ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dipika Chikhlia: ಹೊಸ ʼರಾಮಾಯಣʼ ಚಿತ್ರದ ಬಗ್ಗೆ ಹಿರಿಯ ನಟಿ ದೀಪಿಕಾ ಚಿಖ್ಲಿಯಾ ಹೇಳಿದ್ದೇನು?

ಈಗಾಗಲೇ ʼರಾಮಾಯಣʼ ಆಧರಿಸಿ ಅನೇಕ ಸಿನಿಮಾ, ಧಾರಾವಾಹಿಗಳು ತೆರೆ ಕಂಡಿವೆ. ಇದೀಗ ಹೊಸ ತಂತ್ರ ಜ್ಞಾನದ ಮೂಲಕ ʼರಾಮಾಯಣʼ ಚಿತ್ರವನ್ನು ವಿಭಿನ್ನವಾಗಿ ತೆರೆ ಮೇಲೆ ತರಲು ನಿರ್ದೇಶಕ ನಿತೇಶ್ ತಿವಾರಿ ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೆ ಈ ಸಿನಿಮಾದ ಗ್ಲಿಂಪ್ಸ್ ಬಿಡುಗಡೆಯಾಗಿ ಗಮನ ಸೆಳೆದಿದೆ.

ʼರಾಮಾಯಣʼ ಸಿನಿಮಾ ಬಗ್ಗೆ ನಟಿ ದೀಪಿಕಾ ಚಿಖ್ಲಿಯಾ ಹೇಳಿದ್ದೇನು?

Dipika Chikhlia

Profile Pushpa Kumari Jul 7, 2025 8:57 PM

ಮುಂಬೈ: ʼದಂಗಲ್‌ʼ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ಸದ್ಯ ಬಹುನಿರೀಕ್ಷಿತ ʼರಾಮಾಯಣʼ (Ramayana) ಕೈಗೆತ್ತಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಆಗಾಗ ಹೊಸ ಹೊಸ ಅಪ್‌ಡೇಟ್‌ ಕೇಳಿ ಬರುತ್ತಲೇ ಇದೆ. ಅವರು ʼರಾಮಾಯಣʼ ಮಹಾಕಾವ್ಯವನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದು, ಈ ಸಿನಿಮಾದಲ್ಲಿ ಬಹುದೊಡ್ಡ ತಾರಾಗಣವೇ ಇದೆ‌. ಈಗಾಗಲೇ ʼರಾಮಾಯಣʼ ಆಧರಿಸಿ ಅನೇಕ ಸಿನಿಮಾ, ಧಾರಾವಾಹಿಗಳು ತೆರೆ ಕಂಡಿದ್ದು, ಇದೀಗ ನಿತೇಶ್‌ ತಿವಾರಿ ಹೊಸ ತಂತ್ರಜ್ಞಾನದ ಮೂಲಕ ಸಿನಿಮಾವನ್ನು ವಿಭಿನ್ನವಾಗಿ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೆ ಈ ಸಿನಿಮಾದ ಗ್ಲಿಂಪ್ಸ್ ಬಿಡುಗಡೆಯಾಗಿದ್ದು ಇದರ ಬೆನ್ನಲ್ಲೆ ಹಿರಿಯ ನಟಿ ದೀಪಿಕಾ ಚಿಖ್ಲಿಯಾ (Dipika Chikhlia) ಈ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ʼರಾಮಾಯಣʼ ಧಾರವಾಹಿ 1987ರಲ್ಲಿ ಟಿವಿಯಲ್ಲಿ ಪ್ರಸಾರವಾದಾಗ ಅದರಲ್ಲಿ ಸೀತೆಯ ಪಾತ್ರವನ್ನು ನಟಿ ದೀಪಿಕಾ ಚಿಖ್ಲಿಯಾ ನಿಭಾಯಿಸಿ ಸೈ ಎನಿಸಿಕೊಂಡಿದ್ದರು. ಇದೀಗ ʼರಾಮಾಯಣʼ ಮತ್ತೆ ಸಿನಿಮಾವಾಗಿ ಮೂಡಿಬರುವ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಧಾರಾವಾಹಿಯಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ಅರುಣ್ ಗೋವಿಲ್ ನಿತೇಶ್ ತಿವಾರಿ ಅವರ ʼರಾಮಾಯಣʼ ಸಿನಿಮಾದಲ್ಲಿ ದಶರಥನ ಪಾತ್ರ ನಿರ್ವಹಿಸಲಿದ್ದಾರೆ. ಹೀಗಾಗಿ ಈ ಹಿಂದೆ ಸೀತೆಯಾಗಿ ಅಭಿನಯಿಸಿದ್ದ ನಟಿ ದೀಪಿಕಾ ಚಿಖ್ಲಿಯಾ ಅವರ ಬಳಿ ನೀವು ಹೊಸ ಪಾತ್ರ ನೀಡಿದರೆ ಒಪ್ಪುವಿರಾ ಎಂದು ಸಂದರ್ಶಕ‌ ಪ್ರಶ್ನೆ ಮಾಡಿದ್ದಾರೆ.

ಇದನ್ನು ಓದಿ:Capital City Movie: ರಾಜೀವ್ ರೆಡ್ಡಿ ನಟನೆಯ ‘ಕ್ಯಾಪಿಟಲ್ ಸಿಟಿ’ ಚಿತ್ರ ಈ ವಾರ ತೆರೆಗೆ

ಇದಕ್ಕೆ ಉತ್ತರಿಸಿದ ದೀಪಿಕಾ ತಾನು ಗೋವಿಲ್ ಅವರನ್ನು ಧಾರವಾಹಿಯಲ್ಲಿ ರಾಮನಂತೆ ನೋಡಿ ದ್ದೇನೆ ಮತ್ತು ನನ್ನನ್ನು ನಾನು ಸೀತೆಯಾಗಿಯೂ ನೋಡಿದ್ದೇನೆ. ಈಗ ಅವರನ್ನು ದಶರಥನಂತೆ ನೋಡುವುದು ನಿಜವಾಗಿಯೂ ಕಷ್ಟ. ಇದು ಅವರ ವೈಯಕ್ತಿಕ ನಿರ್ಣಯವಾಗಿದ್ದರೂ ಕೂಡ ಒಮ್ಮೆ ರಾಮನೆಂದು ಪ್ರಸಿದ್ಧರಾದ ಮೇಲೆ ಅವರನ್ನು ಬೇರೆ ಪಾತ್ರದಲ್ಲಿ ನೋಡುವುದು ಕಷ್ಟವಾಗಿಯೇ ಇರುತ್ತದೆ. ತಾನೂ ಒಮ್ಮೆ ಸೀತೆಯ ಪಾತ್ರವನ್ನು ನಿರ್ವಹಿಸಿದ ನಂತರ, ʼರಾಮಾಯಣʼದಲ್ಲಿ ಬೇರೆ ಯಾವುದೇ ಪಾತ್ರವನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಒಂದುವೇಳೆ ʼರಾಮಾಯಣʼದಲ್ಲಿ ಮತ್ತೆ ಅವಕಾಶ ಸಿಕ್ಕರೂ ಸೀತೆ ಪಾತ್ರ ಮಾತ್ರವೇ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ.