Udit Narayan: ಶ್ರೇಯಾ ಘೋಷಾಲ್‌ಗೂ ಮುತ್ತಿಟ್ಟಿದ್ದ ಉದಿತ್ ನಾರಾಯಣ್ : ವಿಡಿಯೊ ಫುಲ್ ವೈರಲ್!
ಗಾಯಕ ಉದಿತ್ ನಾರಾಯಣ್ ತಮ್ಮ ಲೈವ್ ಕನ್ಸರ್ಟ್ ಸಮಯದಲ್ಲಿ ಮಹಿಳಾ ಅಭಿಮಾನಿಯೊಬ್ಬರ ತುಟಿಗೆ ಚುಂಬಿಸುತ್ತಿರುವ ವಿಡಿಯೊ ವೈರಲ್ ಆದ ನಂತರ ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದಾರೆ. ಗಾಯಕನ ಲಿಪ್ ಕಿಸ್ಸಿಂಗ್ ವಿಡಿಯೊ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಈಗ ಹಳೆಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೇದಿಕೆ ಕಾರ್ಯಕ್ರಮಗಳಲ್ಲಿ ಖ್ಯಾತ ಗಾಯಕಿಯರಾದ ಶ್ರೇಯಾ ಘೋಷಾಲ್,ಅಲ್ಕಾ ಯಾಗ್ನಿಕ್ ಮುಂತಾದವರಿಗೆ ಕಿಸ್ ಮಾಡಿದ್ದ ವಿಡಿಯೊಗಳು ಇದೀಗ ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಮುಂಬೈ: ಗಾಯಕ ಉದಿತ್ ನಾರಾಯಣ್(Udit Narayan) ತಮ್ಮ ಲೈವ್ ಕನ್ಸರ್ಟ್ ಸಮಯದಲ್ಲಿ ಮಹಿಳಾ ಅಭಿಮಾನಿಯೊಬ್ಬರ ತುಟಿಗೆ ಚುಂಬಿಸುತ್ತಿರುವ ವಿಡಿಯೊ(Kissing Row) ವೈರಲ್ ಆದ ನಂತರ ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದಾರೆ. ಗಾಯಕನ ಲಿಪ್ ಕಿಸ್ಸಿಂಗ್ ವಿಡಿಯೊ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಈಗ ಹಳೆಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೇದಿಕೆ ಕಾರ್ಯಕ್ರಮಗಳಲ್ಲಿ ಖ್ಯಾತ ಗಾಯಕಿಯರಾದ ಶ್ರೇಯಾ ಘೋಷಾಲ್(Shreya Goshal),ಅಲ್ಕಾ ಯಾಗ್ನಿಕ್(Alka Yagnik) ಮುಂತಾದವರಿಗೆ ಕಿಸ್ ಮಾಡಿದ್ದ ವಿಡಿಯೊಗಳು ಇದೀಗ ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಇಂಡಿಯನ್ ಐಡಲ್ ಈವೆಂಟ್‌ನ ಒಂದು ವಿಡಿಯೊದಲ್ಲಿ ಉದಿತ್ ಖ್ಯಾತ ಗಾಯಕಿ ಅಲ್ಕಾಳ ಕೆನ್ನೆಗೆ ಚುಂಬಿಸುತ್ತಿರುವುದು ನೋಡಬಹುದು. ಬೇರೆ ಬೇರೆ ಸಮಾರಂಭದಲ್ಲಿ ಉದಿತ್ ಅವರ ಕೆನ್ನೆಯನ್ನೇ ಹಲವು ಬಾರಿ ಚುಂಬಿಸಿದ್ದಾರೆ. ಇನ್ನು ಮತ್ತೋರ್ವ ಪ್ರಸಿದ್ಧ ಗಾಯಕಿ ಶ್ರೇಯಾ ಘೋಷಲ್ ಕೆನ್ನೆಗೂ ಉದಿತ್ ಮುತ್ತಿಟ್ಟಿದ್ದಾರೆ. ನಟಿ ಕರಿಷ್ಮಾ ಕಪೂರ್ ಅವರ ಕೆನ್ನೆಗೂ ಒಮ್ಮೆ ಉದಿತ್ ಮುತ್ತಿಟ್ಟಿದ್ದಾರೆ. ವಿಡಿಯೊದಲ್ಲಿ ಗಾಯಕಿಯರು ಮುಜುಗರಕ್ಕೆ ಒಳಗಾಗಿರುವುದನ್ನು ಗಮನಿಸಬಹದು.
ಶ್ರೇಯಾ ಘೋಷಾಲ್ ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನು ಸ್ವೀಕರಿಸಲು ವೇದಿಕೆಗೆ ಬಂದಾಗ ಅವರಿಗೆ ಉದಿತ್ ನಾರಾಯಣ್ ಕಿಸ್ ಮಾಡಿದ್ದರು. ಆ ಕ್ಷಣದಲ್ಲಿ ಶ್ರೇಯಾ ಘೋಷಾಲ್ ಅವರಿಗೆ ಶಾಕ್ ಆಗಿತ್ತು.
ಈ ಸುದ್ದಿಯನ್ನೂ ಓದಿ:Udit Narayan: ಲಿಪ್ ಕಿಸ್ ಬಗ್ಗೆ ವಿಷಾದವಿಲ್ಲ; ನಾನೂ ಲತಾಜಿಯಂತೆ ಭಾರತ ರತ್ನ ಪಡೆಯುತ್ತೇನೆ: ಉದಿತ್ ನಾರಾಯಣ್
ಉದಿತ್ ಕಿಸ್ಸಿಂಗ್ ವಿವಾದ; ಸಮರ್ಥಿಸಿಕೊಂಡ ಗಾಯಕ
ಸಂದರ್ಶನವೊಂದರಲ್ಲಿ ಮಾತನಾಡಿರುವ ಉದಿತ್ ಆ ಕುರಿತು ನನಗೆ ಯಾವುದೇ ವಿಷಾದವಿಲ್ಲ ಎಂದಿದ್ದು, ಭವಿಷ್ಯದಲ್ಲಿ ಲತಾ ಮಂಗೇಶ್ಕರ್ ಅವರಂತೆ ಭಾರತ ರತ್ನವನ್ನು ಸ್ವೀಕರಿಸುವುದಾಗಿ ಹೇಳಿದ್ದಾರೆ. ತಮ್ಮ ಮೇಲಿನ ವಿವಾದವನ್ನು ಉದಿತ್ ನಾರಾಯಣ್ ತಳ್ಳಿ ಹಾಕಿದ್ದು, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ.