ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Toxic Review: ಭರ್ಜರಿ ಮೇಕಿಂಗ್, ಕುತೂಹಲ ಕೆರಳಿಸಿದ ಕಥೆ: 'ಟಾಕ್ಸಿಕ್' ಚಿತ್ರದ ಮೊದಲಾರ್ಧ ಹೇಗಿದೆ?

Toxic Review: ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಮೊದಲಾರ್ಧ ಮುಕ್ತಾಯವಾಗಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಪೋರ್ಚುಗೀಸರ ಆಡಳಿತಾವಧಿಯ ರೆಟ್ರೋ ಗೋವಾದ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ತೆರೆದುಕೊಳ್ಳುವ ಕಥೆ, ಮಗನ ಪಾತ್ರದ ಮೂಲಕ ಫ್ಲ್ಯಾಶ್‌ಬ್ಯಾಕ್ ರೂಪದಲ್ಲಿ ಸಾಗುತ್ತದೆ. ಮೇಕಿಂಗ್ ಅತ್ಯಂತ ಶ್ರೀಮಂತವಾಗಿದ್ದು, ಕೆಲವೆಡೆ ಅದ್ಧೂರಿತನ ಕೊಂಚ ಮಿತಿಮೀರಿದಂತೆ ಕಂಡರೂ ವಿಶ್ಯುವಲ್ ಆಗಿ ಚಿತ್ರ ಗಮನ ಸೆಳೆಯುತ್ತದೆ.

Toxic Review: 'ಟಾಕ್ಸಿಕ್' ಚಿತ್ರದ ಮೊದಲಾರ್ಧ ಹೇಗಿದೆ?

ಟಾಕ್ಸಿಕ್‌ ಸಿನಿಮಾ -

Yashaswi Devadiga
Yashaswi Devadiga Aug 26, 2026 9:03 AM

-ಅವಿನಾಶ್‌ ರಾಮ್‌

ರಾಕಿಂಗ್ ಸ್ಟಾರ್ ಯಶ್ ಅಭಿನಯದ (Rocking Star Yash) ಬಹುನಿರೀಕ್ಷಿತ 'ಟಾಕ್ಸಿಕ್' (Toxic Movie) ಚಿತ್ರದ ಮೊದಲಾರ್ಧ ಮುಕ್ತಾಯವಾಗಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಪೋರ್ಚುಗೀಸರ ಆಡಳಿತಾವಧಿಯ ರೆಟ್ರೋ ಗೋವಾದ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ತೆರೆದುಕೊಳ್ಳುವ ಕಥೆ, ಮಗನ ಪಾತ್ರದ ಮೂಲಕ ಫ್ಲ್ಯಾಶ್‌ಬ್ಯಾಕ್ (Flashback) ರೂಪದಲ್ಲಿ ಸಾಗುತ್ತದೆ. ಮೇಕಿಂಗ್ ಅತ್ಯಂತ ಶ್ರೀಮಂತವಾಗಿದ್ದು, ಕೆಲವೆಡೆ ಅದ್ಧೂರಿತನ ಕೊಂಚ ಮಿತಿಮೀರಿದಂತೆ ಕಂಡರೂ ವಿಶ್ಯುವಲ್ ಆಗಿ ಚಿತ್ರ ಗಮನ ಸೆಳೆಯುತ್ತದೆ.

ಪ್ರಮುಖ ಬಲ

ತಾಂತ್ರಿಕವಾಗಿ ಸಿನಿಮಾ ಅತ್ಯುನ್ನತ ಮಟ್ಟದಲ್ಲಿದ್ದು, ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಹಾಗೂ ಛಾಯಾಗ್ರಹಣ ಚಿತ್ರದ ಪ್ರಮುಖ ಬಲವಾಗಿ ನಿಂತಿವೆ. ವಿಶೇಷವಾಗಿ ಚಿತ್ರದ 'ತಬಾಯಿ' ಹಾಡು ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಪಾತ್ರಗಳ ವಿಚಾರಕ್ಕೆ ಬಂದರೆ, ಇದುವರೆಗೆ 'ರಾಯ'ನ ಪಾತ್ರದ ಅನಾವರಣ ಮಾತ್ರವಾಗಿದ್ದು, ಮಗನ ಪೂರ್ಣ ಪಾತ್ರದ ದರ್ಶನ ಇನ್ನೂ ಬಾಕಿ ಉಳಿದಿದೆ. ಯಶ್ ಮತ್ತು ಕಿಯಾರಾ ಅಡ್ವಾಣಿ ನಡುವಿನ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಮೋಡಿ ಮಾಡಿದ್ದರೆ, ನಟಿ ನಯನತಾರಾ ಅವರಿಗೆ ವಿಶಿಷ್ಟ ಹಾಗೂ ತೂಕದ ಪಾತ್ರ ದೊರೆತಿದೆ.

ಸಾಹಸ ಸನ್ನಿವೇಶಗಳು ಭರ್ಜರಿಯಾಗಿ ಮೂಡಿಬಂದಿದ್ದು, ಒಟ್ಟಾರೆಯಾಗಿ ಮೊದಲಾರ್ಧವು ದ್ವಿತೀಯಾರ್ಧದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: Toxic Release: 12 ಸಾವಿರ ಸ್ಕ್ರೀನ್‌ಗಳಲ್ಲಿ 'ಟಾಕ್ಸಿಕ್' ಅಬ್ಬರ! ಪಟಾಕಿ ಸಿಡಿಸಿ, ಕಟೌಟ್‌ಗೆ ಹಾಲಿನ ಅಭಿಷೇಕ