Yash Birthday: ಅಭಿಮಾನಿಗಳಿಗೆ ಯಶ್ ಪ್ರೀತಿಯ ಪತ್ರ; ಏನು ಹೇಳಿದ್ರು ಗೊತ್ತಾ ರಾಕಿಂಗ್ ಸ್ಟಾರ್?
Yash : ಜನವರಿ 08 ಯಶ್ ಅವರ ಹುಟ್ಟುಹಬ್ಬವಿದ್ದು ನಾಳೆಯ ದಿನ ‘ಟಾಕ್ಸಿಕ್’ ಸಿನಿಮಾದ ಮುಖ್ಯ ಪಾತ್ರ ಅಂದರೆ ಯಶ್ ಅವರ ಪಾತ್ರದ ಪೋಸ್ಟರ್ಬಿ ಡುಗಡೆ ಆಗಲಿದೆ. ಈಗಾಗಲೇ ಯಶ್ ಅವರು ಇರುವ ಟಾಕ್ಸಿಕ್ ಸಿನಿಮಾದ ಕೆಲವು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ ನಾಳೆ (ಜನವರಿ 08) ಯಶ್ ಅವರ ಪೋಸ್ಟರ್ ಬಿಡುಗಡೆ ಆಗಲಿರುವ ಮಾಹಿತಿಯನ್ನು ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೊಂಡಿದೆ. ಇದೀಗ ಯಶ್ ಅವರು ತಮ್ಮ ಬರ್ತ್‌ಡೇ ನಿಮಿತ್ತ ಫ್ಯಾನ್ಸ್‌ಗೆ ಪತ್ರ ಬರೆದಿದ್ದಾರೆ.
ಯಶ್ ಟಾಕ್ಸಿಕ್ ಸಿನಿಮಾ -
ಜನವರಿ 08 ಯಶ್ ಅವರ ಹುಟ್ಟುಹಬ್ಬವಿದ್ದು (Yash Birthday) ನಾಳೆಯ ದಿನ ‘ಟಾಕ್ಸಿಕ್’ ಸಿನಿಮಾದ ಮುಖ್ಯ ಪಾತ್ರ ಅಂದರೆ ಯಶ್ ಅವರ ಪಾತ್ರದ ಪೋಸ್ಟರ್ (Poster) ಬಿಡುಗಡೆ ಆಗಲಿದೆ. ಈಗಾಗಲೇ ಯಶ್ ಅವರು ಇರುವ ಟಾಕ್ಸಿಕ್ ಸಿನಿಮಾದ ಕೆಲವು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ ನಾಳೆ (ಜನವರಿ 08) ಯಶ್ ಅವರ ಪೋಸ್ಟರ್ ಬಿಡುಗಡೆ ಆಗಲಿರುವ ಮಾಹಿತಿಯನ್ನು ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೊಂಡಿದೆ. ಇದೀಗ ಯಶ್ ಅವರು ತಮ್ಮ ಬರ್ತ್‌ಡೇ ನಿಮಿತ್ತ ಫ್ಯಾನ್ಸ್‌ಗೆ (Fans Letter) ಪತ್ರ ಬರೆದಿದ್ದಾರೆ.
ಯಶ್ ಪತ್ರದಲ್ಲಿ ಏನಿದೆ?
ನನ್ನ ಪ್ರೀತಿಯ ಅಭಿಮಾನಿಗಳಿಗೆ,
ಕಳೆದ ಕೆಲವು ವರ್ಷಗಳಿಂದ ನೀವು ನನ್ನನ್ನು ಭೇಟಿಯಾಗಲು ಹೇಗೆ ಕಾಯುತ್ತಿದ್ದೀರಿ ಎಂದು ನನಗೆ ಪ್ರಾಮಾಣಿಕವಾಗಿ ತಿಳಿದಿದೆ. ನನ್ನನ್ನು ನಂಬಿರಿ, ನಿಮ್ಮೆಲ್ಲರನ್ನೂ ನೋಡಲು ನಾನು ಅಷ್ಟೇ ಹಾತೊರೆಯುತ್ತಿದ್ದೆನೆ.

ಈ ವರ್ಷ ನನ್ನ ಹುಟ್ಟುಹಬ್ಬದಂದು ನಿಮ್ಮನ್ನು ಭೇಟಿ ಆಗಬೇಕು ಎಂದು ಬಯಸಿದ್ದೆ, ಆದರೆ ಮಾರ್ಚ್ 19, 2026 ರಂದು ಚಿತ್ರಮಂದಿರಗಳಲ್ಲಿ ನಿಮಗಾಗಿ ಸಿದ್ಧವಾಗುವ ಚಿತ್ರವನ್ನು ಪೂರ್ಣಗೊಳಿಸುವಲ್ಲಿ ನಾನು ಸಂಪೂರ್ಣವಾಗಿ ಮಗ್ನನಾಗಿದ್ದೇನೆ. ಈ ಕಾರಣದಿಂದಾಗಿ, ನಾನು ಇನ್ನೂ ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದಂದೇ ಫ್ಯಾನ್ಸ್‌ಗೆ ಗುಡ್‌ನ್ಯೂಸ್; 'ಟಾಕ್ಸಿಕ್' ಟೀಸರ್ ನಾಳೆ ರಿಲೀಸ್
ಶೀಘ್ರದಲ್ಲೇ ಇನ್ನೂ ದೊಡ್ಡ ಮಟ್ಟದಲ್ಲು ನಿಮ್ಮನ್ನು ಭೇಟಿಯಾಗುತ್ತೇನೆ. ಈ ಮಧ್ಯೆ, ನಾನು ನಿಮ್ಮೆಲ್ಲರ ಶುಭಾಶಯಗಳನ್ನು ವೈಯಕ್ತಿಕವಾಗಿ ಕೇಳಿಕೊಳ್ಳುತ್ತೇನೆ ಮತ್ತು ನೀವು ಕಳುಹಿಸುವ ಪ್ರತಿಯೊಂದು ಪ್ರೀತಿಯನ್ನು ಪಾಲಿಸುತ್ತೇನೆ.
