯಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿಯೂ ಜನಪ್ರಿಯರಾಗಿರುವ ಅವರು ಸುಮಾರು 52,000 ಫಾಲೋವರ್ಸ್ ಹೊಂದಿದ್ದಾರೆ.