Vaishnavi Gowda: ಜಾಹೀರಾತು ವಿಡಿಯೊ ಶೇರ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ನಟಿ ವೈಷ್ಣವಿ ಗೌಡ
ವೈಷ್ಣವಿ ಗೌಡ ಅವರು ʼಸೀತಾರಾಮʼ ಧಾರಾವಾಹಿಯಲ್ಲಿ ಸೀತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೀತಾ ಪಾತ್ರವನ್ನು ಅನೇಕರು ಇಷ್ಟಪಟ್ಟಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿರುವ ಇವರು ಇದೀಗ ರಮ್ಮಿ ಜಾಹೀರಾತು ವಿಡಿಯೊ ಹಂಚಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರೆ.
![ಜಂಗ್ಲಿ ರಮ್ಮಿ ಆಪ್ ಪ್ರಚಾರ ಮಾಡಿ ಟ್ರೋಲ್‌ಗೆ ಗುರಿಯಾದ ಖ್ಯಾತ ನಟಿ](https://cdn-vishwavani-prod.hindverse.com/media/original_images/Vaishnavi_gowda.jpg)
ʼಸೀತಾರಾಮʼ ಧಾರಾವಾಹಿ ನಟಿ ವೈಷ್ಣವಿ ಗೌಡಯಿಂದ ಜಂಗ್ಲಿ ರಮ್ಮಿ ಆಪ್ ಪ್ರಚಾರ
![Profile](https://vishwavani.news/static/img/user.png)
ಬೆಂಗಳೂರು, ಫೆ.11: ಜಾಹೀರಾತುಗಳಲ್ಲಿ ಸ್ಟಾರ್ ನಟರು ಕಾಣಿಸಿಕೊಂಡರೆ ಆ ಜಾಹೀರಾತಿನ ಮೌಲ್ಯ ಜಾಸ್ತಿ ಆಗುತ್ತದೆ ಎಂಬ ನಂಬಿಕೆಯಿಂದ ಹಲವು ಬ್ರಾಂಡ್‌ಗಳು ಸ್ಟಾರ್ ನಟರು ಮತ್ತು ನಟಿಯರನ್ನು ರಾಯಭಾರಿಗಳನ್ನಾಗಿ ಮಾಡಿಕೊಳ್ಳುತ್ತವೆ. ರಮ್ಮಿ ಸರ್ಕಲ್ ಸೇರಿದಂತೆ ನಾನಾ ಆನ್ ಲೈನ್ ಗ್ಯಾಂಬ್ಲಿಂಗ್ ಆ್ಯಪ್‌ಗಳು ಇಂಟರ್‌ನೆಟ್‌ನಲ್ಲಿ ಜಾಲ್ತಿಯಲ್ಲಿವೆ. ಅಪಾರ ಸಂಖ್ಯೆಯಲ್ಲಿ ಅವುಗಳನ್ನು ಜನರು ಬಳಸುತ್ತಿದ್ದಾರೆ. ಇವುಗಳಿಂದ ಹಣ ಮಾಡಿದವರು ಮಾತ್ರವಲ್ಲದೆ, ಹಣ ಕಳೆದುಕೊಂಡವರು ಕೂಡ ಇದ್ದಾರೆ. ಅಚ್ಚರಿ ಎಂದರೆ ಕೆಲವು ಸೆಲೆಬ್ರಿಟಿಗಳು ಈ ಆ್ಯಪ್‌ಗಳಿಗೆ ರಾಯಭಾರಿಗಳಾಗಿದ್ದು, ಇದೀಗ ಅಗ್ನಿ ಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಗೌಡ (Vaishnavi Gowda) ಆನ್ ಲೈನ್ ಗೇಮ್ ಪ್ರಮೋಷನ್ ಮಾಡುವ ವಿಡೀಯೋವನ್ನು ಇನ್ ಸ್ಟಾಗ್ರಾಮ್ ಅಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡ ಕಿರುತೆರೆಯ ಸುರಸುಂದರಿ, ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ (Vaishnavi Gowda), ಸದ್ಯ ಸೀತಾ ರಾಮ ಧಾರಾವಾಹಿಯ ಸೀತಾ ಆಗಿ ಜನ ಮನ ಗೆದ್ದಿದ್ದಾರೆ. ವೀಕ್ಷಕರ ಫೇವರಿಟ್ ನಟಿಯಾಗಿರುವ ವೈಷ್ಣವಿ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ತಾವು ಯಾವುದೇ ಪಾರ್ಟಿ ಅಥವಾ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಅದಕ್ಕೆಂದು ತಾನು ಸಿಂಗಾರ ಮಾಡಿಕೊಂಡ ಪೋಷಾಕಿನಲ್ಲಿ ಫೋಟೋಗಳನ್ನು ತೆಗಿಸಿ ಅದನ್ನು ತಮ್ಮ ಸೋಷಿಯಲ್ ಮಿಡಿಯಾ ಅಕೌಂಟ್‌ನಲ್ಲಿ ಹಂಚಿಕೊಂಡು ಅಭಿಮಾನಿಗಳ ಮನ ತಣಿಸುವಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ತಮ್ಮ ಫೋಟೊ ಶೂಟ್, ವಿಡಿಯೋ, ರೀಲ್ಸ್, ಕಾಮಿಡಿ ವಿಡಿಯೋಗಳ ಮೂಲಕ ಅಭಿಮಾನಿಗಳೊಂದಿಗೆ ಇನ್ನೂ ಹತ್ತಿರ ಆಗುತ್ತಿದ್ದಾರೆ.
