ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಕಿಂಗ್ ಸ್ಟಾರ್ ಯಶ್‌ ಹುಟ್ಟುಹಬ್ಬದಂದೇ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; 'ಟಾಕ್ಸಿಕ್' ಟೀಸರ್ ನಾಳೆ ರಿಲೀಸ್

Toxic Movie: ಸದ್ಯ ಭಾರತೀಯ ಚಿತ್ರರಂಗದಲ್ಲೇ ಕುತೂಹಲ ಕೆರಳಿಸಿದ ʼಟಾಕ್ಸಿಕ್ʼ ಸಿನಿಮಾದಲ್ಲಿ ನಾಯಕನಟನಾಗಿ ನಟಿಸಿ, ಕಥೆ ರಚಿಸಿ, ಸಹ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡ ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ನೀಡಿದ್ದಾರೆ. ಈ ಸಿನಿಮಾದಲ್ಲಿ ಬಹು ತಾರಾಗಣವಿದ್ದು, ಜನವರಿ 8ರಂದು ಟೀಸರ್‌ ಹಿರ ಬೀಳಲಿದೆ.

ಯಶ್ ಹುಟ್ಟುಹಬ್ಬದಂದೇ ʼಟಾಕ್ಸಿಕ್ʼ ಟೀಸರ್ ರಿಲೀಸ್

ಯಶ್‌ ಮತ್ತು ʼಟಾಕ್ಸಿಕ್ʼ ಸಿನಿಮಾದ ಪೋಸ್ಟರ್‌ -

Profile
Pushpa Kumari Jan 7, 2026 6:12 PM

ಬೆಂಗಳೂರು, ಜ. 7: ʼಕೆಜಿಎಫ್ʼ ಸರಣಿ ಸಿನಿಮಾ ಬಳಿಕ ನಟ ರಾಕಿಂಗ್ ಸ್ಟಾರ್ ಯಶ್ (Yash) ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಳ್ಳುವ ಮೂಲಕ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ. ʼಕೆಜಿಎಫ್ ಚಾಪ್ಟರ್ 1ʼ ಮತ್ತು ʼಕೆಜಿಎಫ್ 2ʼ ರಿಲೀಸ್ ಆದ ಬಳಿಕ ಅವರ ಅಭಿನಯದ ಸಿನಿಮಾ ತೆರೆ ಮೇಲೆ ಬಂದಿರಲಿಲ್ಲ. ಈ ವರ್ಷ ಅವರು ಅಭಿನಯಿಸಿರುವ ʼಟಾಕ್ಸಿಕ್ʼ (Toxic) ಮತ್ತು ʼರಾಮಾಯಣಂʼ ಸಿನಿಮಾ ತೆರೆ ಕಾಣಲಿದ್ದು, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಅದರಲ್ಲೂ ಯಶ್‌ ʼಟಾಕ್ಸಿಕ್ʼ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಜತೆಗೆ ಕಥೆ ರಚಿಸಿ, ಸಹ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ. ಈ ಸಿನಿಮಾದಲ್ಲಿ ಬಹುದೊಡ್ಡ ತಾರಾಗಣವಿದ್ದು, ಬಹುಭಾಷಾ ನಟನಟಿಯರು ವಿಭಿನ್ನ ಪಾತ್ರಗಲಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ನಟಿಯರ ಪಾತ್ರಗಳ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಕುತೂಹಲ ಕೆರಳಿಸಿತ್ತು. ಇದೀಗ ಯಶ್ ಅವರ ಪೋಸ್ಟರ್, ಟೀಸರ್‌ ರಿಲೀಸ್ ಮಾಡಲು ಸಿನಿಮಾ ತಂಡ ಮುಂದಾಗಿದೆ.

ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ನಿರ್ಮಾಣವಾದ ʼಟಾಕ್ಸಿಕ್ʼ ಚಿತ್ರದಲ್ಲಿ ಬಹುಭಾಷಾ ನಟಿಯರು ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ನಯನತಾರಾ, ರುಕ್ಮಿಣಿ ವಸಂತ್‌, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅವರ ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿತ್ತು. ಇದೀಗ ಜನವರಿ 8ಕ್ಕೆ ಯಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ʼಟಾಕ್ಸಿಕ್ʼ ಸಿನಿಮಾದ ಟೀಸರ್‌ ರಿಲೀಸ್‌ ಆಗಲಿದೆ ಎಂದು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ʼಟಾಕ್ಸಿಕ್ʼ ಚಿತ್ರತಂಡದ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದ್ದು, ರಾಕಿಂಗ್ ಸ್ಟಾರ್ ಅವರ ಖಡಕ್ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ. ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೊಂಡಿದ್ದ ಪೋಸ್‌ನಲ್ಲಿ ಯಾರಿಗಾಗಿ ನೀವು ಕಾಯುತ್ತಿದ್ದಿರೋ ಆತನ ಅನಾವರಣ ಆಗಲಿದೆ ಎಂದು ಕ್ಯಾಪ್ಶನ್ ನೀಡಲಾಗಿದೆ.

