ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಜೈಲು ಮಾದರಿಯ ರೆಸ್ಟೋರೆಂಟ್ ಆರಂಭಿಸಿದ ತೆಲುಗು ನಟ; ಇದರ ಏನ್‌ ಸ್ಪೆಷಾಲಿಟಿ ಗೊತ್ತಾ?

ತೆಲುಗು ನಟ ಮಹೇಶ್‌ ಬಾಬು ಅವರು ಈಚೆಗಷ್ಟೇ ತಮ್ಮ ಎಎಂಬಿ ಸಿನಿಮಾಸ್‌ ಮಲ್ಟಿಪ್ಲೆಕ್ಸ್‌ಗಳನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದಾರೆ. ಗಾಂಧಿನಗರದ ಕಪಾಲಿ ಮಾಲ್‌ನಲ್ಲಿ ಎಎಂಬಿ ಸಿನಿಮಾಸ್‌ನ 9 ಸ್ಕ್ರೀನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇದೀಗ ತೆಲುಗಿನ ಮತ್ತೋರ್ವ ನಟ ಧರ್ಮ ಮಹೇಶ್ ಕೂಡ ಬೆಂಗಳೂರಿನಲ್ಲಿ ರೆಸ್ಟೋರೆಂಟ್‌ ಆರಂಭಿಸಿದ್ದಾರೆ.

ಬೆಂಗಳೂರಿನಲ್ಲಿ ನಾನಾ ಮಾದರಿಯ ಥೀಮ್ ಇರುವಂತಹ ರೆಸ್ಟೋರೆಂಟ್‌ಗಳು ಇವೆ. ಅದರಲ್ಲೀಗ ಜೈಲ್‌ ಮಾದರಿಯ ರೆಸ್ಟೋರೆಂಟ್ ಕೂಡ ಸೇರ್ಪಡೆಗೊಂಡಿದೆ. ಆಂಧ್ರಪ್ರದೇಶದ ಗುಂಟೂರು ಮತ್ತು ಹೈದರಾಬಾದ್‌ನಲ್ಲಿ ಈ ಜೈಲು ಮಾದರಿಯ ʻಜಿಸ್ಮತ್ ಜೈಲ್ ಮಂಡಿʼ ರೆಸ್ಟೋರೆಂಟ್‌ ಫೇಮಸ್‌ ಆಗಿವೆ. ಇದೀಗ ಅದರ ಬ್ರಾಂಚ್‌ ಬೆಂಗಳೂರಿಗೂ ಕಾಲಿಟ್ಟಿದೆ.

ಅಂದಹಾಗೆ, ನಿರ್ಮಾತೃ ಟಾಲಿವುಡ್‌ ನಟ ಧರ್ಮ ಮಹೇಶ್‌. ಹೌದು, ‘ಸಿಂಧೂರಂ’, ‘ಡ್ರಿಂಕರ್ ಸಾಯಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಧರ್ಮ ಮಹೇಶ್ ಅವರು ತಮ್ಮ ಜನಪ್ರಿಯ ಖಾದ್ಯ ಬ್ರ್ಯಾಂಡ್ ಆದ "ಜಿಸ್ಮತ್ ಜೈಲ್ ಮಂಡಿ"ಯನ್ನು (Jismat Jail Mandi) ಬೆಂಗಳೂರಿನ ಮಾರತಹಳ್ಳಿಯಲ್ಲಿ ಅದ್ಧೂರಿಯಾಗಿ ಆರಂಭಿಸಿದ್ದಾರೆ.

ಬೆಂಗಳೂರಿನ ಕಪಾಲಿ ಟಾಕೀಸ್‌ ಜಾಗದಲ್ಲಿ ತಲೆ ಎತ್ತಿದ ಮಹೇಶ್‌ ಬಾಬು ಒಡೆತನದ AMB ಸಿನಿಮಾಸ್;‌ ಮೊದಲ ದಿನ ಯಾವ ಭಾಷೆಯ ಸಿನಿಮಾಗಳಿಗೆ ಜಾಸ್ತಿ ಶೋ?

ಮಗನ ಹೆಸರಿನಲ್ಲೇ ಹೋಟೆಲ್

"ನನಗೆ ಬೆಂಗಳೂರಿನ ಜೊತೆ ಭಾವನಾತ್ಮಕ ನಂಟು ಇದೆ. ನಾನು 8ನೇ ತರಗತಿಯಲ್ಲಿ ಓದುತ್ತಿದ್ದಾಗ ಮೊದಲ ಬಾರಿಗೆ ಬೆಂಗಳೂರಿಗೆ ಭೇಟಿ ನೀಡಿದ್ದೆ. ಅಂದಿನಿಂದಲೂ ಈ ಊರಿನ ಮೇಲೆ ವಿಶೇಷ ಪ್ರೀತಿ ಮತ್ತು ನೆನಪುಗಳಿವೆ. ಹೀಗಾಗಿ ನಮ್ಮ ಬ್ರ್ಯಾಂಡ್‌ನ ಮುಂದಿನ ಹಂತದ ಬೆಳವಣಿಗೆಗೆ ಬೆಂಗಳೂರು ಅತ್ಯಂತ ಸೂಕ್ತ ಸ್ಥಳವಾಗಿದೆ. ಆರಂಭದಲ್ಲಿ ಗಿಸ್ಮತ್ ಹೆಸರಿನಲ್ಲಿದ್ದ ಈ ಬ್ರ್ಯಾಂಡ್ ಅನ್ನು ಇದೀಗ "ಜಿಸ್ಮತ್" ಎಂದು ಮರುನಾಮಕರಣ ಮಾಡಲಾಗಿದೆ. ತಮ್ಮ ಮಗನ ಹೆಸರನ್ನೇ ಈ ಹೋಟೆಲ್‌ಗೆ ಇಟ್ಟಿರುವುದು ನನಗೆ ಖುಷಿ ನೀಡಿದೆ. ಹೊಸ ಕಾರ್ಪೊರೇಟ್ ಚೌಕಟ್ಟಿನಡಿಯಲ್ಲಿ ಬ್ರ್ಯಾಂಡ್ ಅನ್ನು ವಿಸ್ತರಿಸುವ ದೃಷ್ಟಿಕೋನವನ್ನು ಹೊಂದಿದ್ದೇವೆ" ಅಂತಾರೆ ಧರ್ಮ.

ಕಪಾಲಿ ಟಾಕೀಸ್‌ ಜಾಗದಲ್ಲಿ ಹೊಸ ದಾಖಲೆ ಬರೆಯಲು ರೆಡಿಯಾದ ತೆಲುಗು ನಟ ಮಹೇಶ್‌ ಬಾಬು; AMB ಸಿನಿಮಾಸ್‌ ಕರ್ನಾಟಕಕ್ಕೆ ಎಂಟ್ರಿ!

ಜಿಸ್ಮತ್ ಜೈಲ್ ಮಂಡಿಯು ತನ್ನ ಅಸಲಿ ಅರೇಬಿಯನ್ ಮಂಡಿ ರುಚಿ ಮತ್ತು ವಿಶಿಷ್ಟವಾದ 'ಜೈಲ್ ಥೀಮ್' ಊಟದ ಶೈಲಿಗೆ ಹೆಸರುವಾಸಿಯಾಗಿದೆ. ಬೆಂಗಳೂರಿನಲ್ಲಿ ಅತ್ಯುತ್ತಮ ಬಿರಿಯಾನಿ ರುಚಿ ನೀಡುವ ಗುರಿಯನ್ನು ಇದು ಹೊಂದಿದೆ.‌ ಈಚೆಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಹೈಕೋರ್ಟ್ ವಕೀಲ ನಾಗೂರ್ ಬಾಬು ಮತ್ತು ಫ್ರಾಂಚೈಸಿ ಮಾಲೀಕ ಜೈದೇವ್ ಅವರು ಉಪಸ್ಥಿತರಿದ್ದು, ರೆಸ್ಟೋರೆಂಟ್‌ಗೆ ಶುಭ ಕೋರಿದರು.

ಮಹೇಶ್‌ ಬಾಬು ಬಳಿಕ ಬೆಂಗಳೂರಿಗೆ ಬಂದ ಮತ್ತೋರ್ವ ನಟ

ನಟ ಮಹೇಶ್‌ ಬಾಬು ಅವರು ಈಚೆಗಷ್ಟೇ ತಮ್ಮ ಮಲ್ಟಿಪ್ಲೆಕ್ಸ್‌ ಬ್ರಾಂಡ್‌ ಆಗಿರುವ ಎಎಂಬಿ ಸಿನಿಮಾಸ್‌ ಅನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದಾರೆ. ಗಾಂಧಿನಗರದಲ್ಲಿದ್ದ ಕಪಾಲಿ ಟಾಕೀಸ್‌ ಜಾಗದಲ್ಲಿ ಈಗ ಕಪಾಲಿ ಮಾಲ್‌ ಶುರುವಾಗಿದೆ. ಅದರಲ್ಲಿ ಎಎಂಬಿ ಸಿನಿಮಾಸ್‌ನ 9 ಸ್ಕ್ರೀನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇದೀಗ ಧರ್ಮ ಮಹೇಶ್ ಕೂಡ ತಮ್ಮ ರೆಸ್ಟೋರೆಂಟ್‌ನೊಂದಿಗೆ ಬೆಂಗಳೂರಿಗೆ ಕಾಲಿಟ್ಟಿದ್ದಾರೆ.