ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Empuraan Movie: 'ಎಂಪುರಾನ್'​​ ನೋಡಿದ ಪ್ರೇಕ್ಷಕ ಪ್ರಭುಗಳು ಹೇಳಿದ್ದೇನು ಗೊತ್ತಾ...?

Empuraan Movie: ಎಂಪುರಾನ್ ಸಿನೆಮಾ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಮರ್ಶೆಗಳು ವ್ಯಕ್ತವಾಗುತ್ತಿದ್ದು, ಮೋಹನ್ ಲಾಲ್ ನಟನೆಯ ಈ ಸಿನೆಮಾವನ್ನು ಹಲವಾರು ಒಪ್ಪಿ ಅಪ್ಪಿಕೊಂಡರೆ, ಇನ್ನೂ ಕೆಲವರು ಚೂರು ತೀಕ್ಷ್ಯಣವಾಗಿಯೇ ಕ್ರಿಟಿಕ್ ಮಾಡಿದ್ದಾರೆ. ಹಾಗಾದ್ರೆ ಅಭಿಮಾನಿ ದೇವರುಗಳು L2: ಎಂಪುರಾನ್ ನೋಡಿ ಹೇಳಿದ್ದೇನು, ಬಾಕ್ಸ್ ಆಫೀಸ್ ಅಲ್ಲಿ ಇದರ ಅಬ್ಬರ ಹೇಗಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಮೋಹನ್‌ಲಾಲ್ ನಟನೆಯ ಸಿನಿಮಾಕ್ಕೆ ಸಿಕ್ಕಿತ್ತಾ ಸಿನಿ ಪ್ರಿಯರ ಮೆಚ್ಚುಗೆ...!

Profile Sushmitha Jain Mar 27, 2025 4:36 PM

ತಿರುವನಂತಪುರಂ: ಸಲಾರ್ ಖ್ಯಾತಿಯ ನಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಮತ್ತು ಮೋಹನ್ ಲಾಲ್ (Mohanlal) ನಟಿಸಿರುವ ಬಹುನಿರೀಕ್ಷಿತ ಚಿತ್ರ L2: ಎಂಪುರಾನ್ (Empuraan Movie) ತೆರೆಗೆ​ ಅಬ್ಬರಿಸಿದೆ. ಈ ಸಿನಿಮಾ ಮಾರ್ಚ್ 27ರಂದು ಅಂದರೆ ಇಂದು ಬಿಗ್​ಸ್ಕ್ರೀನ್​​ಗೆ ಬಂದಿದ್ದು, 2019 ರಲ್ಲಿ ಬಿಡುಗಡೆಯಾಗಿದ್ದ ಮಲಯಾಳಂ ನಟನೆಯ ಮೋಹನ್​ಲಾಲ್ ನಟನೆಯ ಲೂಸಿಫರ್ ಫ್ರಾಂಚೈಸ್‌ನ ಮುಂದಿನ ಭಾಗ ಇದಾಗಿದೆ. ಇದರಲ್ಲಿ ರಾಜಕೀಯ ಷಡ್ಯಂತ್ರಗಳು, ಕೌಟುಂಬಿಕ ತಾಕಲಾಟ, ಸಂಬಂಧಗಳ ನಡುವಿನ ಸಮಸ್ಯೆಗಳು, ಭಾವುಕತೆ, ರಾಷ್ಟ್ರೀಯತೆ ಸೇರಿ ಅದ್ಧೂರಿಯಾದ ಆಕ್ಷನ್ ಎಲ್ಲವೂ ಇತ್ತು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಈ ಸಿನಿಮಾದ ಎರಡನೇ ಭಾಗ ಇದಾಗಿದ್ದು, 2019 ರ ‘ಲುಸೀಫರ್’ ಎಲ್ಲಿಗೆ ನಿಂತಿತ್ತೊ ಅಲ್ಲಿಂದಲೇ ಕತೆ ಮತ್ತೆ ಶುರುವಾಗಿದೆ. ಈ ಮೂಲಕ ಅಭಿಮಾನಿಗಳ ಕಾಯುವಿಕೆ ಇಂದು ವಿರಾಮ ಬಿದ್ದಿದ್ದು, 2019ರ ಬ್ಲಾಕ್‌ಬಸ್ಟರ್ 'ಲೂಸಿಫರ್‌'ನ ಮುಂದುವರಿದ ಭಾಗ ಎಂಪುರಾನ್ ಕಣ್ತುಂಬಿಕೊಂಡ ಪ್ರೇಕ್ಷಕ ಪ್ರಭುಗಳು ಫುಲ್ ಫಿದಾ ಆಗಿದ್ದಾರೆ.

ಹೌದು ಲೂಸಿಫರ್‌ನೊಂದಿಗೆ ಪ್ರಾರಂಭವಾದ ಕಥೆಯೀಗ ಎರಡನೇ ಭಾಗ ಇಂದು ಬಿಡುಗಡೆಯಾಗಿದ್ದು, ಈ ಚಿತ್ರಕ್ಕೆ ಸಿನಿ ಪ್ರಿಯರು ತಲೆ ಬಾಗಿದ್ದಾರೆ . ಮುರಳಿ ಗೋಪಿ ಬರೆದ ಚಿತ್ರ ಪೊಲಿಟಿಕಲ್​ ಆ್ಯಕ್ಷನ್​ ಕಥಾಹಂದರವನ್ನು ಈ ಸಿನೆಮಾ ಒಳಗೊಂಡಿದ್ದು, ಚಿತ್ರದಲ್ಲಿ ಮೋಹನ್​ಲಾಲ್​​ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಟೋವಿನೋ ಥಾಮಸ್, ಇಂದ್ರಜಿತ್ ಸುಕುಮಾರನ್, ಮಂಜು ವಾರಿಯರ್, ಅಭಿಮನ್ಯು ಸಿಂಗ್ ಮತ್ತು ವಿದೇಶದ ಜೆರೋಮ್ ಫ್ಲಿನ್ ಮತ್ತು ಎರಿಕ್ ಎಬೌನಿ ಅವರಂತಹ ಪ್ರತಿಭೆಗಳು ತೆರೆ ಹಂಚಿಕೊಂಡಿದ್ದಾರೆ.

ಈ ಸಿನೆಮಾ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಮರ್ಶೆಗಳು ವ್ಯಕ್ತವಾಗುತ್ತಿದ್ದು, ಮೋಹನ್ ಲಾಲ್ ನಟನೆಯ ಈ ಸಿನೆಮಾವನ್ನು ಹಲವಾರು ಒಪ್ಪಿ ಅಪ್ಪಿಕೊಂಡರೆ, ಇನ್ನೂ ಕೆಲವರು ಚೂರು ತೀಕ್ಷ್ಯಣವಾಗಿಯೇ ಕ್ರಿಟಿಕ್ ಮಾಡಿದ್ದಾರೆ. ಹಾಗಾದ್ರೆ ಅಭಿಮಾನಿ ದೇವರುಗಳು L2: ಎಂಪುರಾನ್ ನೋಡಿ ಹೇಳಿದ್ದೇನು, ಬಾಕ್ಸ್ ಆಫೀಸ್ ಅಲ್ಲಿ ಇದರ ಅಬ್ಬರ ಹೇಗಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಈ ಸಿನಿಮಾ ಬಿಡುಗಡೆಗೂ ಮುನ್ನವೇ ಜನರಲ್ಲಿ ಬಹಳಷ್ಟು ಕ್ರೇಜ್ ಹುಟ್ಟಿಸಿತ್ತು. ಬಹುಷ ಮೋಹನ್‌ಲಾಲ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಜೋಡಿ ಇರುವುದಕ್ಕೋ ಏನೋ ನಿರೀಕ್ಷೆಯೂ ಹೆಚ್ಚಿತ್ತು. ಹಾಗಾಗಿ ಇಂದು ಈ ಸಿನೆಮಾ ನೋಡಿ ಬಂದವರು ತಮ್ಮ ಸೋಷಿಯಲ್ ಮೀಡಿಯಾ (ಎಕ್ಸ್) ಖಾತೆಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ಮೊದಲ ಭಾಗ ಮಂದಗತಿಯಲ್ಲಿ ಸಾಗುವ ಈ ಸಿನೆಮಾ ಪಾತ್ರಗಳನ್ನು ಪರಿಚಯಿಸುವುದಕ್ಕೆ ಅರ್ಧ ಸಮಯ ತೆಗೆದುಕೊಂಡಿದೆ. ಆದರೆ ಮೋಹನ್‌ಲಾಲ್ ಪಾತ್ರ ಶುರುವಾದ ಬಳಿಕ ಸ್ವಲ್ಪ ಮಟ್ಟಿಗೆ ಮನೋರಂಜನೆ ಶುರುವಾಗಲಿದ್ದು, ಫಿಲ್ಮಂ ಟ್ರ್ಯಾಕ್ಸ್ ಗೆ ಬರುತ್ತದೆ. ಆಮೇಲೆ ಚಿತ್ರ ಬೇರೆ ಬೇರೆ ಹಂತ ಹಂತಗಳಲ್ಲಿ ಸಾಗಲಿದ್ದು, ವಿವಿಧ ಸ್ಥಳಗಳಲ್ಲಿ ಸಿನೆಮಾದ ಪಯಣಿಸುತ್ತದೆ. ಆದರೆ, ಭಾವನಾತ್ಮಕವಾಗಿ ಜನರನ್ನು ತಲುವಲ್ಲಿ ಸಿನೆಮಾ ಫೇಲ್ ಆಗಿದ್ದು, ಬರವಣಿಗೆ ಹಾಗೂ ಸ್ಕ್ರೀನ್‌ಪ್ಲೇ ಕಳಪೆಯಾಗಿದೆ ಎಂದಿದ್ದಾರೆ. ಅಲ್ಲದೇ ಕಥೆಯನ್ನು ಬೇಕಾಂತಲ್ಲೇ ಎಳೆಯಲಾಗಿದ್ದು, ಕೇವಲ ಬಿಲ್ಡಪ್ ಚಿತ್ರ ಇದಾಗಿದೆ ಹೊರತು ಯಾವುದೇ ಸಂದೇಶ ಇಲ್ಲ ಎಂಬ ಮಾತು ಕೇಳಿ ಬಂದಿದೆ. ಈ ಸಿನಿಮಾ ಸುಮ್ಮನೇ ಹೈಪ್ ಕ್ರಿಯೇಟ್ ಮಾಡಿದ್ದು, ಇದೊಂದು ಆವರೇಜ್ ಸಿನಿಮಾ ಎಂಬ ವಿಮರ್ಶೆಗಳನ್ನು ಹಂಚಿಕೊಂಡಿದ್ದಾರೆ.



ಇನ್ನು ಈ ಚಿತ್ರಕ್ಕೆ 5ಕ್ಕೆ 2.75 ಸ್ಟಾರ್ ರೇಟ್ ಕೊಟ್ಟಿದ್ದಾರೆ, ಆದ್ರೆ ಬಾಕ್ಸ್ ಆಫೀಸ್ ಅಲ್ಲಿ ಮಾತ್ರ ಭಾರೀ ಸದ್ದು ಮಾಡಿದ್ದು, ಮಾಲಿವುಡ್ ಅಲ್ಲಿ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಎಂಪುರಾನ್ ದೇಶದಾದ್ಯಂತ ತನ್ನ ಮೊದಲ ದಿನದಂದೇ 50 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್​​ ಮಾಡಿದ್ದು, ತನ್ನ ಆರಂಭಿಕ ವಾರಾಂತ್ಯದಲ್ಲಿ 100 ಕೋಟಿ ರೂ.ಗಳನ್ನು ದಾಟಬಹುದು ಎಂದು ಸಿನಿಪಂಡಿತರು ಅಂದಾಜಿಸಿದ್ದಾರೆ. ಅಲ್ಲದೇ ಎಂಪುರಾನ್ ಮೊದಲ ದಿನದಂದು ದೇಶದಲ್ಲಿಯೇ ಸುಮಾರು 15 ಕೋಟಿ ರೂ. ಟಿಕೆಟ್‌ಗಳನ್ನು ಮಾರಾಟ ಮಾಡಿದ್ದು, ಹೊರ ರಾಜ್ಯ ಕೇರಳದಿಂದ 10 ಕೋಟಿ ರೂ. ಗಳಿಕೆಯಾಗಿದೆ.



ಈ ಸುದ್ದಿಯನ್ನು ಓದಿ: L2E Empuraan Movie: ಕರ್ನಾಟಕದಲ್ಲಿ ಮಲಯಾಳಂನ ‘L2E- ಎಂಪುರಾನ್’ ಚಿತ್ರ ವಿತರಿಸಲಿದೆ ಹೊಂಬಾಳೆ ಫಿಲಂಸ್

ಸಿನಿಮಾದ ಟ್ರೈಲರ್ ಮಲಯಾಳಂ ಸೇರಿದಂತೆ ಇನ್ನೂ ಕೆಲ ಭಾಷೆಗಳಲ್ಲಿ ಬಿಡುಗಡೆ ಆಗಿದ್ದು, ಸಿನಿಮಾದ ಬಿಡುಗಡೆಯನ್ನು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಮಾಡಲಾಗುತ್ತಿದೆ. ಸಿನಿಮಾದ ನಿರ್ದೇಶನವನ್ನು ಪೃಥ್ವಿರಾಜ್ ಸುಕುಮಾರ್ ಮಾಡಿದ್ದು, ಈ ಸಿನಿಮಾದಲ್ಲಿಯೂ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೈಲರ್​ನ ಕೆಲವು ದೃಶ್ಯಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಮೋಹನ್ ಲಾಲ್ ಅವರ ಆಪ್ತ ಆಂಟೊನಿ ಪೆರಂಬೂರ್.

‘ಎಲ್2: ಎಂಪುರಾನ್’, ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಿರುವ ಎರಡನೇ ಸಿನಿಮಾ ಇದಾಗಿದ್ದು, ಮೊದಲ ಭಾಗದಲ್ಲಿ ಇದ್ದ ಹಲವು ಪಾತ್ರಗಳು ಎರಡನೇ ಭಾಗದಲ್ಲಿಯೂ ಇವೆ. ಟೊವಿನೋ ಥಾಮಸ್, ಮಂಜು ವಾರಿಯರ್ ಸೇರಿದಂತೆ ಇನ್ನೂ ಕೆಲವು ಪಾತ್ರಗಳು ಈ ಸಿನಿಮಾದಲ್ಲಿಯೂ ಇವೆ. ಇದರ ಜೊತೆಗೆ ಇನ್ನಷ್ಟು ಹೊಸ ಪಾತ್ರಗಳು ಸಹ ಸೇರಿಕೊಂಡಿವೆ. ಕನ್ನಡದ ನಟ ಕಿಶೋರ್ ಅವರು ಸಹ ಈ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.