YashToxic: ಗೀತು ಮೋಹನ್‌ದಾಸ್ ‘ಟಾಕ್ಸಿಕ್’ ಸಿನಿಮಾ ಮಾಡಿದ್ದಾರೆ ಅಂದ್ರೆ ನಂಬಲು ಅಸಾಧ್ಯ; ಆರ್‌ಜಿವಿ
Ram Gopal Varma: ಟಾಕ್ಸಿಕ್; ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್ ಚಿತ್ರದ ಟೀಸರ್ ಜನವರಿ 8 ರಂದು ನಟ ಯಶ್ ಅವರ ಹುಟ್ಟುಹಬ್ಬದಂದು ಬಿಡುಗಡೆ ಆಗಿದೆ. ʻಟಾಕ್ಸಿಕ್ʼ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದ್ದಂತೆಯೇ ಯಶ್ ಫ್ಯಾನ್ಸ್ ಅಚ್ಚರಿಯಾಗಿದ್ದಾರೆ. ಕಾರಣ, ಇದೇ ಮೊದಲ ಬಾರಿಗೆ ತುಂಬಾ ಬೋಲ್ಡ್ ಸೀನ್‌ಗಳಲ್ಲಿ ಯಶ್ ಕಾಣಿಸಿಕೊಂಡಿದ್ದು, ಟೀಸರ್ ನೋಡಿದ ಫ್ಯಾನ್ಸ್ ಮೂಗಿನ ಬೆರಳಿಟ್ಟುಕೊಂಡಿದ್ದಾರೆ.
‘ಟಾಕ್ಸಿಕ್’ ಸಿನಿಮಾ -
ಟಾಕ್ಸಿಕ್; ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್ ( Toxic: A Fairytale for Grown Ups ) ಚಿತ್ರದ ಟೀಸರ್ ಜನವರಿ 8 ರಂದು ನಟ ಯಶ್ ಅವರ ಹುಟ್ಟುಹಬ್ಬದಂದು ಬಿಡುಗಡೆ ಆಗಿದೆ. ʻಟಾಕ್ಸಿಕ್ʼ ಸಿನಿಮಾದ (Toxic Cinema Teaser) ಟೀಸರ್ ರಿಲೀಸ್ ಆಗುತ್ತಿದ್ದಂತೆಯೇ ಯಶ್ ಫ್ಯಾನ್ಸ್ ಅಚ್ಚರಿಯಾಗಿದ್ದಾರೆ. ಕಾರಣ, ಇದೇ ಮೊದಲ ಬಾರಿಗೆ ತುಂಬಾ ಬೋಲ್ಡ್ ಸೀನ್‌ಗಳಲ್ಲಿ (Bold Scene) ಯಶ್ ಕಾಣಿಸಿಕೊಂಡಿದ್ದು, ಟೀಸರ್ ನೋಡಿದ ಫ್ಯಾನ್ಸ್ ಮೂಗಿನ ಬೆರಳಿಟ್ಟುಕೊಂಡಿದ್ದಾರೆ. ಈಗ ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ (Ram Gopal Varma) ಟೀಸರ್‌ಗೆ ಪ್ರತಿಕ್ರಿಯಿಸಿದ್ದಾರೆ. ಈ ಸಿನಿಮಾಗೆ ನಿರ್ದೇಶನ ಮಾಡಿರುವುದು ಗೀತು ಮೋಹನ್‌ದಾಸ್ ( Geetu Mohandas) ಅಂದರೆ ನಂಬಲು ಅಸಾಧ್ಯ ಎಂದು ಬರೆದುಕೊಂಡಿದ್ದಾರೆ.
ಟೀಸರ್ ತುಂಬಾ ಬೋಲ್ಡ್
ಆರ್‌ಜಿವಿ ತಮ್ಮ ಎಕ್ಸ್ ಖಾತೆಯಲ್ಲಿ ಗೀತು ಅವರ ಚಿತ್ರವನ್ನು ಹಂಚಿಕೊಂಡಿದ್ದು, ಟಾಕ್ಸಿಕ್’ ಸಿನಿಮಾದ ಟೀಸರ್ ತುಂಬಾ ಬೋಲ್ಡ್ ಆಗಿದೆ. ಆದರೆ ಈ ಸಿನಿಮಾಗೆ ನಿರ್ದೇಶನ ಮಾಡಿರುವುದು ಗೀತು ಮೋಹನ್‌ದಾಸ್. ನಿರ್ದೇಶಕಿಯೊಬ್ಬರು ಈ ರೀತಿಯ ಮಾಸ್ ಸಿನಿಮಾ ಮಾಡುತ್ತಾರೆ ಎಂಬುದನ್ನು ರಾಮ್ ಗೋಪಾಲ್ ವರ್ಮಾ ಅವರಿಗೆ ನಂಬಲು ಸಾಧ್ಯವಾಗುತ್ತಿಲ್ಲ.