ನಿಮ್ಮ, ಯಶ್ ಎಂದು ಬರೆದುಕೊಂಡಿದ್ದಾರೆ.
ಟಾಕ್ಸಿಕ್ ಸಿನಿಮಾ ಬಿಗ್ ಅಪ್‌ಡೇಟ್
ಇನ್ನು ಈ ವರ್ಷವೂ ಯಶ್ ಅಭಿಮಾನಿಗಳನ್ನು ಭೇಟಿ ಆಗುತ್ತಿಲ್ಲ. ಸಿನಿಮಾದಲ್ಲಿ ಬ್ಯುಸಿ ಇದ್ದ ಕಾರಣ ಪ್ರೀತಿಯ ಪತ್ರದ ಮೂಲಕ ಹೇಳಿದ್ದಾರೆ.
ಟಾಕ್ಸಿಕ್ ಸಿನಿಮಾ ವಿಚಾರಕ್ಕೆ ಬರೋದಾದರೆ, ನಾಳೆ (ಜನವರಿ 08) ಯಶ್ ಅವರ ಪೋಸ್ಟರ್ ಬಿಡುಗಡೆ ಆಗಲಿರುವ ಮಾಹಿತಿಯನ್ನು ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೊಂಡಿದ್ದು, ‘ಯಾರ ಬಗ್ಗೆ ಅವರು ಎಚ್ಚರಿಸಿದ್ದರೊ ಆತನ ಅನಾವರಣ ಆಗಲಿದೆ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ನಾಳೆ (ಜನವರಿ 08) ಬೆಳಿಗ್ಗೆ 10 ಗಂಟೆ 10 ನಿಮಿಷಕ್ಕೆ ಯಶ್ ಅವರ ಪಾತ್ರದ ಪೋಸ್ಟರ್ ಬಿಡುಗಡೆ ಆಗಲಿದೆ. ಅಭಿಮಾನಿಗಳು ಸಖತ್ ಸ್ಟೈಲಿಷ್ ಮತ್ತು ಮಾಸ್ ಆಗಿರುವ ಪೋಸ್ಟರ್ ಅನ್ನು ನಿರೀಕ್ಷೆ ಮಾಡುತ್ತಿದ್ದಾರೆ.
Revealing the ONE they warned you about.
— KVN Productions (@KvnProductions) January 7, 2026
10:10 AM | 08-01-2026 #ToxicTheMovie#TOXIC #TOXIConMarch19th@TheNameIsYash#Nayanthara@humasqureshi @advani_kiara @rukminitweets #TaraSutaria #GeetuMohandas @RaviBasrur #RajeevRavi #UjwalKulkarni #TPAbid #MohanBKere… pic.twitter.com/7KsfjVoh7X
ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ತೆರೆಗೆ
ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ನಿರ್ಮಾಣವಾದ ʼಟಾಕ್ಸಿಕ್ʼ ಚಿತ್ರದಲ್ಲಿ ಬಹುಭಾಷಾ ನಟಿಯರು ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ನಯನತಾರಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅವರ ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿತ್ತು.
ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ʼಟಾಕ್ಸಿಕ್ʼ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ಸ್ ಮೂಲಕ ಈ ಸಿನಿಮಾಕ್ಕೆ ಕೋಟ್ಯಂತರ ರುಪಾಯಿ ಬಂಡವಾಳ ಹೂಡಿಕೆ ಮಾಡಲಾಗಿದೆ.
ಇದನ್ನೂ ಓದಿ: Bigg Boss Kannada 12: ಅಶ್ವಿನಿ-ಧ್ರುವಂತ್ ಮೇಲೆ ದ್ವೇಷದ ನೀರೆರಚಾಟ! ಚುಚ್ಚು ಮಾತುಗಳನ್ನಾಡಿದ ರಾಶಿಕಾ
ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಈ ಸಿನಿಮಾ ಚಿತ್ರೀಕರಿಸಲಾಗಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇತರ ಹಲವು ಭಾಷೆಗಳಲ್ಲಿ ಡಬ್ ಮಾಡಿದ ಆವೃತ್ತಿಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿನೆ ರೂಪಿಸಿದೆ. ಈ ಮೂಲಕ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ.