ʻರಾಕಿಂಗ್ ಸ್ಟಾರ್ʼ ಯಶ್ ಅವರ ಹೊಸ ಸಿನಿಮಾ ʻಟಾಕ್ಸಿಕ್ʼ ಟೀಸರ್ ಗುರುವಾರ ರಿಲೀಸ್ ಆಗಿದೆ. ಟೀಸರ್ ನೋಡಿದವರು ಅಕ್ಷರಶಃ ಶಾಕ್ ಆಗಿದ್ದಾರೆ. ಇಮೇಜ್ ಹಂಗು ತೊರೆದು ಯಶ್ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ಈ ಟೀಸರ್‌ನ ವಿಶೇಷತೆ. ಸದ್ಯ ದೇಶಾದ್ಯಂತ ಟಾಕ್ಸಿಕ್ ಟೀಸರ್‌ನ ಸೌಂಡು ಜೋರಾಗಿದೆ. ಈ ಮಧ್ಯೆ ಚಿತ್ರದ ನಿರ್ದೇಶಕ ಗೀತು ಮೋಹನ್‌ದಾಸ್ ಅವರು ಯಶ್ ಅವರ ಕಾರ್ಯವೈಖರಿ, ಪ್ರತಿಭೆಯನ್ನು ಮನಸಾರೆ ಹೊಗಳಿದ್ದಾರೆ.
ಗೀತು ಮೋಹನ್‌ದಾಸ್ ಅವರು ಹೇಳಿದ್ದೇನು?
ಸೋಶಿಯಲ್ ಮೀಡಿಯದಲ್ಲಿ ಪೋಸ್ಟ್ ಹಂಚಿಕೊಂಡಿರುವ ಗೀತು ಮೋಹನ್‌ದಾಸ್ ಅವರು, "ಪ್ರತಿಭೆ ಮತ್ತು ಅಪ್ರತಿಮ ಜನಪ್ರಿಯತೆಯ ಅಪರೂಪದ ಸಂಗಮವೇ ಒಂದು ಅದ್ಭುತ ಶಕ್ತಿ. ನಾನು ಯಶ್ ಬಗ್ಗೆ ಅಪಾರ ಹೆಮ್ಮೆ ಪಡುತ್ತೇನೆ. ಜಗತ್ತು ಶೀಘ್ರದಲ್ಲೇ ನೋಡಲಿರುವ 'ರಾಯ'ನ (Raya) ಪಾತ್ರದ ಅಭಿನಯಕ್ಕಾಗಿ ಮಾತ್ರವಲ್ಲದೆ, ನಮ್ಮ ಸಿನಿಮಾದ ಪ್ರತಿ ಹಂತದಲ್ಲೂ ಅವರು ತೋರಿದ ಶಿಸ್ತು ಮತ್ತು ಬದ್ಧತೆಗಾಗಿ ಈ ಹೆಮ್ಮೆ ನನ್ನದು. ಇದು ಅವರು ಕೇವಲ ನಿರ್ವಹಿಸಿದ ಪಾತ್ರವಲ್ಲ; ಅವರ ಕಲಾತ್ಮಕ ಪರಂಪರೆಯಲ್ಲಿ ಕೆತ್ತಿದ ಒಂದು ಮಹತ್ವದ ಅಧ್ಯಾಯ. ಅವರು ಕಥೆಯ ಸತ್ಯಾಸತ್ಯತೆಗೆ ನ್ಯಾಯ ಒದಗಿಸಲು ಪಾತ್ರವನ್ನು ಪ್ರಶ್ನಿಸಿದರು, ಸವಾಲು ಹಾಕಿದರು, ಅನ್ವೇಷಿಸಿದರು ಮತ್ತು ಸಂಪೂರ್ಣವಾಗಿ ಅದರಲ್ಲಿ ಲೀನವಾದರು" ಎಂದು ಹೇಳಿದ್ದಾರೆ.
YashToxic: ಗೀತು ಮೋಹನ್‌ದಾಸ್ ‘ಟಾಕ್ಸಿಕ್’ ಸಿನಿಮಾ ಮಾಡಿದ್ದಾರೆ ಅಂದ್ರೆ ನಂಬಲು ಅಸಾಧ್ಯ; ಆರ್ಜಿವಿ
ಒಬ್ಬ ಆಪ್ತ ವ್ಯಕ್ತಿಯನ್ನು ನಾನು ಕಂಡುಕೊಂಡೆ
"ನಮ್ಮ ಈ ಜಂಟಿ ಪ್ರಯಾಣದಲ್ಲಿ, ಕೇವಲ ಕಥೆ ಹೇಳುವ ಆಳವನ್ನು ಮಾತ್ರವಲ್ಲದೆ, ನಿರ್ಮಾಪಕನಾಗಿ ನನಗೆ ಸಂಪೂರ್ಣ ಬೆಂಬಲ ನೀಡಿದ ಒಬ್ಬ ಆಪ್ತ ವ್ಯಕ್ತಿಯನ್ನು ನಾನು ಕಂಡುಕೊಂಡೆ. ಅವರ ಈ ಅಪಾರ ಖ್ಯಾತಿಯ ನಡುವೆ, ಅವರೊಳಗಿನ ಪ್ರತಿಭೆಯ ಆಳವನ್ನು ಗುರುತಿಸುವುದು ಸುಲಭದ ಮಾತಲ್ಲ. ಅವರ ಮುಂದಿನ ನಿರ್ದೇಶಕರು ಅವರ ಈ ಕಲಾ ಕೌಶಲ್ಯದ ಅಗಾಧ ಸಾಮರ್ಥ್ಯವನ್ನು ಬಳಸಿಕೊಳ್ಳಲಿ ಎಂಬುದು ನನ್ನ ಆಸೆ" ಎಂದು ಗೀತು ಹೇಳಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದಂದೇ ಫ್ಯಾನ್ಸ್‌ಗೆ ಗುಡ್‌ನ್ಯೂಸ್; 'ಟಾಕ್ಸಿಕ್' ಟೀಸರ್ ನಾಳೆ ರಿಲೀಸ್
"ನಮ್ಮ ಈ ಸಮಾಲೋಚನೆ ನಂಬಿಕೆ, ದೀರ್ಘ ಮಾತುಕತೆ ಮತ್ತು ನಮಗಿಂತ ಮೀರಿದ ಯಾವುದೋ ಒಂದು ಶಕ್ತಿಯ ಮೇಲಿನ ನಂಬಿಕೆಯ ಮೇಲೆ ನಿರ್ಮಿತವಾಗಿದೆ. ಅವರು ನನ್ನ ಮೇಲಿಟ್ಟ ವಿಶ್ವಾಸ, ಕಲಾಪ್ರೇಮ ಮತ್ತು ಎಲ್ಲಕ್ಕಿಂತ ಮೀರಿದ ಅವರ ಸ್ನೇಹಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಕ್ಯಾಮೆರಾಗಳು ಆಫ್ ಆದ ಮೇಲೂ ಅವರು ನನ್ನ ನೆನಪಿನಲ್ಲಿ ಸದಾ ಇರುತ್ತಾರೆ" ಎಂದು ಗೀತು ಮೋಹನ್‌ದಾಸ್ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.
ಕೇವಲ 24 ಗಂಟೆಗಳಲ್ಲಿ ʻಟಾಕ್ಸಿಕ್ʼ ಟೀಸರ್ ಈವರೆಗೂ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಮಾರು 200 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಲ್ಲದೆ, 55+ ಲಕ್ಷ ಲೈಕ್ಸ್ ಪಡೆದುಕೊಂಡಿದೆ.