ಟ್ವಿಟರ್ ಖಾತೆಯಲ್ಲಿ ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.ಇದನ್ನು ಚಿತ್ರೀಕರಿಸಿದ್ದಾರೆಂದು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ" ಎಂದು ಶೀರ್ಷಿಕೆ ಬರೆದಿದ್ದಾರೆ.
ಯಾವ ನಿರ್ದೇಶಕನೂ ಸಾಟಿ ಇಲ್ಲ
‘ನಟ ಯಶ್ ಅವರ ಟಾಕ್ಸಿಕ್ ಸಿನಿಮಾ ಟೀಸರ್ ನೋಡಿದ ಬಳಿಕ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಮಹಿಳಾ ಸಬಲೀಕರಣದ ಅಲ್ಟಿಮೇಟ್ ಸಂಕೇತವಾಗಿದ್ದಾರೆ ಎಂಬುದರಲ್ಲಿ ನನಗೆ ಅನುಮಾನವೇ ಇಲ್ಲ. ಈ ಮಹಿಳೆಗೆ ಹೋಲಿಸಿದರೆ ಯಾವ ನಿರ್ದೇಶಕನೂ ಸಾಟಿ ಇಲ್ಲ. ಆಕೆಯೇ ಇದನ್ನು ಚಿತ್ರಿಸಿದ್ದಾರೆ ಎಂದು ಈಗಲೂ ನನಗೆ ನಂಬಲಾಗುತ್ತಿಲ್ಲ’ ಎಂದು ರಾಮ್ ಗೋಪಾಲ್ ವರ್ಮಾ ಅವರು ಪೋಸ್ಟ್ ಮಾಡಿದ್ದಾರೆ.
After seeing the @TheNameIsYash starring trailer of #Toxic I have no doubt that @GeethuMohandas_ is the ultimate symbol of Women Empowerment ..No Male director is Man enough in comparison to this Woman .. I still can’t believe she shot this 👇🏻 😳 https://t.co/ZxyxU8Da40 pic.twitter.com/qzFUcv9JIb
— Ram Gopal Varma (@RGVzoomin) January 8, 2026
ಸದ್ಯ ʻಟಾಕ್ಸಿಕ್ʼ ಟೀಸರ್ ರಿಲೀಸ್ ಆಗುತ್ತಿದ್ದಂತೆಯೇ ನಟಾಲಿಯಾ ಬರ್ನ್ ಟ್ರೆಂಡ್ ಆಗುತ್ತಿದ್ದಾರೆ. ಯಶ್ ಜೊತೆಗೆ ಇರುವ ನಟಿ ಯಾರು ಎಂದೆಲ್ಲಾ ಗೂಗಲ್‌ನಲ್ಲಿ ಸರ್ಚ್ ಮಾಡಲಾಗಿದೆ. ಅಂತಿಮವಾಗಿ ನಟಾಲಿಯಾ ಬರ್ನ್ ಎಂಬುದು ಗೊತ್ತಾಗಿ, ಅವರೀಗ ಟ್ರೆಂಡ್ ಆಗಿದ್ದಾರೆ. ಅವರು ಕೂಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಟಾಕ್ಸಿಕ್ ಟೀಸರ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.
ಮಾರ್ಚ್ 19ರಂದು ಟಾಕ್ಸಿಕ್ ಸಿನಿಮಾ ವಿಶ್ವಾದ್ಯಂತ ತೆರೆಗೆ
ಮಾರ್ಚ್ 19ರಂದು ಟಾಕ್ಸಿಕ್ ಸಿನಿಮಾ ವಿಶ್ವಾದ್ಯಂತ ತೆರೆಗೆ ಬರುತ್ತಿದ್ದು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ರೆಡಿಯಾಗಿದೆ. ರವಿ ಬಸ್ರೂರು ಅವರು ಸಂಗೀತ ನೀಡಿದ್ದು, ಗೀತು ಮೋಹನ್‌ದಾಸ್ ಅವರು ನಿರ್ದೇಶನ ಮಾಡಿದ್ದಾರೆ. ಇದರ ಸ್ಕ್ರಿಪ್ಟ್‌ಗೆ ಯಶ್ ಕೂಡ ಕೈಜೋಡಿಸಿರುವುದು ವಿಶೇಷ.
ಇದನ್ನೂ ಓದಿ: Rukmini Vasanth: ಸರಳ ಸುಂದರಿ ರುಕ್ಮಿಣಿ ವಸಂತ್ ಈಗ ʻಮೆಲ್ಲಿಸಾʼ; ಟಾಕ್ಸಿಕ್‌ನಲ್ಲಿ ಖಡಕ್ ಲುಕ್!
ಯಶ್ ನಟನೆಯ ಟಾಕ್ಸಿಕ್ ಸಿನಿಮಾವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದು, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ರವಿ ಬಸ್ರೂರು ಅವರು ಸಂಗೀತ ಸಂಯೋಜಿಸಿದ್ದು, ನಯನತಾರಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮುಂತಾದವರು ನಟಿಸಿದ್ದಾರೆ.