ದಳಪತಿ ವಿಜಯ್ (Thalapathy Vijay) ಅವರ ಜನ ನಾಯಗನ್ (Jana Nayagan) ಚಿತ್ರ ಜನವರಿ 9 ರಂದು ಬಿಡುಗಡೆಯಾಗಲು ಕೆಲವೇ ದಿನಗಳು ಬಾಕಿ ಇದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯು (CBFC) ಪ್ರಮಾಣಪತ್ರ ನೀಡಲು ವಿಳಂಬ ಮಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕರ್ನಾಟಕದಲ್ಲಿ ಈಗಾಗಲೇ ಬುಕಿಂಗ್ ಆರಂಭವಾಗಿ ಹೌಸ್‌ಫುಲ್ (HouseFul) ಆಗಿದ್ದರೂ, ತಮಿಳುನಾಡು ಮತ್ತು ತೆಲುಗು ರಾಜ್ಯಗಳಲ್ಲಿ ಬುಕಿಂಗ್ ಆರಂಭವಾಗಿಲ್ಲ.ಇನ್ನು ಚಿತ್ರರಂಗದಲ್ಲಿ ಕೂಡ ''ಜನನಾಯಗನ್'' ವಿಜಯ್ ಕೊನೆಯ ಚಿತ್ರವಾದ ಹಿನ್ನೆಲೆ ಬೆಳ್ಳಿತೆರೆಯಲ್ಲಿ ಈ ಚಿತ್ರವನ್ನು ನೋಡಲು ಉತ್ಸುಕರಾಗಿದ್ದಾರೆ. ಇನ್ನು ಚಿತ್ರರಂಗದಲ್ಲಿ ಕೂಡ ''ಜನನಾಯಗನ್'' ವಿಜಯ್ ಕೊನೆಯ ಚಿತ್ರವಾದ ಹಿನ್ನೆಲೆ ಬೆಳ್ಳಿತೆರೆಯಲ್ಲಿ ಈ ಚಿತ್ರವನ್ನು ನೋಡಲು ಉತ್ಸುಕರಾಗಿದ್ದಾರೆ. ರಿಷಬ್ ಶೆಟ್ಟಿ (Rishab Shetty) ಸದ್ಯ ''ಜನನಾಯಗನ್'' ಟ್ರೇಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಿಷಬ್ ಶೆಟ್ಟಿ ಟ್ವೀಟ್ ಏನು?
ತಮ್ಮ ಸೋಶಿಯಲ್ ಮೀಡಿಯಾದಲ್ಲಿ ''ಜನನಾಯಗನ್'' ಟ್ರೇಲರ್ ಹಂಚಿಕೊಂಡಿರುವ ರಿಷಬ್ ಶೆಟ್ಟಿ ಬೆಂಕಿ ಎಂದು ಬಣ್ಣಿಸಿದ್ದಾರೆ. ವಿಜಯ್ ಸರ್ ನಿಮಗೆ ಒಳ್ಳೆಯದಾಗಲಿ ಕೆವಿಎನ್ ನಿರ್ಮಾಣ ಸಂಸ್ಥೆಗೆ, ಅನಿರುದ್ದ್ ಮತ್ತು ಹೆಚ್ ವಿನೋತ್‌ಗೆ ಅದ್ಭುತ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ: Bigg Boss Kannada 12: ಮೊದಲ ಫಿನಾಲೆ ಟಿಕೆಟ್ ಪಡೆಯಲು ಸೋತು ಹೋದ್ರಾ ಗಿಲ್ಲಿ? `ಮಾತಿನ ಮಲ್ಲ'ನಿಗೆ ಧ್ರುವಂತ್ ಚಾಲೆಂಜ್!
ಜನ ನಾಯಗನ್ ಪ್ಯಾನ್-ಇಂಡಿಯಾ ಬಿಡುಗಡೆಯಾಗಿದ್ದು, ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡ ಡಬ್ಬಿಂಗ್ ಆವೃತ್ತಿಗಳಲ್ಲಿಯೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಜನವರಿ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಜನ ನಾಯಗನ್ ಚಿತ್ರಕ್ಕೆ ಸಿಬಿಎಫ್‌ಸಿ ಅನುಮೋದನೆಯ ನಂತರವೇ ಮುಂಗಡ ಬುಕಿಂಗ್ ತೆರೆಯಬಹುದು.
ಸೆನ್ಸಾರ್ ಪ್ರಮಾಣಪತ್ರ
ಇನ್ನು, ಕಳೆದ ವಾರ ಬಿಡುಗಡೆಯಾದ ಜನ ನಾಯಗನ್ ಚಿತ್ರದ ಟ್ರೈಲರ್‌ನಲ್ಲಿ ರಾಜಕೀಯ ಪ್ರೇರಿತ ಸಂಭಾಷಣೆಗಳಿರುವ ಸ್ಪಷ್ಟ ಸುಳಿವು ಸಿಕ್ಕಿತ್ತು. ಈ ಚಿತ್ರವು ಇನ್ನೂ ತನ್ನ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಕಾಯುತ್ತಿದೆ. ಮಂಡಳಿಯು ಸರಿಯಾದ ಸಮಯಕ್ಕೆ ಪ್ರಮಾಣ ಪತ್ರ ನೀಡಲಿದೆಯಾ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ.
ರಿಷಬ್ ಶೆಟ್ಟಿ ಟ್ವೀಟ್
ಒಂದು ವೇಳೆ ಪ್ರಮಾಣ ಪತ್ರ ಸಿಗುವುದು ವಿಳಂಬವಾದರೆ ಚಿತ್ರವು ಜನವರಿ 9ರಂದು ಬಿಡುಗಡೆ ಆಗುವುದು ಡೌಟ್ ಎನ್ನಲಾಗಿದೆ. ಇದರಿಂದ ಸಂಕ್ರಾಂತಿಗೆ ರಿಲೀಸ್ ಆಗುತ್ತಿರುವ ಇತರೆ ಸಿನಿಮಾಗಳಿಗೆ ಅನುಕೂಲವಾಗಬಹುದು.
ಇದನ್ನೂ ಓದಿ: Bigg Boss Kannada 12: ರಕ್ಷಿತಾಗೆ ಟಾಸ್ಕ್ ಅರ್ಥ ಆಗಲ್ವಾ? ಬೆಂಬಲಕ್ಕೆ ಬಂದ ಗಿಲ್ಲಿ ಮೇಲೆ ರಾಶಿಕಾ ಗರಂ
ಸದ್ಯದ ಮಾಹಿತಿ ಪ್ರಕಾರ, ಸೆನ್ಸಾರ್ ಪ್ರಮಾಣ ಪತ್ರ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡವು ನ್ಯಾಯಾಲಯದ ಮೊರೆ ಹೋಗಲು ರೆಡಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ತಮಿಳುನಾಡಿನಲ್ಲಿಯೇ ಇನ್ನೂ ಕೂಡ ಬುಕಿಂಗ್ ಓಪನ್ ಆಗದೇ ಇರುವುದು ಅಚ್ಚರಿ ಮೂಡಿಸಿದೆ. ತೆಲಂಗಾಣ - ಆಂಧ್ರಪ್ರದೇಶದಲ್ಲೂ ಕೂಡ ಜನ ನಾಯಗನ್‌ಗೆ ಬುಕಿಂಗ್ ಶುರುವಾಗಿಲ್ಲ.