ಎಕ್ಸ್‌ ಪೋಸ್ಟ್‌:



ರಾಕಿಂಗ್ ಸ್ಟಾರ್ ಯಶ್ ಅವರಿಗೆ 40ನೇ ಹುಟ್ಟುಹಬ್ಬದ ಸವಿನೆನಪಿಗಾಗಿ ʼಟಾಕ್ಸಿಕ್ʼ ಸಿನಿಮಾ ತಂಡ ಈ ಪೋಸ್ಟರ್ ಅನ್ನು ಅನಾವರಣಗೊಳಿಸಿದೆ. ಜನವರಿ 8ರಂದು ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿ ಈ ಪೋಸ್ಟರ್ ಮೂಲಕ ಘೋಷಿಸಲಾಗಿದೆ. ವೈರಲ್ ಆದ ಪೋಸ್ಟ್‌ನಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಬೆಂಕಿಯ ಹಿನ್ನೆಲೆಯಲ್ಲಿ ನಡೆದು ಬರುತ್ತಿರುವುದು ಕಂಡು ಬಂದಿದೆ. ಅದರಲ್ಲಿ ಚಿತ್ರದ ಟೀಸರ್ ಬಿಡುಗಡೆ ದಿನಾಂಕ ಜನವರಿ 8, ವಿಡಿಯೊ ಗ್ಲಿಂಪ್ಸ್ ಬೆಳಗ್ಗೆ 10:10ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡವು ಬಹಿರಂಗಪಡಿಸಿದೆ.

ದರ್ಶನ್‌ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ? ಸಹೋದರ ದಿನಕರ್ ಹೇಳಿದ್ದೇನು?

ಮಲಯಾಳಂ ನಿರ್ದೇಶಕಿ ಗೀತು ಮೋಹನ್​​ದಾಸ್ ʼಟಾಕ್ಸಿಕ್ʼ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್​ಸ್ಟರ್ ಮೈಂಡ್ಸ್ ಮೂಲಕ ಈ ಸಿನಿಮಾಕ್ಕೆ ಕೋಟ್ಯಂತರ ರುಪಾಯಿ ಬಂಡವಾಳ ಹೂಡಿಕೆ ಮಾಡಲಾಗಿದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಈ ಸಿನಿಮಾ ಚಿತ್ರೀಕರಿಸಲಾಗಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇತರ ಹಲವು ಭಾಷೆಗಳಲ್ಲಿ ಡಬ್ ಮಾಡಿದ ಆವೃತ್ತಿಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿನೆ ರೂಪಿಸಿದೆ. ಈ ಮೂಲಕ ಪ್ಯಾನ್ ವರ್ಲ್ಡ್‌ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

ಇದೇ ಸಿನಿಮಾಕ್ಕೆ ʼಕೆಜಿಎಫ್‌ʼ ಖ್ಯಾತಿಯ ರವಿ ಬಸ್ರೂರ್ ಸಂಗೀತ ಸಂಯೋಜನೆ ಇದ್ದು ಉಜ್ವಲ್ ಕುಲಕರ್ಣಿ ಸಂಕಲನವಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ರಾಜೀವ್ ರವಿ ಛಾಯಾಗ್ರಾಹಣದಲ್ಲಿ ಸ್ಪೆಷಲ್ ವಿಶುವಲ್ ಎಫೆಕ್ಟ್ ಇರಲಿದೆ‌. ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ (ಜಾನ್ ವಿಕ್), ರಾಷ್ಟ್ರೀಯ ಪ್ರಶಸ್ತಿ ವಿಜೇತ ಜೋಡಿ ಅನ್ಬರಿವ್ ಮತ್ತು ಕೆಚಾ ಖಂಫಕ್ಡೀ ಅವರ ಸಹಭಾಗಿತ್ವದಲ್ಲಿ ಹೈ ಆ್ಯಕ್ಷನ್, ಉತ್ತಮ ನೃತ್ಯ ಸಂಯೋಜನೆ ಕೂಡ ಈ ಸಿನಿಮಾದಲ್ಲಿ ಇರಲಿದೆ. ʼಟಾಕ್ಸಿಕ್ʼ ಸಿನಿಮಾ ಈದ್, ಯುಗಾದಿ ಹಬ್ಬದ ಪ್ರಯುಕ್ತ 2026ರ ಮಾರ್ಚ್ 19ರಂದು ಬಿಡುಗಡೆಯಾಗಲಿದೆ.