Yash Toxic Movie: `ರಾಯ'ನಾಗಿ ಬಂದು ಧೂಳೆಬ್ಬಿಸಿದ ಯಶ್ ; ಟ್ಯಾಕ್ಸಿಕ್ ಟೀಸರ್ ನೋಡಿದ ರಾಕಿ ಭಾಯ್ ಫ್ಯಾನ್ಸ್ ಗೆ ʻಅಚ್ಚರಿ"
Toxic Movie Poster: ನಟ ಯಶ್‌ಗೆ ಇಂದು 40ನೇ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ‘ಟಾಕ್ಸಿಕ್’ ಸಿನಿಮಾದ ನಟಿಯರ ಪಾತ್ರಗಳ ಪೋಸ್ಟರ್‌ಗಳನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಇದೀಗ ನಾಯಕನ ಪೋಸ್ಟರ್ ಬಿಡುಗಡೆ ಮಾಡಿದೆ. ‘ಟಾಕ್ಸಿಕ್’ ಸಿನಿಮಾದ ಮುಖ್ಯ ಪಾತ್ರ ಅಂದರೆ ಯಶ್ ಅವರ ಪಾತ್ರದ ಪೋಸ್ಟರ್ ಬಿಡುಗಡೆ ಆಗಿದೆ. `ರಾಯ'ನಾಗಿ ಬಂದು ಧೂಳೆಬ್ಬಿಸಿದ್ದಾರೆ ಯಶ್.
ಟಾಕ್ಸಿಕ್ ಸಿನಿಮಾ -
ನಟ ಯಶ್‌ಗೆ (Yash Birthday) ಇಂದು 40ನೇ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಅಂತೂ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಯಶ್. ಕಳೆದ ಕೆಲ ದಿನಗಳಿಂದ ‘ಟಾಕ್ಸಿಕ್’ (Toxic Movie) ಸಿನಿಮಾದ ನಟಿಯರ ಪಾತ್ರಗಳ ಪೋಸ್ಟರ್‌ಗಳನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಇದೀಗ ನಾಯಕನ ಪೋಸ್ಟರ್ (Cinema Poster) ಬಿಡುಗಡೆ ಮಾಡಿದೆ. ‘ಟಾಕ್ಸಿಕ್’ ಸಿನಿಮಾದ ಮುಖ್ಯ ಪಾತ್ರ ಅಂದರೆ ಯಶ್ ಅವರ ಪಾತ್ರದ ಪೋಸ್ಟರ್ ಜೊತೆಗೆ ಸಣ್ಣ ಟೀಸರ್ ಕೂಡ ಬಿಡುಗಡೆ ಆಗಿದೆ. ಯಶ್ ಅವರು ಇರುವ ಟಾಕ್ಸಿಕ್ ಸಿನಿಮಾದ ಕೆಲವು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ ಯಾದರೂ ಯಾವುದರಲ್ಲೂ ಪೂರ್ಣ ಮುಖ ತೋರಿಸಿರಲಿಲ್ಲ.
ಕೆವಿಎನ್ ಪ್ರೊಡಕ್ಷನ್ಸ್ ಪೋಸ್ಟರ್
ಕೆವಿಎನ್ ಪ್ರೊಡಕ್ಷನ್ಸ್ ಪೋಸ್ಟರ್ ಹಂಚಿಕೊಂಡಿದೆ. RAYA ಅನ್ನು ಪರಿಚಯಿಸಲಾಗುತ್ತಿದೆ. ಟಾಕ್ಸಿಕ್: 19-03-2026 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ವಯಸ್ಕರಿಗೆ ಒಂದು ಕಾಲ್ಪನಿಕ ಕಥೆ ಎಂದು ಬರೆದುಕೊಂಡಿದೆ. ಯಶ್ ಅಂತೂ ಸಖತ್ ಅಬ್ಬರಿಸಿದ್ದಾರೆ. ಟೀಸರ್ ಕಂಡು ಸಖತ್ ಥ್ರಿಲ್ ಆಗಿದ್ದಾರೆ ಯಶ್ ಫ್ಯಾನ್ಸ್. ಯಶ್ ಲುಕ್ ಕಂಡು ಹೊಗಳುತ್ತಿದ್ದಾರೆ. ಟೀಸರ್ ಆರಂಭದಲ್ಲೇ ಹಸಿಬಿಸಿ ದೃಶ್ಯಗಳಿವೆ. ಮೇಕಿಂಗ್ ಹಾಲಿವುಡ್ ಶೈಲಿಯಲ್ಲಿದೆ.
ಸಿನಿಮಾದಲ್ಲಿ ಬ್ಯುಸಿ ಆದ ಯಶ್
ಯಶ್ ಅವರು ನಿನ್ನೆಯೇ ಫ್ಯಾನ್ಸ್‌ಗೆ ಪತ್ರ ಬರೆದು ಈ ಬಾರಿಯೂ ಭೇಟಿ ಅಸಾಧ್ಯ ಎಂದು ಹೇಳಿದ್ದರು. ನನ್ನ ಪ್ರೀತಿಯ ಅಭಿಮಾನಿಗಳಿಗೆ, ಕಳೆದ ಕೆಲವು ವರ್ಷಗಳಿಂದ ನೀವು ನನ್ನನ್ನು ಭೇಟಿಯಾಗಲು ಹೇಗೆ ಕಾಯುತ್ತಿದ್ದೀರಿ ಎಂದು ನನಗೆ ಪ್ರಾಮಾಣಿಕವಾಗಿ ತಿಳಿದಿದೆ. ನನ್ನನ್ನು ನಂಬಿರಿ, ನಿಮ್ಮೆಲ್ಲರನ್ನೂ ನೋಡಲು ನಾನು ಅಷ್ಟೇ ಹಾತೊರೆಯುತ್ತಿದ್ದೆನೆ.
ಇದನ್ನೂ ಓದಿ: Yash Birthday: ಅಭಿಮಾನಿಗಳಿಗೆ ಯಶ್ ಪ್ರೀತಿಯ ಪತ್ರ; ಏನು ಹೇಳಿದ್ರು ಗೊತ್ತಾ ರಾಕಿಂಗ್ ಸ್ಟಾರ್?
ಈ ವರ್ಷ ನನ್ನ ಹುಟ್ಟುಹಬ್ಬದಂದು ನಿಮ್ಮನ್ನು ಭೇಟಿ ಆಗಬೇಕು ಎಂದು ಬಯಸಿದ್ದೆ, ಆದರೆ ಮಾರ್ಚ್ 19, 2026 ರಂದು ಚಿತ್ರಮಂದಿರಗಳಲ್ಲಿ ನಿಮಗಾಗಿ ಸಿದ್ಧವಾಗುವ ಚಿತ್ರವನ್ನು ಪೂರ್ಣಗೊಳಿಸುವಲ್ಲಿ ನಾನು ಸಂಪೂರ್ಣವಾಗಿ ಮಗ್ನನಾಗಿದ್ದೇನೆ.
Get a good look at your danger - Introducing RAYA 🔥https://t.co/47XpnKQOXu
— KVN Productions (@KvnProductions) January 8, 2026
Toxic: A Fairy Tale for Grown-Ups in cinemas worldwide on 19-03-2026#DaddyIsHome #ToxicTheMovie@TheNameIsYash#Nayanthara@humasqureshi @advani_kiara @rukminitweets #TaraSutaria #GeetuMohandas… pic.twitter.com/mKmNJ1FGBH
ಈ ಕಾರಣದಿಂದಾಗಿ, ನಾನು ಇನ್ನೂ ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗುವುದಿಲ್ಲ.ಶೀಘ್ರದಲ್ಲೇ ಇನ್ನೂ ದೊಡ್ಡ ಮಟ್ಟದಲ್ಲು ನಿಮ್ಮನ್ನು ಭೇಟಿಯಾಗುತ್ತೇನೆ. ಈ ಮಧ್ಯೆ, ನಾನು ನಿಮ್ಮೆಲ್ಲರ ಶುಭಾಶಯಗಳನ್ನು ವೈಯಕ್ತಿಕವಾಗಿ ಕೇಳಿಕೊಳ್ಳುತ್ತೇನೆ ಮತ್ತು ನೀವು ಕಳುಹಿಸುವ ಪ್ರತಿಯೊಂದು ಪ್ರೀತಿಯನ್ನು ಪಾಲಿಸುತ್ತೇನೆ. ನಿಮ್ಮ, ಯಶ್ ಎಂದು ಬರೆದುಕೊಂಡಿದ್ದರು.
ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ತೆರೆಗೆ
ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ನಿರ್ಮಾಣವಾದ ʼಟಾಕ್ಸಿಕ್ʼ ಚಿತ್ರದಲ್ಲಿ ಬಹುಭಾಷಾ ನಟಿಯರು ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ನಯನತಾರಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅವರ ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿತ್ತು.
ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ʼಟಾಕ್ಸಿಕ್ʼ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ಸ್ ಮೂಲಕ ಈ ಸಿನಿಮಾಕ್ಕೆ ಕೋಟ್ಯಂತರ ರುಪಾಯಿ ಬಂಡವಾಳ ಹೂಡಿಕೆ ಮಾಡಲಾಗಿದೆ.
ಇದನ್ನೂ ಓದಿ: Yash-Radhika Pandit: ಯಶ್ ಮನೆಯಲ್ಲಿ ಕ್ರಿಸ್ಮಸ್ ಸೆಲೆಬ್ರೇಷನ್! ಚೆಂದದ ವಿಡಿಯೊ ಶೇರ್ ಮಾಡಿದ ರಾಧಿಕಾ ಪಂಡಿತ್
ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಈ ಸಿನಿಮಾ ಚಿತ್ರೀಕರಿಸಲಾಗಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇತರ ಹಲವು ಭಾಷೆಗಳಲ್ಲಿ ಡಬ್ ಮಾಡಿದ ಆವೃತ್ತಿಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿನೆ ರೂಪಿಸಿದೆ. ಈ ಮೂಲಕ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಸಿನಿಮಾನಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಲಿದೆ.