ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aditya Dhar: ಅವರಿಗೆ ಕಾ‍ಶ್ಮೀರ ಬೇಕು... ನಮಗೆ ಅವರ ತಲೆ ಬೇಕು- ಉರಿ ಸಿನಿಮಾ ನಿರ್ದೇಶಕ ಆಕ್ರೋಶ

Aditya Dhar on Pahalgam Terror Attack: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಅತ್ಯಂತ ಭೀಕರ ದಾಳಿಯ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು ಈ ಹೀನಾಯ ಕೃತ್ಯ ಖಂಡಿಸಿ ಅನೇಕ ಸಿನಿಮಾ ನಟನಟಿಯರು, ನಿರ್ಮಾಪಕರು ಆಕ್ರೋಶವನ್ನು ಹೊರಹಾಕಿದ್ದಾರೆ. ಇದೀಗ ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ನಿರ್ದೇಶಕ ಆದಿತ್ಯಧರ್ ಕೂಡ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಕುರಿತು ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಪಹಲ್ಗಾಮ್ ದಾಳಿ ಬಗ್ಗೆ ಉರಿ ಸಿನಿಮಾ ನಿರ್ದೇಶಕ ಹೇಳಿದ್ದೇನು?

Profile Pushpa Kumari Apr 24, 2025 2:58 PM

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ  ಪ್ರವಾಸಿಗರನ್ನು ಗುರಿಯಾಗಿಸಿ ಕೊಂಡು ಉಗ್ರರು ಅಟ್ಟಹಾಸ ಮೆರೆ ದಿದ್ದಾರೆ. ಈ ದಾಳಿಯಲ್ಲಿ ಈಗಾಗಲೇ 26 ಜನರು ಮೃತ ಪಟ್ಟಿದ್ದು ಹಲವು ಜನರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ , ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಅವರೊಂದಿಗೆ ಸಭೆ ನಡೆಸಿ ಮೃತ ಕುಟುಂಬಕ್ಕೆ ಜಮ್ಮು ಕಾಶ್ಮೀರ ಸರ್ಕಾರ ಪರಿಹಾರವನ್ನು ಘೋಷಿಸಿದೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಅತ್ಯಂತ ಭೀಕರ ದಾಳಿಯ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು ಈ ಹೀನಾಯ ಕೃತ್ಯ ಖಂಡಿಸಿ ಅನೇಕ ಸಿನಿಮಾ ನಟನಟಿಯರು, ನಿರ್ಮಾಪಕರು ಆಕ್ರೋಶವನ್ನು ಹೊರಹಾಕಿದ್ದಾರೆ. ಇದೀಗ ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ನಿರ್ದೇಶಕ ಆದಿತ್ಯಧರ್ (URI Director Aditya Dhar) ಕೂಡ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಕುರಿತು ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಎಪ್ರಿಲ್ 22ರಂದು ಭಯೋತ್ಪಾದಕ ದಾಳಿಯ ನಂತರ ದೇಶಾದ್ಯಂತ ಶೋಕದ ವಾತಾವರಣ ಮಡುಗಟ್ಟಿದೆ. ಈ ಕ್ರೂರ ಘಟನೆಯ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಆಕ್ರೋಶಿತ ಪೋಸ್ಟ್ ಕೂಡ ವೈರಲ್ ಆಗುತ್ತಿದೆ. ನಿರ್ದೇಶಕ ಆದಿತ್ಯಧರ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಬಗ್ಗೆ ಬರೆದುಕೊಂಡ ನಟ ಅವರಿಗೆ ಕಾಶ್ಮೀರ ಬೇಕು, ನಮಗೆ ಅವರ ತಲೆ ಬೇಕು ಎಂದು ಆಕ್ರೋಶಿತ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಆದಿತ್ಯಧರ್ ಅವರ ಪತ್ನಿ ನಟಿ ಯಾಮಿ ಗೌತಮ್ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಘಟನೆ ದೃಶ್ಯ ನೋಡಿ ಮನಸ್ಸಿಗೆ ಆಘಾತ ವಾದಂತಾಗಿದೆ ಎಂದು ಬರೆದುಕೊಂಡಿದ್ದಾರೆ.

ಆದಿತ್ಯಧರ್ ನಿರ್ಮಾಣದಲ್ಲಿ ಮೂಡಿ ಬಂದ ಆರ್ಟಿಕಲ್ 370 ಎಂಬ ಸಿನಿಮಾದಲ್ಲಿ ಯಾಮಿ ಗೌತಮಿ ಕೂಡ ನಟಿಸಿದ್ದರು. ಜಮ್ಮು- ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ರದ್ದುಗೊಳಿಸುವ ಅನೇಕ ವಿಚಾರಗಳ ಮೇಲೆ ಈ ಸಿನಿಮಾ ಕೇಂದ್ರಿಕೃತವಾಗಿದೆ. ವಿಶೇಷ ಏಜೆಂಟ್ ಝೂನಿ ಹಕ್ಸರ್ ಪಾತ್ರದಲ್ಲಿ ನಟಿ ಯಾಮಿ ಗೌತಮಿ ಅವರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹಿಂಸಾಚಾರವನ್ನು ನಿಗ್ರಹಿಸಲು ರಹಸ್ಯ ಕಾರ್ಯಾಚರಣೆಯನ್ನು ಅನುಸರಿಸುವ ವಿವಿಧ ವಿಚಾರಗಳು ಈ ಸಿನಿಮಾದಲ್ಲಿ ಹೈಲೈಟ್ ಕೂಡ ಆಗಿದೆ. ಇದರ ಬಳಿಕ ನಿರ್ಮಾಪಕ ಆದಿತ್ಯಾಧರ್ ಸದ್ಯ ಸ್ಪೈ ಥ್ರಿಲ್ಲರ್ ಸಿನಿಮಾವಾದ ಧುರಂಧರ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನು ಓದಿ: Pahalgam Terror Attack: ಪತ್ನಿ ಜೊತೆ ಖುಷಿಯಾಗಿದ್ದ ಲೆಫ್ಟಿನೆಂಟ್ ವಿನಯ್ ನರ್ವಾಲ್- ಕೊನೆಯ ಕ್ಷಣದ ವಿಡಿಯೋ ವೈರಲ್

1970- 1980ರ ದಶಕಗಳಲ್ಲಿ ನಡೆಯುವ ಆರ್& ಎಡಬ್ಲ್ಯು ಬೇಹುಗಾರಿಕೆ ಕಥಾ ಹಂದರ ಇರುವ ಧುರಂಧರ್ ಚಿತ್ರದ ಚಿತ್ರೀಕರಣ ಬರದಿಂದ ಸಾಗುತ್ತಿದೆ. ಧುರಂಧರ್ ಚಿತ್ರವನ್ನು ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ, ಲೋಕೇಶ್ ಧಾರ್ ,ಬಿ62 ಸ್ಟುಡಿಯೋಸ್‌ನ ಆದಿತ್ಯಧರ್ ಸಹಯೋಗದೊಂದಿಗೆ ನಿರ್ಮಿಸುತ್ತಿದೆ. ಭಾರತದ ಗುಪ್ತಚರ ಸಂಸ್ಥೆ ಆರ್& ಎಡಬ್ಲ್ಯೂ ನ ಕೆಲಸ ಕಾರ್ಯಗಳ ಹೈ ಆ್ಯಕ್ಷನ್ ಸಿನಿಮಾ ಇದಾಗಿದ್ದು ಈ ಚಿತ್ರದಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್ , ಸಂಜಯ್ ದತ್ ಸೇರಿದಂತೆ ಖ್ಯಾತ ನಟ ನಟಿಯರ ಸಂಗಮ ಇದೆ. ಆರ್ಟಿಕಲ್ 370 ಸಿನಿಮಾದ ಸಕ್ಸಸ್ ಬಳಿಕ ಆದಿತ್ಯ ಅವರ ಧರಂಧರ್ ಬಗ್ಗೆ ನಿರೀಕ್ಷೆ ಹೆಚ್ಚಿವೆ. ಧುರಂಧರ್ ಈಗಾಗಲೇ ವರ್ಷದ ಕೊನೆಗೆ ತೆರೆಕಾಣುವ ಸಾಧ್ಯತೆ ಇದೆ.