ಆದರೆ ಈ ಸಲ ಮಾತ್ರ ಅವರು ಹಂಚಿಕೊಂಡಿರುವ ವಿಡೀಯೋ ಮಾತ್ರ ನೆಟ್ಟಿಗರನ್ನು ಅಸಮಾಧಾನಕ್ಕೀಡು ಮಾಡಿದ್ದು, ರಮ್ಮಿ ಸರ್ಕಲ್ ಆನ್ ಲೈನ್ ಗೇಮ್ ಅನ್ನು ನಟಿ ವೈಷ್ಣವಿ ಗೌಡ ಪ್ರಚಾರ ಮಾಡುತ್ತಿರುವುದು ಹಲವರ ಕಣ್ಣನ್ನು ಕೆಂಪಾಗಿಸಿದೆ. ಡಬಲ್ ರೋಲ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಈ ಆನ್ ಲೈನ್ ಗ್ಯಾಂಬ್ಲಿಂಗ್ ಆ್ಯಪ್ ಅನ್ನು ವೈಷ್ಣವಿ ಗೌಡ ಪ್ರಮೋಷನ್ ಮಾಡಿದ್ದು, ಈ ಪೋಸ್ಟ್ ಗೆ ಕಮೆಂಟ್ ಬಾಕ್ಸ್ ಆಫ್ ಮಾಡಿರುವುದು ನೆಟ್ಟಿಜನ್ಸ್ ಅನ್ನು ಕೆರಳಿಸಿದೆ. ನೆಗೆಟಿವ್ ಕಾಮೆಂಟ್ ಗಳು ಬರುತ್ತದೆ ಎಂದು ತಿಳಿದೇ ನಟಿ ಕಮೆಂಟ್ ಸೆಕ್ಷನ್ ಆಫ್ ಮಾಡಿದ್ದು, ವಿವಾದಾತ್ಮಕ ಜಾಹೀರಾತನ್ನು ಪ್ರಚಾರ ಮಾಡಿ ಕಮೆಂಟ್ ಬಾಕ್ಸ್ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆಯನ್ನು ನೆಟ್ಟಿಗರು ಹಾಕುತ್ತಿದ್ದಾರೆ.
ಈ ಸುದ್ದಿಯನ್ನ್ ಓದಿ: Bhagya Lakshmi Serial: ತಾಂಡವ್ನ ಎಲ್ಲ ಪ್ಲ್ಯಾನ್ ನೀರಲ್ಲ ಹೋಮ ಮಾಡಿದ ಶ್ರೇಷ್ಠಾ
ಇನ್ನು ಇನ್ ಸ್ಟಾಗ್ರಾಮ್ ಅಲ್ಲಿ ಸುಮಾರು ಒಂದೂವರೆ ಮಿಲಿಯನ್ ಗೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ವೈಷ್ಣವಿ ಅವರ ಈ ನಡೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದು, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅನುಯಾಯಿಗಳನ್ನು ಹೊಂಡಿರುವಾಗ ಜನರನ್ನು ಸಂಕಷ್ಟಕ್ಕೆ ತಳ್ಳುವ ಈ ಆಟದ ಪ್ರಮೋಷನ್ ಯಾಕೆ ಮಾಡಬೇಕಿತ್ತು ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಅವರ ಅಭಿಮಾನಿಗಳು ವೈಷ್ಣವಿ ಮೇಲೆ ಸಿಟ್ಟಾಗಿದ್ದು, ತಮ್ಮ ನಟನೆ, ಸರಳತೆಯ ಸ್ವಭಾವ, ಮಾತು, ನಡತೆಯಿಂದಲೇ ಎಲ್ಲರ ಮೆಚ್ಚುಗೆ ಗಳಿಸಿದ್ದ ನಟಿಗೆ ಈ ವಿಡಿಯೋ ಶೇರ್ ಮಾಡಿರುವ ಅವಶ್ಯಕತೆ ಏನಿತ್ತು ಎಂಬ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ.
ಈ ಹಿಂದೆ ರಮ್ಮಿ ಸರ್ಕಲ್ ಜಾಹೀರಾತಿನಲ್ಲಿ ನಟ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ಅವರ ವಿರುದ್ಧ ಕೆಲವು ಕನ್ನಡಪರ ಸಂಘಟನೆಯ ಕಾರ್ಯಕರ್ತರು, ಕೆಲ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಇಂಥ ಜೂಜಿನ ಆಟದ ಜಾಹೀರಾತಿನಲ್ಲಿ ಸುದೀಪ್ ಅವರಂತಹ ನಟ ಅಭಿನಯಿಸುವುದು ಸರಿ ಅಲ್ಲ ಎಂದು ಕೆಲವರ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಲ್ಲದೇ ಬಾಲಿವುಡ್ ನಟರು, ಕ್ರಿಕೆಟಿಗರು ಕೂಡ ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಗಾಯಕ ಚಂದನ್ ಶೆಟ್ಟಿ ಕೂಡ ರಮ್ಮಿ ಜಾಹೀರಾತು ಮಾಡಿ ನೆಟ್ಟಿಗರಿಂದ ಬೈಸಿಕೊಂಡಿದ್ದರು.